ಪಶ್ಚಿಮ ಬಂಗಾಳ: ನವರಾತ್ರಿಯ ಕೊನೆಯ ದಿನ, ಆಯುಧ ಪೂಜೆಯ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹುತಾತ್ಮರಿಗೆ ನಮನ ಸಲ್ಲಿಸಿ, ಶಸ್ತ್ರಾಸ್ತ್ರ ಪೂಜೆ ಸಲ್ಲಿಸಿದ್ದಾರೆ. ಡಾರ್ಜಿಲಿಂಗ್ನಲ್ಲಿರುವ ಸುಕ್ನಾ ಯುದ್ಧ ಸ್ಮಾರಕ ಬಳಿ ತೆರಳಿ ರಾಜನಾಥ್ಸಿಂಗ್ ಹುತಾತ್ಮರಿಗೆ ಗೌರವ ಸಲ್ಲಿಸಿದ್ದಾರೆ. ಜೊತೆಗೆ ರಕ್ಷಣಾ ಸಚಿವರು ಯುದ್ಧ ಟ್ಯಾಂಕರ್, ಸೇನಾ ವಾಹನ ಸೇರಿದಂತೆ ಯುದ್ಧಕ್ಕೆ ಬಳಸುವ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ್ರು. ಈ ವೇಳೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾಣೆ ಉಪಸ್ಥಿತರಿದ್ದರು. ಸದ್ಯ …
Read More »ಬಿಹಾರದಲ್ಲಿ ಮತ್ತೊಂದು ಚುನಾವಣಾಪೂರ್ವ ಸಮೀಕ್ಷೆಯು ಬಿಜೆಪಿ-ಜೆಡಿಯು ಕೂಟ ಜಯಿಸಲಿದೆ ಎಂದು ಭವಿಷ್ಯ ನುಡಿದಿದೆ.
ಪಟನಾ : ಬಿಹಾರದಲ್ಲಿ ಮತ್ತೊಂದು ಚುನಾವಣಾಪೂರ್ವ ಸಮೀಕ್ಷೆಯು ಬಿಜೆಪಿ-ಜೆಡಿಯು ಕೂಟ ಜಯಿಸಲಿದೆ ಎಂದು ಭವಿಷ್ಯ ನುಡಿದಿದೆ. ಜೆಡಿಯು+ಬಿಜೆಪಿ ಮಿತ್ರಕೂಟವಾಗಿರುವ ಎನ್‌ಡಿಎಗೆ 135ರಿಂದ 159 ಸ್ಥಾನ, ಆರ್‌ಜೆಡಿ+ಕಾಂಗ್ರೆಸ್ ಹಾಗೂ ಇತರರ ಮಹಾಮೈತ್ರಿಕೂಟಕ್ಕೆ 77ರಿಂದ 98 ಸ್ಥಾನ, ಎನ್‌ಡಿಎ ಕೂಟದಿಂದ ಹೊರಬಿದ್ದು ಪ್ರತ್ಯೇಕವಾಗಿ ಸ್ಪರ್ಧಿಸಿರುವ ಎಲ್‌ಜೆಪಿಗೆ ಕೇವಲ 1ರಿಂದ 5 ಸ್ಥಾನ ಹಾಗೂ ಇತರರಿಗೆ ಕೇವಲ 4ರಿಂದ 8 ಸ್ಥಾನ ದೊರಕಬಹುದು ಎಂದು ‘ಎಬಿಪಿ ನ್ಯೂಸ್’ ಹಿಂದಿ ಸುದ್ದಿವಾಹಿನಿಯು ಶನಿವಾರ ಸಂಜೆ ಸಮೀಕ್ಷಾ …
Read More »2ನೇ ಭೂ ಕಂದಾಯ ತಿದ್ದುಪಡಿಗೆ ರಾಜ್ಯಪಾಲರ ಅಂಕಿತ
ಬೆಂಗಳೂರು, ಅ.24- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ನಗರ ಪ್ರದೇಶದಲ್ಲಿನ ಬಿ ಖರಾಬು ಭೂಮಿಯನ್ನು ಸಕ್ರಮಗೊಳಿಸಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುವ ಕರ್ನಾಟಕ ಭೂ ಕಂದಾಯ (ಎರಡನೆ ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಕಳೆದ ತಿಂಗಳು ನಡೆದ ಅಧಿವೇಶನದಲ್ಲಿ ವಿಧೇಯಕವನ್ನು ಅಂಗೀಕರಿಸಲಾಗಿತ್ತು. ಅಂಗೀಕರಿಸಲ್ಪಟ್ಟ ವಿಧೇಯಕವನ್ನು ರಾಜ್ಯ ಸರ್ಕಾರ ರಾಜ್ಯಪಾಲರ ಸಹಿಗಾಗಿ ಕಳುಹಿಸಿತ್ತು. ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಿದ್ದು, ಈ ವಿಧೇಯಕ ಕಾಯ್ದೆಯಾಗಿ ರೂಪುಗೊಂಡಂತಾಗಿದೆ. ಖಾಸಗಿ ನಿವೇಶನ ನಡುವೆ ಸಿಲುಕಿರುವ …
