Breaking News

Uncategorized

3ನೇ ಪತಿಯನ್ನ ಮನೆಯಿಂದ ಹೊರ ಹಾಕಿದ ಬಿಗ್‍ಬಾಸ್ ಸ್ಪರ್ಧಿ

ಚೆನ್ನೈ: ಲಾಕ್‍ಡೌನ್ ವೇಳೆ ಸರಳವಾಗಿ ಮಕ್ಕಳ ಸಮ್ಮುಖದಲ್ಲಿ ಮೂರನೇ ಮದುವೆಯಾಗಿದ್ದ ಬಿಗ್‍ಬಾಸ್ ಸ್ಪರ್ಧಿ, ನಟಿ, ವನಿತಾ ವಿಜಯಕುಮಾರ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ವರದಿಯಾಗಿದೆ. ಮೂರನೇ ಪತಿ ಪೀಟರ್ ಪೌಲ್ ಸದ್ಯ ಮನೆಯಲ್ಲಿಲ್ಲ ಎಂಬುದನ್ನ ಸ್ವತಃ ವನಿತಾ ಒಪ್ಪಿಕೊಂಡಿದ್ದಾರೆ. ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ತಮ್ಮ ಫೇಸ್‍ಬುಕ್ ನಲ್ಲಿ ವನಿತಾ ಪತಿಯನ್ನ ಹೊರ ಹಾಕಿರುವ ಬಗ್ಗೆ ಬರೆದುಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದ ನಟಿ ಎಲ್ಲ ಊಹಾಪೋಹಗಳಿಗೆ ಗೊಂದಲಮಯವಾಗಿ ಸ್ಪಷ್ಟನೆ ನೀಡಿದ್ದಾರೆ. …

Read More »

ಕೊಳವೆಬಾವಿ ಅನುಮತಿ ಇಲ್ಲದೆ ತಗದರೆ ಶಿಕ್ಷೆ

ಬೆಂಗಳೂರು: ಕರ್ನಾಟಕ ಅಂತರ್ಜಲ ಪ್ರಾಧಿಕಾರವು ಬಾವಿ ಅಥವಾ ಕೊಳವೆಬಾವಿ ತೆರೆಯುವುದನ್ನು ನಿರ್ಬಂಧಿಸಲು ರಾಜ್ಯದ 15 ಜಿಲ್ಲೆಗಳ 45 ತಾಲೂಕುಗಳಿಗೆ ಸಂಬಂಧಪಟ್ಟಂತೆ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಅಂತರ್ಜಲ (ಅಭಿವೃದ್ಧಿ ನಿರ್ವಹಣೆ ಮತ್ತು ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012ರ ಅನುಸಾರ ಅಂತರ್ಜಲ ಅತಿ ಬಳಕೆ ತಾಲೂಕುಗಳೆಂದು 45 ತಾಲೂಕುಗಳನ್ನು ಗುರುತಿಸಿದ್ದು, ಅಲ್ಲಿಗೆ ಸೀಮಿತವಾಗಿ ಅಧಿನಿಯಮ ಅನ್ವಯವಾಗಲಿದೆ. ಇಂಥ ಕಡೆಗಳಲ್ಲಿ ಬಾವಿ ಅಥವಾ ಕೊಳಬೆಬಾವಿ ಕೊರೆಯಲು ಜಿಲ್ಲಾ ಮಟ್ಟದ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ …

Read More »

