ರಾಮನಗರ: ಇಲ್ಲೊಂದು ಇಂಟರ್ ನೆಟ್ ಗ್ರಾಮವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಾಲವನ್ನು ಹೆಚ್ಚಿಸುವುದನ್ನು ಉತ್ತೇಜಿಸಲು, ಮಾತೃಭೂಮಿ ಸೇವಾ ಫೌಂಡೇಶನ್ ಸಂಸ್ಥೆಯಿಂದ ಈ ಸೇವೆ ಕಲ್ಪಿಸಲಾಗಿದೆ. ಯೂತ್ ಬ್ರಾಂಡ್ ಬ್ಯಾಂಡ್ ಸಹಯೋಗದಲ್ಲಿ ಈ ಗ್ರಾಮಕ್ಕೆ ಇಂಟರ್ನೆಟ್ ಸಂಪರ್ಕ ಕಲ್ಪಿಸಿ ಉಚಿತ ವೈಫೈ ನೀಡಲಾಗಿದೆ. ಇದರಿಂದ ಆನ್‍ಲೈನ್ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು, ಇದು ರಾಜ್ಯದಲ್ಲಿಯೇ ಮೊದಲ ಪ್ರಯೋಗವಾಗಿದೆ. ಹೌದು. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಚಿಕ್ಕೇನಹಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿಗಳ ಆನ್‍ಲೈನ್ ಕ್ಲಾಸ್ ಗೆ ಸಹಾಯವಾಗಲೆಂದು …
Read More »ಶಿರಾ ಹಾಗೂ ಆರ್‍ಆರ್‍ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ:b.s.y.
ಶಿವಮೊಗ್ಗ: ಶಿರಾ ಹಾಗೂ ಆರ್‍ಆರ್‍ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಪ್ರಚಾರದ ವೇಳೆಯಲ್ಲಿಯೇ ಹೇಳಿದ್ದೆ, ಎರಡು ಕ್ಷೇತ್ರದಲ್ಲಿ ನಮ್ಮ ಪಕ್ಷ ಗೆಲುತ್ತದೆ ಎಂದು ಚುನಾವಣೋತ್ತರ ಸಮೀಕ್ಷೆ ಸಹ ಹೇಳಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರಚಾರದ ವೇಳೆ ಕಾಂಗ್ರೆಸ್ ನವರು ನಮ್ಮ ಪಕ್ಷದ ಬಗ್ಗೆ ವಿನಾಃ ಕಾರಣ ಟೀಕೆ ಮಾಡುತ್ತಿದ್ದರು. ಶಿರಾದಲ್ಲಿ ಬಿಜೆಪಿ …
Read More »ನ.18 ರಂದು ಬೆಳಗಾವಿಯಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಅದ್ಧೂರಿಯಾಗಿ ಆಚರಿಸಲಾಗುವುದು: ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ : ನ.18 ರಂದು ಬೆಳಗಾವಿಯಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ನಗರದ ಮಹಾಂತೇಶ ನಗರದಲ್ಲಿರುವ ಬೆಳಗಾವಿ ಹಾಲು ಒಕ್ಕೂಟದ ಕಾರ್ಯಾಲಯದಲ್ಲಿ ಶನಿವಾರದಂದು ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ನ. 18 ರಂದು ನಡೆಯಲಿರುವ ಸಹಕಾರ ಸಪ್ತಾಹ ಕಾರ್ಯಕ್ರಮದ ನೇತೃತ್ವವನ್ನು ಕೆಎಂಎಫ್ ವಹಿಸಿಕೊಳ್ಳಲಿದ್ದು, ಬೆಳಗಾವಿ ಹಾಲು ಒಕ್ಕೂಟ, ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಿ, ಬೆಳಗಾವಿ …
Read More »ಸಿಬಿಐ ತನಿಖೆಯಿಂದ ಕಾಂಗ್ರೆಸ್ ನ್ನು ಹೆದರಿಸಲು ಸಾಧ್ಯವಿಲ್ಲ: ರಣದೀಪ್
