ಚಚಡಿ (ಬೆಳಗಾವಿ ಜಿಲ್ಲೆ): ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಆರಂಭವಾದ ವಾಂತಿ- ಭೇದಿ ಸೋಮವಾರ ಉಲ್ಬಣಗೊಂಡಿದೆ. ಒಂದೇ ದಿನ 41 ಮಂದಿಗೆ ವಾಂತಿ- ಭೇದಿ ಕಾಣಿಸಿಕೊಂಡಿದೆ. ತೀವ್ರ ಅಸ್ವಸ್ಥರಾದ ಮೂವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ, ಮೂವರನ್ನು ಬೈಲಹೊಂಗಲ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿತ್ರಾಣಗೊಂಡಿರುವ ಈರವ್ವ ಗಾಳಿಮಠ (63) ಅವರನ್ನು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿದೆ. ಇನ್ನಿಬ್ಬರು ಒಳರೋಗಿಗಳಾಗಿ ದಾಖಲಾಗಿದ್ದಾರೆ. ಉಳಿದವರು ಚಚಡಿ ಹಾಗೂ ಇಂಚಲ ಪ್ರಾಥಮಿಕ …
Read More »ಬೆಳಗಾವಿ: ಕ್ರೀಡಾ ಕುಟುಂಬದ ಶೂಟಿಂಗ್ ಕಲಿ ಸ್ವಪ್ನಿಲ್
ಬೆಳಗಾವಿ: ಕ್ರೀಡಾ ಕುಟುಂಬದ ಶೂಟಿಂಗ್ ಕಲಿ ಸ್ವಪ್ನಿಲ್ ಬೆಳಗಾವಿ: ‘ನನ್ನ ಪುತ್ರನ ಒಂದೂವರೆ ದಶಕದ ಪ್ರಯತ್ನ ಒಂದಿಷ್ಟು ಫಲ ಕೊಟ್ಟಿದೆ. ಈಗ ಕಂಚು ಗೆದ್ದಿರುವ ಆತ ಮುಂದಿನ ಒಲಿಂಪಿಕ್ಸ್ನಲ್ಲಿ ಖಂಡಿತ ಚಿನ್ನದ ಪದಕ ಗಳಿಸುವನು ಎಂಬ ವಿಶ್ವಾಸವಿದೆ’ ಹೀಗೆಂದು ‘ಸಂತಸ ಹಂಚಿಕೊಂಡವರು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರಾಧಾನಗರಿ ತಾಲ್ಲೂಕಿನ ಕಂಬಳವಾಡಿಯ ಸುರೇಶ ಕುಸಾಳೆ. ಅವರ ಪುತ್ರ ಸ್ಪಪ್ನಿಲ್ ಪ್ಯಾರಿಸ್ನಲ್ಲಿ ನಡೆದಿರುವ ಒಲಿಂಪಿಕ್ಸ್ನ ಶೂಟಿಂಗ್ ಸ್ಪರ್ಧೆಯ 50 ಮೀಟರ್ ರೈಫಲ್ ತ್ರಿ ಪೊಸಿಷನ್ …
Read More »ಬೆಚ್ಚಿ ಬೀಳಿಸುತ್ತೆ ಬಿಎಂಟಿಸಿ ವೋಲ್ವೋ ಬಸ್ ಆಕ್ಸಿಡೆಂಟ್ ವಿಡಿಯೋ
ಬೆಂಗಳೂರು ಆಗಸ್ಟ್ 13: ಬೆಂಗಳೂರು ಅಂದರೆ ಟ್ರಾಫಿಕ್ ಜಾಮ್. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಬೇಕಾದರೆ ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯಬೇಕಾದ ಸ್ಥಿತಿ ಇದೆ. ಈ ನಡುವೆ ಅಪಘಾತಗಳು ಸಂಭವಿಸಿದರೆ ಮುಗಿತು ಜನ ತಾವಂದುಕೊಂಡ ಸ್ಥಳಕ್ಕೆ ಹೋಗುವುದು ಗಂಟೆಗಳವರೆಗೆ ತಡವಾಯಿತು ಅಂತಲೇ ಅರ್ಥ. ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸೋ ಅಪಘಾತವೊಂದು ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ವೋಲ್ವೋ ಬಸ್ನಿಂದ ಸರಣಿ …
Read More »ದೇವನಹಳ್ಳಿ: ಸೇವಾ ಜೇಷ್ಠತೆ ಆಧಾರದಲ್ಲಿ ಶಿಕ್ಷಕರಿಗೆ ಬಡ್ತಿ ನೀಡಿ
