Breaking News
Home / Uncategorized (page 710)

Uncategorized

ರಾಜಸ್ಥಾನದಲ್ಲಿ ಬಿಎಸ್​ಪಿಯ 6 ಶಾಸಕರು ಅನರ್ಹಗೊಳ್ಳುತ್ತಾರಾ? ರಾಜಕೀಯ ನಾಟಕಕ್ಕೆ ಸಿಗುತ್ತಾ ಹೊಸ ತಿರುವು?

ಜೈಪುರ: ರಾಜಸ್ಥಾನದ ವಿಧಾನಸಭಾ ಅಧಿವೇಶನ ಶುಕ್ರವಾರ (ಆ.14) ನಡೆಯಲಿರುವ ಹಿನ್ನೆಲೆಯಲ್ಲಿ ರಾಜಕೀಯ ನಾಟಕದ ಹೊಸ ಅಂಕಕ್ಕೆ ಪರದೆ ಮೇಲೇರಲಾರಂಭಿಸಿದೆ. ಬಿಎಸ್​ಪಿಯ 6 ಶಾಸಕರು ಕಾಂಗ್ರೆಸ್​ನಲ್ಲಿ ವಿಲೀನಗೊಂಡಿರುವ ಪ್ರಕರಣದ ಕುರಿತ ಅರ್ಜಿಯ ವಿಚಾರಣೆ ರಾಜಸ್ಥಾನ ಹೈಕೋರ್ಟ್​ನಲ್ಲಿ ನಡೆಯಲಿದ್ದು, ರಾಜಕೀಯ ನಾಟಕದ ಈ ಅಂಕದಲ್ಲಿ ಭಾರಿ ತಿರುವು ಲಭಿಸುವ ಸಾಧ್ಯತೆಗಳು ಕಾಣಿಸಲಾರಂಭಿಸಿವೆ.   ಒಂದು ವೇಳೆ ಬಿಎಸ್​ಪಿಯ ಆರು ಶಾಸಕರನ್ನು ಹೈಕೋರ್ಟ್​ ಅನರ್ಹಗೊಳಿಸಿದರೆ, ರಾಜಕೀಯ ಸಮೀಕರಣವೇ ಬದಲಾಗಲಿದೆ. ತಮ್ಮ ಸರ್ಕಾರವನ್ನು ಶತಾಯಗತಾಯ ಉಳಿಸಿಕೊಳ್ಳಲು ಹವಣಿಸಲಿರುವ …

Read More »

ಹುಬ್ಬಳ್ಳಿಯ ಶ್ರೀ ಅಭಿನವ ಶಿವಪುತ್ರ ಸ್ವಾಮೀಜಿ ಲಿಂಗೈಕ್ಯ

ಬೆಳಗಾವಿ: ವಿಜಯಪುರ‌ದ ಷಣ್ಮುಖಾರೂಢ ಮಠ ಹಾಗೂ ಹುಬ್ಬಳ್ಳಿಯ ಶಾಂತಾಶ್ರಮದ ಶ್ರೀ ಅಭಿನವ ಶಿವಪುತ್ರ ಸ್ವಾಮೀಜಿ (64) ಹೃದಯಾಘಾತದಿಂದ ಶುಕ್ರವಾರ ರಾತ್ರಿ ಲಿಂಗೈಕ್ಯರಾಗಿದ್ದಾರೆ. ನಗರದ ಕೆ‌ಎಲ್‌ಇ ಆಸ್ಪತ್ರೆಗೆ ಸಂಜೆ ದಾಖಲಾಗಿದ್ದ ಶ್ರೀಗಳು ಚಿಕಿತ್ಸೆ ಫಲಿಸದೇ ಲಿಂಗೈಕ್ಯರಾದರು. ಕಳೆದ ಎರಡು ದಿನಗಳಿಂದ ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚಿನ ಚಿಕಿತ್ಸೆಗೆ ಶುಕ್ರವಾರ ಸಂಜೆ ಕೆ.ಎಲ್.ಇ ಆಸ್ಪತ್ರೆಗೆ ಕರೆತರಲಾಗಿದ್ದು, ಫಲಕಾರಿಯಾಗದೇ ಲಿಂಗೈಕ್ಯರಾದರು ಎಂದು ಶ್ರೀಮಠದ ಉತ್ತರಾಧಿಕಾರಿ ಅಭಿನವ ಸಿದ್ಧಾರೂಢ ಸ್ವಾಮೀಜಿ ತಿಳಿಸಿದ್ದಾರೆ. ಆ. 8ರಂದು ಹುಬ್ಬಳ್ಳಿಯಲ್ಲಿ …

