ಮರಳುಗಾಡಿನ ಮಧ್ಯೆ ವಿಶ್ವದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಪರಿಣಮಿಸಿರುವ ನಗರವೆಂದರೆ ಅದು ದುಬೈ. ವಿಶ್ವದ ಅತಿ ಎತ್ತರದ ಗಗನಚುಂಬಿ ಕಟ್ಟಡವಾಗಿರುವ ಬುರ್ಜ್ ಖಲೀಫಾವನ್ನು ಹೊಂದಿರುವ ಖ್ಯಾತಿ ಸಹ ದುಬೈ ಪಡೆದಿದೆ. ಇದೀಗ, ಇದೇ ದುಬೈ ನಗರ ಮತ್ತೊಂದು ದಾಖಲೆ ಸೃಷ್ಟಿಸಲು ಮುಂದಾಗಿದೆ. ಹೌದು, ಇದೇ ಅಕ್ಟೋಬರ್ 22ರಂದು ದುಬೈ ಪ್ರಪಂಚದ ಅತಿದೊಡ್ಡ ಕಾರಂಜಿಯನ್ನು ಲೋಕಾರ್ಪಣೆ ಮಾಡಲಿದೆ. ಈ ಮೂಲಕ ಪ್ರಪಂಚದ ಅತಿದೊಡ್ಡ ಕಾರಂಜಿ ಎಂಬ ಗಿನ್ನಿಸ್ ದಾಖಲೆ ರಚಿಸಲು ಮುಂದಾಗಿದೆ. …
Read More »ಕೊರೋನಾ ಆತಂಕದ ನಡುವೆಯೂ ತಿಮ್ಮಪ್ಪನ ಹುಂಡಿಯಲ್ಲಿ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹ
ತಿರುಪತಿ,ಅ.6- ಕೆಲವು ಮುಂಜಾಗ್ರತಾ ಮತ್ತು ಸುರಕ್ಷತಾ ಕ್ರಮಗಳೊಂದಿಗೆ ವಿಶ್ವ ಪ್ರಸಿದ್ದ ತಿರುಪತಿ ದೇವಾಲಯವನ್ನು ಮತ್ತೆ ತೆರೆದಿರುವುದರಿಂದ ಭಾರೀ ಪ್ರಮಾಣದ ಭಕ್ತರು ಆಗಮಿಸುತ್ತಿದ್ದು, ಇದರಿಂದ ತಿಮ್ಮಪ್ಪನ ಹುಂಡಿಯಲ್ಲಿ ದಾಖಲೆ ಪ್ರಮಾಣದಲ್ಲಿ ಕಾಣಿಕೆಗಳು ಸಂಗ್ರಹವಾಗುತ್ತಿದೆ. ವಿಶ್ವ ಪ್ರಸಿದ್ದ ತಿರುಪತಿ ಶ್ರೀ ವೆಂಕಟೇಶ್ವರನಿಗೆ ಅಪಾರ ಸಂಖ್ಯೆಯ ಭಕ್ತರು ಇದ್ದಾರೆ. ದೇಶ ಮಾತ್ರವಲ್ಲದೇ ವಿದೇಶಗಳಿಂದಲೂ ಸಹ ತಿಮ್ಮಪ್ಪನ ದರ್ಶನ ಪಡೆಯಲು ಆಗಮಿಸುತ್ತಾರೆ. ಅಕ್ಟೋಬರ್ 2ರಂದು ಗಾಂ ಜಯಂತಿಗೆ ರಜೆ ಇದ್ದ ಕಾರಣ ಅಸಂಖ್ಯಾತ ಭಕ್ತರು ದೇವಾಲಯಕ್ಕೆ …
Read More »ಮಧ್ಯಾಹ್ನ ಟಿಕೆಟ್ ಘೋಷಣೆ – ಶಿರಾ ಜೆಡಿಎಸ್ ಅಭ್ಯರ್ಥಿಗೆ ಕೊರೊನಾ ಪಾಸಿಟಿವ್
ತುಮಕೂರು: ಉಪಚುನಾವಣೆಯಲ್ಲಿ ಶಿರಾ ಜೆಡಿಎಸ್ ಅಭ್ಯರ್ಥಿಯಾಗಿರುವ ಅಮ್ಮಾಜಮ್ಮ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇಂದು ಮಧ್ಯಾಹ್ನವೇ ಜೆಡಿಎಸ್ ಪಕ್ಷದ ವರಿಷ್ಠರಾದ ದೇವೇಗೌಡರು, ದಿವಂಗತ ಶಾಸಕ ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮ ಅವರಿಗೆ ಜೆಡಿಎಸ್ ಪಕ್ಷದಿಂದ ಉಪಚುನಾವಣೆಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಆದರೆ ಅಮ್ಮಾಜಮ್ಮ ಅವರಿಗೆ ಇಂದೇ ಕೊರೊನಾ ಪಾಸಿಟಿವ್ ಬಂದಿದೆ. ಪರಿಣಾಮ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕತ್ಸೆ ಪಡೆಯುತ್ತಿದ್ದಾರೆ. ತಾಯಿಗೆ ಕೊರೊನಾ ಬಂದ ವಿಚಾರವಾಗಿ ಮಾತನಾಡಿರುವ ಅಮ್ಮಾಜಮ್ಮ ಪುತ್ರ ಸತ್ಯ ಪ್ರಕಾಶ್, …
Read More »ಮಹದಾಯಿ ನದಿ ನೀರನ್ನು ಕರ್ನಾಟಕ ಅಕ್ರಮವಾಗಿ ತಿರುಗಿಸಿಕೊಳ್ಳುತ್ತಿದೆ:ಗೋವಾ ಸರ್ಕಾರ
