ಧಾರವಾಡ: ಎಲ್ಲೆಡೆ ಹರಡುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಜಾರಿಯಲ್ಲಿರುವ ಅವಧಿಯಲ್ಲಿ ಗ್ರಾಮೀಣ ಜನರಿಗೆ ಉದ್ಯೋಗ ಸಮಸ್ಯೆಗಳು ಉಂಟಾಗಬಾರದು ಎಂಬ ಮಹತ್ವಾಕಾಂಕ್ಷೆಯೊಂದಿಗೆ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು(ನರೇಗಾ) ಮುಂದುವರೆಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದ ಮೇರೆಗೆ ಧಾರವಾಡ ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮಪಂಚಾಯತ್‍ಗಳಲ್ಲಿ ನರೇಗಾ ಚಟುವಟಿಕೆಗಳು ಪ್ರಾರಂಭವಾಗವೆ. ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಚಟುವಟಿಕೆಗಳು ಈಗಾಗಲೇ ಪ್ರಾರಂಭವಾಗಿದ್ದು, ದೇವಲಿಂಗಿಕೊಪ್ಪದ ಕೆರೆಗೆ ನೀರಿನ ಕಾಲುವೆ …
Read More »ಫೇಸ್‍ಬುಕ್ ಮೂಲಕ ಮದ್ಯ ಮಾರಾಟ: ಜಾಹೀರಾತಿಗೆ ಮರುಳಾದ್ರೆ ಪಂಗನಾಮ ಫಿಕ್ಸ್
ರಾಯಚೂರು: ಲಾಕ್‍ಡೌನ್ ಹಿನ್ನೆಲೆ ಮದ್ಯ ಮಾರಾಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿರುವುದು ಎಣ್ಣೆ ಪ್ರಿಯರನ್ನ ಚಡಪಡಿಸುವಂತೆ ಮಾಡಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಆನ್‍ಲೈನ್ ವಂಚನೆಗೆ ಮುಂದಾಗಿದ್ದಾರೆ. ಎಲ್ಲಿ ಹೇಳಿದ್ರೂ ಮದ್ಯವನ್ನು ಹೋಂ ಡೆಲಿವರಿ ಮಾಡುತ್ತೇವೆ ಅಂತ ಜಾಹೀರಾತು ಹಾಕಿಕೊಂಡಿದ್ದಾರೆ. ಇದನ್ನು ನಂಬಿ ಅವರ ಖಾತೆಗೆ ಹಣ ಹಾಕಿದ್ರೆ ಪಂಗನಾಮ ಗ್ಯಾರಂಟಿ. ರಾಯಚೂರಿನ ಅಮೃತ ವೈನ್‍ಶಾಪ್‍ನಿಂದ ಎಲ್ಲಾ ಬ್ರಾಂಡ್‍ನ ಮದ್ಯ ಹೋಂ ಡೆಲಿವರಿ ಇದೆ. ನಗರದ ಕೆ.ಇ.ಬಿ ಕಾಲೋನಿ, ನಿಜಲಿಂಗಪ್ಪ ಕಾಲೋನಿ …
Read More »ಬಾಗಲಕೋಟ ಜಿಲ್ಲೆಯ ಇಬ್ಬರು ಕೊರೋನಾ ಸೋಂಕಿನಿಂದ ಗುಣಮುಖ*
:- ಮಹಾಮಾರಿ ಕೊರೋನಾ ತಡೆಗಟ್ಟುವ ಹಿನ್ನಲೆ ಲಾಕ್ ಡೌನ. ಬಾಗಲಕೋಟ ಜಿಲ್ಲೆಯ ಇಬ್ಬರು ಕೊರೋನಾ ಸೋಂಕಿನಿಂದ ಗುಣಮುಖ ಕೊರೋನಾ ಸೋಂಕಿನಿಂದ ಮೃತ್ತಪಟ್ಟಿದ ವ್ಯಕ್ತಿಯ ಪತ್ನಿ ಹಾಗೂ ಸಹೋದರ ಗುಣಮುಖ ಬಾಗಲಕೋಟ ಜಿಲ್ಲಾ ಕೋವಿಡ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಬಿಡುಗಡೆ ಆದ್ರೂ ೧೪ ದಿನಗಳ ಕಾಲ ಹೋಮ್ ಕ್ವಾರಂಟೈನ ಇರಲು ಸೂಚನೆ ಬಾಗಲಕೋಟ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ, ಕೆ ರಾಜೇಂದ್ರ ಹೇಳಿಕೆ ಕೋವಿಡ್ ಗುಣಮುಖರನ್ನು ಸಸಿ ನೀಡುವ ಮೂಲಕ ಕಳುಹಿಸಿಕೊಟ್ಟ ಜಿಲ್ಲಾ …
Read More »3 ದಿನ ನಡೆದು ಇನ್ನೇನೋ ಮನೆ ಸೇರೋ 1 ಗಂಟೆ ಮುಂಚೆ ಬಾಲಕಿ ಸಾವು
ರಾಯ್ಪುರ: ಕೊರೊನಾದಿಂದ ಇಡೀ ದೇಶವೇ ತತ್ತರಿಸಿ ಹೋಗುತ್ತಿದೆ. ಹೀಗಾಗಿ ಅನೇಕ ಕಾರ್ಮಿಕರು ನಡೆದುಕೊಂಡು ತಮ್ಮ ತಮ್ಮ ಸ್ವ-ಗ್ರಾಮಕ್ಕೆ ಹೋಗಿದ್ದಾರೆ. ಈ ನಡುವೆ ತೆಲಂಗಾಣದಿಂದ ತಮ್ಮ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ 12 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಜಾಮ್ಲೋ ಮಕ್ಡಾಮ್ (12) ಮೃತ ಬಾಲಕಿ. ತೆಲಂಗಾಣದಿಂದ ಚತ್ತೀಸ್‍ಗಢದ ಬಿಜಾಪುರ ಜಿಲ್ಲೆಗೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಮೃತ ಬಾಲಕಿ ತೆಲಂಗಾಣದ ಗ್ರಾಮವೊಂದರಲ್ಲಿ ತನ್ನ ಕುಟುಂಬಕ್ಕಾಗಿ ಮೆಣಸಿನಕಾಯಿ ತೋಟದಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಲಾಕ್‍ಡೌನ್ ಆದ …
Read More »ಲಾಕ್‍ಡೌನ್ ಮಧ್ಯೆ ಯಾದಗಿರಿಯಲ್ಲಿ ಅಕ್ರಮ ಮರಳು ದಂಧೆ ಬಲು ಜೋರು
ಯಾದಗಿರಿ: ಇಡೀ ಜಗತ್ತಿಗೆ ಒಂದು ಚಿಂತೆಯಾದ್ರೆ ಯಾದಗಿರಿ ಅಕ್ರಮ ದಂಧೆಕೋರರಿಗೆ ಒಂದು ಚಿಂತೆಯಾಗಿದೆ. ಯಾಕೆಂದರೆ ಇಡೀ ವಿಶ್ವವೇ ಕೊರೊನಾ ವೈರಸ್ ಹಾವಳಿಗೆ ತತ್ತರಿಸುತ್ತಿದೆ. ಮನುಷ್ಯ ಹಣಕ್ಕಿಂತ ಆರೋಗ್ಯ ಮುಖ್ಯ ಅಂತ ನಂಬುವಂತಾಗಿದೆ. ಆದರೆ ಯಾದಗಿರಿಯಲ್ಲಿ ಅಕ್ರಮವಾಗಿ ದುಡ್ಡು ಮಾಡುವ ನೀಚ ಮನಸ್ಸುಗಳು ಮಾತ್ರ ಕಡಿಮೆಯಾಗಿಲ್ಲ . ಕೊರೊನಾ ಲಾಕ್‍ಡೌನ್ ಮಧ್ಯೆಯೂ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಜೋರಾಗಿ ನಡೆಯುತ್ತಿದೆ. ಇದನ್ನು ತಡೆಯಬೇಕಿದ್ದ ಪೊಲೀಸ್ ಇಲಾಖೆ ಮತ್ತು ತಹಶೀಲ್ದಾರ್ ಈ ಬಗ್ಗೆ …
Read More »ಪತ್ರಕರ್ತರಿಗೆ ಕೊರೊನಾ ವೈರಸ್: ಆರೋಗ್ಯ ಇಲಾಖೆ ಸಲಹೆ ಹೀಗಿದೆ.
