Breaking News

Uncategorized

ಕೆಪಿಸಿಸಿ ಅಧ್ಯಕ್ಷ ದಿಢೀರ್ ದೆಹಲಿಗೆ – ಸಿದ್ದು ವಿರುದ್ಧ ದೂರು ಕೊಡ್ತಾರಾ ಡಿಕೆಶಿ..?

ಬೆಂಗಳೂರು: ಉಪ ಚುನಾವಣೆ ನಡೆದ ಎರಡೇ ದಿನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. 2 ಕ್ಷೇತ್ರಗಳ ಫಲಿತಾಂಶ ಬರೋದಕ್ಕೆ ಇನ್ನೂ ನಾಲ್ಕು ದಿನ ಬಾಕಿ ಇರುವಂತೆ ಕೆಪಿಸಿಸಿ ಅಧ್ಯಕ್ಷರ ದಿಢೀರ್ ದೆಹಲಿ ಪ್ರವಾಸ ಅಚ್ಚರಿ ಮೂಡಿಸಿದೆ. ಉಪ ಚುನಾವಣೆಯ ಹೊತ್ತಲ್ಲಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ಹೇಳಿಕೆಗಳ ಬಗ್ಗೆ ಹೈಕಮಾಂಡ್‍ಗೆ ದೂರು ನೀಡುವ ನಿರೀಕ್ಷೆ ಇದೆ. ಇದರಿಂದ ಪಕ್ಷದಲ್ಲಿ ಸಮನ್ವಯತೆ …

Read More »

ಗುಣಮುಖರಾದರೂ ಮತ್ತೆ ಬರ್ಬೋದು ಕೊರೊನಾ!

ಬೆಂಗಳೂರು: ಕೊರೊನಾ ಕಂಟ್ರೋಲ್‍ಗೆ ಬಂದಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗ್ತಿದೆ. ರಾಜ್ಯದಲ್ಲಿ ಅಕ್ಟೋಬರ್ ಪ್ರಾರಂಭಕ್ಕೆ 10 ಸಾವಿರ ಇದ್ದ ಸೋಂಕಿತರ ಸಂಖ್ಯೆ ಈಗ 3 ಸಾವಿರದ ಅಸುಪಾಸಿನಲ್ಲಿದೆ. ಆದರೆ ಕೊರೊನಾ ಬಂದು ಗುಣಮುಖ ಆದವರಲ್ಲಿಯೂ ಈಗ ಸೋಂಕು ಹೆಚ್ಚಾಗಿದೆ. ಹೀಗಾಗಿ ಒಮ್ಮೆ ಬಂದು ರಿಕವರಿ ಅದವರಿಗೂ ಕೊರೊನಾ ಮತ್ತೆ ಕಾಟ ಕೊಡುತ್ತಿದೆ ಎಂಬ ವಿಚಾರವೊಂದು ಬಯಲಾಗಿದೆ. ಮೊದಮೊದಲು ತೀರಾ ಕಡಿಮೆ ಸಂಖ್ಯೆಯಲ್ಲಿ ಸೋಂಕು ಮತ್ತೆ ಕಾಣಿಸಿಕೊಳ್ಳುತ್ತಿತ್ತು. ಈಗ …

Read More »

ಸಿದ್ದರಾಮಯ್ಯ ಒಬ್ಬ ಹುಚ್ಚ, : ಸಚಿವ ಈಶ್ವರಪ್ಪ

ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯನಿಗೆ ಹುಚ್ಚು. ಮುಖ್ಯಮಂತ್ರಿ ಸ್ಥಾನ ಹೋದನಂತರ ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದು ಹೋಗಿದೆ ಎಂದು ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆಯ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಎಂದಿರುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಯಾಕೆ ಮುಖ್ಯಮಂತ್ರಿ ಬದಲಾವಣೆ ಆಗಬೇಕು. ಸಿದ್ದರಾಮಯ್ಯನಿಗೆ ಆಕಾಶದಿಂದ ಸುದ್ದಿ ಉದುರಿದ್ಯಾ? ಮೋದಿ, ನಡ್ಡಾ, ಅಮಿತ್ ಶಾ ಫೋನ್ ಮಾಡಿ ಹೇಳಿದ್ರಾ? ನೀವು ಜನರ ಮಧ್ಯೆ ಹೋಗಿ …

Read More »

ನಾನು ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿಲ್ಲಎಲ್ಲ ಸದಸ್ಯರು ಸೇರಿ ಆಯ್ಕೆ ಮಾಡಿದರೆ ನಾನು ಆ ಹುದ್ದೆಯಲ್ಲಿ ಮುಂದುವರಿಯಲು ಸಿದ್:ರಮೇಶ ಕತ್ತಿ,ದ