ದೇವನಹಳ್ಳಿ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡುವ ಸಮಯದಲ್ಲಿ 2017ರಲ್ಲಿ ರೂಪಿಸಿರುವ ನಿಯಮವನ್ನು 2016ಕ್ಕೂ ಮುನ್ನ ನೇಮಕಗೊಂಡ ಶಿಕ್ಷಕರಿಗೆ ಅನ್ವಯಿಸಬಾರದು ಎಂದು ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಆದರ್ಶ್ ಒತ್ತಾಯಿಸಿದರು. ಸೋಮವಾರ ಪಟ್ಟಣದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಹೋರಾಟಕ್ಕೆ ತೆರಳುವ ಮುನ್ನ ಮಾತನಾಡಿದ ಅವರು, ಪ್ರೌಢಶಾಲೆಗಳಿಗೆ ಬಡ್ತಿ ನೀಡುವಾಗ ವಿದ್ಯಾರ್ಹತೆಯನ್ನೇ ಪರಿಗಣಿಸಬೇಕು ಎಂದು ಆಗ್ರಹಿಸಿದರು. 2017ರಲ್ಲಿ ರೂಪಿಸಿರುವ ನಿಯಮದಿಂದ 2016ಕ್ಕೂ ಮುನ್ನವೇ ನೇಮಕ ಆಗಿರುವ ಶಿಕ್ಷಕರಿಗೆ ಅನ್ಯಾಯವಾಗುತ್ತದೆ. …
Read More »ಮುಧೋಳ ಬಂದ್ ಸಂಪೂರ್ಣ ಯಶಸ್ವಿ
ಮುಧೋಳ: ಘಟಪ್ರಭಾ ನದಿ ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರು ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಸೋಮವಾರ ನಡೆದ ಪ್ರತಿಭಟನೆ ಹಾಗೂ ಮುಧೋಳ ಬಂದ್ ಯಶಸ್ವಿಯಾಗಿ ನಡೆಯಿತು. ಬೆಳಿಗ್ಗೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ರಾಣಾ ಪ್ರತಾಪಸಿಂಹ ವೃತ್ತಕ್ಕೆ ಆಗಮಿಸಿ ವಿಜಯಪುರ- ಬೆಳಗಾವಿ ರಾಜ್ಯ ಹೆದ್ದಾರಿ ಸಂಪರ್ಕ ಸ್ಥಗಿತಗೊಳಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ಮಾತನಾಡಿ, ಜನಪ್ರತಿನಿಧಿಗಳಾದವರು ಜನರ …
Read More »ಅ.3ರಂದು ದಸರಾಕ್ಕೆ ಚಾಲನೆ, ಅದ್ಧೂರಿ ಆಚರಣೆಗೆ ಸರ್ಕಾರ ತೀರ್ಮಾನ
ಬೆಂಗಳೂರು: ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಅಕ್ಟೋಬರ್ 3ರಂದು ಉದ್ಘಾಟನೆಗೊಳ್ಳಲಿದ್ದು, ಅ. 12ರಂದು ಜಂಬೂಸವಾರಿ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ದಸರಾ ಮಹೋತ್ಸವ ಸಂಬಂಧ ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಆದರೆ ಈ ಬಾರಿ ದಸರಾ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಕೊರೊನಾ ಬಂದಿದ್ದರಿಂದ ಕಳೆದ ಬಾರಿ ವಿಜೃಂಭಣೆಯಿಂದ ಆಚರಿಸಲಾಗಲಿಲ್ಲ, …
Read More »‘ಕರ್ನಾಟಕ’ದಲ್ಲಿದ್ದ ಐವರು ಬಾಂಗ್ಲಾ ನಿರಾಶ್ರಿತರಿಗೆ ‘CCA ಕಾಯ್ದೆ’ಯಡಿ ‘ಭಾರತೀಯ ಪೌರತ್ವ’
ರಾಯಚೂರು: ಕರ್ನಾಟಕದಲ್ಲಿ ವಾಸಿಸುತ್ತಿದ್ದಂತ ಐವರು ಬಾಂಗ್ಲಾ ನಿರಾಶ್ರಿತರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ಭಾರತೀಯ ಪೌರತ್ವವನ್ನು ನೀಡಲಾಗಿದೆ. ಕರ್ನಾಟಕದ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಆರ್ ಹೆಚ್ ಕ್ಯಾಂಪ್ ಗಳಲ್ಲಿ ಐವರು ಬಾಂಗ್ಲಾ ನಿರಾಶ್ರಿತರು ವಾಸಿಸುತ್ತಿದ್ದರು. ಅವರಿಗೆ ಸಿಎಎ ಅಡಿಯಲ್ಲಿ ಈಗ ಭಾರತೀಯ ಪೌರತ್ವ ದೊರೆತಿದೆ. ಸಿಂಧನೂರು ತಾಲ್ಲೂಕಿನ ಆರ್ ಹೆಚ್ ಕ್ಯಾಂಗ್ ನ ನಿವಾಸಿಗಳಾದಂತ ರಾಮಕೃಷ್ಣನ್ ಅಭಿಕರಿ, ಸುಕುಮಾರ, ಮೊಂಡಲ್, ಬಿ.ಪ್ರಸಾದ ಗೋಲ್ಡರ್, ಜಯಂತ್ ಮೊಂಡಲ್ ಹಾಗೂ ಅದ್ವಿತ …