ಪಣಜಿ: ಮಹದಾಯಿ ನದಿ ನೀರನ್ನು ಕರ್ನಾಟಕ ಅಕ್ರಮವಾಗಿ ತಿರುಗಿಸಿಕೊಳ್ಳುತ್ತಿದೆ ಎಂಬ ಆರೋಪದ ಮೇಲೆ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದೆ. ಮಹದಾಯಿ ನದಿಯ ನೀರನ್ನು ಹಂಚಿಕೊಳ್ಳುವ ವಿವಾದ ಎರಡೂ ರಾಜ್ಯಗಳ ನಡುವೆ ಸಾಕಷ್ಟು ದೊಡ್ಡ ವ್ಯಾಜ್ಯಕ್ಕೆ ಕಾರಣವಾಗಿದೆ. ಅನುಮತಿಯಿಲ್ಲದೆ ನದಿ ನೀರನ್ನು ಬೇರೆಡೆಗೆ ತಿರುಗಿಸಲು ಕರ್ನಾಟಕ ಕಾಮಗಾರಿಗಳನ್ನು ಕೈಗೊಂಡಿದೆ ಎಂದು ಗೋವಾ ಆರೋಪಿಸಿದೆ. ಸೋಮವಾರ ಈ ಸಂಬಂಧ ಗೋವಾ ಸಿಎಂಸಾವಂತ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಗೋವಾ …
Read More »ನಾಳೆ ಬೆಳಗಾವಿಗೆ ಯಡಿಯೂರಪ್ಪ;
ಬೆಳಗಾವಿ – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಬೆಳಗಾವಿಗೆ ಆಗಮಿಸಲಿದ್ದಾರೆ. ವಿಶೇಷ ವಿಮಾನದಲ್ಲಿ ಬೆಳಗ್ಗೆ 9.45 ಗಂಟೆಗೆ ಅವರು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಇತ್ತೀಚೆಗೆ ನಿಧನರಾಗಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ವಿಶ್ವೇಶ್ವರ ನಗರದ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಅವರು 11 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಅದೇ ವಿಮಾನದಲ್ಲಿ ನಿರ್ಗಮಿಸುವರು
Read More »ಯೋಧ ರಸ್ತೆ ಅಪಘಾತಕ್ಕೆ ಬಲಿಪತ್ನಿಯನ್ನು ಸಂತೈಸುತ್ತಲೇ ಕಣ್ಣೀರು ಹಾಕಿದ ಹೆಬ್ಬಾಳಕರ್
ಬೆಳಗಾವಿ – ಸಮೀಪದ ನಾವಗೆ ಗ್ರಾಮದ ಯೋಧ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ನಾವಗೆ ಗ್ರಾಮದ ಶಿವಾಜಿ ಆನಂದ ತಳವಾರ ( 45) ಸೋಮವಾರ ತುಮಕೂರು ಬಳಿ ರಸ್ತೆ ಅಪಘಾತದಿಂದ ಸಾವಿಗೀಡಾಗಿದ್ದಾರೆ. ಶಿವಾಜಿ ಸಂಚರಿಸುತ್ತಿದ್ದ ಬೈಕ್ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ. ರಜೆಯ ಮೇಲೆ ಬಂದಿದ್ದ ಶಿವಾಜಿ ಮೈಸೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗಲು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. 19 ವರ್ಷದಿಂದ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಾಜಿಗೆ ಈಚೆಗಷ್ಟೆ ಬಡ್ತಿ ಸಿಕ್ಕಿತ್ತು. 12 …
Read More »8,000 ಶಿಕ್ಷಕ ಹುದ್ದೆಗಳು ಖಾಲಿಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಸುಮಾರು 8,000 ಶಿಕ್ಷಕ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಿ ಆರ್ಜಿ ಸಲ್ಲಿಸಬಹುದಾಗಿ ತಿಳಿಸಿದೆ. ಅಕ್ಟೋಬರ್ 20,2020ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ವಿದ್ಯಾರ್ಹತೆ: ಶಿಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತರು ಡಿಪ್ಲೋಮಾ, ಸ್ನಾತಕೋತ್ತರ ಪದವಿ, ಪೋಸ್ಟ್ ಗ್ರಾಜುಯೇಟ್, ಬಿ.ಎಸ್ಸಿ, ಬಿಸಿಎ, ಎಂಸಿಎ, ಎಂಎಸ್ಸಿ, …
Read More »ಡಿಕೆಶಿಯ ದೊಡ್ಡ ಆಲಹಳ್ಳಿಯ ನಿವಾಸದಲ್ಲಿ ಸಿಕ್ಕಿದ್ದು ಬರೀ 1 ರೂ. ನಾಣ್ಯಗಳು ಮಾತ್ರ!
