Breaking News

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನ ಸಭೆ

Spread the love

ಬೆಳಗಾವಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನ ಸಭೆಯನ್ನು ಜಿಲ್ಲಾಧ್ಯಕ್ಷ ವಿನಯ್ ನವಲಗಟ್ಟಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲ ನಡೆಸಲಾಯಿತು.

ಸಭೆಯಲ್ಲಿ ಪಂಚಿ ಗ್ಯಾರಂಟಿಗಳ ಅನುಷ್ಠಾನದ ಕುರಿತಾಗಿ ಪ್ರಗತಿ ಪರಿಶೀಲನೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನಗಳಲ್ಲಿ ಸಮಸ್ಯೆಗಳ ಕುರಿತು ಚರ್ಚೆ ಮಾಡಲಾಯಿತು, ಅನ್ನಭಾಗ್ಯ, ಗೃಹಜೋತಿ, ಗೃಹಲಕ್ಷ್ಮಿ, ಯುವ ನದಿ ,ಶಕ್ತಿ ಯೋಜನೆ, ಕುರಿತಾಗಿ ಸಭೆಯಲ್ಲಿ ಚರ್ಚಿಸಲಾಯಿತು ಅನ್ನಭಾಗ್ಯ ಯೋಜನೆ ಆಹಾರ ಇಲಾಖೆ ಅಕ್ಕಿ ವಿತರಣೆ ವಾಗುತ್ತಿದ್ದು ಫಲಾನವಿಗಳು ಇದನ್ನು ಬೇರೆ ಕಡೆ ಮಾರುತ್ತಿರುವ ಮಾಹಿತಿಯೂ ಕೂಡ ಸಭೆಯಲ್ಲಿ ಚರ್ಚೆ ಆಯಿತು, ಆಹಾರ ಇಲಾಖೆ ಅಧಿಕಾರಿಗಳ ನಿರ್ಲಕ್ಷ ಇದಕ್ಕೆ ಕಾರಣ ಎಂದ ಸದಸ್ಯರುಗಳು ಗ್ಯಾರೆಂಟಿ ಯೋಜನೆಗಳ ಕುರಿತಾಗಿ ತಾಲೂಕ ಮಟ್ಟದಲ್ಲಿ ಚರ್ಚಿಸಲು ಅಧಿಕಾರಿಗಳು ಸಭೆ ನಡೆಸಲು ತಾರತಮ್ಯ ನಡೆಸುತ್ತಿದ್ದಾರೆ ಸದಸ್ಯರುಗಳೇ ಒತ್ತಾಯ ಪೂರಕವಾಗಿ ಸಭೆಗಳನ್ನು ನಡೆಸಲು ಅಧಿಕಾರಿಗಳ ಮೇಲೆ ಒತ್ತಡ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಇದನ್ನು ಶೀಘ್ರವೇ ಪರಿಹಾರ ಹುಡುಕದಿದ್ದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಸರ್ಕಾರದ ಮಹತ್ವದ ಯೋಜನೆಗಳು ಹಿನ್ನಡೆ ಉಂಟಾಗುತ್ತದೆ ಎಂದು ಸದಸ್ಯರುಗಳು ಆತಂಕ ವ್ಯಕ್ತಪಡಿಸಿದರು.


ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ವಿನಯ ನಗಲಗಟ್ಟಿ ಪಂಚಾಯತ್ ಸ್ವರಾಜ್ ಸಂಚಾರದೊಂದಿಗೆ ಮಾತನಾಡಿ ಪಂಚಿ ಗ್ಯಾರಂಟಿ ಪ್ರಗತಿಪರಿಶೀಲನ ಸಭೆ ಪ್ರತಿ ತಿಂಗಳ ಸಭೆ ನಡೆಸಿ ಕೊಂದು ಕೊರತೆಗಳನ್ನು ಪರಿಶೀಲಿಸುತ್ತೇವೆ ಗ್ಯಾರಂಟಿ ಯೋಜನೆಗಳು ಕುರಿತಾಗಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹಾರ ಹುಡುಕಿಕೊಳ್ಳುತ್ತೇವೆ
ಮಾಹಿತಿ ನೀಡಿದ್ದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕ ಅಧ್ಯಕ್ಷರುಗಳು ,ಅಧಿಕಾರಿಗಳು ಉಪಸ್ಥಿತರಿದ್ದರು


