Breaking News

Uncategorized

ಭಯ ಬೇಡ, ಮುನ್ನೆಚ್ಚರಿಕೆ ವಹಿಸಿ

ಬೆಳಗಾವಿ: ಕೊರೊನಾ ಬಗ್ಗೆ ಭಯ ಬೇಡ. ಆದರೆ, ಮುಂಜಾಗ್ರತೆ ವಹಿಸಬೇಕು. ಸೋಂಕು ಬಂತೆಂದರೂ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. – ಕೋವಿಡ್‌ನಿಂದ ಗುಣಮುಖರಾದ ರಾಮದುರ್ಗ ತಾಲ್ಲೂಕು ಕಟಕೋಳದ ಯುವಕ ಆನಂದ ಸಿದ್ನಾಳ ಅವರ ಸಲಹೆ ಇದು. ಕೋವಿಡ್ ಗೆದ್ದ ಕಥೆಯನ್ನು ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು. ‘ನಾನು ಚಾಲಕ. ಟ್ರಕ್ ಇದೆ. ಲಾಕ್‌ಡೌನ್‌ ಆದ ಸಮಯದಲ್ಲಿ ಕೆಲಸ ಇಲ್ಲದೆ ಜೀವನ ನಡೆಸುವುದು ಕಷ್ಟವಾಗಿತ್ತು. ಲಾಕ್‌ಡೌನ್‌ ತೆರವಾದ ನಂತರ ಕೆಲವು ದಿನ ಊರು ಸುತ್ತಿದೆ. ಹೋದ ಕಡೆಯಲ್ಲಿ …

Read More »

ಯುವ ಬ್ರಿಗೇಡ್ ವತಿಯಿಂದ ಕಟ್ಟಿಸಿದ ‘ನಮ್ಮನೆ’ ಪ್ರವೇಶಿಸಿದ ಮೀರಮ್ಮ

ಹುಕ್ಕೇರಿ: ‘ನಂದು ಮನೆ ಪೂರಾ ಬಿದ್ದು ಹೋಗಿತ್ರಿ. ಮಲಗಾಕ ಬಹಳ ತೊಂದರೆ ಇತ್ತು. ಚಕ್ರವರ್ತಿ ಸೂಲಿಬೆಲೆ ಹಾಗೂ ಯುವ ಬ್ರಿಗೇಡ್ ಸದಸ್ಯರು ಹೊಸ ಮನೆ ಕಟ್ಟಿ ಕೊಟ್ಟಾರು. ನಾನು ಬಡುವಿ ಅದಿನಿ ಅಂತ. ವಾಸ್ತು ಅವ್ರ ಮಾಡ್ಯಾರು. ನಾನು ಆರಾಮ ಅದನ್ರಿ. ನನಗ ಎಲ್ಲ ವ್ಯವಸ್ಥ ಮಾಡ್ಯಾರು. ದೇವರು ಅವರನ್ನು ತಂಪಾಗಿ ಇಟ್ಟಿರಲಿ’ ಎಂದು ಮನ ಮಿಡಿಯುವ ಮಾತುಗಳು ಕೇಳಿ ಬಂದಿದ್ದು, ತಾಲ್ಲೂಕಿನ ಹೊಸೂರ ಗ್ರಾಮದ ಮೀರಮ್ಮ ಬಾಗವಾನ್ ಅವರಿಂದ. ಇದು …

Read More »