ರಾಗಿಣಿ, ಸಂಜನಾ ಜಾಮೀನಿಗಾಗಿ ಬೆದರಿಕೆ ಪತ್ರ – ನಾಲ್ವರು ಪೊಲೀಸರ ವಶಕ್ಕೆ

ಬೆಂಗಳೂರು: ರಾಗಿಣಿ ಮತ್ತು ಸಂಜನಾಗೆ ಬೇಲ್ ಕೊಡದಿದ್ದರೆ, ಬಾಂಬ್ ಹಾಕುತ್ತೇವೆ ಎಂದು ಪತ್ರ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್ ಕೇಸಿನಲ್ಲಿ ಅರೆಸ್ಟ್ ಆಗಿರುವ ನಟಿಯಾರ ರಾಗಿಣಿ ಮತ್ತು ಸಂಜಾನ ಅವರಿಗೆ ಜಾಮೀನು ನೀಡದೆ ಇದ್ದರೆ, ಸಿಟಿ ಸಿವಿಲ್ ಕೋರ್ಟ್ ಮತ್ತು ಕಮೀಷನರ್ ಆಫೀಸಿಗೆ ಬಾಂಬ್ ಹಾಕುತ್ತೇವೆ ಎಂದು ನಿನ್ನೆ ಬೆದರಿಕೆ ಪತ್ರವನ್ನು ಬರೆಯಲಾಗಿತ್ತು. ಜೊತೆಗೆ ಸಿಟಿ ಸಿವಿಲ್ ಕೋರ್ಟ್ ಜಡ್ಜ್, ಕಮೀಷನರ್ ಕಮಲ್ ಪಂಥ್, …

Read More »

D.C.C. ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಕತ್ತಿ ಬ್ರದರ್ಸ್ ಮತ್ತು ಜಾರಕಿಹೊಳಿ ಬ್ರದರ್ಸ್ ನೇತೃತ್ವದ ಬಣ ಮತ್ತು ಸವದಿ ಹಾಗೂ ಜೊಲ್ಲೆ ನೇತೃತ್ವದ ಬಣಗಳ ಮಧ್ಯೆ ಪೈಪೋಟಿಗೆ ಕಣ

ಬೆಳಗಾವಿ – ಬೆಳಗಾವಿ ಜಿಲ್ಲಾ ಕೇಂದ್ರ ಮಧ್ಯವರ್ತಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಮಂಗಳವಾರ ಸಂಜೆ ಇಲ್ಲವೇ ಬುಧವಾರ ಮಹತ್ವದ ಸಭೆ ನಡೆಯಲಿದೆ. ನಿಗದಿಯಂತೆ ನವೆಂಬರ್ 6ರಂದು ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ. ಕತ್ತಿ ಬ್ರದರ್ಸ್ ಮತ್ತು ಜಾರಕಿಹೊಳಿ ಬ್ರದರ್ಸ್ ನೇತೃತ್ವದ ಬಣ ಮತ್ತು ಸವದಿ ಹಾಗೂ ಜೊಲ್ಲೆ ನೇತೃತ್ವದ ಬಣಗಳ ಮಧ್ಯೆ ಪೈಪೋಟಿಗೆ ಕಣ ಸಜ್ಜಾಗುತ್ತಿದೆ. ಹಾಗಾಗಿ ಜಿಲ್ಲೆಯಲ್ಲಿ ಇದೊಂದು ಭಾರಿ ಕುತೂಹಲಕರ ಚುನಾವಣೆಯಾಗಲಿದೆ ಎಂದೇ ಭಾವಿಸಲಾಗಿದೆ. ಚುನಾವಣೆ …

Read More »

ಚಳಿಗಾಲದಲ್ಲಿ ಕೊರೊನಾ ಹಬ್ಬುವ ಬಗ್ಗೆ ಎಚ್ಚರಿಕೆ: ಸುಧಾಕರ್

ಬೆಂಗಳೂರು: ಮುಂದಿನ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಅತಿಯಾದ ಚಳಿ ಇರುವ ತಿಂಗಳಾಗಿದ್ದು, ಈ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ಹಾಗೂ ಕೋವಿಡ್ ಹೆಚ್ಚುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಆರೋಗ್ಯ ಇಲಾಖೆ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಬೆಂಗಳೂರಿನಲ್ಲಿ ಮೊದಲ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಧಾಕರ್ ಅವರು, ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಅತಿಯಾದ ಚಳಿ ಇರುವ ಕಾರಣ ಸೋಂಕು ಹೆಚ್ಚಾಗುವ ಕುರಿತು …