Read More »ಬಿಜೆಪಿಯಿಂದ ಬಂಡಾಯ ಅಭ್ಯರ್ಥಿ ಶ್ರೀನಿವಾಸ್ ಉಚ್ಛಾಟನೆ
ಚಿತ್ರದುರ್ಗ: ಬಂಡಾಯ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ.ಆಗ್ನೇಯ ಪದವೀಧರ ಕ್ಷೇತ್ರದ ಬಂಡಾಯ ಅಭ್ಯರ್ಥಿಯಾಗಿರುವ ಶ್ರೀನಿವಾಸ್ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಬಿಜೆಪಿ ರಾಜ್ಯಧ್ಯಕ್ಷ ಕಟೀಲ್ ಆದೇಶ ಹೊರಡಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಪತಿ ಡಿ.ಟಿ. ಶ್ರೀನಿವಾಸ್ ಅವರು ಬಿಜೆಪಿ ಹಿಂದುಳಿದ ಮೋರ್ಚಾ ಉಪಾದ್ಯಕ್ಷರಾಗಿದ್ದರು. ಎಂಎಲ್‍ಸಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಶ್ರೀನಿವಾಸ್ ಕಣದಲ್ಲಿದ್ದರು.
Read More »ರಾಜ್ಯದಲ್ಲಿನ ಜನರಿಗೂ ಕೊರೊನಾ ಲಸಿಕೆ ಉಚಿತವಾಗಿ ನೀಡಲಾಗುವುದು:ಡಾ. ಅಶ್ವತ್ಥ್ ನಾರಾಯಣ
ಬೆಳಗಾವಿ: ರಾಜ್ಯದಲ್ಲಿನ ಜನರಿಗೂ ಕೊರೊನಾ ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಹೇಳಿದರು ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ, ಬಿಹಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಉಚಿತ ಕೊರೊನಾ ಲಸಿಕೆ ನೀಡುವುದಾಗಿ ಹೇಳಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ಸಮರ್ಥಿಸಿಕೊಂಡರು. ಬಿಹಾರದಲ್ಲಿ ಲಸಿಕೆ ಕೊಡಲು ನಾವು ಸಿದ್ಧರಿದ್ದೇವೆ ಎಂದು ಆಶ್ವಾಸನೆ ನೀಡಿದ್ದೇವೆ. ಅದರಲ್ಲಿ ತಪ್ಪೇನಿಲ್ಲ. ಜನರಲ್ಲಿ ವಿಶ್ವಾಸ ಮೂಡಿಸುವ …
Read More »ಪ್ರತಿ ತಿಂಗಳು ಪತಿಗೆ 2 ಸಾವಿರ ಜೀವನಾಂಶ ನೀಡಿ – 58ರ ಪತ್ನಿಗೆ ಕೋರ್ಟ್ ಆದೇಶ
ಲಕ್ನೋ: ಪತಿಗೆ ಪ್ರತಿ ತಿಂಗಳು 2 ಸಾವಿರ ರೂ. ಜೀವನಾಂಶ ನೀಡುವಂತೆ 58 ವರ್ಷದ ಮಹಿಳೆಗೆ ಕೋರ್ಟ್ ಆದೇಶಿಸಿದೆ.ಮುಜಾಫರ್ ನಗರ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದ್ದು, 62 ವರ್ಷದ ಕಿಶೋರಿ ಲಾಲ್ ಸೊಹಂಕರ್ ಟೀ ಅಂಗಡಿ ನಡೆಸುತ್ತಿದ್ದು, ಇವರಿಗೆ ಬೇರೆ ಯಾವುದೇ ಆದಾಯ ಮೂಲವಿಲ್ಲ. ಆದರೆ 58 ವರ್ಷದ ಇವರ ಪತ್ನಿ ಮುನ್ನಿ ದೇವಿ ಸೇನೆಯಿಂದ ನಿವೃತ್ತಿ ಹೊಂದಿದವರಾಗಿದ್ದಾರೆ. ಹೀಗಾಗಿ ಇವರಿಗೆ 12 ಸಾವಿರ ರೂ. ಪೆನ್ಷನ್ ಬರುತ್ತದೆ. ಇದರಲ್ಲಿ …
Read More »ಕೊರೊನಾ ವೈರಸ್‍ಗೆ ಜನವರಿ ಅಥವಾ ಫೆಬ್ರವರಿಯಲ್ಲಿ ಲಸಿಕೆ ಸಿಗುವ ಸಾಧ್ಯತೆಯಿದೆ.
