Breaking News

Uncategorized

ವೃತ್ತಿರಂಗದಲ್ಲಿ ಮುನ್ನಡೆ. ಸ್ವತಂತ್ರ ಉದ್ಯಮಿಗಳಿಗೆ ಎದುರಾಳಿಗಳಿಂದ ಸ್ಪರ್ಧೆ

ಮೇಷ: ಆರೋಗ್ಯ ಸ್ಥಿರ. ಉದ್ಯೋಗಸ್ಥರು ವ್ಯವಹಾರಸ್ಥರಿಗೆ ವಿಪುಲ ಅವಕಾಶ. ಹಲವು ಕಾಲದಿಂದ ಕಾಡುತ್ತಿರುವ ಜಟಿಲ ಸಮಸ್ಯೆಗೆ ಪರಿಹಾರ. ಶುಭ ಕಾರ್ಯಕ್ಕೊದಗಿದ ವಿಘ್ನ ದೂರ. ಗೃಹಿಣಿಯರಿಗೆ, ಮಕ್ಕಳಿಗೆ ಆನಂದದ ದಿನ. ವೃಷಭ: ವೃತ್ತಿರಂಗದಲ್ಲಿ ಮುನ್ನಡೆ. ಸ್ವತಂತ್ರ ಉದ್ಯಮಿಗಳಿಗೆ ಎದುರಾಳಿಗಳಿಂದ ಸ್ಪರ್ಧೆ. ಗುರುಸಮಾನರ ಅಕಸ್ಮಾತ್‌ ಭೇಟಿ. ಸಂಗಾತಿಯ ಮನೋಗತವನ್ನು ಗೌರವಿಸಿ ನಡೆದುಕೊಂಡರೆ ಕ್ಷೇಮ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಮಿಥುನ: ಗಣೇಶ, ದುರ್ಗೆಯರ ಆರಾಧನೆ ಯಿಂದ ವಿಘ್ನ ನಿವಾರಣೆ. ಶುಭ ಕಾರ್ಯ ನಡೆಸುವ ಬಗ್ಗೆ ಚಿಂತನೆ. ಹಿರಿಯರ …

Read More »

ಅಶ್ಲೀಲ ವಿಡಿಯೋ ಪ್ರಕರಣ: ಪ್ರಜ್ವಲ್ ರೇವಣ್ಣ SIT ಕಸ್ಟಡಿ ಜೂನ್ 10 ರವರೆಗೆ ವಿಸ್ತರಣೆ

ಬೆಂಗಳೂರು: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅದನ್ನು ವಿಡಿಯೋ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಎಸ್‌ಐಟಿ ಕಸ್ಟಡಿ ಅವಧಿಯನ್ನು ಗುರುವಾರ ಕೋರ್ಟ್ ಜೂನ್ 10ರ ವರೆಗೆ ವಿಸ್ತರಿಸಿ ಆದೇಶಿಸಿದೆ. ಪ್ರಜ್ವಲ್‌ ರೇವಣ್ಣ ಅವರ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಆರೋಪಿಯನ್ನು ಇಂದು ಮಧ್ಯಾಹ್ನ 3 ಗಂಟೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಮುಂದೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ …

Read More »

ಮೋದಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರೂ ಪರ್ಯಾಯ ಸ್ಥಿರ ಸರ್ಕಾರ ರಚನೆ ಯತ್ನ ಮುಂದುವರೆಸಿದ ಇಂಡಿಯಾ ಬ್ಲಾಕ್!

ನವದೆಹಲಿ: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ) ಶುಕ್ರವಾರ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರೂ, ಬಿಜೆಪಿಗೆ ಪರ್ಯಾಯವಾಗಿ ಸ್ಥಿರ ಸರ್ಕಾರ ರಚನೆಗೆ ಪ್ರತಿಪಕ್ಷಗಳ ಮೈತ್ರಿಕೂಟ ತನ್ನ ಪ್ರಯತ್ನ ಮುಂದುವರಿಸುವುದಾಗಿ ಹೇಳಿದೆ. ಈ ಸಂಬಂಧ ಟಿಎಂಸಿ ಸಂಸದರಾದ ಅಭಿಷೇಕ್ ಬ್ಯಾನರ್ಜಿ ಮತ್ತು ಡೆರೆಕ್ ಒ’ಬ್ರಿಯಾನ್ ಅವರು ಮುಂಬೈನಲ್ಲಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರೊಂದಿಗೆ ಮತ್ತು ದೆಹಲಿಯಲ್ಲಿ ಸಮಾಜವಾದಿ ಪಕ್ಷದ(ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಗುರುವಾರ ಮಾತುಕತೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ …

Read More »

