ಬೆಂಗಳೂರು/ಮೈಸೂರು: ಅರಮನೆ ನಗರಿಯಲ್ಲಿ ಕೊರೊನಾ ವಾರಿಯರ್ ಆಗಿದ್ದ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಕೊರೊನಾ ವಾರಿಯರ್ಸ್ ಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.ಆರೋಗ್ಯಾಧಿಕಾರಿಯನ್ನು ನಾಗೇಂದ್ರ ಎಂದು ಗುರುತಿಸಲಾಗಿದ್ದು, ಇವರು ಮೈಸೂರಿನ ಆಲನಹಳ್ಳಿ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ನಾಗೇಂದ್ರ ಅವರು ಕಳೆದ ಒಂದು ವರ್ಷದಿಂದ ನಂಜನಗೂಡಿನಲ್ಲಿ ತಾಲೂಕು ಆರೋಗ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ. ಸುಧಾಕರ್ ಮನವಿ: …
Read More »ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರ ಬದ್ಧವಾಗಿದೆ
ಬೆಂಗಳೂರು, ಆ.20- ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ರೈತರ ಮನೆ ಬಾಗಿಲಿಗೆ ಪಶು ಸಂಜೀವಿನಿ ಯೋಜನೆ ಜಾರಿಗೊಳಿಸಲಾಗುವುದು. ರಾಜ್ಯದಲ್ಲಿ ಗೋವಿನ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಮುಂಗಾರು ಅವೇಶನದಲ್ಲಿ ಕಾಯ್ದೆ ಜಾರಿಗೆ ತರುವ ಯೋಚನೆಯಿದೆ ಎಂದು ತಿಳಿಸಿದರು. ಇದೇ ವೇಳೆ, ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ …
Read More »ನನ್ನನ್ನು ಅಪರಾಧಿ ಎಂದು ಘೋಷಿಸಿರುವುದು ನನಗೆ ನೋವು ತಂದಿದೆ:ಪ್ರಶಾಂತ್ ಭೂಷಣ್
ಹೊಸದಿಲ್ಲಿ: “ನ್ಯಾಯಾಂಗ ನಿಂದನೆಗಾಗಿ ನನ್ನನ್ನು ಅಪರಾಧಿ ಎಂದು ಘೋಷಿಸಿರುವುದು ನನಗೆ ನೋವು ತಂದಿದೆ. ನನಗೆ ದೊರೆಯಬಹುದಾದ ಶಿಕ್ಷೆಯ ಕುರಿತಂತೆ ನನಗೆ ನೋವಿಲ್ಲ. ಆದರೆ ನನ್ನನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಲಾಗಿದೆ ಎಂಬುದಕ್ಕೆ ನೋವಿದೆ. ಪ್ರಜಾಪ್ರಭುತ್ವ ಮತ್ತದರ ಮೌಲ್ಯಗಳನ್ನು ರಕ್ಷಿಸಲು ಬಹಿರಂಗ ಟೀಕೆ ಅಗತ್ಯವಿದೆ ಎಂದು ನಾನು ನಂಬಿದ್ದೇನೆ” ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಇಂದು ಸುಪ್ರೀಂ ಕೋರ್ಟ್ ನ ಮುಂದೆ ಹೇಳಿದ್ದಾರೆ. https://youtu.be/gSlF434lvWE “ಸಂಸ್ಥೆ ಇನ್ನೂ ಉತ್ತಮವಾಗಿ ಕಾರ್ಯಾಚರಿಸುವಂತಾಗಲು ನಾನು …
Read More »ಒಂದು ವರ್ಷ ವಾದರೂ ಇನ್ನೂ ಸಿಕ್ಕಿಲ್ಲ ಪರಿಹಾರ
ಬೆಳಗಾವಿ: ಕಳೆದ ವರ್ಷದ ನೆರೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ವಿತರಿಸುವಂತೆ ಆಗ್ರಹಿಸಿ ಮೂಡಲಗಿ ತಾಲೂಕಿ ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಅವರಾದಿ ಗ್ರಾಮದ ನೆರೆ ಸಂತ್ರಸ್ತರು ಗುರುವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಕಳೆದ ವರ್ಷ ಭೀಕರ ಪ್ರವಾಹದಿಂದ ಅವರಾದಿ ಗ್ರಾಮದ ದಂಡಪ್ಪನವರ ತೋಟ, ದೊಂಬರ ತೋಟ, ಉರಬಿ ತೋಟ, ಮಾಡಲಗಿಯವರ ತೋಟ ಸೇರಿ ಸುಮಾರು 75 ಮನೆಗಳು ಹಾನಿಗೊಳಗಾಗಿವೆ. …