ಬೆಳಗಾವಿ – ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಆಡಳಿತ ಮಂಡಳಿಯ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಇನ್ನುಳಿದ 3 ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಲಿದೆ. ಎಲ್ಲ 16 ಸ್ಥಾನಗಳಿಗೂ ಅವಿರೋಧ ಆಯ್ಕೆ ಮಾಡಬೇಕೆನ್ನುವ ಪ್ರಯತ್ನ ಫಲ ನೀಡಲಿಲ್ಲ. ಅಂತಿಮವಾಗಿ 3 ಸ್ಥಾನಗಳಿಗೆ ಚುನಾವಣೆ ನಡೆಸಲೇಬೇಕಾಗಿದೆ. ರಾಮದುರ್ಗ ತಾಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರ, ಖಾನಾಪುರ ತಾಲೂಕಿನ ತಾಲೂಕಿನ ಕೃಷಿ ಪತ್ತಿನ ಇವುಗಳಲ್ಲಿ ಹೆಚ್ಚು ಕುತೂಹಲ ಮೂಡಿಸಿರುವುದು ಖಾನಾಪುರ …

Read More »

ಇಂದಿನಿಂದ ಇತಿಹಾಸ ಪ್ರಸಿದ್ಧ ಹಾಸನಾಂಬೆಯ ಆನ್‍ಲೈನ್ ದರ್ಶನ

ಹಾಸನ, ನ.5- ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಗಿದೆ. ಆದರೂ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬ ದೇವಿ ದೇವಾಲಯದ ಬಾಗಿಲು ತೆರೆದಿದ್ದರೂ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಾರ್ವಜನಿಕರ ದೇಗುಲ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಪ್ರತಿ ವರ್ಷಕ್ಕೊಮ್ಮೆ ಮಾತ್ರ ಆಶ್ವಯುಜ ಮಾಸದ ಗುರುವಾರದಂದು ಬಾಗಿಲು ತೆರೆಯುವ ಹಾಸನಾಂಬ ದೇವಾಲಯದ ಬಾಗಿಲು ತೆರೆದಾಗ ಹಿಂದಿನ ವರ್ಷ ಹಚ್ಚಿದ ದೀಪ ಆರಿರುವುದಿಲ್ಲ. …

Read More »

ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಏಕಾಏಕಿ ಚಿರತೆ ದಾಳಿ

ಕೊಪ್ಪಳ: ಚಿರತೆ ದಾಳಿಗೆ ಯುವಕನೋರ್ವ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ವ್ಯಾಪ್ತಿಯಲ್ಲಿ ಬರುವ ದುರ್ಗಾದೇವಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಹುಲಗೇಶ್ ಚಿರತೆಗೆ ಬಲಿಯಾದ ಯುವಕನಾಗಿದ್ದಾನೆ. ಮೃತ ಹುಲಗೇಶ್ ದುರ್ಗಾದೇವಿ ದೇವಸ್ಥಾನದಲ್ಲಿ ಹಲವಾರು ವರ್ಷಗಳಿಂದ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ. ಎಂದಿನಂತೆ ಬುಧವಾರ ಸಹ ದೇವಸ್ಥಾನದ ಕೆಲಸ ಕಾರ್ಯಗಳನ್ನ ಮುಗಿಸಿ ರಾತ್ರಿ ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಏಕಾಏಕಿ ಚಿರತೆ ದಾಳಿ ಮಾಡಿದೆ. …

Read More »

ರಿಪಬ್ಲಿಕ್ ಟಿವಿ ಸ್ಥಾಪಕ ಮತ್ತು ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯನ್ನ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ

ಮುಂಬೈ: ರಿಪಬ್ಲಿಕ್ ಟಿವಿ ಸ್ಥಾಪಕ ಮತ್ತು ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯನ್ನ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. 2018ರಲ್ಲಿ ಇಂಟೀರಿಯರ್ ಡಿಸೈನರ್ ಒಬ್ಬರು ತಮ್ಮ ತಾಯಿಯ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ರು. ಅವರ ಡೆತ್​ನೋಟ್​ನಲ್ಲಿ ಅರ್ನಬ್ ಗೋಸ್ವಾಮಿ ಸೇರಿ ಹಲವರು ಹಣ ಕೊಡಬೇಕಿತ್ತು. ಈ ಹಣ ವಸೂಲಿಯಾಗದ ಕಾರಣಕ್ಕೆ ತಾನು ಆತ್ಮಹತ್ಯೆ ಮಾಡಿಕೊಳ್ತಿದ್ದೇನೆ ಅಂತಾ ಬರೆದಿಟ್ಟಿದ್ರು. ಈ ಪ್ರಕರಣದ ವಿಚಾರಣೆಗಾಗಿ ನಿನ್ನೆ ಮುಂಬೈ ಪೊಲೀಸರು ಅರ್ನಬ್ ಗೋಸ್ವಾಮಿಯನ್ನ ವಶಕ್ಕೆ …

Read More »

ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸೋ ಹಾಸನದ ಗ್ರಾಮದೇವತೆ, ಶಕ್ತಿದೇವಿ ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ ಅರಂಭಗೊಂಡಿದೆ.

