ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 116 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಒಬ್ಬರು ಮೃತರಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಚಿಕಿತ್ಸೆಗಾಗಿ ಅವರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗಿ ಸಂಖ್ಯೆ 48,135 ಆದ 47 ವರ್ಷದ ವ್ಯಕ್ತಿ ಜುಲೈ 14ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರು 20ರಂದು ಸಾವಿಗೀಡಾಗಿದ್ದಾರೆ. ಅವರಿಗೆ ತೀವ್ರ ಉಸಿರಾಟದ ತೊಂದರೆ ಇತ್ತು. ಅವರು ಬೆಳಗಾವಿ ತಾಲ್ಲೂಕಿನವರು ಎಂದು ಮಾಹಿತಿ ನೀಡಿದೆ. ಸವದತ್ತಿ ವರದಿ: ತಾಲ್ಲೂಕಿನಲ್ಲಿ 19 ಮಂದಿಗೆ ಕೋವಿಡ್ …
Read More »ರಾಜ್ಯದಲ್ಲಿ ಇಂದು ಕೊರೋನಾಗೆ 72 ಬಲಿ, ಬೆಂಗಳೂರಿನಲ್ಲಿ 2036 ಸೇರಿ 5072 ಮಂದಿಗೆ ಪಾಸಿಟಿವ್
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಏರಿಮುಖವಾಗಿಯೇ ಸಾಗಿದ್ದು, ಸತತ ಮೂರನೇ ದಿನವೂ 5 ಸಾವಿರದ ಗಡಿ ದಾಟಿದೆ. ರಾಜ್ಯದಲ್ಲಿ ಶನಿವಾರ 72 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 90 ಸಾವಿರ ತಲುಪಿದೆ. ಇಂದು ರಾಜ್ಯದಲ್ಲಿ 5072 ಪ್ರಕರಣಗಳು ವರದಿಯಾಗಿದ್ದು, 72 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 90942ಕ್ಕೇರಿಕೆಯಾಗಿದೆ. ಇನ್ನು ರಾಜ್ಯದಲ್ಲಿ ಚೇತರಿಕೆ ಪ್ರಮಾಣವೂ ಉತ್ತಮವಾಗಿದ್ದು, ದಿನವೊಂದರಲ್ಲಿ 2403 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ …
Read More »ಇದು ಮದುವೆಯ ಸಮಯ’ – ಪ್ರೇಯಸಿ ಮಿಹೀಕಾ ಬಗ್ಗೆ ರಾಣಾ ಮೆಚ್ಚುಗೆಯ ಮಾತು
ಹೈದರಾಬಾದ್: ಬಾಹುಬಲಿ ಖ್ಯಾತಿಯ ರಾಜ ಬಲ್ಲಾಳದೇವ ರಾಣಾ ದಗ್ಗುಬಾಟಿಯವರು ಮುಂದಿನ ತಿಂಗಳು ತಮ್ಮ ಪ್ರೇಯಸಿ ಮಿಹೀಕಾ ಬಜಾಜ್ ಅವರ ಜೊತೆ ಮದುವೆಯಾಗಲಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ತಾನು ಪ್ರೀತಿ ಬಲೆಯಲ್ಲಿ ಸಿಲುಕಿದ್ದೇನೆ ಎಂದು ಟ್ವೀಟ್ ಮಾಡಿದ್ದ ರಾಣಾ, ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗುವುದಾಗಿ ತಿಳಿಸಿದ್ದರು. ಅದರಂತೆ ಲಾಕ್ಡೌನ್ ನಡುವೆ ಆಗಸ್ಟ್ 8ರಂದು ರಾಣಾ ಮತ್ತು ಮಿಹೀಕಾ ಅವರ ಮದುವೆಯನ್ನು ಕುಟುಂಬದವರು ಫಿಕ್ಸ್ ಮಾಡಿದ್ದರು. ಆದರೆ ಈ ಕೊರೊನಾ ಆರ್ಭಟದ ನಡುವೆಯೂ …
Read More »ಜಗಜ್ಯೋತಿ ಬಸವಣ್ಣನವರು ಐಕ್ಯರಾದ ದಿನವನ್ನು ನಾಗರಪಂಚಮಿ ಆಚರಿಸುವ ಬದಲು ಬಸವ ಪಂಚಮಿ ಯನ್ನಾಗಿ ಆಚರಿಸಬೇಕು ಎಂದು ಕರೆಕೊಟ್ಟರು ಸತೀಶ್ ಶುಗರ್ಸ್ ಫೌಂಡೇಶನ್
ಗೋಕಾಕ ನಗರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಗೋಕಾಕ್ ಶಾಖೆ ಹಾಗೂ ಸತೀಶ್ ಶುಗರ್ಸ್ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ದಿನಾಂಕ 25.07. 2020 ರಂದು ನಾಗರ ಪಂಚಮಿ ಹಬ್ಬದ ನಿಮಿತ್ಯ ಪೌಷ್ಟಿಕ ಆಹಾರ ಹಾಲನ್ನು ಹಾವಿನ ಹುತ್ತಗಳಿಗೆ ಎರೆಯುವ ಬದಲು ಗೋಕಾಕ ನಗರದ ಶಿವಾ ಫೌಂಡೇಶನಲ್ಲಿರುವ ಅನಾಥ ಮಕ್ಕಳಿಗೆ ಹಾಲನ್ನು ಕೊಟ್ಟು ಮಾನವೀಯತೆಯ ಮೆರೆದಿರುವ ಮಾನವ ಬಂಧುತ್ವ ವೇದಿಕೆ ಗೋಕಾಕ್ …
Read More »ಗೋಕಾಕ ಜೇ ಏಮ್ ಯೆಫ್ ಸಿ ಕೋರ್ಟ್ ನಲ್ಲಿ ಮುಖ್ಯಮಂತ್ರಿ ವಿರುದ್ಧ ಕೋರ್ಟ್ ಸಮನ್ಸ್
ಬೆಳಗಾವಿ- ಗೋಕಾಕ ಉಪ ಚುನಾವಣೆಯಲ್ಲಿ ದಾಖಲಾದ ಚುನಾವಣಾ ನೀತಿ ಸಂಹಿತೆ ಪ್ರಕರಣವೊಂದಕ್ಕೆ ಸಮಂಧಿಸಿದಂತೆ ಸೆಪ್ಟೆಂಬರ್ 1 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಗೋಕಾಕ ಸಿವ್ಹಿಲ್ ಜಡ್ಜ್ JMFC ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಗೋಕಾಕ ಉಪ ಚುನಾವಣೆಯಲ್ಲಿ ವೀರಶೈವ ಲಿಂಗಾಯತರು ಬಿಜೆಪಿಗೆ ಮತ ಹಾಕಬೇಕೆಂದು,ಚುನಾವಣಾ ಪ್ರಚಾರದ ಸಭೆಯಲ್ಲಿ ಮತಯಾಚಿಸಿದ್ದರು,ಜಾತಿ ಹೆಸರಿನಲ್ಲಿ ಮತಯಾಚನೆ ಮಾಡಿದ್ದಾರೆ ಎಂದು ಆರೋಪಿಸಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ಗೋಕಾಕ್ ಪೋಲೀಸ್ ಠಾಣೆಯಲ್ಲಿ …
Read More »ಬಿಮ್ಸ್ ಆಸ್ಪತ್ರೆಯಲ್ಲಿ ಒಪಿಡಿ ಬಂದ್ ಮಾಡಿರುವ ಹಿನ್ನೆಲೆ ಸಾಮಾನ್ಯ ರೋಗಿಗಳು ಪರದಾಡುವಂತಾಗಿದೆ.
