ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಸಿಐಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ. 12 ರಂದು ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪ ಅವರಿಗೆ ಸಿಐಡಿಯಿಂದ ನೋಟಿಸ್ ನೀಡಲಾಗಿತ್ತು. ಆದರೆ, ಯಡಿಯೂರಪ್ಪ ವಿಚಾರಣೆಗೆ ಗೈರು ಹಾಜರಾಗಿದ್ದರು. ಪಕ್ಷದ ಪೂರ್ವ ನಿಗದಿತ ಕಾರ್ಯಕ್ರಮ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿರುವುದರಿಂದ ಜೂ. 17ರಂದು ವಿಚಾರಣೆಗೆ ಹಾಜರಾಗುವುದಾಗಿ ಕೋರಿದ್ದರು.ಇಂದು .ಎಸ್. ಯಡಿಯೂರಪ್ಪ ಸೋಮವಾರ …
Read More »ಸರ್ಕಾರಿ ನೌಕರರಿಗೆ ಹೊಸ ಭರಸೆ ಕೊಟ್ಟ ಡಿಸಿಎಂ
ಬೆಂಗಳೂರು, ಜೂನ್ 17: ಕರ್ನಾಟಕದ ಸರ್ಕಾರಿ ನೌಕರರು, ನಿವೃತ್ತ ನೌಕರರು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಸರ್ಕಾರ ಯಾವಾಗ ಜಾರಿಗೊಳಿಸುತ್ತದೆ? ಎಂದು ಕಾಯುತ್ತಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ನೌಕರರಿಗೆ ಹಲವು ಭರವಸೆಗಳನ್ನು ನೀಡುತ್ತಲೇ ಇದೆ. ಲೋಕಸಭೆ ಚುನಾವಣೆ 2024, ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಮುಕ್ತಾಯಗೊಂಡಿದೆ. ನೀತಿ ಸಂಹಿತೆ ತೆರವಾದ ಬಳಿಕ ಕರ್ನಾಟಕ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯನ್ನು ಸಹ …
Read More »ST ಗೆ ಕೋಳಿ ಬೆಸ್ತ ಸಮಾಜ ಸೇರಿಸಲು ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇನೆ: ಸಂಸದೆ ಪ್ರಿಯಂಕಾ
ಬೆಳಗಾವಿ: ಕೋಳಿ ಬೆಸ್ತ ಸಮಾಜವನ್ನು ಎಸ್ ಟಿ ವರ್ಗಕ್ಕೆ ಸೇರಿಸಲು ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇನೆ ಎಂದು ಚಿಕ್ಕೋಡಿ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಕೋಳಿ ಬೆಸ್ತ ಸಮಾಜ ಜಿಲ್ಲಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ‘ತಂದೆ ಹಾಗೂ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಕೂಡ ಕೋಳಿ- ಬೆಸ್ತ ಸಮಾಜವನ್ನು ಎಸ್ಟಿ ಸಮಾಜಕ್ಕೆ ಸೇರಿಸಬೇಕೆಂಬ ನಿಲುವು ಹೊಂದಿದ್ದಾರೆ.ಅದರಂತೆ ನಾನು ಕೂಡ ಸದಾ …
Read More »ಸೆಸ್ ಹಂಚಿಕೆ’ಯಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ: ಸಚಿವ ಎಂ.ಬಿ ಪಾಟೀಲ್
