Breaking News

Uncategorized

ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಏಕಾಏಕಿ ಚಿರತೆ ದಾಳಿ

ಕೊಪ್ಪಳ: ಚಿರತೆ ದಾಳಿಗೆ ಯುವಕನೋರ್ವ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ವ್ಯಾಪ್ತಿಯಲ್ಲಿ ಬರುವ ದುರ್ಗಾದೇವಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಹುಲಗೇಶ್ ಚಿರತೆಗೆ ಬಲಿಯಾದ ಯುವಕನಾಗಿದ್ದಾನೆ. ಮೃತ ಹುಲಗೇಶ್ ದುರ್ಗಾದೇವಿ ದೇವಸ್ಥಾನದಲ್ಲಿ ಹಲವಾರು ವರ್ಷಗಳಿಂದ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ. ಎಂದಿನಂತೆ ಬುಧವಾರ ಸಹ ದೇವಸ್ಥಾನದ ಕೆಲಸ ಕಾರ್ಯಗಳನ್ನ ಮುಗಿಸಿ ರಾತ್ರಿ ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಏಕಾಏಕಿ ಚಿರತೆ ದಾಳಿ ಮಾಡಿದೆ. …

Read More »

ರಿಪಬ್ಲಿಕ್ ಟಿವಿ ಸ್ಥಾಪಕ ಮತ್ತು ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯನ್ನ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ

ಮುಂಬೈ: ರಿಪಬ್ಲಿಕ್ ಟಿವಿ ಸ್ಥಾಪಕ ಮತ್ತು ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯನ್ನ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. 2018ರಲ್ಲಿ ಇಂಟೀರಿಯರ್ ಡಿಸೈನರ್ ಒಬ್ಬರು ತಮ್ಮ ತಾಯಿಯ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ರು. ಅವರ ಡೆತ್​ನೋಟ್​ನಲ್ಲಿ ಅರ್ನಬ್ ಗೋಸ್ವಾಮಿ ಸೇರಿ ಹಲವರು ಹಣ ಕೊಡಬೇಕಿತ್ತು. ಈ ಹಣ ವಸೂಲಿಯಾಗದ ಕಾರಣಕ್ಕೆ ತಾನು ಆತ್ಮಹತ್ಯೆ ಮಾಡಿಕೊಳ್ತಿದ್ದೇನೆ ಅಂತಾ ಬರೆದಿಟ್ಟಿದ್ರು. ಈ ಪ್ರಕರಣದ ವಿಚಾರಣೆಗಾಗಿ ನಿನ್ನೆ ಮುಂಬೈ ಪೊಲೀಸರು ಅರ್ನಬ್ ಗೋಸ್ವಾಮಿಯನ್ನ ವಶಕ್ಕೆ …

Read More »

ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸೋ ಹಾಸನದ ಗ್ರಾಮದೇವತೆ, ಶಕ್ತಿದೇವಿ ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ ಅರಂಭಗೊಂಡಿದೆ.

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸೋ ಹಾಸನದ ಗ್ರಾಮದೇವತೆ, ಶಕ್ತಿದೇವಿ ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ ಅರಂಭಗೊಂಡಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ದೇಗುಲದ ಬಾಗಿಲು ತೆರೆಯೋಕೆ ಸಕಲ ತಯಾರಿ ನಡೆದಿದೆ. ಆದ್ರೆ ಜನಸಾಮಾನ್ಯರಿಗೆ ಮಾತ್ರ ದರ್ಶನ ಭಾಗ್ಯಯಿಲ್ಲದಂತಾಗಿದೆ. ಹಾಸನಾಂಬೆ.. ಸಂಕಷ್ಟ ಪರಿಹರಿಸೋ ಶಕ್ತಿದೇವತೆ.. ಬೇಡಿದ ವರವನ್ನ ಕೊಡೋ ಕರುಣಾಮಯಿ.. ಸದಾ ತನ್ನ ಭಕ್ತರಿಗೆ ಶಾಂತಿ ಕರುಣಿಸೋ ಶಾಂತರೂಪಿಣಿ.. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇವಿ. ವಾಡಿಕೆಯಂತೆ …

Read More »

ಇಡೀ ಜಗತ್ತೇ ಕಾತುರದಿಂದ ಕಾಯುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಿದ್ದಿಲ್ಲ. ತಾಂತ್ರಿಕ ಕಾರಣಗಳಿಂದಾಗಿ 5-6 ರಾಜ್ಯಗಳ ಫಲಿತಾಂಶ ವಿಳಂಬವಾಗಿದೆ.