ಯುವಕರಿಗೆ ಪುಸ್ತಕ ಕೊಡಿಸಿದ ಪಿಎಸ್‌ಐ

ಕೌಜಲಗಿ: ಸಮೀಪದ ಕುಲಗೋಡ ಪೊಲೀಸ್ ಠಾಣೆಯ ಎಸ್‌ಐ ಎಚ್.ಕೆ. ನೇರಳೆ ಅವರು ಗ್ರಾಮದ ಯುವಕರಿಗೆ ವೈಯಕ್ತಿಕವಾಗಿ ₹ 10ಸಾವಿರ ಮೌಲ್ಯದ ಪುಸ್ತಕಗಳನ್ನು ಕೊಡಿಸಿ ನೆರವಾಗಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಪುಸ್ತಕಗಳನ್ನು ಅವರು ನೀಡಿ ಗಮನಸೆಳೆದಿದ್ದಾರೆ. ಗ್ರಾಮದಲ್ಲಿ ಎಸ್‌ಡಿಎ, ಎಫ್‌ಡಿಎ, ಪಿಎಸ್‌ಐ, ಕೆಪಿಎಸ್‌ಸಿ ಹಾಗೂ ಯುಪಿಎಸ್‌ಸಿ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ನೆರವಾಗಿದ್ದಾರೆ. ಈ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಎಂದು ಯುವಕರು ತಿಳಿಸಿದರು.  

Read More »

ಕಾಶ್ಮೀರ ಎಲ್’ಒಸಿ ಉದ್ದಕ್ಕೂ ಅನೇಕ ಅಡಗುತಾಣಗಳನ್ನು ಪತ್ತೆ ಹಚ್ಚಿದ ಭಾರತೀಯ ಸೇನೆ

  ಬಾರಾಮುಲ್ಲಾ,   : ಭಾರತೀಯ ಸೇನೆಯು ಕಾಶ್ಮೀರ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಅನೇಕ ಅಡಗುತಾಣಗಳನ್ನು ಪತ್ತೆ ಹಚ್ಚಿದ್ದು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶ ಪಡಿಸಿಕೊಂಡಿದೆ. ಆಗಸ್ಟ್ 30 ರಂದು ಬಾರಾಮುಲ್ಲಾ ಜಿಲ್ಲೆಯ ರಾಂಪುರ್ ಸೆಕ್ಟರ್‌ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನವನ್ನು ಪತ್ತೆ ಮಾಡಿದೆ ಎಂದು ಸೇನಾಧಿಕಾರಿಗಳ ಪ್ರಕಟನೆ ತಿಳಿಸಿದೆ. ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿಯನ್ನಾಧರಿಸಿ ಸೇನೆ ಎಲ್ ಒಸಿಯ ರಾಂಪುರ್ ಸೆಕ್ಟರ್ ಸಮೀಪವಿರುವ ಹಳ್ಳಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿತ್ತು. …

Read More »

KSRTCಯಿಂದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ : ವಿದ್ಯಾರ್ಥಿಗಳಿಗೆ ಹಳೇ ‘ಬಸ್ ಪಾಸ್’ ಬಳಸಿ ಪರೀಕ್ಷೆಗೆ ಹಾಜರಾಗಲು ಅನುಮತಿ

ಬೆಂಗಳೂರು : ಕೊರೋನಾ ಭೀತಿಯಿಂದಾಗಿ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿಲ್ಲ. ಆದ್ರೇ ಕೊರೋನಾ ಭೀತಿಯ ನಡುವೆಯೂ ಪದವಿ ಹಾಗೂ ಸ್ನಾತಕೋತ್ತರ ಪದವಿ, ವೃತ್ತಿಪರ ಪರೀಕ್ಷೆಗಳೂ ನಡೆಸೋದಕ್ಕೆ ನಿರ್ಧರಿಸಲಾಗಿದೆ. ಆದ್ರೆ ಕೆ ಎಸ್ ಆರ್ ಟಿ ಸಿ ವಿದ್ಯಾರ್ಥಿಗಳ ಬಸ್ ಪಾಸ್ ಅವದಿ ಮುಕ್ತಾಯಗೊಂಡಿತ್ತು. ಹೀಗಾಗಿ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮನವಿ ಮಾಡಿದ್ದರ ಹಿನ್ನಲೆಯಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿ ಬಸ್ ಪಾಸ್ ಬಳಸಿಕೊಂಡು ಒಡಾಟಕ್ಕೆ ಅನುಮತಿ …

Read More »