ಬೆಂಗಳೂರು, ನ.7- ಬಿಜೆಪಿ ಸರ್ಕಾರವು ಸಿಬಿಐ ಅನ್ನು ತನ್ನ ಕೈಗೊಂಬೆಯಾಗಿ ಮಾಡಿಕೊಂಡು ಕಾಂಗ್ರೆಸ್ ನಾಯಕರಾದ ವಿನಯ ಕುಲಕರ್ಣಿ ಅವರನ್ನು ಬಂಧಿಸಿರುವುದು ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿಯ ರಾಜಕೀಯ ಪಿತೂರಿಯನ್ನು ಎತ್ತಿ ತೋರಿಸುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆಕ್ರೋಶ ವ್ಯಕ್ತ ಪಡಿಸಿದರು. ಈ ಕುರಿತು ಟ್ವಿಟ್ ಮಾಡಿರುವ ಅವರು, ಕಾಂಗ್ರೆಸ್ ನಾಯಕರು ಇಂತಹ ಬೆದರಿಕೆ ತಂತ್ರಗಳಿಗೆ ಎಂದಿಗೂ ಜಗ್ಗುವುದಿಲ್ಲ ಎಂಬುದನ್ನು ಯಡಿಯೂರಪ್ಪನವರು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ. ಅಸ್ಥಿರ …
Read More »ಮತ್ತೆ ಒಂದಾದ ಸಲ್ಮಾನ್-ಶಾರುಖ್
ಮುಂಬೈ, – ಜೀರೋ ಚಿತ್ರದ ನಂತರ ಎರಡು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಬಾಲಿವುಡ್‍ನ ಬಾದ್‍ಷಾ ಶಾರುಖ್‍ಖಾನ್ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದು ಸಲ್ಮಾನ್‍ಖಾನ್ ಕೂಡ ಆ ಚಿತ್ರದಲ್ಲಿ ನಟಿಸುತ್ತಿರುವುದರಿಂದ ಚಿತ್ರದ ಬಗ್ಗೆ ಸಾಕಷ್ಟು ಕ್ರೇಜ್ ಹುಟ್ಟಿದೆ. ಶಾರುಕ್ ಹಾಗೂ ಸಲ್ಮಾನ್ ನಡುವೆ ಆಗಾಗ್ಗೆ ವಿವಾದಗಳಿ ದ್ದರೂ ಕೂಡ ಅವರಿಬ್ಬರಲ್ಲಿ ಉತ್ತಮ ಗೆಳೆತನವಿರುವುದರಿಂದ ಹಲವು ಚಿತ್ರಗಳಲ್ಲಿ ಒಂದಾಗಿ ನಟಿಸಿದ್ದು ಬಹುತೇಕ ಚಿತ್ರಗಳು ಯಶಸ್ವಿಯಾಗಿದೆ. ಶಾರುಖ್‍ಖಾನ್ ಈಗ ಗೆಲುವಿನ ಅವಶ್ಯಕತೆಯಿರುವುದರಿಂದ …
Read More »ಜಮೀರ್ ಅಹ್ಮದ್, ಸೌಮ್ಯ ರೆಡ್ಡಿಗೆ ರಾಜ್ಯ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್
ಬೆಂಗಳೂರು : ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕರಾದ ಜಮೀರ್ ಅಹ್ಮದ್, ಸೌಮ್ಯ ರೆಡ್ಡಿಗೆ ರಾಜ್ಯ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್, ಸಿದ್ದರಾಮಯ್ಯ ಮುಂದಿನ ಸಿಎಂ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲವೆಂದು ಹೇಳಿಕೆ ನೀಡಿದ್ದರು. ಜಯನಗರ ಶಾಸಕಿ ಸೌಮ್ಯ ರೆಡ್ಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಗೆಲ್ಲಿಸಿದರೆ, ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಲಿದ್ದಾರೆ ಎಂದು ಹೇಳಿದ್ದರು. ಈ ವಿಚಾರವಾಗಿ ಮಾಧ್ಯಮದಲ್ಲಿ …
Read More »(ಆರ್ ಎಸ್ ಎಸ್) , ಬಿಜೆಪಿ ಪಕ್ಷ ತತ್ವ ಸಿದ್ದಾಂತಗಳು ಮುಸ್ಲೀಂ ವಿರೋಧಿಯಲ್ಲ:ಸಚಿವ ರಮೇಶ ಜಾರಕಿಹೊಳಿ
