ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೊರೋನಾ ಸೋಂಕು ಪರೀಕ್ಷೆ ಪ್ರಮಾಣ ದ್ವಿಗುಣಗೊಳಿಸಿ ಹಾಗೂ ಸೋಂಕು ಪತ್ತೆ ಪ್ರಮಾಣವನ್ನು ಶೇ.5ಕ್ಕಿಂತ ಕಡಿಮೆಗೊಳಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರಕ್ಕೆ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಕಳೆದ ಬುಧವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದರು. ಈ ವೇಳೆ ವಿಶೇಷವಾಗಿ ಬೆಂಗಳೂರಿನಲ್ಲಿ ಕೊರೋನಾ …
Read More »ಮಗನ ಅಂತಿಮ ದರ್ಶನ ಇಲ್ಲದ್ದಕ್ಕೆ ಕಣ್ಣೀರಿಟ್ಟ ಅಂಗಡಿ ತಾಯಿ
ಬೆಳಗಾವಿ : ದೆಹಲಿಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಅಂತ್ಯಸಂಸ್ಕಾರ ನಡೆಯುತ್ತಿದ್ದರೆ, ಬೆಳಗಾವಿಯ ಅವರ ನಿವಾಸದಲ್ಲಿ ತಾಯಿ ಸೋಮವ್ವ ಅವರ ಸಂಕಟ, ವೇದನೆ ಹೇಳತೀರದ್ದಾಗಿತ್ತು. ಕಣ್ಣೆದುರೇ ಬಹು ಎತ್ತರಕ್ಕೆ ಬೆಳೆದಿದ್ದ ಮಗನ ಅಕಾಲಿಕ ಮರಣದ ದುಃಖದೊಂದಿಗೇ ಕೈಯ್ಯಾರೆ ಬೆಳೆಸಿದ ಮಗನನ್ನು ಅಂತಿಮವಾಗಿ ನೋಡಲು ಸಾಧ್ಯವಾಗಲಿಲ್ಲವಲ್ಲ ಎಂಬ ನೋವು ಅವರನ್ನು ಆವರಿಸಿಕೊಂಡಿತ್ತು. ಕೋವಿಡ್ ನಿಯಮಾನುಸಾರ ಅಂಗಡಿಯವರ ಪಾರ್ಥಿವ ಶರೀರರನ್ನು ಹುಟ್ಟೂರಿಗೂ ತರಲಾಗಿರಲಿಲ್ಲ. ತಾಯಿ ಸೋಮವ್ವ ಅಂಗಡಿ ಮಗನ …
Read More »ಹಂಪಿಗೆ ಡಬಲ್ ಡೆಕ್ಕರ್ ಬಸ್!300 ರು. ಫಿಕ್ಸ್
ಹೊಸಪೇಟೆ : ಕಣ್ಣಿದ್ರೇ ಕನಕಗಿರಿ ನೋಡಬೇಕು… ಕಾಲಿದ್ರೇ ಹಂಪಿ ಸುತ್ತಬೇಕು ಅನ್ನೋ ವಾಡಿಕೆ ಮಾತಿಗೆ ಮತ್ತೊಂದು ಸೇರ್ಪಡೆ, ಹಣವಿದ್ದವರಿಗೆ ಡಬಲ್ ಡೆಕ್ಕರ್ ಬಸ್! ಹೌದು, ಇನ್ಮುಂದೆ ಹಂಪಿಯ ಸ್ಮಾರಕಗಳ ಸೊಬಗನ್ನು ಡಬಲ್ ಡೆಕ್ಕರ್ ಬಸ್‌ನಲ್ಲಿ ಸುತ್ತಾಡಿ ಕಣ್ಣದುಂಬಿಕೊಳ್ಳಬಹುದು. ಹಂಪಿಯಲ್ಲಿ ಆರಂಭದಲ್ಲಿ ಮೂರು ಬಸ್‌ಗಳು ಬರಲಿವೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಈ ಬಗ್ಗೆ ಯೋಜನೆ ರೂಪಿಸಿದ್ದು, ಹಂಪಿಯಲ್ಲಿ ಬಸ್ ಓಡಾಟದ ಕುರಿತ ಮಾರ್ಗ (ರೂಟ್ ಸರ್ವೇ) ಸಮೀಕ್ಷೆ ನಡೆಸಲಾಗುತ್ತಿದೆ. ಭೋರ್ಗರೆದ ತುಂಗಭದ್ರಾ: …
Read More »ಮತ್ತೆ ಲಾಕ್‌ಡೌನ್ ಇಲ್ಲ; ಮೈಕ್ರೋ ಸೀಲ್‌ಡೌನ್ ಜಾರಿಗೆ ಚಿಂತನೆ..!