ನವದೆಹಲಿ: ಕೊರೊನಾ ವೈರಸ್‍ಗೆ ಜನವರಿ ಅಥವಾ ಫೆಬ್ರವರಿಯಲ್ಲಿ ಲಸಿಕೆ ಸಿಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಈಗಲೇ ಕೇಂದ್ರ ಸರ್ಕಾರ ಲಸಿಕೆಗೆ ಹಂಚಿಕೆ ಮಾಡಲು ಸಿದ್ಧತೆ ನಡೆಸುತ್ತಿದೆ. ಯಾವೆಲ್ಲ ಲಸಿಕೆ? ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲಸಿಕೆ ದೇಶದಲ್ಲಿ ಮೊದಲು ಲಭ್ಯವಾಗಬಹುದು. ಈಗಾಗಲೇ ಪುಣೆಯ ಸೀರಂ ಸಂಸ್ಥೆ ಮೂರನೇ ಹಂತದ ಲಸಿಕೆ ಪ್ರಯೋಗ ನಡೆಸಿದೆ. ಇದರ ಜೊತೆ ಜೊತೆಗೆ 30 ಕೋಟಿ ಡೋಸ್ ಉತ್ಪಾದಿಸಲು ತಯಾರಿ ನಡೆಸಿದೆ. ರಷ್ಯಾದ ಸ್ಟುಟ್ನಿಕ್ ವಿ ಲಸಿಕೆ …
Read More »ಫೇಸ್ಬುಕ್ Friend Request ಅಕ್ಸೆಪ್ಟ್ ಮಾಡೋ ಮುನ್ನ ಹುಷಾರ್..!
ಬೆಂಗಳೂರು,ಅ.23- ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂಪರ್ಕದಲ್ಲಿರುವ ಗಣ್ಯರು ಮತ್ತು ಸರ್ಕಾರಿ ಅಧಿಕಾರಿಗಳ ಮತ್ತೊಂದು ಸಾಮಾಜಿಕ ಜಾಲತಾಣ ಖಾತೆಯಿಂದ ಮಿತೃತ್ವ ಮನವಿ(ಫ್ರೆಂಡ್ ರಿಕ್ವೆಸ್ಟ್) ಬಂದಲ್ಲಿ ಅವುಗಳನ್ನು ಸ್ವೀಕರಿಸುವ ಮುಂಚೆ ಜಾಗೃತಿ ವಹಿಸಿ ವಂಚನೆಗಳಿಗೆ ಬಲಿಯಾಗದಂತೆ ಸಾರ್ವಜನಿಕರು ಎಚ್ಚರವಹಿಸಬೇಕೆಂದು ಪೊಲೀಸರು ಸೂಚಿಸಿದ್ದಾರೆ. ನಿಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿನ ಮಾಹಿತಿಗಳು ದುರುಪಯೋಗವಾಗದಂತೆ ನಿಯಂತ್ರಿಸಲು ಅಂತಹ ಜಾಲತಾಣಗಳಲ್ಲಿ ಒದಗಿಸಿರುವ ಖಾಸಗಿ ಸುರಕ್ಷತಾ ಆಯ್ಕೆಗಳನ್ನ ಸಕ್ರಿಯಗೊಳಿಸಬೇಕು ಎಂದು ಸೂಚಿಸಲಾಗಿದೆ. ಒಂದು ವೇಳೆ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಹಾಗೂ …
Read More »ಕರ್ನಾಟಕವನ್ನೇನು ಮೋದಿಗೆ ಬರೆದುಕೊಟ್ಟಿಲ್ಲ, ಕೇಂದ್ರದಿಂದ ಪರಿಹಾರ ಕೊಡಿಸಿ