ಗೋಕಾಕ : ರಾಷ್ತ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್) , ಬಿಜೆಪಿ ಪಕ್ಷ ತತ್ವ ಸಿದ್ದಾಂತಗಳು ಮುಸ್ಲೀಂ ವಿರೋಧಿಯಲ್ಲ, ದೇಶಕ್ಕೆ ದ್ರೋಹ ಬಗೆಯುವವರಿಗೆ ಮಾತ್ರ ನಮ್ಮ ಪಕ್ಷ ವಿರೋಧ ಮಾಡುತ್ತದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ನಗರದ ಸಮುದಾಯ ಭವನದಲ್ಲಿ ಭಾರತೀಯ ಜನತಾ ಪಾರ್ಟಿ ಗೋಕಾಕ್ ಗ್ರಾಮೀಣ ಮಂಡಲದಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಕಾರ್ಯಕರ್ತರ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿ ಸೇರ್ಪಡೆಗೊಂಡ ವೇಳೆ ಕಾಂಗ್ರೆಸ್ …
Read More »ಮಹಾದೇವ ಸಾಹುಕಾರ್ ಮೇಲೆ ಗುಂಡಿನ ದಾಳಿ ಪ್ರಕರಣ- ಮತ್ತೆ ಐವರ ಬಂಧನ
ವಿಜಯಪುರ: ಭೀಮಾತೀರದ ಹಂತಕ ಮಹಾದೇವ ಸಾಹುಕಾರ್ ಮೇಲಿನ ಫೈರಿಂಗ್ ಪ್ರಕರಣದಲ್ಲಿ ಮತ್ತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಎಸ್‍ಪಿ ಅನುಪಮ್ ಅಗರವಾಲ್ ಅವರು, ವಿಜಯಪುರದ ಅತಾಲಟ್ಟಿ ಗ್ರಾಮದ ಯಾಶೀನ್ ದಂದರಗಿ (25), ಗೂಳಿ ಸೊನ್ನದ (25), ಸಿದ್ದರಾಯ ಬೊಮ್ಮನಜೋಗಿ (34), ಅಲಿಯಾಬಾದ ಗ್ರಾಮದ ಸಚಿನ ಮಾನವರ (28) ಹಾಗೂ ಚಡಚಣದ ರವಿ ಬಂಡಿ (20) ಬಂಧಿತ ಆರೋಪಿಗಳಾಗಿದ್ದಾರೆ ಎಂದರು.ಮಹಾದೇವ ಸಾಹುಕಾರ್ ಹತ್ಯೆಯ …
Read More »ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 65 ಮಹನೀಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರು, ನ.7- ಕನ್ನಡ ಭಾಷೆ ಹೆತ್ತ ತಾಯಿಗೆ ಸಮ. ಹೀಗಾಗಿ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೆ ಪುನರುಚ್ಚರಿಸಿದ್ದಾರೆ. ಹೆತ್ತ ತಾಯಿಗೆ ಏನೆಲ್ಲಾ ಸಲ್ಲಬೇಕೋ ಅದು ನಮ್ಮ ಭಾಷೆ ಹಾಗೂ ಹುಟ್ಟಿದ ಊರಿಗೂ ಸಲ್ಲಬೇಕು. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ. ಈ ಬಗ್ಗೆ ಯಾರಿಗೂ ಯಾವ ರೀತಿಯ ಸಂಶಯ ಬೇಡ ಎಂದು ಸ್ಪಷ್ಟಪಡಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆವತಿಯಿಂದ ರವೀಂದ್ರಕಲಾಕ್ಷೇತ್ರದಲ್ಲಿ ನಡೆದ 2020ನೇ ಸಾಲಿನ ಕನ್ನಡ …
Read More »ವಡೇರಹಟ್ಟಿಯ ಇಬ್ಬರು ಬಾಲಕರಿಗೆ ಕೆ.ತ್ಯಾಗರಾಜನ್ ಶುಕ್ರವಾರ ಸನ್ಮಾನ
ಬೆಳಗಾವಿ : ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನನ್ನು ರಕ್ಷಿಸಿದ್ದ ಗೋಕಾಕ ತಾಲ್ಲೂಕಿನ ವಡೇರಹಟ್ಟಿಯ ಇಬ್ಬರು ಬಾಲಕರಿಗೆ ಇಲ್ಲಿನ ಪೊಲೀಸ್ ಆಯುಕ್ತರ ಕಾರ್ಯಾಲಯದಲ್ಲಿ ಕೆ.ತ್ಯಾಗರಾಜನ್ ಶುಕ್ರವಾರ ಸನ್ಮಾನಿಸಿ, ಕೇಂದ್ರ ಗೃಹ ಸಚಿವಾಲಯದಿಂದ ಕೊಡ ಮಾಡಿದ ಜೀವನ ರಕ್ಷಾ ಪದಕ ವಿತರಿಸಿದರು. ವಡ್ಡೇರಹಟ್ಟಿಯ ಸಿದ್ದಪ್ಪ ಕೆಂಪಣ್ಣ ಹೊಸಟ್ಟಿ, ಶಿವಾನಂದ ದಶರಥ ಹೊಸಟ್ಟಿ ಬಾಲಕರಿಗೆ 1 ಲಕ್ಷ ಚೆಕ್ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಿದರು. 2018ರ ಮೇ 8ರಂದು ಗೋಕಾಕ ತಾಲ್ಲೂಕಿನ ವಡೇರಹಟ್ಟಿ …
Read More »