ಬೆಂಗಳೂರು : ಕೊರೋನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಡೆಯಲು ಮತ್ತೊಮ್ಮೆ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಾಗುವುದೇ ಎಂಬ ಚರ್ಚೆ ಆರಂಭವಾಗಿದೆ. ಆದರೆ ಈ ಹಿಂದಿನಂತೆ ಸಂಪೂರ್ಣ ಲಾಕ್‌ಡೌನ್ ಜಾರಿಯಾಗುವ ಸಾಧ್ಯತೆಗಳು ಇಲ್ಲ. ಆದರೆ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಮೈಕ್ರೋ ಸೀಲ್‌ಡೌನ್ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಕೋವಿಡ್ ನಿಯಂತ್ರಣ ಕುರಿತಂತೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ನಡೆಸಿದ ಸಂವಾದದಲ್ಲಿ ಈ ವಿಷಯ ಸೂಕ್ಷ್ಮವಾಗಿ …
Read More »BSY ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಮಂಡನೆ..!
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ಸದನದ ವಿಶ್ವಾಸ ಕಳೆದುಕೊಂಡಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಈ ಅವಿಶ್ವಾಸ ಪ್ರಸ್ತಾಪಕ್ಕೆ ಅನುಮತಿ ಸಿಕ್ಕಿದೆ. ಕೋವಿಡ್‌ನಿಂದಾಗಿ ಆಡಳಿತಾರೂಢ ಬಿಜೆಪಿಯ ಹಲವು ಸಚಿವರು ಹಾಗೂ ಶಾಸಕರು ಸದನಕ್ಕೆ ಆಗಮಿಸುವುದು ಕಷ್ಟವಿರುವುದರಿಂದ ಈ ನಿರ್ಣಯ ಎದುರಿಸಿ ಗೆಲ್ಲುವುದು ಸಹಜವಾಗಿಯೇ ಸರ್ಕಾರಕ್ಕೆ ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿದೆ. ಗುರುವಾರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರ ವಿಶ್ವಾಸ ಕಳೆದುಕೊಂಡಿರುವ ಬಗ್ಗೆ ನೋಟಿಸ್ ನೀಡಲಾಗಿದ್ದು, …
Read More »ಈ ವರ್ಷ ವ್ಯಾಕ್ಸಿನ್ ಅನುಮಾನ : ಜನರೇ ಎಚ್ಚರ
ಬೆಂಗಳೂರು : ಕೊರೋನಾ ಸೋಂಕಿಗೆ ಪ್ರಸಕ್ತ ವರ್ಷದಲ್ಲಿ ವ್ಯಾಕ್ಸಿನ್ ಬರುವುದು ಬಹುತೇಕ ಅನುಮಾನ. ಜತೆಗೆ, ಈ ಹಂತದಲ್ಲಿ ಲಾಕ್ಡೌನ್ ಮಾಡುವುದು ಸಹ ಪ್ರಯೋಜನಕಾರಿಯಲ್ಲ. ಹೀಗಾಗಿ ಸಾರ್ವಜನಿಕರೇ ಹೆಚ್ಚು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ರಾಜ್ಯ ಕೊರೋನಾ ಟಾಸ್ಕ್‌ಫೋರ್ಸ್ ಸದಸ್ಯರಾದ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರೂ ಆದ ಮಂಜುನಾಥ್ ಅವರ ಪ್ರಕಾರ, ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಮಾಡುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಈಗಾಗಲೇ ಸೋಂಕು ಹರಡಿರುವುದರಿಂದ ಈ ಹಂತದಲ್ಲಿ …
Read More »ಗೂಡ್ಸ್ ರೈಲು ಅಡಿಗೆ ಬಿದ್ದ ಎರಡು ವರ್ಷದ ಬಾಲಕ ಬಚಾವ್ ಆಗಿದ್ದು ಹೇಗೆ ನೋಡಿ..