ಬೆಳಗಾವಿ: ಬಿಮ್ಸ್ ಆಸ್ಪತ್ರೆಯಲ್ಲಿ ಒಪಿಡಿ ಬಂದ್ ಮಾಡಿರುವ ಹಿನ್ನೆಲೆ ಸಾಮಾನ್ಯ ರೋಗಿಗಳು ಪರದಾಡುವಂತಾಗಿದೆ. ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಮಾಡಿರುವ ಹಿನ್ನೆಲೆ ಕಳೆದ ನಾಲ್ಕು ದಿನಗಳಿಂದ ಒಪಿಡಿ ಬಂದ್ ಮಾಡಲಾಗಿದೆ. ಆಸ್ಪತ್ರೆಗೆ ಬರುವ ಸಾಮಾನ್ಯ ರೋಗಿಗಳನ್ನು ಯಳ್ಳೂರು ಬಳಿಯ ಕೆಎಲ್ಇ ಆಸ್ಪತ್ರೆಗೆ ಕಳುಹಿಸಿ ಕೊಡಲಾಗುತ್ತಿದೆ. ಬಿಮ್ಸ್ ನಲ್ಲಿ ಕೇವಲ ತುರ್ತು ಚಿಕಿತ್ಸೆಯನ್ನು ಮಾತ್ರ ಅವಕಾಶ ನೀಡಲಾಗುತ್ತಿದೆ. ಇನ್ನು ಖಾಸಗಿ ಆಸ್ಪತ್ರೆಯಲ್ಲಿಯೂ ರೋಗಿಗಳ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರೋಗಿಗಳು ಸಂಕಷ್ಟಕ್ಕೆ …
Read More »ದಯವಿಟ್ಟು ಅಜ್ಜಿಯ ಅಡ್ರೆಸ್ ಹೇಳಿ- ಸೋನು ಸೂದ್……….
ಮುಂಬೈ: ಇತ್ತೀಚೆಗೆ ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದ ಬಾಲಿವುಡ್ ನಟ ಸೋನು ಸೂದ್, ಇದೀಗ ಅಜ್ಜಿಯೊಬ್ಬರ ಅಡ್ರೆಸ್ ಕೇಳುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆಸಾಮಾಜಿಕ ಜಾಲತಾಣಗಳಲ್ಲಿ ಅಜ್ಜಿಯ ಲಾಠಿ ಕೈಚಳಕದ ವಿಡಿಯೋ ವೈರಲ್ ಆಗಿದ್ದು, ಇದನ್ನು ನಟ ಸೋನು ಸೂದ್ ಸಹ ಹಂಚಿಕೊಂಡಿದ್ದಾರೆ. ಈ ಕುರಿತು ಟ್ವೀಟದದ ಮಾಡಿ, ದಯವಿಟ್ಟು ನಾನು ಅಜ್ಜಿಯ ಬಗ್ಗೆ ಮಾಹಿತಿ ಪಡೆಯಬಹುದೆ, ನಮ್ಮ ದೇಶದ ಮಹಿಳೆಯರಿಗೆ ಕೆಲ ರಕ್ಷಣಾ ತಂತ್ರಗಳನ್ನು …
Read More »ರಾಜಕೀಯದಲ್ಲಿ ಯಾರೂ ಸತ್ಯಹರಿಶ್ಚಂದ್ರ, ಧರ್ಮರಾಯ ಇಲ್ಲ- ವಿರೋಧ ಪಕ್ಷದವರಿಗೆ ಎಂಟಿಬಿ ತಿರುಗೇಟು
ಬೆಂಗಳೂರು: ನಲವತ್ತು ವರ್ಷಗಳ ರಾಜಕೀಯದಲ್ಲಿ ಎಲ್ಲರನ್ನು ನೋಡಿದ್ದೇನೆ. ಆದರೆ ಸತ್ಯಹರಿಶ್ಚಂದ್ರ, ಧರ್ಮರಾಯ ಮತ್ತು ನಳ ಮಹಾರಾಜ ಯಾರೂ ನನ್ನ ಕಣ್ಣಿಗೆ ಬಿದ್ದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ.ನಾಗರಾಜ್ ವಿರೋಧ ಪಕ್ಷದವರ ಆರೋಪ, ಪ್ರತ್ಯಾರೋಪಗಳಿಗೆ ತಿರುಗೇಟು ನೀಡಿದರು.