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸೋ ಹಾಸನದ ಗ್ರಾಮದೇವತೆ, ಶಕ್ತಿದೇವಿ ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ ಅರಂಭಗೊಂಡಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ದೇಗುಲದ ಬಾಗಿಲು ತೆರೆಯೋಕೆ ಸಕಲ ತಯಾರಿ ನಡೆದಿದೆ. ಆದ್ರೆ ಜನಸಾಮಾನ್ಯರಿಗೆ ಮಾತ್ರ ದರ್ಶನ ಭಾಗ್ಯಯಿಲ್ಲದಂತಾಗಿದೆ. ಹಾಸನಾಂಬೆ.. ಸಂಕಷ್ಟ ಪರಿಹರಿಸೋ ಶಕ್ತಿದೇವತೆ.. ಬೇಡಿದ ವರವನ್ನ ಕೊಡೋ ಕರುಣಾಮಯಿ.. ಸದಾ ತನ್ನ ಭಕ್ತರಿಗೆ ಶಾಂತಿ ಕರುಣಿಸೋ ಶಾಂತರೂಪಿಣಿ.. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇವಿ. ವಾಡಿಕೆಯಂತೆ …

Read More »

ಇಡೀ ಜಗತ್ತೇ ಕಾತುರದಿಂದ ಕಾಯುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಿದ್ದಿಲ್ಲ. ತಾಂತ್ರಿಕ ಕಾರಣಗಳಿಂದಾಗಿ 5-6 ರಾಜ್ಯಗಳ ಫಲಿತಾಂಶ ವಿಳಂಬವಾಗಿದೆ.

ಇಡೀ ಜಗತ್ತೇ ಕಾತುರದಿಂದ ಕಾಯುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಿದ್ದಿಲ್ಲ. ತಾಂತ್ರಿಕ ಕಾರಣಗಳಿಂದಾಗಿ 5-6 ರಾಜ್ಯಗಳ ಫಲಿತಾಂಶ ವಿಳಂಬವಾಗಿದೆ. ಈ ಮಧ್ಯೆ ಟ್ರಂಪ್, ಬೈಡನ್ ಹಾಗೂ ಡೆಮಾಕ್ರಟಿಕ್ ಪಕ್ಷದ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಅಧ್ಯಕ್ಷೀಯ ಚುನಾವಣೆಯಲ್ಲಿ ಸಂಚಲನ ಸೃಷ್ಟಿಮಾಡಿದೆ. ಜಗದ ಪಾಲಿನ ದೊಡ್ಡಣ್ಣ, ಪವರ್ ಫುಲ್ ರಾಷ್ಟ್ರ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಕಳೆಗಟ್ಟಿದೆ. ಈಗಾಗ್ಲೇ ಮತದಾನ ಮುಗಿಸಿ, ಮೊದಲ ಸುತ್ತಿನ ಫಲಿತಾಂಶವನ್ನೂ ಪಡೆದಿರುವ ಅಮೆರಿಕದಲ್ಲಿ ಯಾರು …

Read More »

ಆಂಟಿ ಎಂದು ಕರೆದ ಹುಡಿಗಿಗೆ ಗೂಸಾ ಕೊಟ್ಟ ಮಹಿಳೆ

ಲಕ್ನೋ: ಶಾಪಿಂಗ್ ಮಾಡುವ ವೇಳೆ ಆಂಟಿ ಎಂದು ಕರೆದಿದ್ದ ಹುಡುಗಿಗೆ ಮಹಿಳೆ ಹೊಡೆದಿರುವ ಘಟನೆ ಉತ್ತರ ಪ್ರದೇಶದ ಇತಾನ ಬಾಬುಗಂಜ್ ಮಾರುಕಟ್ಟೆಯಲ್ಲಿ ನಡೆದಿದೆ. ಇತಾನ ಬಾಬುಗಂಜ್ ಮಾರುಕಟ್ಟೆಯಲ್ಲಿ 40 ವರ್ಷದ ಮಹಿಳೆ ತನ್ನ ಗೆಳತಿಯರೊಂದಿಗೆ ಶಾಪಿಂಗ್ ಮಾಡುತ್ತಿದ್ದಳು. ಈ ವೇಳೆ ಅಲ್ಲಿಯೆ ಶಾಪಿಂಗ್ ಮಾಡುತ್ತಿದ್ದ ಹುಡುಗಿ ಆಂಟಿ ಎಂದು ಕರೆದಿದ್ದಾಳೆ ಇದರಿಂದ ಕೋಪಗೊಂಡಿರುವ ಮಹಿಳೆ ಹುಡುಗಿಗೆ ಹಿಗ್ಗಾಮುಗ್ಗ ಥಳಿಸಿದ್ದಾಳೆ. ಹುಡುಗಿ ಆಂಟಿ ಎಂದು ಕರೆದ ನಂತರ ಮಹಿಳೆ ಮತ್ತು ಆಕೆಯ …

Read More »