Read More »

ಪೊಲೀಸರ ಆರೋಗ್ಯ ರಕ್ಷಣೆಗೆ ಮಾರ್ಗಸೂಚಿ ಕೈಪಿಡಿ

ಬೆಂಗಳೂರು: ಪೊಲೀಸರ ಆರೋಗ್ಯ ರಕ್ಷಣೆಗಾಗಿ ಮಾರ್ಗಸೂಚಿ ಕೈಪಿಡಿ ಬಿಡುಗಡೆ ಮಾಡಲಾಗಿದೆ. ನಗರದ ಹಲವು ಪೊಲೀಸರು ಕೊರೊನಾ ಸೋಂಕಿತರಾಗಿದ್ದರು. ಹೀಗಾಗಿ, ಪೊಲೀಸರು ಆರೋಗ್ಯದ ಬಗ್ಗೆ ಕಾಳಜಿ ವಹಿಸಲೆಂದು ಈ ಕೈಪಿಡಿ ಸಿದ್ಧಪಡಿಸಲಾಗಿದೆ. ಇದರಲ್ಲಿರುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್‌ ಸೂಚನೆ ನೀಡಿದ್ದಾರೆ. ‘ಠಾಣೆಯಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು, ಆಗಾಗ ಕೈ ತೊಳೆಯಬೇಕು, ಹೊರಗಡೆ ಕರ್ತವ್ಯನಿರತ ಸಿಬ್ಬಂದಿ ನೇರವಾಗಿ ಮನೆಗೆ ಹೋಗಬೇಕು, ಸಂಬಂಧಿಕರು-ಸ್ನೇಹಿತರನ್ನು ಭೇಟಿಯಾಗಲು ಹೋಗಬಾರದು. …

Read More »

ಪ್ರವಾಹದೊಂದಿಗೆ ಬಂದ ಬೃಹತ್ ಮೀನು; ಅಚ್ಚರಿಗೊಂಡ ಬೆಳಗಾವಿ ಜನ

ಬೆಳಗಾವಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆಯ ಪರಿಣಾಮ ಭೂಮಿ ಮೇಲೆ ಇರುವ ಪ್ರಾಣಿಗಳಿಗೆ ಮಾತ್ರ ಸಂಕಷ್ಟಕ್ಕೆ ಒಳಗಾಗಿಲ್ಲ, ಜಲಚರ ಜೀವಿಗಳೂ ಆಘಾತಕ್ಕೆ ಒಳಗಾಗಿವೆ. ಹುಕ್ಕೇರಿ ತಾಲೂಕಿನ ಬಸಾಪೂರ ಬಳಿ ಮಾರ್ಕಂಡಯ್ಯ ನದಿ ಪ್ರವಾಹದ ಜೊತೆ ದೊಡ್ಡದಾದ ಮೀನು ಒಂದು ಈಜಿಕೊಂಡು ಬಂದಿದೆ. ಸ್ಧಳೀಯರು ಈ ಮೀನಿನ ಫೋಟೋವನ್ನು ಮೊಬೈಲ್​ನಲ್ಲಿ ತೆಗೆದು ಸೋಶಿಯಲ್​ ಮೀಡಿಯಾದಲ್ಲಿ ಹಾಕಿದ್ದಾರೆ. ಆ ವೀಡಿಯೋ ಸಖತ್ ವೈರಲ್ ಆಗಿದೆ.