ಇಂದು ಹೊಸಕೋಟೆ ತಾಲೂಕಿನ ತಾವರೆಕೆರೆಗೆ ಎಂ.ಟಿ.ಬಿ.ನಾಗರಾಜ್ ಬಾಗಿನ ಅರ್ಪಿಸಿದ್ದಾರೆ. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿರೋಧ ಪಕ್ಷದವರು ಆರೋಪಗಳು, ಪ್ರತ್ಯಾರೋಪಗಳನ್ನು ಮೀಡಿಯಾದಲ್ಲಿ ಮಾಡಿದ್ದಾರೆ. ಯಾವ ಯಾವ ಕಾಲದಲ್ಲಿ ಯಾರ್ಯಾರು ಮುಖ್ಯಮಂತ್ರಿಗಳಾಗಿದ್ದರು. ಯಾವ …
Read More »ರಾಜ್ಯಪಾಲರನ್ನು ಭೇಟಿ ಮಾಡಿದ ಸಿಎಂ ಅಶೋಕ್ ಗೆಹ್ಲೋಟ್- ರಾಜಭವನದಲ್ಲಿ ಘೋಷಣೆ ಕೂಗಿದ ಕಾಂಗ್ರೆಸ್ ಶಾಸಕರು
ಜೈಪುರ: ರಾಜಸ್ಥಾನ ಕಾಂಗ್ರೆಸ್ ಪಕ್ಷದ ಬಂಡಾಯದ ಮುನಿಸು ಮುಂದುವರಿದಿದ್ದು, ಇಂದು ಸಿಎಂ ಅಶೋಕ್ ಗೆಹ್ಲೋಟ್ ತಮ್ಮ ಪಕ್ಷದ ಶಾಸಕರೊಂದಿಗೆ ರಾಜಭವನಕ್ಕೆ ಭೇಟಿ ನೀಡಿ ಶಕ್ತಿ ಪ್ರದರ್ಶನ ನಡೆಸಿದರು. ಗವರ್ನರ್ ಭೇಟಿ ಮಾಡಿದ ಅಶೋಕ್ ಗೆಹ್ಲೋಟ್ ವಿಶೇಷ ಶಾಸನ ಸಭೆಯನ್ನು ಸಮಾವೇಶ ನಡೆಸಲು ಮನವಿ ಮಾಡಿದರು. ಇದಕ್ಕೂ ಮುನ್ನ ಫೈರ್ ಮೊಂಟ್ ಹೋಟೆಲ್ ನಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರು ಹೋಟೆಲ್ನಿಂದ ಬಸ್ ಮೂಲಕ ರಾಜಭವನಕ್ಕೆ ಆಗಮಿಸಿದ್ದರು. ರಾಜಭವನದಲ್ಲಿ ರಾಜ್ಯಪಾಲ ಕಲ್ರಾಜ್ ಮಿಶ್ರಾ …
Read More »ಮೃತಪಟ್ಟು ಒಂದು ದಿನವಾದ್ರೂ ಶವ ಕೊಟ್ಟಿಲ್ಲ – ಬರೋಬ್ಬರಿ 9 ಲಕ್ಷ ಬಿಲ್ ಕೊಟ್ಟ ಆಸ್ಪತ್ರೆ
ಬೆಂಗಳೂರು: ಕುಟುಂಬಕ್ಕೆ ಮೃತದೇಹ ನೀಡಲು 9 ಲಕ್ಷ ಬಿಲ್ ಮುಂದಿಟ್ಟು ಬೆಂಗಳೂರಿನ ಆಸ್ಪತ್ರೆ ಸತಾಯಿಸಿದ್ದು, ಈಗ ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಮೃತದೇಹವನ್ನು ನೀಡಲು ಆಸ್ಪತ್ರೆ ಒಪ್ಪಿಕೊಂಡಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 46 ವರ್ಷದ ಮಹಿಳೆ ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ್ದಾರೆ. ಇದೀಗ ಮೃತದೇಹ ಕೊಡಲು ಆಸ್ಪತ್ರೆ ಕುಟುಂಬಕ್ಕೆ 9 ಲಕ್ಷ ಬಿಲ್ ಮುಂದಿಟ್ಟಿದೆ. ಏನಿದು ಘಟನೆ? ಜುಲೈ 13 ರಂದು ಉಸಿರಾಟದ ಸಮಸ್ಯೆಯಿಂದ ಮಹಿಳೆಯನ್ನು …
Read More »