ಬೆಂಗಳೂರು: ಕೇಂದ್ರ ಸರಕಾರವು ವರ್ಷಕ್ಕೆ 2,50,000 ಕೋಟಿ ರೂ.ಗಳಷ್ಟು ಅಗಾಧ ಸೆಸ್ ಸಂಗ್ರಹಿಸುತ್ತಿದ್ದರೂ ಅದರ ಹಂಚಿಕೆಯಲ್ಲಿ ಕರ್ನಾಟಕದಂತಹ ಪುರೋಗಾಮಿ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಆಕ್ಷೇಪಿಸಿದ್ದಾರೆ. ಈ ಬಗ್ಗೆ ಅವರು ಶನಿವಾರ ‘ಎಕ್ಸ್’ ವೇದಿಕೆಯಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೆಸ್/ತೆರಿಗೆ ಪಾವತಿಯಲ್ಲಿ ಕರ್ನಾಟಕ, ತಮಿಳುನಾಡು, ತೆಲಂಗಾಣದಂತಹ ರಾಜ್ಯಗಳು ಮುಂಚೂಣಿಯಲ್ಲಿವೆ. ಆದರೆ, ಇದಕ್ಕೆ ಪ್ರತಿಯಾಗಿ ಕೇಂದ್ರ ಸರಕಾರದಿಂದ ಈ …
Read More »ಪ್ರಾಣಿಗಳ ಬಾಯಾರಿಕೆ ತಣಿಸುವ ರೈತ
ಬೈಲಹೊಂಗಲ: ಬಿಸಿಲಿನ ಬೇಗೆಯಿಂದ ಬಳಲಿದ ಪಶು, ಪಕ್ಷಿ, ದನ-ಕರು, ಕುರಿಗಳಿಗೆ ನಿತ್ಯವೂ ಕುಡಿಯಲು ಉಚಿತವಾಗಿ ನೀರು ಪೂರೈಸುತ್ತಿರುವ ರೈತ ಬಾಬು ನಾಯ್ಕರ ಅವರ ಸಾಮಾಜಿಕ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಪಟ್ಟಣದ ಹೊಸೂರ ರಸ್ತೆಯ ತಮ್ಮ ಬರಡು ಕೃಷಿ ಭೂಮಿಯಲ್ಲಿರುವ ಹೊಂಡದಲ್ಲಿ ಬೋರ್‌ವೆಲ್ ಮೂಲಕ ಎರಡು ಹೊತ್ತು ನೀರು ಸಂಗ್ರಹಿಸಿ, ನಿತ್ಯ ನೂರಾರು ಕುರಿಗಳ ದಾಹ ತಣಿಸುತ್ತಿದ್ದಾರೆ. ಬಿಸಿಲಿನ ದಗೆಗೆ ಬಾಯಾರಿದ ಕುರಿಗಳು ದಾರಿ ಮಧ್ಯೆ ಈ ರೈತನ ಜಮೀನಿಗೆ ಬಂದು …
Read More »ಕರ್ನಾಟಕದ ಎರಡನೇ ರಾಜಧಾನಿಯಾಗಲಿಬೆಳಗಾವಿ
ಬೆಳಗಾವಿ: ನಗರದ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ತಾಯಿ ಭುವನೇಶ್ವರಿ, ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿ, ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರ ಪುತ್ಥಳಿಗಳ ಮೆರವಣಿಗೆ, ವೀರಗಾಸೆ ಕಲಾಪ್ರದರ್ಶನ, ಸುಮಾರು 250 ಜನ ನಿರಾಶ್ರಿತರಿಗೆ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಗೀತ ರಸಮಂಜರಿ ಕಾರ್ಯ ಕ್ರಮಗಳನ್ನೊಳಗೊಂಡಂತೆ ಉಸಿರುಗನ್ನಡ ಕನ್ನಡ ಉತ್ಸವವನ್ನು ಇತ್ತೀಚೆಗೆ ಅರ್ಥಪೂರ್ಣ ವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಾಗನೂರು ರುದ್ರಾಕ್ಷಿಮಠದ ಪೀಠಾಧಿಪತಿಗಳಾದ ಡಾ. ಅಲ್ಲಮಪ್ರಭು ಸ್ವಾಮಿಗಳು, …
Read More »ಮಾತು ಕಡಿಮೆ, ಕೆಲಸ ಹೆಚ್ಚು ಮಾಡುವೆ: ಜಗದೀಶ ಶೆಟ್ಟರ್
ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರ ಪಾಲಿಗೆ ಈಗ ಹೊಸ ಶೆಕೆ ಆರಂಭವಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಜನರೂ ಹೊಸ ಹೆಜ್ಜೆ ಇಟ್ಟಿದ್ದಾರೆ. ನಾಲ್ಕು ದಶಕಗಳಿಂದ ರಾಜ್ಯ ರಾಜಕಾರಣದಲ್ಲಿದ್ದ ಅವರು, ಈಗ ರಾಷ್ಟ್ರ ರಾಜಕಾರಣಕ್ಕೆ ಧುಮುಕಿದ್ದಾರೆ. ಬೆಳಗಾವಿ ಕ್ಷೇತ್ರದ ಅಭಿವೃದ್ಧಿಗೆ ಕನಸು ಕಟ್ಟಿಕೊಂಡಿರುವ ಶೆಟ್ಟರ್ ‘ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. ಮೊದಲ ಪ‍್ರಯತ್ನದಲ್ಲೇ ಗೆದ್ದಿದ್ದೀರಿ. ಹೇಗೆನಿಸುತ್ತಿದೆ? ತುಂಬಾ ಖುಷಿಯಾಗಿದೆ. ಚುನಾವಣೆ ಪ್ರಚಾರಕ್ಕೆ ಕಡಿಮೆ ಸಮಯವಿತ್ತು. ಆದರೆ, ಪಕ್ಷದ …
