Breaking News

ಖಡಕಲಾಟ ಪೊಲೀಸರ್ ಭರ್ಜರಿ ಕಾರ್ಯಾಚರಣೆ 8.61 ಲಕ್ಷ ಮೌಲ್ಯದ ವಸ್ತುಗಳು ವಶ

Spread the love

 

ಚಿಕ್ಕೋಡಿ:ರಸ್ತೆ ಬದಿಯಲ್ಲಿರುವ ಹಾಗೂ ಹೊಲ ಮನೆಯ ಹತ್ತಿರ ನಿಲ್ಲಿಸಿದ ಟ್ರಾಕ್ಟರ್ ಟ್ರೇಲರ್‌ಗಳನ್ನು ಹಾಗೂ
ಡಿಸ್ಕ ಸಮೇತ 46 ಟಾಯರಗಳನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಖಡಕಲಾಟ ಪೋಲಿಸರು ಬಂಧಿಸಿದ್ದಾರೆ.

 

ಆರೋಪಿತರು ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದ ಮಾರುತಿ ಬಸಪ್ಪಾ ಠೊಣ್ಣೆ (24), ಮಹಾದೇವ ಮುರಾರಿ ಮಾಕಾಳೆ (27), ‌ಬಾಬು ಸಿದ್ದಪ್ಪಾ ಡಾಲೆ (37), ಶಿವಾನಂದ ಮಾರುತಿ ಗಜಬರ (29), ಖಾನಾಪೂರ ತಾಲೂಕಿನ ಕಕ್ಕೇರಿ ಗ್ರಾಮದ ಸಂಜು ಬಿಷ್ಟಪ್ಪಾ ಅಂಬಡಗಟ್ಟಿ (28), ಶ್ರಾವಣ ಸೊಮಲಿಂಗ ಹುಲಮನಿ (20), ಖಾನಾಪೂರ ತಾಲೂಕಿನ ಘಸ್ಟೊಳಿ ದಡ್ಡಿ ಗ್ರಾಮದ ಸಂತೋಷ ಯಲ್ಲಪ್ಪಾ ನಾಗಣ್ಣವರ (26), ಇವರನ್ನು ಬಂಧಿಸಿ ಇವರ ಬಳಿ ಇರುವ
ವಿವಿಧ ಕಂಪನಿಯ ಡಿಸ್ಕ ಸೇರಿ 4,60,000 ಮೌಲ್ಯದ 46 ಟಾಯರಗಳು ಹಾಗೂ 400,000 ಮೌಲ್ಯದ ಎರಡು ಟಾಟಾ ಸುಮೋ ವಾಹನ ,200 ಕೆಂಪು ಚೀರಾ ಇಟ್ಟಿಗೆಗಳು, ಕೆಂಪು ಬಣ್ಣದ ಜಾಕ್ ಒಂದು, ಟ್ರಾಕ್ಟರ ಟ್ರೇಲರ್ ಡಿಸ್ಕ ನಟ್ ಬಿಚ್ಚುವ 02 ಪಾನ 200, ಹೀಗೆ ಒಟ್ಟು 8,61,300 ಮೌಲ್ಯದ ಸಾಮಾನೂಗಳನ್ನು ವಶಪಡಿಸಿಕೊಂಡಿರುವ ಪೋಲಿಸರು.

 

ಆರೋಪಿತರು ಖಡಕಲಾಟ, ನಿಪ್ಪಾಣಿ, ಸದಲಗಾ, ಹುಕ್ಕೇರಿ, ಸಂಕೇಶ್ವರ, ಯಮಕನಮರಡಿ, ಚಿಕ್ಕೋಡಿ, ಅಂಕಲಿ, ಕಿತ್ತೂರ, ಹಾರುಗೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿನ ಬೇರೆ ಬೇರೆ ಊರುಗಳಲ್ಲಿಂದ ಸದರಿ ಆರೋಪಿತರ ಕಡೆಯಿಂದ ಒಟ್ಟು 8,61,300 ಕಿಮ್ಮತ್ತಿನ ಸಾಮಾನೂಗಳನ್ನು ವಶಪಡಿಸಿಕೊಂಡಿರುವ ಪೋಲಿಸರು. ಇಂತಹ ಖತರ್ನಾಕ ಕಳ್ಳರನ್ನು ಬಂಧಿಸಿ ಖಡಕಲಾಟ ಪೊಲೀಸರು-ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.


Spread the love

About Laxminews 24x7

Check Also

‘ಸುವರ್ಣ ವಿಧಾನಸೌಧದ ಮುಂದೆ ಬಸವಣ್ಣನ ಮೂರ್ತಿ ಸ್ಥಾಪಿಸಿ, ಅಧಿವೇಶನದಲ್ಲಿ ಘೋಷಿಸಿ’

Spread the loveಬೆಳಗಾವಿ: ಅನುಭವ ಮಂಟಪದ ಮೂಲಕ ಜಗತ್ತಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮುನ್ನುಡಿ‌ ಬರೆದವರು ವಿಶ್ವಗುರು ಬಸವಣ್ಣ. ಭಾರತದ ಸಂವಿಧಾನದಲ್ಲಿರುವ ಬಹುತೇಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