Read More »

ನೋಟುಗಳಂತೆ ಕಾಣುವ ಬಂಡಲ್ ತಯಾರಿಕೆ: ನಾಲ್ವರು ಆರೋಪಿಗಳ ಬಂಧನ

ಬೆಳಗಾವಿ: ಖೋಟಾ ನೋಟಿನ ಬಂಡಲ್‌ಗಳನ್ನು ಸಿದ್ಧಪಡಿಸಿದ್ದ ಹಾಗೂ ಜನರಿಗೆ ಮೋಸ ಮಾಡಲು ಯೋಜಿಸಿದ್ದ ಆರೋಪದ ಮೇಲೆ ನಾಲ್ವರನ್ನು ಜಿಲ್ಲೆಯ ಘಟಪ್ರಭಾ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ‘ಗೋಕಾಕ ತಾಲ್ಲೂಕು ದೂಪದಾಳದ ಮಹಮದಇಸಾಕ ದೇಸಾಯಿ, ಮುನಾಫ ರಫೀಕ, ರಾಯಬಾಗ ತಾಲ್ಲೂಕು ಸಿದ್ದಾಪೂರದ ಗುಂಡು ಸದಾಶಿವ ಪಾಟೀಲ ಮತ್ತು ಗೋಕಾಕದ ಆದಿಜಾಂಬವ ನಗರದ ಮಲ್ಲಿಕಾರ್ಜುನ ಕನ್ಮಡ್ಡಿ ಬಂಧಿತರು. ಅವರಿಂದ ಪೇಪಲ್‌ ಬಂಡಲ್‌ಗಳು, ತಲಾ 2 ಕಾರ್‌ ಹಾಗೂ ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು …

Read More »

ರಾಜ್ಯದಲ್ಲಿ ಭರ್ಜರಿ ಮಳೆ: ಜಲಾಶಯಗಳಿಂದ ಭಾರೀ ಪ್ರಮಾಣದ ನೀರು ಬಿಡುಗಡೆ

ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಜಲಾಶಯಗಳಲ್ಲಿ ನೀರಿನ ಒಳಹರಿವು ಏರಿಕೆಯಾಗಿದೆ. ಈ ಹಿನ್ನೆಲೆ ಹಲವು ಜಲಾಶಯಗಳಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗ್ತಿದೆ. ಬಸವಸಾಗರ ಜಲಾಶಯದಿಂದ 1,82,290 ಕ್ಯೂಸೆಕ್ ನೀರು ಬಿಡುಗಡೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಮತ್ತೆ ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. 11 ಗೇಟ್​ಗಳ ಮೂಲಕ 1,82,290 ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಜಲಾಶಯದ ಸಂಗ್ರಹ ಸಾಮರ್ಥ್ಯ …

Read More »

ಚಿಕ್ಕಮಗಳೂರಿನಲ್ಲಿ 4 ದಿನಗಳಿಂದ ಧಾರಾಕಾರ ಮಳೆ; ಕಳಸ- ಹೊರನಾಡು ಸಂಪರ್ಕ ಬಂದ್

ಚಿಕ್ಕಮಗಳೂರು : ಮಲೆನಾಡಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಚಿಕ್ಕಮಗಳೂರಿನಲ್ಲಿ ತುಂಗಾ, ಭದ್ರಾ, ಹೇಮಾವತಿ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಮಲೆನಾಡಿಗರ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನಾಲ್ಕು ದಿನದ ಮಳೆಗೆ ಸುಸ್ತಾಗಿರುವ ಮಲೆನಾಡಿಗರು ಪ್ರವಾಹದ ಭೀತಿಯಲ್ಲಿದ್ದಾರೆ. ನಿನ್ನೆ ರಾತ್ರಿಯೂ ಚಿಕ್ಕಮಗಳೂರಿನಲ್ಲಿ ಎಡಬಿಡದೆ ಮಳೆ ಸುರಿದಿದೆ. ಹಲವು ಕಡೆ ರಸ್ತೆಗಳಿಗೆ ನದಿ ನೀರು ನುಗ್ಗಿದೆ. ಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ರಾತ್ರಿಯಿಡೀ ಸುರಿದ ಮಳೆಗೆ ಜನ ಹೈರಾಣಾಗಿದ್ದಾರೆ. ಈಗಾಗಲೇ ಮಲೆನಾಡಿನ …