ರಾಜ್ಯದ ಭಕ್ತರಿಗೆ ಗುಡ್‌ ನ್ಯೂಸ್‌: ದೇವಸ್ಥಾನಗಳ ಎಲ್ಲ ಬಗೆಯ ಧಾರ್ಮಿಕ ಸೇವೆಗಳ ಪುನರಾರಂಭಕ್ಕೆ ಅನುಮತಿ

ಬೆಂಗಳೂರು : ರಾಜ್ಯದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಸೆ.1 ರಿಂದಲೇ ಸೇವೆಗಳನ್ನು ಪುನರ್ ಆರಂಭಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೌದು, ರಾಜ್ಯದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಧಾರ್ಮಿಕ” ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಪೂಜಾ ವಿಧಿ ವಿಧಾನಗಳು/ಪೂಜಾ ಕೈಂಕರ್ಯಗಳು. ತೀರ್ಥ ವಿತರಣೆ ಹಾಗೂ ಜನಸಂದಣಿ ಸೇರುವ ಕಾರ್ಯಕ್ರಮ ರದ್ದು ಮಾಡಲಾಗಿತ್ತು. ಇದೀಗ ದೇವಾಲಯಗಳಲ್ಲಿ ಸೇವೆಗಳನ್ನು ಪುನರ್ ಆರಂಭಿಸುವಂತೆ ರಾಜ್ಯ ಸರ್ಕಾರ ಆದೇಶ …

Read More »

ಸಾಲ ಮರುಪಾವತಿ 2 ವರ್ಷ ವಿಸ್ತರಣೆ ಸಾಧ್ಯ: ಸುಪ್ರೀಂ ಕೋರ್ಟ್‌ಗೆ ಆರ್‌ಬಿಐ ಹೇಳಿಕೆ

ನವದೆಹಲಿ: ಕೋವಿಡ್‌ ಪಿಡುಗಿನಿಂದಾದ ಆರ್ಥಿಕ ಹಿನ್ನಡೆಗೆ ಪರಿಹಾರವಾಗಿ ಪ್ರಕಟಿಸಲಾದ ಸಾಲ ಮರು‍ಪಾವತಿ ಮುಂದೂಡಿಕೆಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಲು ಅವಕಾಶ ಇದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)‌ ತಿಳಿಸಿವೆ. ಆದರೆ, ವಿವಿಧ ಕ್ಷೇತ್ರಗಳು ಎದುರಿಸುತ್ತಿರುವ ಸಮಸ್ಯೆಗಳು ಭಿನ್ನವಾಗಿವೆ. ಹಾಗಾಗಿ, ಏಕರೂಪದ ಪರಿಹಾರವೊಂದನ್ನು ಒದಗಿಸುವುದು ಕೇಂದ್ರ ಸರ್ಕಾರಕ್ಕೆ ಸಾಧ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ. ಒಟ್ಟು ಆಂತರಿಕ ಉತ್ಪನ್ನವು ಶೇ 23ರಷ್ಟು ಕುಸಿದಿದೆ. ಯಾವ …

Read More »