ರಾಮನಗರ: ಡಿಕೆ ಬ್ರದರ್ಸ್ ಮನೆಗಳ ಮೇಲೆ ಸಿಬಿಐ ದಾಳಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಪುರದ ದೊಡ್ಡ ಆಲಹಳ್ಳಿ, ಕೋಡಿಹಳ್ಳಿಯಲ್ಲಿ ಅಧಿಕಾರಿಗಳಿಗೆ ನಗದು ಹಣ ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಅಧಿಕಾರಿಗಳಿಗೆ ದೊಡ್ಡ ಆಲಹಳ್ಳಿಯ ನಿವಾಸದಲ್ಲಿ ಸಿಕ್ಕಿದ್ದು ಬರೀ 1 ರೂ ನಾಣ್ಯಗಳು ಮಾತ್ರವಂತೆ. ಬೆಳಗ್ಗೆ 6 ಗಂಟೆಗೆ ಸಿಬಿಐ ಅಧಿಕಾರಿಗಳು ದೊಡ್ಡ ಆಲಹಳ್ಳಿಯ ನಿವಾಸದ ಮೇಲೆ ದಾಳಿ ಮಾಡಿದ್ದರು. ನಂತರ ಮಧ್ಯಾಹ್ನ 1 ಗಂಟೆಗೆ ಕೋಡಿಹಳ್ಳಿಯ ಗೌರಮ್ಮ ಇರುವ ನಿವಾಸದ …
Read More »ಮತ್ತೆ ಅನುಶ್ರೀಗೆ ಬುಲಾವ್? ಅನುಶ್ರೀ ಫೋನ್ ಕರೆಯಿಂದಾಗಿ ಈಗ ರಾಜ್ಯದ ಘಟಾನುಘಟಿ ನಾಯಕರು ಅಕ್ಷರಶ: ಸಂಕಷ್ಟಕ್ಕೆ
ಡ್ರಗ್ಸ್ ಕೇಸ್ನಲ್ಲಿ ತಗ್ಲಾಕ್ಕೊಂಡಿರೋ ಆ್ಯಂಕರ್ ಅನುಶ್ರೀ ಫೋನ್ ಕರೆಯಿಂದಾಗಿ ಈಗ ರಾಜ್ಯದ ಘಟಾನುಘಟಿ ನಾಯಕರು ಅಕ್ಷರಶ: ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾಜಿ ಸಿಎಂ ಸೇರಿದಂತೆ ಪ್ರಭಾವಿಗಳು ಬಚಾವ್ ಆಗೋಕೆ ಈಗ ಪೊಲೀಸರ ಮೇಲೆಯೇ ಒತ್ತಡ ಹೇರ್ತಿದ್ದಾರಂತೆ. ಅನುಶ್ರೀ ಕಾಲ್ ರೆಕಾರ್ಡ್ನ್ನ ನಾಶಗೊಳಿಸೋಕೆ ಪ್ರಭಾವಿಗಳು ಯತ್ನಿಸ್ತಿದ್ದು, ಪೊಲೀಸರು ಹೈರಾಣಾಗಿ ಹೋಗಿದ್ದಾರೆ ಎನ್ನಲಾಗಿದೆ. ಮಾಜಿ ಸಿಎಂ ಸೇರಿದಂತೆ ರಾಜ್ಯದ ಘಟಾನುಘಟಿ ನಾಯಕರಿಗೆ ಆ್ಯಂಕರ್ ಅನುಶ್ರೀ ಮಾಡಿರೋ ಫೋನ್ ಕಾಲ್ ವಿಚಾರ ಈಗ ರಾಜ್ಯದ ಹಾಟೆಸ್ಟ್ …
Read More »ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ,ರಾಜ್ಯಪಾಲರಿಂದ ಗೌರವ ಡಾಕ್ಟರೇಟ್ ಪ್ರದಾನ
ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಸಮಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರಾದ ವಾಜುಭಾಯ್ ರೂಡಾಭಾಯ್ ವಾಲಾರವರು ರ್ಯಾಂಕ್ ವಿಜೇತರಿಗೆ ಸುವರ್ಣ ಪದಕಗಳು, 79 ಜನರಿಗೆ ಪಿಎಚ್.ಡಿ ಮತ್ತು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಸುವರ್ಣ ವಿಧಾನಸೌಧದ ಆಡಿಟೋರಿಯಂ ಸಭಾಂಗಣದಲ್ಲಿ ಸೋಮವಾರ (ಅ.5) ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದ ಸಮಾರಂಭದಲ್ಲಿ ಸುವರ್ಣ ಪದಕಗಳು ಮತ್ತು ಪದವಿಗಳನ್ನು ಪ್ರದಾನ ಮಾಡಲಾಯಿತು. ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಆನ್ …
Read More »