Read More »ಘಟಪ್ರಭಾ, ಮಲಪ್ರಭಾ ಜೊತೆಗೆ ಕೃಷ್ಣಾ ನದಿ ಪ್ರವಾಹದ ಭೀತಿ- ನಡುಗಡ್ಡೆ ಜನ ಸ್ಥಳಾಂತರ
ಬಾಗಲಕೋಟೆ: ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಕೊಂಚ ಬಿಡುವು ನೀಡಿದರೂ, ಪ್ರವಾಹ ಮಾತ್ರ ತಗ್ಗುತ್ತಿಲ್ಲ. ಇದರಿಂದಾಗಿ ನಡುಗಡ್ಡೆ ಜನರು ತೀವ್ರ ಆತಂಕಗೊಂಡಿದ್ದು, ಸ್ಥಳಾಂತರ ಕಾರ್ಯ ಮುಂದುವರಿದಿದೆಜಮಖಂಡಿ ತಾಲೂಕಿನಲ್ಲಿ ಆತಂಕ ಹೆಚ್ಚಾಗಿದ್ದು, ಮುತ್ತೂರು ನಡುಗಡ್ಡೆ ಜನರಿಗೆ ಕಳೆದ ಪ್ರವಾಹದ ಕಹಿ ನೆನಪು ಕಣ್ಮುಂದೆ ಬರುತ್ತಿದೆ. ಇಲ್ಲಿನ ಜನ ಸದ್ಯ ನಡುಗಡ್ಡೆ ತೊರೆದು ತುಬಚಿ ಗ್ರಾಮಕ್ಕೆ ಸ್ಥಳಾಂತರಗೊಂಡಿದ್ದಾರೆ. ಶೂರ್ಪಾಲಿ, ತುಬಚಿ, ಮುತ್ತೂರು ಕಂಣವಾಡಿ ಗ್ರಾಮಗಳ ಕೆಲ ಪ್ರದೇಶಗಳು ನಡುಗಡ್ಡೆಯಾಗಿವೆ. ಈ ಬಾರಿಯೂ ಪ್ರವಾಹದ ಆತಂಕ …
Read More »ಧೋನಿಗೆ ವಿದಾಯ ಪಂದ್ಯ – ಬಿಸಿಸಿಐ ಹೇಳಿದ್ದೇನು?
ಮುಂಬೈ: ನಿವೃತ್ತಿ ಘೋಷಣೆ ಮಾಡಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿಯವರಿಗೆ ವಿದಾಯ ಪಂದ್ಯವನ್ನು ಆಡಿಸಬೇಕು ಎಂಬ ಮಾತು ಎಲ್ಲೆಡೆ ಕೇಳಿಬರುತ್ತದೆ.ಅಗಸ್ಟ್ 15ರಂದು ಸಂಜೆ ಎಂಎಸ್ ಧೋನಿಯವರು ಕೇವಲ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ವಿದಾಯ ಹೇಳಿದ್ದರು. ಈ ಮೂಲಕ ಮತ್ತೆ ಧೋನಿಯವರನ್ನು ನೀಲಿ ಜೆರ್ಸಿಯಲ್ಲಿ ನೋಡಾ ಬಯಸಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಜೊತೆಗೆ ವಿದಾಯ ಪಂದ್ಯವಾಡದೇ ಧೋನಿ ನಿವೃತ್ತಿ ಹೊಂದಿದ್ದು, ಅವರ ಅಭಿಮಾನಿಗಳಿಗೆ ಬೇಸರ ತರಿಸಿತ್ತು. …
Read More »ಜಾರಕಿಹೊಳಿ ತಂಡದಿಂದ ಲಾಬಿ; ಬಿಜೆಪಿ ರಾಷ್ಟ್ರ ನಾಯಕರ ಮೇಲೆ ಒತ್ತಡ; ಲಕ್ಷ್ಮಣ ಸವದಿ ಡಿಸಿಎಂ ಸ್ಥಾನಕ್ಕೆ ಕುತ್ತು?
ಬೆಳಗಾವಿ: ಎರಡು ವರ್ಷಗಳ ರಾಜಕೀಯ ವನವಾಸದ ಬಳಿಕ ಕಷ್ಟಪಟ್ಟು ಪರಿಷತ್ ಸದಸ್ಯರಾಗಿರುವ ಸಿ.ಪಿ.ಯೋಗೇಶ್ವರ್, ಈಗ ಸಚಿವ ಪಟ್ಟಕ್ಕಾಗಿ ಪ್ರಯತ್ನ ಆರಂಭಿಸಿದ್ದಾರೆ. ಇದರ ಜೊತೆಗೆ ರಮೇಶ್ ಜಾರಕಿಹೊಳಿ ಕೂಡ ಡಿಸಿಎಂ ಸ್ಥಾನಕ್ಕಾಗಿ ಹಪಹಪಿಸುತ್ತಿದ್ದು ಇದಕ್ಕಾಗಿ ದೆಹಲಿ ದಂಡಯಾತ್ರೆ ಕೈಗೊಂಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ರಚಿಸುವುದರಲ್ಲಿ ಮುಂಚೂಣಿಯಲ್ಲಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಈಗ ಉಪ ಮುಖ್ಯಮಂತ್ರಿ ಸ್ಥಾನ ಪಡೆಯಲು ಕಸರತ್ತು ನಡೆಸಿದ್ದಾರೆ. ಮತ್ತೊಂದೆಡೆ ಸಿಪಿ ಯೊಗೇಶ್ವರ್ ಸಚಿವ ಸ್ಥಾನಕ್ಕೆ ಲಾಬಿಗೆ …
