Breaking News

Uncategorized

ಬೆಳಗಾವಿಯಲ್ಲಿ ಚಿತೆ ಮೇಲೆ ಶವವನ್ನು ಎಸೆದು ಅಮಾನವೀಯವಾಗಿ ಅಂತ್ಯಸಂಸ್ಕಾರ

ಬೆಳಗಾವಿ: ಈಗಾಗಲೇ ಕೊರೊನಾದಿಂದ ಮೃತಪಟ್ಟವರನ್ನು ಗುಂಡಿಯಲ್ಲಿ ಎಸೆದು, ಜೆಸಿಬಿಯಿಂದ ತಂದು ಅಂತ್ಯಸಂಸ್ಕಾರ ಮಾಡಲಾಗಿದೆ. ಇದೀಗ ಬೆಳಗಾವಿಯಲ್ಲಿ ಚಿತೆ ಮೇಲೆ ಶವವನ್ನು ಎಸೆದು ಅಮಾನವೀಯವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ. ಬೆಳಗಾವಿ ನಗರದಲ್ಲಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆಯನ್ನು ಬೇಕಾಬಿಟ್ಟಿ ಮಾಡಲಾಗಿದೆ. ಮಹಾನಗರ ಪಾಲಿಕೆಯ ಸದಾಶಿವ ನಗರ ಸ್ಮಶಾನದಲ್ಲಿ ಸೋಂಕಿತರ ಅಂತ್ಯಸಂಸ್ಕಾರ ಮಾಡಲಾಗಿದೆ. ಒಂದೇ ಅಂಬುಲೆನ್ಸ್‌ನಲ್ಲಿ ಎರಡು ಮೃತದೇಹವನ್ನು ತಂದಿದ್ದಾರೆ. ನಂತರ ಆ ಶವಗಳನ್ನ ಚಿತೆಯ ಮೇಲೆ ಸಿಬ್ಬಂದಿ ಅಮಾನವೀಯವಾಗಿ ಎಸೆದು ಅಂತ್ಯಕ್ರಿಯೆ ಮಾಡಿದ್ದಾರೆ. ಚಿತೆಯ …

Read More »

ಬಳ್ಳಾರಿಯಲ್ಲಿ ಕೊರೋನಾ ಮಹಾಸ್ಪೋಟ : ಇಂದು 579 ಜನರಿಗೆ ಕೊರೋನಾ ದೃಢ, ಮೂವರು ಸಾವು

ಬಳ್ಳಾರಿ : ಜಿಲ್ಲೆಯಲ್ಲಿ ಕೊರೋನಾ ಮಹಾಸ್ಪೋಟವೇ ಉಂಟಾಗಿದೆ. ಇಂದು 579 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಡುವ ಮೂಲಕ, ಸೋಂಕಿತರ ಸಂಖ್ಯೆ 4,046ಕ್ಕೆ ಏರಿಕೆಯಾಗಿದೆ. ಜಿಲ್ಲಾಡಳಿತ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಇಂದು 579 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 4,046ಕ್ಕೆ ಏರಿಕೆಯಾಗಿದೆ. ಇದುವರೆಗೆ ಕೊರೋನಾ ಸೋಂಕಿತರಾದಂತ 1,622 ಜನರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ …

Read More »

ಚಂದನವನದಲ್ಲಿ ನಾಯಕತ್ವದ ಕೊರತೆ ತುಂಬಿದ ಶಿವಣ್ಣ

ನಿಂತ ನೀರಿನಂತಾಗಿದ್ದ ಕನ್ನಡ ಚಿತ್ರರಂಗದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವ ಸೂಚನೆ ಸಿಕ್ಕಿದೆ. ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಾರ್ಮಿಕ ಕಲಾವಿದರ ಒಕ್ಕೂಟ ಹೀಗೆ ಹಲವು ಸಂಘಟನೆಗಳು ಚಿತ್ರರಂಗದಲ್ಲಿವೆ. ಇವಕ್ಕೆಲ್ಲ ಸೂಕ್ತವಾಗಿ ಆಯ್ಕೆಯಾದ ಪದಾಧಿಕಾರಿಗಳಿದ್ದಾರೆ. ಆದರೆ, ಕಲಾವಿದರ ಸಂಘದ ಅಧ್ಯಕ್ಷ ಸ್ಥಾನ ಮಾತ್ರ ಖಾಲಿಯಾಗಿಯೇ ಇದೆ.ಚಿತ್ರರಂಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಕಲಾವಿದರ ಸಂಘವು ಪ್ರಮುಖ ಪಾತ್ರ ವಹಿಸುತ್ತ ಬಂದಿದೆ. ಡಾ.ರಾಜ್‍ಕುಮಾರ್, ಅಂಬರೀಷ್ ಅವರು ಕಲಾವಿದರ …

Read More »

ಏರುತ್ತಲೇ ಇದೆ ಡೀಸೆಲ್ ಬೆಲೆ..