Read More »

ನೇತ್ರಾವತಿ ನದಿಗೆ ಹಾರಿದ ಬಸ್ ಚಾಲಕ- ಸ್ಥಳೀಯ ಯುವಕರಿಂದ ರಕ್ಷಣೆ

ಮಂಗಳೂರು: ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಸ್ಥಳೀಯ ಯುವಕರು ರಕ್ಷಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಗೂಡಿನ ಬಳಿಯ ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದ. ಈ ವೇಳೆ ಸ್ಥಳೀಯ ಯುವಕರ ತಂಡ ಆತನನ್ನು ರಕ್ಷಿಸಿದೆ. ಹಾಸನ ಜಿಲ್ಲೆಯ ಕುಮಾರ್ ಮಂಗಳೂರಿನಲ್ಲಿ ಖಾಸಗಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇಂದು ಬಂಟ್ವಾಳದ ಗೂಡಿನ ಬಳಿ ಹಳೆ ಸೇತುವೆಯ ಮೇಲಿಂದ ನೇತ್ರಾವತಿ ನದಿಗೆ ಹಾರಿದ್ದಾನೆ. ಇದನ್ನು ನೋಡಿದ …

Read More »

ಕಾಂಗ್ರೆಸ್ ಎಂಎಲ್‍ಸಿ ಪ್ರಸನ್ನ ಕುಮಾರ್ ಪುತ್ರ ಹೃದಯಾಘಾತದಿಂದ ನಿಧನ

ಶಿವಮೊಗ್ಗ: ಜಿಲ್ಲೆಯ ಕಾಂಗ್ರೆಸ್ ಮುಖಂಡ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಪುತ್ರ ಸುಹಾಸ್ (31) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತ ಸುಹಾಸ್‍ಗೆ ಮುಂಜಾನೆ ಎದೆನೋವು ಕಾಣಿಸಿಕೊಂಡಿದ್ದು, ಮನೆಯಲ್ಲೇ ಕುಸಿದು ಬಿದ್ದಿದ್ದರು. ನಂತರ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುಹಾಸ್ ಕೊನೆಯುಸಿರು ಎಳೆದಿದ್ದಾರೆ. ಸುಹಾಸ್ ಗೆ ಕಳೆದ ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿತ್ತು.ಎಂಎಲ್‍ಸಿ ಪ್ರಸನ್ನ ಕುಮಾರ್ ಅವರ ತೋಟದಲ್ಲಿ ಮೃತ ಪುತ್ರನ ಅಂತ್ಯಕ್ರಿಯೆ ನೆರವೇರಿಸಲಾಯಿತು. …

Read More »

ಎಸ್ಸಿ, ಎಸ್‍ಟಿ ಗುಣಲಕ್ಷಣ ಇರೋ ಎಲ್ಲ ವರ್ಗಗಳಿಗೂ ಮೀಸಲಾತಿ ಸಿಗಬೇಕು: ಸಿದ್ದರಾಮಯ್ಯ

ಬೆಂಗಳೂರು: ಎಸ್ಸಿ, ಎಸ್‍ಟಿ ಗುಣಲಕ್ಷಣ ಇರೋ ಎಲ್ಲ ವರ್ಗಗಳಿಗೂ ಮೀಸಲಾತಿ ಸಿಗಬೇಕು. ಬದಲಾಗಿ ಯಾವುದೋ ಒಂದು ನಿರ್ದಿಷ್ಟ ವರ್ಗಕ್ಕೆ ಮಾತ್ರ ಮೀಸಲಾತಿ ಸಿಗುವುದಲ್ಲ ಎಂದು ಜಾತಿಜನಗಣತಿ ಸಮೀಕ್ಷೆ ವರದಿಯ ಜಾರಿ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಸ್‍ಟಿ ಗುಣಲಕ್ಷಣ ಇರುವ ಎಲ್ಲ ವರ್ಗಗಳಿಗೂ ಮೀಸಲಾತಿ ಸಿಗಬೇಕು. ಜನಸಂಖ್ಯೆಯನ್ನು ಆಧರಸಿ ಮೀಸಲಾತಿ ಕೊಡಲಿ. ಎಸ್‍ಟಿ ಸಮುದಾಯ ಎಂದು ಕೇಳುತ್ತಿರುವ ಕುರುಬ ಸಮುದಾಯ, ಗಂಗಾಮತಸ್ಥರು ಎಲ್ಲರಿಗೂ ಮೀಸಲಾತಿ …

