Breaking News

‘ಒಟಿಟಿ ಕರೆ, ಚಾಟ್‌ಗೆ ನಿಯಂತ್ರಣ ಬೇಕಿಲ್ಲ’

Spread the love

ನವದೆಹಲಿ: ‘ವಾಟ್ಸ್‌ಆಯಪ್, ಮೆಸೆಂಜರ್, ವೈಬರ್‌ನಂತಹ ಕಂಪನಿಗಳು ಒಟಿಟಿ ಮೂಲಕ ಒದಗಿಸುವ ಕರೆ ಮತ್ತು ಚಾಟಿಂಗ್ ಸೇವೆಗಳಿಗೆ ನಿಯಮಾವಳಿಗಳ ನಿಯಂತ್ರಣದ ಅವಶ್ಯಕತೆ ಇಲ್ಲ’ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೇಳಿದೆ.

ದೂರಸಂಪರ್ಕ ಕಂಪನಿಗಳು ಒದಗಿಸುವ ಸೇವೆಗಳಿಗೂ, ಇಂತಹ ಕಂಪನಿಗಳು ಒಟಿಟಿ ಮೂಲಕ ಒದಗಿಸುವ ಸೇವೆಗಳಿಗೂ ತೀರಾ ವ್ಯತ್ಯಾಸವಿಲ್ಲ. ಹೀಗಾಗಿ ಒಟಿಟಿ ದೂರಸಂಪರ್ಕ ಸೇವಾ ಕಂಪನಿಗಳಿಗೂ ನಿಯಂತ್ರಣ ಹೇರಬೇಕು ಎಂದು ಭಾರತದ ಹಲವು ದೂರಸಂಪರ್ಕ ಕಂಪನಿಗಳು ಟ್ರಾಯ್‌ಗೆ ಮನವಿ ಸಲ್ಲಿಸಿದ್ದವು.

‘ದೂರಸಂಪರ್ಕ ಕಂಪನಿಗಳಿಗೆ ಪರವಾನಗಿ ಶುಲ್ಕ, ಲೆವಿ ಎಲ್ಲವನ್ನೂ ವಿಧಿಸಲಾಗುತ್ತದೆ. ಅಲ್ಲದೆ ನಿಯಮಗಳ ನಿಯಂತ್ರಣವಿದೆ. ಆದರೆ ಒಟಿಟಿ ದೂರಸಂಪರ್ಕ ಸೇವಾ ಕಂಪನಿಗಳಿಗೆ ಪರವಾನಗಿ ಶುಲ್ಕ, ಲೆವಿ ವಿಧಿಸುವುದಿಲ್ಲ.

ಕಾನೂನಿನ ನಿಯಂತ್ರಣವೂ ಇಲ್ಲ. ಹೀಗಾಗಿ ಇಂತಹ ಕಂಪನಿ ಮತ್ತು ಸೇವೆಗಳನ್ನು ಕಾನೂನಿನ ನಿಯಂತ್ರಣಕ್ಕೆ ಒಳಪಡಿಸಬೇಕು’ ಎಂಬುದು ದೂರಸಂಪರ್ಕ ಸೇವಾದಾತ ಕಂಪನಿಗಳ ಬೇಡಿಕೆಯಾಗಿತ್ತು.

ಈ ಬೇಡಿಕೆಗಳನ್ನು ಟ್ರಾಯ್ ಪರಿಶೀಲಿಸಿ, ಈಗ ತೀರ್ಪು ನೀಡಿದೆ. ‘ಅಂತರರಾಷ್ಟ್ರೀಯ ದೂರಸಂಪರ್ಕ ಸಂಘಟನೆ (ಐಟಿಯು) ಸಹ ಇಂತಹ ಯಾವುದೇ ನಿಯಂತ್ರಣವನ್ನು ಹೇರಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಐಟಿಯು ಇನ್ನಷ್ಟೇ ಅಧ್ಯಯನ ನಡೆಸ
ಬೇಕಿದೆ. ನಿಯಂತ್ರಣಗಳ ಅವಶ್ಯಕತೆ ಇದೆ ಎನಿಸಿದಾಗ, ನಿಯಂತ್ರಣ ಹೇರಲಾಗುತ್ತದೆ’ ಎಂದು ಟ್ರಾಯ್ ಹೇಳಿದೆ.


Spread the love

About Laxminews 24x7

Check Also

ವಿಜಯಪುರ ಜಿಲ್ಲೆಯ ಅಭಿವೃದ್ಧಿಯ ಕನಸು ನನಸು ಮಾಡಲು ಬದ್ಧ ಎಂದ ಸಿಎಂ; ಯುಕೆಪಿ, ಸರ್ಕಾರಿ ಮೆಡಿಕಲ್ ಕಾಲೇಜು ಸೇರಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ

Spread the love ವಿಜಯಪುರ ಜಿಲ್ಲೆಯ ಅಭಿವೃದ್ಧಿಯ ಕನಸು ನನಸು ಮಾಡಲು ಬದ್ಧ ಎಂದ ಸಿಎಂ; ಯುಕೆಪಿ, ಸರ್ಕಾರಿ ಮೆಡಿಕಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