ಬೆಳಗಾವಿ: ಇಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಬೆಲೆ ಸ್ಥಿರವಾಗಿದೆ. ಆದರೆ, ಡೀಸೆಲ್‌ ಬೆಲೆ ಏರಿಕೆಯಾಗುತ್ತಲೇ ಇದೆ. ಹೋದ ವಾರದ ಯಾವುದೇ ದಿನಗಳಲ್ಲೂ ಪೆಟ್ರೋಲ್‌ ಬೆಲೆ ಏರಿಕೆಯಾಗಿಲ್ಲ; ಇಳಿಕೆಯೂ ಆಗಿಲ್ಲ. ಲೀಟರ್ ಡೀಸೆಲ್‌ ಬೆಲೆ ಸರಾಸರಿ 40 ಪೈಸೆ ಜಾಸ್ತಿಯಾಗಿದೆ. *ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ …

Read More »

ಸೋಂಕಿತ ಗರ್ಭಿಣಿ ಕರೆದೊಯ್ಯಲು ಬಂದ ಕೊರೊನಾ ವಾರಿಯರ್ಸ್ ಮೇಲೆ ಕುಟುಂಬಸ್ಥರಿಂದ ಹಲ್ಲೆ

ಬೆಳಗಾವಿ: ಸೋಂಕಿತೆಯನ್ನ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕೆ ವಿರೋಧ ವ್ಯಕ್ತಪಡಿಸಿ ಕೊರೊನಾ ವಾರಿಯರ್ಸ್​ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ನಡೆದಿದೆ. ಗರ್ಭಿಣಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಕೆಯನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಬಂದಿದ್ದ ಆಯಂಬುಲೆನ್ಸ್ ತಡೆದು ಕೊರೊನಾ ವಾರಿಯರ್ಸ್​ನ ಸೋಂಕಿತೆಯ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಬೆಳಗಾವಿಗೆ ಸೋಂಕಿತೆಯನ್ನ ಕರೆದುಕೊಂಡು ಹೋಗದಂತೆ ವಿರೋಧಿಸಿ ಆಯಂಬುಲೆನ್ಸ್ ಡ್ರೈವರ್ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಅರ್ಧ ದಾರಿಗೆ ಆಯಂಬುಲೆನ್ಸ್ …

Read More »

ಅಥಣಿ: ಕೇಂದ್ರದ ಹಣ ಲೂಟಿ ಹೊಡೆಯುವ ಯತ್ನ; ಆರೋಪ

ಅಥಣಿ: ‘ಕೊರೊನಾ ಸೋಂಕು ಪರೀಕ್ಷೆ ಮಾಡಿಸಿದಾಗ ಒಂದೊಂದು ಸಲ ಒಂದೊಂದು ರೀತಿಯ ಫಲಿತಾಂಶವನ್ನು ಆರೋಗ್ಯ ಇಲಾಖೆಯವರು ನೀಡುತ್ತಿದ್ದಾರೆ. ಒಮ್ಮೆ ಪಾಸಿಟಿವ್‌ ನೀಡಿದರೆ, ಮರುದಿನವೇ ನೆಗೆಟಿವ್‌ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಬರುತ್ತಿರುವ ಕೋಟ್ಯಾಂತರ ರೂಪಾಯಿ ಅನುದಾನವನ್ನು ಲೂಟಿ ಹೊಡೆಯಲು ಹೀಗೆ ಮಾಡುತ್ತಿದ್ದಾರೆ’ ಎಂದು ಇಲ್ಲಿನ ಹಿಪ್ಪರಗಿ ಗಲ್ಲಿಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ. ಪಟ್ಟಣದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇದೇ ತಿಂಗಳು 15ರಂದು ಅಥಣಿಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದೆ. ವರದಿ …

Read More »

ಶೀಘ್ರವೇ ನೀರಾವರಿ ಕಾಮಗಾರಿಗಳು ಆರಂಭ

ಗೋಕಾಕ: ನೀರಾವರಿ ಹಾಗೂ ರಸ್ತೆ ಕಾಮಗಾರಿಗೆ ಹೆಚ್ಚಿನ ಮಹತ್ವ ನೀಡಿ ಕಾರ್ಯ ಮಾಡಲಾಗುತ್ತಿದ್ದು, ಇಡೀ ಗೋಕಾಕ ಮತಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಲೋಕೋಪಯೋಗಿ ಇಲಾಖೆಯಿಂದ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗಾಗಿ 6 ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ ಬಾಂದಾರ- ಕಮ್‌- ಸೇತುವೆಗಳನ್ನು ನಿರ್ಮಿಸಲು 14.80 ಕೋಟಿ ರೂ. ಕಾಮಗಾರಿಗಳು …

Read More »