Read More »ಭುವಿಯಲ್ಲಿ ಮಳೆ ಎಳೆದ ಹಸಿರು ತೇರು…
ಕಿತ್ತೂರು: ಮೇ ಕೊನೆಯ ಮತ್ತು ಜೂನ್ ಮೊದಲ ವಾರದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಶೇ 90ರಷ್ಟು ಜಮೀನಿನಲ್ಲಿ ರೈತರು ವಿವಿಧ ಬೆಳೆಗಳನ್ನು ನಾಟಿ ಮಾಡಿದ್ದಾರೆ. ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆದಿವೆ. ಕಣ್ಣು ಹಾಯಿಸಿದಷ್ಟು ಹಚ್ಚ ಹಸಿರು ಪೈರು ಮನಸ್ಸಿಗೆ ಮುದ ನೀಡುವಂತಿದೆ. ‘ಪೈರಿನ ಗದ್ದೆಯಲ್ಲಿ ಬೆಳೆದಿರುವ ಕಸ ಕೀಳುವುದು, ನಾಟಿ ಮಾಡಿದ ಮತ್ತು ಕುಳೆ ಕಬ್ಬಿಗೆ ರಸಗೊಬ್ಬರ ಕಟ್ಟುವುದು, ಉಳಿದ ಭೂಮಿ ಬಿತ್ತನೆಗೆ ಸಿದ್ಧಪಡಿಸುವ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿವೆ’ …
Read More »ಬಿಹಾರ ಮುಖ್ಯಮಂತ್ರಿ ‘ನಿತೀಶ್ ಕುಮಾರ್’ ಆಸ್ಪತ್ರೆಗೆ ದಾಖಲು
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶನಿವಾರ ಬೆಳಿಗ್ಗೆ ಪಾಟ್ನಾದ ಮೇದಾಂತ ಆಸ್ಪತ್ರೆಗೆ ಭೇಟಿ ನೀಡಿದರು. ಆದಾಗ್ಯೂ, ಅವರು ಆಸ್ಪತ್ರೆಯಲ್ಲಿ ತಪಾಸಣೆಯ ನಂತರ ಮರಳಿದರು. ಸುದ್ದಿ ಸಂಸ್ಥೆಯ ಪ್ರಕಾರ, ಅವರು ಮೂಳೆ ವಿಭಾಗದಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಬೆಳಿಗ್ಗೆ 8: 33 ಕ್ಕೆ ಪಾಟ್ನಾದ ಮೇದಾಂತ ಆಸ್ಪತ್ರೆಗೆ ತಲುಪಿದರು. ಮಾಹಿತಿಯ ಪ್ರಕಾರ, ಅವರ ಕೈಯಲ್ಲಿ ನೋವು ಇತ್ತು, ಇದನ್ನು ಆಸ್ಪತ್ರೆಯ ಮೂಳೆ ವಿಭಾಗದಲ್ಲಿ …
Read More »ನಟ ದರ್ಶನ್ & ಗ್ಯಾಂಗ್ ನಿಂದ 10 ಮೊಬೈಲ್ , 30 ಲಕ್ಷ ಹಣ ಜಪ್ತಿ..!
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ 10 ಮೊಬೈಲ್ , 30 ಲಕ್ಷ ಹಣ ಜಪ್ತಿ ಮಾಡಲಾಗಿದೆ ಎಂದು ಸರ್ಕಾರದ ಎಸ್ ಪಿಪಿ ಪ್ರಸನ್ನಕುಮಾರ್ ಕೋರ್ಟ್ ಗೆ ಮಾಹಿತಿ ನೀಡಿದರು. ದರ್ಶನ್ ಹಾಗೂ ಸಹಚರರನ್ನು ಇಂದು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಈ ವೇಳೆ ಸರ್ಕಾರದ ಎಸ್ ಪಿಪಿ ಪ್ರಸನ್ನಕುಮಾರ್ ಕೋರ್ಟ್ ಗೆ ಮಾಹಿತಿ ನೀಡಿದರು. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ 10 …
Read More »