ಕುಂದಗೋಳ : ಮೂರು ಶಾಲೆಗೆ ಪರಿಸರ ಮಿತ್ರ ಶಾಲಾ ಪ್ರಶಸ್ತಿ

ಕುಂದಗೋಳ: ತಾಲ್ಲೂಕಿನ ಮೂರು ಶಾಲೆಗಳು ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಧಾರವಾಡ ವತಿಯಿಂದ 2023-2024ನೇ ಸಾಲಿನ ‘ಪರಿಸರ ಮಿತ್ರ ಶಾಲಾ ಪ್ರಶಸ್ತಿ’ಗೆ ಭಾಜನವಾಗಿವೆ. ‘ಕಮಡೊಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂದಗೋಳ ಪಟ್ಟಣದ ಬಿ.ವೈ.ಪಾಟೀಲ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಿವೇಕಾನಂದ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಈ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿವೆ. ಶಾಲೆಯಲ್ಲಿ ಇಕೋ ಕ್ಲಬ್ ರಚನೆ ಮಾಡುವುದು, ಶಾಲಾ ಆವರಣದಲ್ಲಿ ಸಸ್ಯ ಬೆಳೆಸುವಿಕೆಯಲ್ಲಿ …

Read More »

ಸರಗಳ್ಳರ ಬಂಧನ: ಚಿನ್ನಾಭರಣ ವಶ

ರಾಯಬಾಗ: ಸರಗಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಅಪರಾಧ ಪತ್ತೆ ವಿಭಾಗದ ಪೊಲೀಸರು ಬಂಧಿಸಿ, ₹2.25 ಲಕ್ಷ ಮೌಲ್ಯದ 3.75 ಗ್ರಾಂ ತೂಕದ ಚಿನ್ನಾಭರಣ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಭೀಮ ನಗರ ನಿವಾಸಿಗಳಾದ ಸದ್ದಾಂ ಮೆಹಬೂಬ್ ಅವಟಿ (24), ಮಹಮ್ಮದ್ ಅಲಿ ಸಿರಾಜ ಡಾಂಗೆ (24) ಬಂಧಿತರು.   ಮೇ28ರಂದು ಚಿಂಚಲಿ ರಸ್ತೆಯ ನಿವಾಸಿ ಸುನೀತಾ ಅಪ್ಪಾಸಾಬ ಪೂಜೇರಿ ಅವರು ವಾಯುವಿಹಾರಕ್ಕೆ ತೆರಳಿದ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ …

Read More »

ಎಂ.ಕೆ.ಹುಬ್ಬಳ್ಳಿ| ಭಾರಿ ಮಳೆಗೆ ರಸ್ತೆ ಜಲಾವೃತ: ಮನೆಗಳಿಗೆ ನುಗ್ಗಿದ ನೀರು

ಎಂ.ಕೆ.ಹುಬ್ಬಳ್ಳಿ: ಪಟ್ಟಣದಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ಮಳೆ ರಭಸಕ್ಕೆ ಚರಂಡಿಗಳು ತುಂಬಿಕೊಂಡು ನೀರು, ಚರಂಡಿ ತ್ಯಾಜ್ಯವು ರಸ್ತೆಗಳಲ್ಲಿ ಹರಿಯಿತು. ರಸ್ತೆ ಪಕ್ಕದಲ್ಲಿದ್ದ ಮನೆಗಳಿಗೂ ನೀರು ನುಗ್ಗಿದ್ದರಿಂದ ನಿವಾಸಿಗಳು ಪರದಾಡುವಂತಾಯಿತು. ಹೆದ್ದಾರಿಯ ಕೆಳಸೇತುವೆ, ಪಟ್ಟಣದ ಒಳ ಮುಖ್ಯರಸ್ತೆ ಜಲಾವೃತಗೊಂಡಿದ್ದವು. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು. ‘ಪ್ರತಿ ಬಾರಿ ಜೋರು ಮಳೆಯಾದಾಗ ರಸ್ತೆಗಳಲ್ಲಿ ನೀರು ತುಂಬಿಹರಿದು ಸಾಕಷ್ಟು ಸಮಸ್ಯೆ ಸೃಷ್ಟಿಯಾಗುತ್ತದೆ. ಪಟ್ಟಣ ಪಂಚಾಯ್ತಿಯು ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕು’ ಎಂದು ನಿವಾಸಿಗಳು …

Read More »

ಅಕ್ಷರ ದಾಸೋಹ ಅಧಿಕಾರಿ ಆತ್ಮಹತ್ಯೆಗೆ ಯತ್ನ

ಲಿಂಗಸೂಗೂರು: ತಾಲೂಕಿನ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮೌನೇಶ ಕಂಬಾರ್ ಆತ್ಮಹತ್ಯೆ ಯತ್ನಿಸಿದ ಘಟನೆ ನಡೆದಿದೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ನಿನ್ನೆ ರಜೆ ಮಾಡಿದ ಅವರು ನಿದ್ರೆ ಮಾತ್ರೆ ಸೇವಿಸಿದ್ದಾರೆ. ಪಟ್ಟಣದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕರೆದೊಯ್ಯಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Read More »