Read More »

ಒಳ್ಳೆಯ ಸ್ನೇಹಿತೆಯನ್ನು ಹುಡುಕಿಕೊಳ್ಳುವುದು ಕಷ್ಟ ಎಂದು ಟ್ವೀಟ್ ಮಾಡುವ ಮೂಲಕ ಕಿಚ್ಚ ಸುದೀಪ್ ಅವರು ತಮ್ಮ ಪತ್ನಿಗೆ ಮದುವೆ ವಾರ್ಷಿಕೋತ್ಸವದ ಶುಭಕೋರಿದ್ದಾರೆ.

ಬೆಂಗಳೂರು: ಒಳ್ಳೆಯ ಸ್ನೇಹಿತೆಯನ್ನು ಹುಡುಕಿಕೊಳ್ಳುವುದು ಕಷ್ಟ ಎಂದು ಟ್ವೀಟ್ ಮಾಡುವ ಮೂಲಕ ಕಿಚ್ಚ ಸುದೀಪ್ ಅವರು ತಮ್ಮ ಪತ್ನಿಗೆ ಮದುವೆ ವಾರ್ಷಿಕೋತ್ಸವದ ಶುಭಕೋರಿದ್ದಾರೆ. ಇಂದು ಸ್ಯಾಂಡಲ್‍ವುಡ್‍ನ ಕಿಚ್ಚ, ಅಭಿನಯ ಚಕ್ರವರ್ತಿ ಸುದೀಪ್ ಮತ್ತು ಪ್ರಿಯಾ ಸುದೀಪ್ 19ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ನೆಚ್ಚಿನ ನಟನ ಮದುವೆ ವಾರ್ಷಿಕೋತ್ಸಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುತ್ತಿದ್ದಾರೆ. ತಮ್ಮ ಮದುವೆ ವಾರ್ಷಿಕೋತ್ಸಕ್ಕೆ ತಮ್ಮ ಪತ್ನಿಗೆ ಟ್ವೀಟ್ ಮಾಡುವ ಮೂಲಕ ವಿಶ್ …

Read More »

ಬೇರೆಯವರ‌ ಹೆಸರಿನಲ್ಲಿ‌ ಡಿಆರ್ ಪರೀಕ್ಷೆ ಬರೆದ ಯುವಕನನ್ನು‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ: ನಗರದಲ್ಲಿ ಬೇರೆಯವರ‌ ಹೆಸರಿನಲ್ಲಿ‌ ಡಿಆರ್ ಪರೀಕ್ಷೆ ಬರೆದ ಯುವಕನನ್ನು‌ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯದಲ್ಲಿ ಡಿಆರ್ ಪರೀಕ್ಷೆ ಇಂದು ನಡೆದಿವೆ. ಅದೇ ರೀತಿ ಬೆಳಗಾವಿ ನಗರದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಮತ್ತೊಬ್ಬರ ಹೆಸರಿನಲ್ಲಿ ಪರೀಕ್ಷೆ ಬರೆಯುತ್ತಿರುವಾಗ, ಪರೀಕ್ಷೆ ಮೇಲ್ವಿಚಾರಕರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ. ಯುವಕನನ್ನು‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Read More »