ಫರೀದಾಬಾದ್: ಹರಿಯಾಣದ ಫರೀದಾಬಾದ್ ಜಿಲ್ಲೆಯ ವಲ್ಲಭಗಢ ರೈಲ್ವೆ ನಿಲ್ದಾಣದಲ್ಲಿ ಎರಡು ವರ್ಷದ ಬಾಲಕನೊಬ್ಬ ಗೂಡ್ಸ್ ರೈಲಿನ ಅಡಿಗೆ ಬಿದ್ದು ಅದೃಷ್ಟವಶಾತ್ ಒಂದಿನಿತೂ ಗಾಯವಿಲ್ಲದೆ ಬಚಾವ್ ಆಗಿದ್ದಾನೆ. ಈ ಕುರಿತ ವಿಡಿಯೋ ವೈರಲ್ ಆಗಿದೆ. ಗೂಡ್ಸ್ ರೈಲ್ ವೇಗವಾಗಿ ಸಂಚರಿಸುತ್ತಿದ್ದ ವೇಳೆ, ರೈಲ್ವೆ ನಿಲ್ದಾಣದ ಸಮೀಪದಲ್ಲಿರುವ ಹಳಿಯ ಮೇಲೆ ಈ ಬಾಲಕ ಆಡವಾಡುತ್ತಿದ್ದ. ದೂರದಿಂದ ಇದನ್ನು ಗಮನಿಸಿದ ಗೂಡ್ಸ್ ರೈಲಿನ ಲೋಕೊ ಪೈಲಟ್ ಕೂಡಲೇ ತುರ್ತು ಬ್ರೇಕ್ ಹಾಕಿದ್ದ. ಆದರೆ, ಅಷ್ಟರಲ್ಲಾಗಲೇ ಸಮಯ …
Read More »ರಾಜ್ಯದ ಜನತೆಗೆ ಗುಡ್ ನ್ಯೂಸ್: ಇನ್ಮುಂದೆ ಗ್ರಾಮ ಪಂಚಾಯಿತಿಗಳಲ್ಲೇ ಸಿಗಲಿದೆ ‘ಜನನ- ಮರಣ ಪ್ರಮಾಣ ಪತ್ರ’
ಮಂಗಳೂರು : ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರನ್ನು ಜನನ ಮರಣ ಪ್ರಮಾಣ ಪತ್ರಗಳ ವಿತರಣಾಧಿಕಾರಿಗಳನ್ನಾಗಿ ನೇಮಸಿ ಸರ್ಕಾರವು ಆದೇಶಿಸಿದೆ. ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಆನ್‍ಲೈನ್ ಜನನ ಮರಣ ನೋಂದಣಿ ವ್ಯವಸ್ಥೆಯು 2015 ರ ಎಪ್ರಿಲ್ 1 ರಿಂದ ಜಾರಿಯಲ್ಲಿದ್ದು, ಸದರಿ ದಿನಾಂಕದ ನಂತರದಲ್ಲಿ ನೋಂದಣಿಯಾದ ದಾಖಲೆಗಳನ್ನು ಸರ್ಕಾರವು ನಿಗದಿಪಡಿಸಿದ ದರಗಳನ್ವಯ ಸೇವಾ ಶುಲ್ಕವನ್ನು ಪಾವತಿಸಿ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಸಾರ್ವಜನಿಕರು ಪ್ರಮಾಣ ಪತ್ರಗಳನ್ನು ಪಡೆಯಬಹುದು. 2015 …