ಮತ್ತೆ ನೂರು ವಿಶೇಷ ರೈಲುಗಳ ಸಂಚಾರ

ನವದೆಹಲಿ: ಅನ್ಲಾಕ್ನ ನಾಲ್ಕನೇ ಹಂತದಲ್ಲಿ, ಭಾರತೀಯ ರೈಲ್ವೆ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳ ಒಪ್ಪಿಗೆಯೊಂದಿಗೆ ಹೆಚ್ಚಿನ ವಿಶೇಷ ರೈಲುಗಳನ್ನು ಪರಿಚಯಿಸಲು ಯೋಜಿಸುತ್ತಿದೆ. ಆದರೆ ಸಾಮಾನ್ಯ ಸೇವೆಗಳನ್ನು ಪೂರ್ಣವಾಗಿ ಪುನರಾರಂಭಿಸುವುದು ಇನ್ನೂ ಬಹಳ ದೂರ ಎನ್ನಲಾಗುತ್ತಿದೆ. ಕೆಲವು ರಾಜ್ಯಗಳು, ವಿಶೇಷವಾಗಿ ಬಿಜೆಪಿಯೇತರ ಅಧಿಕಾರದಲ್ಲಿರುವ ಸರ್ಕಾರಗಳು ಅಂತರರಾಜ್ಯ ರೈಲುಗಳ ಪ್ರಯಾಣವನ್ನು ವಿರೋಧ ವ್ಯಕ್ತಪಡಿಸಿದ್ದಾವೆ. ತಮಿಳುನಾಡು, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾದಂತಹ ರಾಜ್ಯಗಳು ಹೆಚ್ಚಿನ ರೈಲುಗಳನ್ನು ಪರಿಚಯಿಸಲು ಹೆಚ್ಚು ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ. ಸಾಂಕ್ರಾಮಿಕ …

Read More »

ವೈಜನಾಥ ಪಾಟೀಲ ಸಂಸ್ಮರಣ ಗ್ರಂಥ ಪ್ರಕಟಿಸಲು ನಿರ್ಧಾರ

ಕಲಬುರ್ಗಿ: ‘371 (ಜೆ) ತಿದ್ದುಪಡಿ ಹೋರಾಟದ ರೂವಾರಿ, ಮಾಜಿ ಸಚಿವ ವೈಜನಾಥ ಪಾಟೀಲ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಸಂಸ್ಮರಣ ಗ್ರಂಥ ಹೊರತರಲು ನಿರ್ಧರಿಸಲಾಗಿದೆ. ಈ ಬಗ್ಗೆ ಸಂಪಾದಕೀಯ ಸಮಿತಿ ರಚನೆ ಮಾಡಲಾಗಿದೆ’ ಎಂದು ವೈಜನಾಥ ಪಾಟೀಲರ ಸಂಸ್ಮರಣಾ ಸಂಚಿಕೆ ಸಮಿತಿ ಸಂಚಾಲಕ ಎಂ.ಬಿ.ಅಂಬಲಗಿ ಮತ್ತು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗೌತಮ ಪಾಟೀಲ ತಿಳಿಸಿದರು. ನಗರದಲ್ಲಿ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ವೈಜನಾಥ …

Read More »

ಅಪಾಯದ‌ ಅಂಚಿನಲ್ಲಿದೆ ಪಣಜಿ – ಕೊಚ್ಚಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ರ ಕಿರು‌ಸೇತುವೆ

ಮಂಗಳೂರು : ಪಣಜಿ- ಕೊಚ್ಚಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ಮಂಗಳೂರು ಹೊರವಲಯದ ಕೆ.ಸಿ.ರೋಡ್ ಎಂಬಲ್ಲಿರುವ ಸೇತುವೆಯೊಂದು ಅಪಾಯಕ್ಕೆ ಮುನ್ಸೂಚನೆ ನೀಡುತ್ತಿದೆ. ಇತ್ತೀಚೆಗೆ ಈ ಸೇತುವೆಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸೇತುವೆಯ ತಡೆಗೋಡೆಯು ಸಂಪೂರ್ಣ ಹಾನಿಗೊಳಗಾಗಿದೆ. ಇದರಿಂದಾಗಿ ತಡೆಗೋಡೆ ಇಲ್ಲದ ಪರಿಣಾಮ ಹಾಗೂ ಅತ್ಯಂತ ಇಕ್ಕಟ್ಟಾಗಿರುವ ಸೇತುವೆಯಿಂದಾಗಿ ಇದರ ಮೇಲೆ ಸಂಚರಿಸುವ ವಾಹನಗಳಿಗೆ ಅಪಾಯ ಎದುರಾಗಿದೆ. ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಈ ಸೇತುವೆಯ ಮೂಲಕವೇ ಹಾದು ಹೋಗುತ್ತಿದ್ದು, …

Read More »