ಹಲವು ಪತ್ರಕರ್ತರಿಗೆ ಕೊರೊನಾ ವೈರಸ್: ಆರೋಗ್ಯ ಇಲಾಖೆ ಸಲಹೆ ಹೀಗಿದೆ.. ಹಲವು ಮಾಧ್ಯಮ ಸಿಬ್ಬಂದಿಗೆ ಕೊರೊನಾ ವೈರಸ್ ಬಂದಿದ್ದು, ಈ ಹಿನ್ನೆಲೆ ಆರೋಗ್ಯ ಸಚಿವಾಲಯವು ಪತ್ರಕರ್ತರಿಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮತ್ತು ಕೋವಿಡ್ 19 ಹರಡುವುದನ್ನು ತಡೆಯಲು ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಲಹೆ ನೀಡಿದ್ದಾರೆ. ಹಲವು ಪತ್ರಕರ್ತರು ಕೋವಿಡ್ – 19 ಸೋಂಕು ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವುದು ಬಹಳ ದುರದೃಷ್ಟಕರ ಸುದ್ದಿ. ಪತ್ರಕರ್ತರು ಕರ್ತವ್ಯ ಮಾಡುತ್ತಿರುವಾಗ ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಸಾಮಾಜಿಕ ಅಂತರವನ್ನು …
Read More »ಕೊರೋನಾ ಶಂಕಿತರನ್ನು ಕ್ವಾರಂಟೈನ್ ಮಾಡಿರುವ ಹಿನ್ನೆಲೆಯಲ್ಲಿ ಸುತ್ತಲಿನ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿ ಹೋಗುತ್ತಿದ್ದಾರೆ
ಚಿಕ್ಕೋಡಿ -ಚಿಂಚಲಿ ಪಟ್ಟಣದಲ್ಲಿ ಕಟ್ಟಡವೊಂದರಲ್ಲಿ ಕೊರೋನಾ ಶಂಕಿತರನ್ನು ಕ್ವಾರಂಟೈನ್ ಮಾಡಿರುವ ಹಿನ್ನೆಲೆಯಲ್ಲಿ ಸುತ್ತಲಿನ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿ ಹೋಗುತ್ತಿದ್ದಾರೆ. ಕೊರೊನಾ ಭಯಕ್ಕೆ ರಾತ್ರೋರಾತ್ರಿ ಮಾನೆಗಳನ್ನ ಖಾಲಿ ಮಾಡುತ್ತಿರುವ ಜನ ಹತ್ತಿರದ ತೋಟಗಳಲ್ಲಿ ಟೆಂಟ್ ಹಾಕಿಕೊಂಡು ಇರಲು ನಿರ್ಧರಿಸಿದ್ದಾರೆ. ಚಿಂಚಲಿ ಪಟ್ಟಣದ ಭಕ್ತಿ ನಿವಾಸದಲ್ಲಿ 44 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಮಾಯಕ್ಕಾ ದೇವಸ್ಥಾನದ ಭಕ್ತಿನಿವಾಸದ ಸುತ್ತಲೂ ಇರುವ 40 ಕ್ಕೂ ಹೆಚ್ಚು ಕುಟುಂಬಗಳು ಮನೆ ಖಾಲಿ ಮಾಡಿವೆ. ಕುಡಚಿ …
Read More »BIG-BREAKINGಸಾರ್ವಜನಿಕರ ಆಕ್ರೋಶಕ್ಕೆ ತಲೆಬಾಗಿದ ಸರ್ಕಾರ,ಬೈಕ್ ಸಂಚಾರ ಆದೇಶ ವಾಪಸ್,
ಬೆಂಗಳೂರು: ಏಪ್ರಿಲ್ 20ರ ನಂತರ ಬೈಕ್ ಸಂಚಾರಕ್ಕೆ ನೀಡಿದ್ದ ಅವಕಾಶವನ್ನು ಸರ್ಕಾರ ವಾಪಸ್ ತೆಗೆದುಕೊಂಡಿದೆ. ಸಾರ್ವಜನಿಕರ ಆಕ್ರೋಶಕ್ಕೆ ಸರ್ಕಾರ ಕೊನೆಗೂ ತಲೆಬಾಗಿದೆ. ಈ ಕುರಿತು ಅಧಿಕೃತ ಪ್ರಕಟನೆ ಹೊರಡಿಸಿರುವ ಸರ್ಕಾರ ತನ್ನ ನಿರ್ಧಾರವನ್ನು ವಿಮರ್ಶಿಸಿಕೊಂಡಿದೆ. ಜನಾಭಿಪ್ರಾಯದ ಹಿನ್ನೆಲೆಯಲ್ಲಿ, ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಈ ಕೆಳಕಂಡ ನಿರ್ಣಯಗಳನ್ನು ಪುನರ್ ವಿಮರ್ಶೆ ಮಾಡಿ ಸರ್ಕಾರ ಈ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. 1. ದ್ವಿ-ಚಕ್ರ ವಾಹನಗಳ (Two-Wheeler) ಮುಕ್ತ ಸಂಚಾರಕ್ಕೆ ಅವಕಾಶ ಕೊಡುತ್ತೇವೆಂಬ …
Read More »“ಕೊರೊನಾ ವೈರಸ್ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡಿದ ಚೀನಾ”..