Read More »ಉದ್ಯಮಿ ಪುತ್ರನ ಅಪಹರಣ: ಪೊಲೀಸರ ಮೇಲೆ ಹಲ್ಲೆ, ಆರೋಪಿಗೆ ಶೂಟ್
ಬೆಂಗಳೂರು : ಉದ್ಯಮಿಯೊಬ್ಬರ ಪುತ್ರನನ್ನು ಅಪಹರಿಸಿ ಐದು ಲಕ್ಷ ರು.ಗಳಿಗೆ ಬೇಡಿಕೆ ಇಟ್ಟಿದ್ದ ಕಿಡಿಗೇಡಿಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಗುಂಡು ಹೊಡೆದು ಬಂಧಿಸಿರುವ ಘಟನೆ ನಡೆದಿದೆ. ಕೋಣನಕುಂಟೆ ನಿವಾಸಿ ಕೃಷ್ಣ ಅಲಿಯಾಸ್ ಆಟೋ ಕೃಷ್ಣ ಎಂಬಾತನಿಗೆ ಗುಂಡೇಟು ಬಿದ್ದಿದ್ದು, ಹುಳಿಮಾವು ಸಮೀಪದ ಬೇಗೂರು-ಕೊಪ್ಪ ರಸ್ತೆಯಲ್ಲಿ ಬುಧವಾರ ರಾತ್ರಿ ಈ ದಾಳಿ ನಡೆದಿದೆ. ಉದ್ಯಮಿ ಜೋಸೆಫ್ ಪುತ್ರ ಜೋಕಿಮ್‌ನನ್ನು ರಕ್ಷಿಸಲಾಗಿದೆ. ಬೇಗೂರು ಸುತ್ತಮುತ್ತ ಜೆಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ಸಂತ್ರಸ್ತ ಜೊಕಿಮ್ ತಂದೆ ಜೋಸೆಫ್ …
Read More »ಅಥಣಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣ ಬಸ್ ನಿಲ್ದಾಣದ ಪರಸ್ಥಿತಿ
ಅಥಣಿ : ಪಟ್ಟಣದಲ್ಲಿ ಇತ್ತಿಚೆಗೆ ಕಟ್ಟಿದ ಬಸ ನಿಲ್ದಾಣದ ಕಾಮಗಾರಿಯು ಅವೈಜ್ಞಾನಿಕವಾಗಿದೆ . ಏಕೆಂದರೆ ಸತತ ಮೂರು ದಿನದಿಂದ ಪ್ರತಿನಿತ್ಯ ಸುರಿಯುತ್ತಿರುವ ಮಳೆಗೆ ಶೌಚಾಲಯದಲ್ಲಿ ಮೋಳಕಾಲಿನ ವರೆಗೂ ನೀರು ನಿಂತು ಯಾರು ಹೋಗದಂತಾಗಿದೆ . ಅದಕ್ಕೆ ನೀರು ಹೋರ ಹೋಗಲು ಯಾವುದೆ ದಾರಿ ಇಲ್ಲದೆ ಬಂದ ನೀರೆಲ್ಲಾ ಶೌಚಾಲದಯ ಮೂಲಕವೆ ಹೋಗಬೇಕಾ ಅನಿವಾರ್ಯತೆ ಎದುರಾಗಿದೆ . ಇದರಿಂದಾಗಿ ಹಲವಾರು ಗಂಟೆಗಳವರೆಗೂ ಯಾರು ಶೌಚಾಲದ ಒಳಗೆ ಹೋಗದಂತಾಗಿತ್ತು ಮತ್ತು ಹೋಗಬೇಕಾದರು …
Read More »