ಮಸೀದಿಗಳಾಗಿ ಮಾರ್ಪಾಡಾದ ದೇವಾಲಗಳನ್ನು ಮರಳಿ ಪಡೆಯಲು ಕಾನೂನಾತ್ಮಕ ಹೋರಾಟ: ಪೇಜಾವರ ಶ್ರೀ

ಬೆಳಗಾವಿ: ಕಾಶಿ ಮತ್ತು ಮಥುರಾದಲ್ಲಿ ಮಸೀದಿಗಳಾಗಿ ಮಾರ್ಪಾಡು ಮಾಡಲಾದ ಕಾಶಿ ದೇವಾಲಯಗಳನ್ನು ಮರಳಿ ಪಡೆಯಲು ಕಾನೂನಾತ್ಮಕ ಹೋರಾಟ ಮಾಡಲಾಗುತ್ತಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಬೀದಿಯಲ್ಲಿ ಹೋರಾಡುವುದಕ್ಕಿಂತ ಕಾನೂನು ಹೋರಾಟ ಉತ್ತಮ ಎಂದು ನ್ಯಾಯಾಲಯಗಳು ಅಭಿಪ್ರಾಯಪಟ್ಟಿರುವ ಕಾರಣ ಅದನ್ನು ಅನುಸರಿಸಿದ್ದೇವೆ ಎಂದರು. ದೇವಾಲಯಗಳನ್ನು ಹಿಂಪಡೆಯುವ ನಮ್ಮ ಹೋರಾಟ ಎಲ್ಲ ರೀತಿಯಿಂದ ಸಮರ್ಥನೀಯ ಎಂದು ಅವರು ಈ ಹಿಂದೆ ನಮಗೆ ಆದ …

Read More »

ಬೈಕ್ ಗೆ ಡಿಕ್ಕಿ ಹೊಡೆದು ಸಾರಿಗೆ ಬಸ್ ಪಲ್ಟಿ: ಬೈಕ್ ಸವಾರ ದುರ್ಮರಣ

ಬೆಳಗಾವಿ: ಬೆಳಗಾವಿ – ಗೋಕಾಕ ರಾಜ್ಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದ ಸಾರಿಗೆ ಬಸ್ ಪಲ್ಟಿಯಾಗಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಶುಕ್ರವಾರ ತಾಲೂಕಿನ ಖನಗಾಂವ ಕೆ.ಎಚ್. ಗ್ರಾಮದ ಬಳಿ ಸಂಭವಿಸಿದೆ. ತಾಲೂಕಿನ ಸುಳೇಭಾವಿ ಗ್ರಾಮದ ವಿಠ್ಠಲ ದತ್ತಾ ಲೋಕರೆ (29) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.   ಬೆಳಗಾವಿಯಿಂದ ಗೋಕಾಕ ಕಡೆಗೆ ಹೊರಟಿದ್ದ ಸಾರಿಗೆ ಬಸ್ ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ …

Read More »

ಚಂದನ್ ಶೆಟ್ಟಿ- ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು!

ಬೆಂಗಳೂರು: ಕನ್ನಡದ ಪ್ರಸಿದ್ದ ರಾಪರ್, ನಟ ಚಂದನ್ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ಅವರ ನಾಲ್ಕು ವರ್ಷಗಳ ದಾಂಪತ್ಯ ಮುರಿದು ಬಿದ್ದಿದೆ ಎಂದು ವರದಿಯಾಗಿದೆ. ಬಿಗ್ ಬಾಸ್ ಸೀಸನ್ 5 ನಲ್ಲಿ ಪರಿಚಯವಾಗಿ ಬಳಿಕ ವಿವಾಹವಾಗಿದ್ದ ಈ ಜೋಡಿ ಇದೀಗ ದೂರವಾಗಿದೆ ಎನ್ನಲಾಗಿದೆ.   ಬೆಂಗಳೂರಿನ 2ನೇ ಹೆಚ್ಚುವರಿ ಕೌಟುಂಬಿಕ ಕೋರ್ಟ್ ಇಂದು (ಜೂನ್ 7) ಚಂದನ್ ಶೆಟ್ಟಿ ಮತ್ತು ನಿವೇದಿತಾಗೆ ವಿಚ್ಚೇದನ ಮಂಜೂರು ಮಾಡಿದೆ ಎಂದು ಮಾಧ್ಯಮ …

Read More »