Read More »

ಕೊಡಗಿನಲ್ಲಿ ವರುಣನ ಆರ್ಭಟ: ಕುಶಾಲನಗರದ ಬಡವಾಣೆಗಳು ಜಲಾವೃತ

ಕೊಡಗು: ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಜನ ತತ್ತರಿಸಿದ್ದಾರೆ. ಧಾರಾಕಾರ ಮಳೆಯಿಂದಾಗಿ, ಕುಶಾಲನಗರದ ಹೆಚ್ಚಿನ ಬಡಾವಣೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿನ ಕುವೆಂಪು ಬಡಾವಣೆ, ಸಾಯಿ ಬಡಾವಣೆ ಹಾಗೂ ಮುಳುಸೋಗೆ ಬಡಾವಣೆಗಳಲ್ಲಿ ಸುಮಾರು 10 ಅಡಿ ಎತ್ತರದಷ್ಟು ನೀರು ನಿಂತಿದೆ. ಮನೆಗಳ ಮೊದಲ ಮಹಡಿವೆರೆಗಿನ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಹಾರಂಗಿ ಜಲಾಶಯದ ಹೊರಹರಿವು ಹೆಚ್ಚಾಗಿದ್ದು, ಕಾವೇರಿ ನದಿಯ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದೆ.

Read More »

ವರುಣನ ಆರ್ಭಟದಿಂದ ಕೊರೊನಾ ನಿಯಂತ್ರಣವನ್ನು ಮರೆತುಬಿಡ್ತಾ ರಾಜ್ಯ ಸರ್ಕಾರ..?

ಬೆಂಗಳೂರು: ರಾಜ್ಯದ ನಾನಾ ಭಾಗಗಳಲ್ಲಿ ವ್ಯಾಪಕ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ನಿರ್ಮಾಣ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೊರೊನಾ ಸೋಂಕಿನ ನಿಯಂತ್ರಣವನ್ನು ಮರೆತಂತಿದೆ. ಸೋಂಕಿನ ನಿಯಂತ್ರಣದಲ್ಲಿದ್ದ ರಾಜ್ಯ ಸರ್ಕಾರಕ್ಕೆ ಸದ್ಯ ಪ್ರವಾಹ ಮತ್ತೊಂದು ಹೊಡೆತವನ್ನು ನೀಡಿದೆ. ರಾಜ್ಯದ ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕೆಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಮೊದಲು ಜನ ಮತ್ತು ಜಾನುವಾರಗಳನ್ನು ರಕ್ಷಿಸುವುದು …

Read More »

ಬೆಳಗಾವಿ: ಮತ್ತೆ 392 ಮಂದಿಗೆ ಕೋವಿಡ್ ದೃಢ

ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 392 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,498ಕ್ಕೆ ಏರಿದೆ. ಇಲ್ಲಿನ ವಿವಿಧ ಬಡಾವಣೆಗಳು ಮತ್ತು ತಾಲ್ಲೂಕಿನಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ನಗರದ ಗುರುಪ್ರಸಾದ ಕಾಲೊನಿ, ವಿಶ್ವಕರ್ಮ ಕಾಲೊನಿ, ತಾಲ್ಲೂಕಿನ ಕೆಎಸ್‌ಆರ್‌ಪಿ ಮಚ್ಚೆ, ಸಾಂಬ್ರಾದ ಏರ್‌ಮನ್‌ ತರಬೇತಿ ಶಾಲೆ, ರಾಮದುರ್ಗ, ಗೋಕಾಕ, ಅಥಣಿ, ರಾಯಬಾಗ, ಖಾನಾಪುರ, ಸವದತ್ತಿ, ಬೈಲಹೊಂಗಲ ತಾಲ್ಲೂಕುಗಳಲ್ಲಿ ಸೋಂಕು ದೃಢಪಟ್ಟಿರುವುದು ವರದಿಯಾಗಿದೆ. ಅಂಕಲಗಿ ಪೊಲೀಸ್ ಠಾಣೆಯ ಮೂವರಿಗೆ ದೃಢ‍ಪಟ್ಟಿದೆ. …

Read More »