ಐಪಿಎಲ್ ಅನೌನ್ಸ್ ಆಗಿದ್ದೇ ತಡ: ರೋಹಿತ್ ಶರ್ಮಾ ರೆಡಿ ಫಾರ್ ಬ್ಯಾಟಿಂಗ್

ಮುಂಬೈ: ಟೀಂ ಇಂಡಿಯಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ, ಐಪಿಎಲ್ ಘೋಷಣೆಯಾಗುತ್ತಿದ್ದಂತೆ ಇನ್ ಸ್ಟಾಗ್ರಾಂ ಪುಟದಲ್ಲಿ ಬ್ಯಾಟಿಂಗ್ ಅಭ್ಯಾಸಕ್ಕೆ ಸಜ್ಜಾಗಿರುವ ಫೋಟೋ ಪ್ರಕಟಿಸಿಕೊಂಡಿದ್ದು, ‘ಕೊನೆಯವರೆಗೂ ನನ್ನ ಆಯ್ಕೆಯ ಅಸ್ತ್ರ’ ಎಂದು ಬರೆದುಕೊಂಡಿದ್ದಾರೆ. ಐಪಿಎಲ್ ಅನೌನ್ಸ್ ಆಗಿದ್ದೇ ತಡ, ಕ್ರಿಕೆಟಿಗರಲ್ಲಿ, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಮತ್ತೆ ಕ್ರಿಕೆಟ್ ಆರಂಭವಾಗುವ ಖುಷಿಯಲ್ಲಿ ಕ್ರಿಕೆಟಿಗರು ಇದ್ದಾರೆ. ಈ ನಡುವೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ತಮ್ಮ ಇದನ್ನು ನೋಡಿ ಅಭಿಮಾನಿಗಳು ಭಾರೀ ಮೆಚ್ಚುಗೆ …

Read More »

ಕಾರ್ಗಿಲ್ ಹುತಾತ್ಮ ಯೋಧರ ಕುಟುಂಬದೊಂದಿಗೆ ನಾವಿದ್ದೇವೆ: ಸಿಎಂ

ಬೆಂಗಳೂರು: ಇಂದು 21ನೇ ಕಾರ್ಗಿಲ್ ವಿಜಯ್ ದಿವಸ್ ಆದ ಹಿನ್ನೆಲೆ, ಹುತಾತ್ಮ ಯೋಧರಿಗೆ ಮುಖ್ಯಮಂತ್ರಿ ಬಿಎಎಸ್​ ಯಡಿಯೂರಪ್ಪ ನಮನ‌ ಸಲ್ಲಿಸಿದ್ರು. ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬಿಎಸ್​ವೈ ಭಾಗಿಯಾದ್ರು. ಇದೇ ವೇಳೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡ ಉಪಸ್ಥಿತರಿದ್ರು. ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಆಯೋಜಿಸಿರುವ ಕಾರ್ಗಿಲ್ ವಿಜಯ್ ದಿವಸ್​ನಲ್ಲಿ ಹೆಮ್ಮೆಯಿಂದ ಪಾಲ್ಗೊಂಡಿದ್ದೇನೆ. ಭಾರತ …

Read More »

ಮನೆಯ ಗೋಡೆ ಕುಸಿತ – 6 ಜನ ಪ್ರಾಣಾಪಾಯದಿಂದ ಪಾರು………

ಗದಗ: ಎರಡು ದಿನ ಸುರಿದ ಭಾರೀ ಮಳೆಗೆ ಮನೆಯ ಗೋಡೆ ನೆನೆದು ಕುಸಿತವಾಗಿದ್ದು, ಕ್ಷಣಾರ್ಧದಲ್ಲಿ 6 ಜನ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪುರ ಗ್ರಾಮದಲ್ಲಿ ನಡೆದಿದೆ. ಕಮಲವ್ವ ಮಡಿವಾಳ ಅವರ ಮನೆಗೊಡೆ ಕುಸಿತವಾಗಿದೆ. ಲಖಮಾಪುರ ಗ್ರಾಮದಲ್ಲಿ ಕುಸಿತವಾದ ಮನೆಗೋಡೆ ಒಳಭಾಗದಲ್ಲಿ 6 ಜನ ಮಲಗಿದ್ದರು. ಈ ವೇಳೆ ಮಳೆಯಲ್ಲಿ ನೆನೆದಿದ್ದ ಗೋಡೆ ಕುಸಿದಿದೆ. ಅದೃಷ್ಟವಶಾತ್ ಗೋಡೆ ಹೊರಭಾಗಕ್ಕೆ ಬಿದ್ದಿದ್ದು, ಕುಸಿತವಾಗುತ್ತಿದ್ದಂತೆ ಕುಟುಂಬ ಎದ್ದು ಓಡಿದೆ. ಇದರಿಂದ ಭಾರೀ …

Read More »