Spread the love

About Laxminews 24x7

Check Also

ಫಾರೂಕಿಯಾ ಕಾಲನಿಯಲ್ಲಿ ಯುಫಾರೂಕಿಯಾ ಕಾಲನಿಯಲ್ಲಿ ಯುಜಿಡಿ ಕಾಮಗಾರಿಗೆ ಚಾಲನೆ ನೀಡಿದ ಅಮಾನ್ ಸೇಠ್ಜಿಡಿ ಕಾಮಗಾರಿಗೆ ಚಾಲನೆ ನೀಡಿದ ಅಮಾನ್ ಸೇಠ್ ಫಾರೂಕಿಯಾ ಕಾಲನಿಯಲ್ಲಿ ಯುಜಿಡಿ ಕಾಮಗಾರಿ ಆರಂಭ 36 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ದಶಕಗಳ ನೈರ್ಮಲ್ಯ ಸಮಸ್ಯೆಗೆ ಶಾಶ್ವತ ಮುಕ್ತಿ ಶಾಸಕರ ಪರವಾಗಿ ಚಾಲನೆ ನೀಡಿದ ಅಮಾನ್ ಸೇಠ್ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರ ನೇತೃತ್ವದಲ್ಲಿ ಅಭಿವೃದ್ಧಿ ಪರ್ವ ಮುಂದುವರೆದಿದ್ದು, ವೀರಭದ್ರ ನಗರದ ಫಾರೂಕಿಯಾ ಕಾಲನಿಯಲ್ಲಿ ಇಂದು ಒಳಚರಂಡಿ ವ್ಯವಸ್ಥೆಯ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಶಾಸಕ ಆಸೀಫ್ ಸೇಠ್ ಅವರ ಪರವಾಗಿ ಯುವ ನಾಯಕ ಅಮಾನ್ ಸೇಠ್ ಅವರು ವೀರಭದ್ರ ನಗರದ 6ನೇ ಅಡ್ಡರಸ್ತೆ ಹಾಗೂ ಫಾರೂಕಿಯಾ ಕಾಲೋನಿಯಲ್ಲಿ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಿದರು. ಇಡೀ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗಾಗಿ ಮಂಜೂರಾಗಿರುವ 36 ಕೋಟಿ ರೂಪಾಯಿ ಅನುದಾನದ ಅಡಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ನೂತನ ಯುಜಿಡಿ ವ್ಯವಸ್ಥೆಯಿಂದಾಗಿ ಈ ಭಾಗದ ನಿವಾಸಿಗಳ ದಶಕಗಳ ಕಾಲದ ನೈರ್ಮಲ್ಯ ಮತ್ತು ಚರಂಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಕಾಮಗಾರಿ ಆರಂಭದ ವೇಳೆ ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಿದ ಅಮಾನ್ ಸೇಠ್, ಕ್ಷೇತ್ರದ ನಾಗರಿಕರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸಲು ಶಾಸಕರು ಬದ್ಧರಾಗಿದ್ದಾರೆ ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೊರೇಟರ್ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ತಮ್ಮ ಭಾಗದ ಪ್ರಮುಖ ಸಮಸ್ಯೆಯಾಗಿದ್ದ ಒಳಚರಂಡಿ ಯೋಜನೆ ಈಗ ಅನುಷ್ಠಾನಕ್ಕೆ ಬರುತ್ತಿರುವುದಕ್ಕೆ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದು, ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Spread the loveಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರ ನೇತೃತ್ವದಲ್ಲಿ ಅಭಿವೃದ್ಧಿ ಪರ್ವ ಮುಂದುವರೆದಿದ್ದು, ವೀರಭದ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