ಇಡೀ ಜಗತ್ತೇ ಕಾತುರದಿಂದ ಕಾಯುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಿದ್ದಿಲ್ಲ. ತಾಂತ್ರಿಕ ಕಾರಣಗಳಿಂದಾಗಿ 5-6 ರಾಜ್ಯಗಳ ಫಲಿತಾಂಶ ವಿಳಂಬವಾಗಿದೆ. ಈ ಮಧ್ಯೆ ಟ್ರಂಪ್, ಬೈಡನ್ ಹಾಗೂ ಡೆಮಾಕ್ರಟಿಕ್ ಪಕ್ಷದ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಅಧ್ಯಕ್ಷೀಯ ಚುನಾವಣೆಯಲ್ಲಿ ಸಂಚಲನ ಸೃಷ್ಟಿಮಾಡಿದೆ. ಜಗದ ಪಾಲಿನ ದೊಡ್ಡಣ್ಣ, ಪವರ್ ಫುಲ್ ರಾಷ್ಟ್ರ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಕಳೆಗಟ್ಟಿದೆ. ಈಗಾಗ್ಲೇ ಮತದಾನ ಮುಗಿಸಿ, ಮೊದಲ ಸುತ್ತಿನ ಫಲಿತಾಂಶವನ್ನೂ ಪಡೆದಿರುವ ಅಮೆರಿಕದಲ್ಲಿ ಯಾರು …

Read More »

ಆಂಟಿ ಎಂದು ಕರೆದ ಹುಡಿಗಿಗೆ ಗೂಸಾ ಕೊಟ್ಟ ಮಹಿಳೆ

ಲಕ್ನೋ: ಶಾಪಿಂಗ್ ಮಾಡುವ ವೇಳೆ ಆಂಟಿ ಎಂದು ಕರೆದಿದ್ದ ಹುಡುಗಿಗೆ ಮಹಿಳೆ ಹೊಡೆದಿರುವ ಘಟನೆ ಉತ್ತರ ಪ್ರದೇಶದ ಇತಾನ ಬಾಬುಗಂಜ್ ಮಾರುಕಟ್ಟೆಯಲ್ಲಿ ನಡೆದಿದೆ. ಇತಾನ ಬಾಬುಗಂಜ್ ಮಾರುಕಟ್ಟೆಯಲ್ಲಿ 40 ವರ್ಷದ ಮಹಿಳೆ ತನ್ನ ಗೆಳತಿಯರೊಂದಿಗೆ ಶಾಪಿಂಗ್ ಮಾಡುತ್ತಿದ್ದಳು. ಈ ವೇಳೆ ಅಲ್ಲಿಯೆ ಶಾಪಿಂಗ್ ಮಾಡುತ್ತಿದ್ದ ಹುಡುಗಿ ಆಂಟಿ ಎಂದು ಕರೆದಿದ್ದಾಳೆ ಇದರಿಂದ ಕೋಪಗೊಂಡಿರುವ ಮಹಿಳೆ ಹುಡುಗಿಗೆ ಹಿಗ್ಗಾಮುಗ್ಗ ಥಳಿಸಿದ್ದಾಳೆ. ಹುಡುಗಿ ಆಂಟಿ ಎಂದು ಕರೆದ ನಂತರ ಮಹಿಳೆ ಮತ್ತು ಆಕೆಯ …

Read More »

( ಕರವೇ)ಸಂಘಟನೆಗೆ ಚಾಲನೆ ನೀಡಿದ ರಾಹುಲ್ ಜಾರಕಿಹೊಳಿ

ಯಮಕನಮರಡಿ:  ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಪಾಶ್ಚಾಪೂರ ಗ್ರಾಮದಲ್ಲಿ  ನೂತನವಾಗಿ ರಚನೆಯಾದ ಕರ್ನಾಟಕ ರಕ್ಷಣಾ ವೇದಿಕೆ( ಕರವೇ) ನಾರಾಯಣಗೌಡ ಬಣ ಸಂಘಟನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಪುತ್ರ, ಯುವ ನಾಯಕ  ರಾಹುಲ್ ಜಾರಕಿಹೊಳಿ ಬುಧವಾರ ಚಾಲನೆ ನೀಡಿದರು. ಪಾಶ್ಚಾಪೂರ ಗ್ರಾಮದಲ್ಲಿನ ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗೌರವ ಅರ್ಪಿಸಿದರು.  ಸಮಾಜದ ಒಳಿತಿಗಾಗಿ  ಕರ್ನಾಟಕ ರಕ್ಷಣಾ ವೇದಿಕೆ ನಿರಂತರವಾಗಿ  ಶ್ರಮಿಸುತ್ತಿದೆ ಎಂದು ರಾಹುಲ್ ಜಾರಕಿಹೊಳಿ ಬಣ್ಣಿಸಿದರು. ಇದೇ …