Read More »6.92 ಕೋಟಿ ವೆಚ್ಚದಲ್ಲಿ ವಾಣಿಜ್ಯ ಮಳಿಗೆ: ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ‘ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ₹6.92 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಾಗುವುದು’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಇಲ್ಲಿನ ಪುರಸಭೆಗೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಐಡಿಎಸ್ಎಂಟಿ ಯೋಜನೆ ಅಡಿಯಲ್ಲಿ ಮಳಿಗೆಯನ್ನು ನಿರ್ಮಿಸಲಿದ್ದು, ಇದು ಬಹು ಮಹಡಿ ಕಟ್ಟಡವನ್ನು ಹೊಂದಿರಲಿದೆ. ನೆಲ ಮಾಳಿಗೆಯಲ್ಲಿ (ಬೆಸ್ ಮೆಂಟ್) ವಾಹನಗಳ ಪಾರ್ಕಿಂಗ್, ನೆಲ ಮಹಡಿಯಲ್ಲಿ 51 ಮತ್ತು ಮೊದಲ ಮಹಡಿಯಲ್ಲಿ 17 ಅಂಗಡಿಗಳು ಸೇರಿದಂತೆ …
Read More »ಖಾಲಿ ಬಾಟಲಿಯೇ ಹಿರಿ ಜೀವಕ್ಕೆ ಆಧಾರ
ವಿಜಯಪುರ(ದೇವನಹಳ್ಳಿ): ’50 ವರ್ಷದ ಹಿಂದೆ ಹಲವು ಮಂದಿಗೆ ಕೆಲಸ ಕೊಟ್ಟ ನನ್ನ ಕೈಗಳು ಈಗ ಸೋತಿವೆ. ದುಡಿಯುವ ಶಕ್ತಿಯನ್ನು ಕಳೆದುಕೊಂಡಿವೆ. ಜೀವನ ಸಾಗಿಸಲು ಬೀದಿಯಲ್ಲಿ ಸಿಗುವ ಖಾಲಿ ಬಾಟಲಿ ಮತ್ತು ರಟ್ಟನ್ನು ಹೆಕ್ಕಿ ಮಾರಿ ಒಂದೂತ್ತಿನ ಹೊಟ್ಟೆ ಹೊರೆಯುತ್ತಿದ್ದೇನೆ…’ -ಇದು ಪಟ್ಟಣದ ಈದ್ಗಾ ಮೊಹಲ್ಲಾದ ನಿವಾಸಿ 95 ವರ್ಷದ ಜಯರಾಮಯ್ಯ ಅವರ ನುಡಿ. ಬಾಗಿದ ಬೆನ್ನು, ಬಾಟಲಿ ಮತ್ತು ರಟ್ಟು ತುಂಬಿದ ಸೈಕಲ್ ಅನ್ನು ನಡುಗುತ್ತಾ ತಳುತ್ತಾ ಪಟ್ಟಣದಲ್ಲಿ ಸಾಗುವ ವೇಳೆ …
Read More »308 ಕ್ಕೇರಿದ ಮೃತರ ಸಂಖ್ಯೆ, ಡ್ರೋನ್ ಆಧಾರಿತ ರಾಡಾರ್ ಮೂಲಕ ಪತ್ತೆ ಕಾರ್ಯ
ವಯನಾಡ್ : ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದ ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 308 ಕ್ಕೆ ತಲುಪಿದೆ. ಇನ್ನೂ 300 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೌಕಾಪಡೆ, ಎನ್ಡಿಆರ್ಎಫ್ ಮತ್ತು ಇತರ ರಕ್ಷಣಾ ತಂಡಗಳು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಇದುವರೆಗೆ ನೂರಾರು ಜನರನ್ನು ರಕ್ಷಿಸಿ ಸುರಕ್ಷಿತ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 40 ತಂಡಗಳೊಂದಿಗೆ ಶೋಧ ಕಾರ್ಯಾಚರಣೆ: ಶುಕ್ರವಾರ ಬೆಳಗ್ಗೆ ಸುಮಾರು 40 ತಂಡಗಳು ಮಂಡಕ್ಕೈ, …
Read More »