ಬೀಜಿಂಗ್: ಕೊರೊನಾ ವೈರಸ್ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡಿದ ಚೀನಾ ವುಹಾನ್ ನಗರದಲ್ಲಿನ ಸಾವಿನ ಸಂಖ್ಯೆಯನ್ನು ಮರೆ ಮಾಡಿತ್ತೆ ಎನ್ನುವ ಪ್ರಶ್ನೆ ಈಗ ಎದ್ದಿದೆ. ಕೊರೊನಾ ವೈರಸಿನ ಹುಟ್ಟೂರು ವುಹಾನ್ ನಗರದಲ್ಲಿನ ಸಾವಿನ ಸಂಖ್ಯೆ ದಿಢೀರ್ ಶೇ.50 ರಷ್ಟು ಹೆಚ್ಚಾಗಿದೆ. ಗುರುವಾರದವರೆಗೆ ವುಹಾನ್ ನಗರದಲ್ಲಿ 2,579 ಜನ ಮೃತಪಟ್ಟಿದ್ದರು. ಆದರೆ ಈಗ ಹೊಸದಾಗಿ 1,290 ಮಂದಿ ಸೇರಿದ್ದು ಒಟ್ಟು ಸಾವನ್ನಪ್ಪಿದ ರೋಗಿಗಳ ಸಂಖ್ಯೆ 3,869ಕ್ಕೆ ಏರಿಕೆಯಾಗಿದೆ. ಅಮೆರಿಕ, ಇಟಲಿಯಲ್ಲಿ ದಿನಕ್ಕೆ …
Read More »ಕೊರೋನಾ ಭೀತಿ: ‘ನಮ್ಮ ಜೀವಕ್ಕೂ ಬೆಲೆ ಕೊಡಿ‘ ಎಂದು ಇಎಸ್‌ಐ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ
ಬೆಂಗಳೂರು(ಏ.11): ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಲೇ ಇವೆ. ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಮಂದಿಗೆ ಕೊರೋನಾ ಬಂದಿರುವುದರಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಹಾಗಾಗಿಯೇ ಬೆಂಗಳೂರನ್ನು ಕರ್ನಾಟಕದ ಕೊರೋನಾ ಹಾಟ್ಸ್ಪಾಟ್ ಎಂದು ಗುರುತಿಸಲಾಗಿದೆ. ಹೀಗಿರುವಾಗ ದಿನವಿಡೀ ಕೊವಿಡ್ 19 ಶಂಕಿತ ರೋಗಿಗಳಿಗೆ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡುತ್ತಿರುವ ಇಎಸ್‌ಐ(ಎಂಪ್ಲಾಯೀಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೊರೇಷನ್) ಆಸ್ಪತ್ರೆ ವೈದ್ಯರು ಮತ್ತು ನರ್ಸ್‌ಗಳು ಜೀವ ಭಯದಲ್ಲಿ ಬದುಕುತ್ತಿದ್ದಾರೆ. ತಮಗೂ ಕೊರೋನಾ ಬರುವ …
Read More »