Read More »ಗಾನಗಾರುಡಿಗ ಎಸ್.ಪಿ. ಬಾಲಸುಬ್ರಮಣ್ಯಂರ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ
ಚೆನ್ನೈ,- ಕೋವಿಡ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಗಾನಗಾರುಡಿಗ ಎಸ್.ಪಿ. ಬಾಲಸುಬ್ರಮಣ್ಯಂರ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಕೊರೊನಾ ಸೋಂಕಿನಿಂದ ಬಳಲುತ್ತಿರುವ ಎಸ್‍ಪಿಬಿ ಅವರಿಗೆ ಶ್ವಾಸಕೋಶದ ಸಮಸ್ಯೆಯೂ ಇರುವುದರಿಂದ ಅವರಿಗೆ ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಆದರೂ ದಿನೇ ದಿನೇ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ, ವೆಂಟಿಲೇಟರ್ ಇಲ್ಲದೆ ಅವರಿಗೆ ಚಿಕಿತ್ಸೆ ಕೊಡಲು ಪ್ರಯತ್ನಪಟ್ಟೆವಾದರೂ ಅವರ ದೇಹ ಅದಕ್ಕೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ವೆಂಟಿಲೇಟರ್ ಇಲ್ಲದೆ ಎಸ್‍ಪಿಬಿ ಅವರು …
Read More »ಘಟಪ್ರಭಾ ಅಟ್ಟಹಾಸದಿಂದ ಸಂಕಷ್ಟಕ್ಕೆ ಒಳಗಾದ ಬಾಣಂತಿ, ಗರ್ಭಿಣಿ!
ಬೆಳಗಾವಿ: ಘಟಪ್ರಭಾ ಅಟ್ಟಹಾಸಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ನದಿ ನೀರು ಮನೆಗಳಿಗೆ ನುಗ್ಗಿದೆ. ರಸ್ತೆಗಳಲ್ಲಿ ನೀರು ನಿಂತಿದೆ. ಜನ ತಮ್ಮ ಮನೆಗಳನ್ನು ಬಿಟ್ಟು ಪರಿಹಾರ ಕೇಂದ್ರಗಳಲ್ಲಿ ಜೀವನ ನಡೆಸುವಂತ ಪರಿಸ್ಥಿತಿ ಎದುರಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮೇಳವಂಕಿ ಗ್ರಾಮದ ಪರಿಹಾರ ಕೇಂದ್ರದಲ್ಲಿ ತಮ್ಮ ಪರಿಸ್ಥಿತಿ ನೆನೆದು ಬಾಣಂತಿ ಮತ್ತು ಗರ್ಭಿಣಿ ಕಣ್ಣೀರು ಹಾಕಿದ್ದಾರೆ. ಮೇಳವಂಕಿ ಗ್ರಾಮಕ್ಕೆ ಘಟಪ್ರಭಾ ನದಿ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಎರಡು ತಿಂಗಳ ಮಗುವನ್ನ ಕರೆದುಕೊಂಡು ಬಾಣಂತಿ …
Read More »ನೆರೆ ಹಾಗೂ ಅತಿವೃಷ್ಟಿಯ ಪರಿಣಾಮ, 43,300 ಹೆಕ್ಟೇರ್ ಬೆಳೆ ‘ಆಹುತಿ’
ಬೆಳಗಾವಿ: ಜಿಲ್ಲೆಯಲ್ಲಿ ಪ್ರವಾಹ ಹಾಗೂ ಅತಿವೃಷ್ಟಿಯಿಂದಾಗಿ ಮಂಗಳವಾರದವರೆಗೆ 43,300 ಹೆಕ್ಟೇರ್ ಬೆಳೆಗಳು ಮುಳುಗಿವೆ. 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ, ವೇದಗಂಗಾ, ದೂಧ್‌ಗಂಗಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ, ಮಲಪ್ರಭಾ ನದಿಗಳಲ್ಲಿ ಮಹಾಪೂರ ಉಂಟಾಗಿದೆ. ತೀರಕ್ಕೆ ಹೊಂದಿಕೊಂಡಿರುವ ಜಮೀನುಗಳಿಗೆ ನೀರು ವ್ಯಾಪಿಸಿದೆ. ಇದರೊಂದಿಗೆ ಬೆಳಗಾವಿ ತಾಲ್ಲೂಕಿನಲ್ಲಿ ಬಳ್ಳಾರಿ ನಾಲಾ ಪ್ರವಾಹವೂ ಉಂಟಾಗಿದೆ. ಇದರಿಂದಲೂ ಸಾವಿರಾರು ಎಕರೆ ವಿವಿಧ ಬೆಳೆಗಳು ಜಲಾವೃತವಾಗಿವೆ. ಅಲ್ಲಲ್ಲಿ ಮಳೆ ಹಾಗೂ ಪ್ರವಾಹದ ಪರಿಸ್ಥಿತಿ ಮುಂದುವರಿದಿದ್ದು, ಬೆಳೆಗಳ ಹಾನಿ …
Read More »