Read More »

ಮತದಾನ ಮುಗೀತು, ಶುರುವಾಯ್ತು ಸೋಲು-ಗೆಲುವಿನ ಲೆಕ್ಕಾಚಾರ

ಬೆಂಗಳೂರು,ನ.4- ಜಿದ್ದಾಜಿದ್ದಿನ ಕಣವಾಗಿದ್ದ ಶಿರಾ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಶಾಂತಿಯುತವಾಗೇನೋ ಮುಗಿದಿದೆ. ಚಳಿ, ಮಳೆ, ಬಿಸಿಲನ್ನೂ ಲೆಕ್ಕಿಸದೇ ಮತ ಬೇಟೆಯಲ್ಲಿ ತೊಡಗಿದ್ದ ಅಭ್ಯರ್ಥಿಗಳು ಈಗ ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇದೀಗ ಅಭ್ಯರ್ಥಿಗಳ ಪರ ಬಾಜಿದಾರರು ಸೋಲು-ಗೆಲುವಿನ ಲೆಕ್ಕಾಹಾಕುತ್ತಿದ್ದು, ಬೆಟ್ಟಿಂಗ್ ಸಮರ ಜೋರಾಗಿ ಸದ್ದು ಮಾಡುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಮತದಾನ ಕಡಿಮೆಯಾಗಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿರುವುದರಿಂದ ತಮಗೆ ಲಾಭವಾಗಬಹುದು ಎಂಬುದು ಎಲ್ಲಾ ರಾಜಕೀಯ …

Read More »

ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಮೂವರು ಕಾಮುಕರು 30 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದಾರೆ.

ನವದೆಹಲಿ: ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಮೂವರು ಕಾಮುಕರು 30 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದಾರೆ. ವಾಯವ್ಯ ದೆಹಲಿಯ ರೋಹಿಣಿ ಪ್ರದೇಶದಲ್ಲಿರುವ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಮೂವರು ಆರೋಪಿಗಳನ್ನು ಸಹ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಹಾಗೂ ಮಾಜಿ ಬೌನ್ಸರ್‍ಗಳು ಸೇರಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಕನ್ವರ್ ಪಾಲ್(32), ಬೌನ್ಸರ್‍ಗಳಾದ ಮನೀಶ್(22) ಹಾಗೂ ಪ್ರವೀಣ್ ತಿವಾರಿ(24) ಎಂದು …

Read More »

ಹಾಸನದಲ್ಲಿ ಮತ್ತೆ ಗುಂಡಿನ ಸದ್ದು- ರೌಡಿ ಶೀಟರ್ ಸುನೀಲ್ ಮೇಲೆ ಫೈರಿಂಗ್

ಹಾಸನ: ಜಿಲ್ಲೆಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದ್ದು, ರೌಡಿ ಶೀಟರ್ ಮೇಲೆ ಫೈರಿಂಗ್ ಮಾಡಿ ಪೊಲೀಸರು ಬಂಧಿಸಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೂವರು ಯುವಕರ ಮೇಲೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿ ಸುನೀಲ್ ಹಾಸನ ಗ್ರಾಮಾಂತರ ಪಿಎಸ್‍ಐ ಸುರೇಶ್‍ಗೆ ಚೂರಿ ಇರಿದಿದ್ದಾನೆ. ನಂತರ ಹೆದರಿಸಿ, ಪರಿಸ್ಥಿತಿ ನಿಯಂತ್ರಿಸಲು ಸಿಪಿಐ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಏರ್ ಫೈರ್ …

Read More »

2020 US election results Updates: ಬೈಡನ್‌ಗೆ 223, ಟ್ರಂಪ್‌ಗೆ 145 ಎಲೆಕ್ಟೋರಲ್ ಮತ:

2020 US election results Updates: ಬೈಡನ್‌ಗೆ 223, ಟ್ರಂಪ್‌ಗೆ 145 ಎಲೆಕ್ಟೋರಲ್ ಮತ: ಇನ್ನು ಈಗ USA ಅಧ್ಯಕ್ಷೀಯ ಚುನಾವಣೆ ತಾಜಾ ಫಲಿತಾಂಶ ಹೀಗಿದೆ. ಬೈಡನ್‌ -223, ಟ್ರಂಪ್ -145 ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ (USA) ನಡೆದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ‌ ಪ್ರಕ್ರಿಯೆ ಮುಂದುವರೆದಿದೆ. ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್​ಗೆ 223 ಮತ ಹಾಗೂ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್‌ಗೆ 145 ಮತಗಳು ಸಿಕ್ಕಿದ್ದು ಜೋ ಬಿಡೆನ್‌ …

Read More »