# ಮಹಾಂತೇಶ್ ಬ್ರಹ್ಮ ಅವರು ಗಡಿಯಲ್ಲಿ ನಿಂತು ದೇಶ ಕಾಯುವ ಸೈನಿಕರಷ್ಟೇ ಶಿಸ್ತಿನ ಸಿಪಾಯಿಗಳು, ರಾಷ್ಟ್ರೀಯತೆ ಸಿದ್ಧಾಂತಗಳನ್ನು ರಕ್ತದ ಕಣಕಣದಲ್ಲಿ ತುಂಬಿಕೊಂಡವರು. ಎಲ್ಲಿ ನೋವಿದೆಯೋ, ಎಲ್ಲಿ ಕಷ್ಟವಿದೆಯೋ, ಎಲ್ಲಿ ಬಂಧನವಿದೆಯೋ ಅಂತಹ ಜನರಿಗಾಗಿ ಸೇವೆ ಮಾಡುವ ಅವಕಾಶ ನನಗು ಬೇಕು ಎಂದು ತಾಯಿ ಭಾರತ ಮಾತೆಯಲ್ಲಿ ಕೇಳುವವರು ಒಂದೆ ಮಾತಿನಲ್ಲಿ ಹೇಳಬೇಕೆಂದರೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರು. ಭೂಕಂಪವಾಗಲಿ, ಚಂಡಮಾರುತವಾಗಲಿ, ಅತಿವೃಷ್ಟಿಯಾಗಲಿ, ಅನಾವೃಷ್ಟಿಯಾಗಲಿ, ಕಾಲರ ಪ್ಲೇಗಿನಿಂದ ಹಿಡಿದು ಈಗಿನ …
Read More »ಉತ್ತರ ಕರ್ನಾಟಕದ ಜನ ಸಂಕಷ್ಟದಲ್ಲಿದ್ದಾರೆ. ಸರ್ಕಾರಕ್ಕೆ ಮಾನವೀಯತೆಯಿಲ್ಲ,ಕರ್ನಾಟಕವನ್ನು ಕೇಂದ್ರ ಸರ್ಕಾರ ಗುಲಾಮರ ರೀತಿ ನೋಡುತ್ತಿದೆ.:ವಾಟಾಳ್ ನಾಗರಾಜ್
ರಾಯಚೂರು: ಸರ್ಕಾರ ಪ್ರವಾಹ ಪರಸ್ಥಿತಿಯನ್ನು ವೈಮಾನಿಕ ಸಮೀಕ್ಷೆ ಮಾಡಿ ಕೈತೊಳೆದುಕೊಂಡಿದೆ. ಉತ್ತರ ಕರ್ನಾಟಕದ ಜನ ಸಂಕಷ್ಟದಲ್ಲಿದ್ದಾರೆ. ಸರ್ಕಾರಕ್ಕೆ ಮಾನವೀಯತೆಯಿಲ್ಲ ಅಂತ ರಾಯಚೂರಿನಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ. ರಾಯಚೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ವಾಟಾಳ್ ನಾಗರಾಜ್ ಸರ್ಕಾರ ಹಾಗೂ ವಿವಿಧ ಪಕ್ಷಗಳ ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತೀಚೆಗೆ ಎಲ್ಲರೂ ಹೆಲಿಕಾಪ್ಟರ್ ರಾಜಕಾರಣಿಗಳಾಗಿದ್ದಾರೆ. ಯಡಿಯೂರಪ್ಪನವರ ಬಳಿ ಹೆಲಿಕಾಪ್ಟರ್ ಇದೆ. ಜೆಡಿಎಸ್, ಕಾಂಗ್ರೆಸ್ಸಿನವರು ಹೆಲಿಕಾಪ್ಟರಿನಲ್ಲೇ ಬರುತ್ತಾರೆ. ಇನ್ನು …
Read More »