Breaking News

Uncategorized

ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ50 ಅಡಿ ಆಳಕ್ಕೆ ಬಿದ್ದಿದೆ.ಮಿನಿ ಬಸ್

ಮುಂಬೈ: ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮಿನಿ ಬಸ್ ಸೇತುವೆ ಮೇಲಿಂದ 50 ಅಡಿ ಆಳಕ್ಕೆ ಬಿದ್ದಿದೆ. ಇಂದು ಬೆಳಗ್ಗೆ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಂಬ್ರಜ್ ಬಳಿ ಅಪಘಾತ ನಡೆದಿದೆ, ಮೂವರು ಪುರುಷರು, ಓರ್ವ ಮಹಿಳೆ ಮತ್ತು ಮೂರು ವರ್ಷದ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ತಲುಪಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಬೆಳಗಿನ ಜಾವ …

Read More »

ಮನೆಯ ಚಾವಣಿಯ ಮೇಲೆ 2 ಬ್ಯಾಗ್ ತುಂಬಾ ಕಂತೆ ಕಂತೆ ಹಣ

ಲಕ್ನೋ: ಅಚ್ಚರಿಯ ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಮೀರತ್ ನಿವಾಸಿಯಾಗಿರುವ ವರುಣ್ ಶರ್ಮಾ ಮನೆಯ ಚಾವಣಿಯ ಮೇಲೆ 2 ಬ್ಯಾಗ್ ತುಂಬಾ ಕಂತೆ ಕಂತೆ ಹಣ ಸಿಕ್ಕಿದ್ದು, ಕುಟುಂಬಸ್ಥರಿಗೆ ಅನಿರೀಕ್ಷಿತ ಅಚ್ಚರಿ ಮೂಡಿಸಿತ್ತು. ಕೂಡಲೇ ಎಚ್ಚೆತ್ತ ವರುಣ್ ಪೊಲೀಸರಿಗೆ ಹಣ ಸಿಕ್ಕ ಬಗ್ಗೆ ಮಾಹಿತಿ ನೀಡಿದ್ದ ಮನೆಯ ಚಾವಣಿ ಮೇಲೆ ಸಿಕ್ಕ ಬ್ಯಾಗ್‍ನಲ್ಲಿ 40 ಲಕ್ಷ ರೂ. ಹಣ ಇರುವುದನ್ನು ಪೊಲೀಸರು ಖಚಿತಪಡಿಸಿದ್ದು, ಚಿನ್ನಾಭರಣದ ಮೌಲ್ಯಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ …

Read More »

ಮನಬಂದಂತೆ ಮಾರ್ಕೆಟಿಂಗ್… ಮಾರ್ಷಲ್‍ಗಳು ಕೂಡ ಕೇಳಲಿಲ್ಲ… ಜನರು ಕೂಡ ಕೊರೊನಾಗೆ ಕ್ಯಾರೆ ಎನ್ನಲಿಲ್ಲ

ಬೆಂಗಳೂರು, ನ.14- ಮಾಸ್ಕ್ ಇಲ್ಲ… ಸಾಮಾಜಿಕ ಅಂತರ ಇಲ್ಲ… ಮನಬಂದಂತೆ ಮಾರ್ಕೆಟಿಂಗ್… ಮಾರ್ಷಲ್‍ಗಳು ಕೂಡ ಕೇಳಲಿಲ್ಲ… ಜನರು ಕೂಡ ಕೊರೊನಾಗೆ ಕ್ಯಾರೆ ಎನ್ನಲಿಲ್ಲ… ನಗರದ ಕೆಆರ್ ಮಾರುಕಟ್ಟೆ, ಶಿವಾಜಿನಗರ, ಮಲ್ಲೇಶ್ವರಂ, ಯಶವಂತಪುರ ಮುಂತಾದೆಡೆ ಹಬ್ಬದ ಸಾಮಾನುಗಳನ್ನು ಖರೀದಿಸಲು ಜನ ಮುಗಿಬಿದ್ದಿದ್ದರು. ಹೂವು, ಹಣ್ಣು, ಬಾಳೆಕಂದು, ದೀಪ, ಹೊಸ ಬಟ್ಟೆಗಳನ್ನು ಖರೀದಿಸಲು ಜನ ನಾ ಮುಂದು ತಾ ಮುಂದು ಎಂದು ಮಾರುಕಟ್ಟೆಗಳು, ಅಂಗಡಿಗಳು, ಶಾಪ್‍ಗಳಿಗೆ ಲಗ್ಗೆ ಇಟ್ಟರು. ಕೊರೊನಾ ನಿಯಂತ್ರಣಕ್ಕಾಗಿ ಅನುಸರಿಸಬೇಕಾದ …

Read More »

2019-20 ರ ಬಜೆಟ್ ನಲ್ಲಿ ಘೋಷಿಸಿದ್ದಂತೆ  ರಾಜ್ಯದ ವಿವಿಧ ಮಠ-ಮಂದಿರ, ದೇವಾಲಯ ಟ್ರಸ್ಟ್ ಧಾರ್ಮಿಕ ಸಂಸ್ಥೆಗಳಿಗೆ ರಾಜ್ಯ ಸರ್ಕಾರದಿಂದ 88.75 ಕೋಟಿ ರೂಪಾಯಿ ಅನುದಾನ ಬಿಡುಗಡೆ

ಬೆಂಗಳೂರು: 2019-20 ರ ಬಜೆಟ್ ನಲ್ಲಿ ಘೋಷಿಸಿದ್ದಂತೆ  ರಾಜ್ಯದ ವಿವಿಧ ಮಠ-ಮಂದಿರ, ದೇವಾಲಯ ಟ್ರಸ್ಟ್ ಧಾರ್ಮಿಕ ಸಂಸ್ಥೆಗಳಿಗೆ ರಾಜ್ಯ ಸರ್ಕಾರದಿಂದ 88.75 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.  39 ಮಠಗಳಿಗೆ ತಲಾ 1ಕೋಟಿ ರೂ.,   143 ಮಠ, ಹಾಗೂ ದೇವಾಲಯಗಳ ಟ್ರಸ್ಟ್ ಗಳಿಗೆ 49.75 ಕೋಟಿ ಹಣ ನೀಡಲಾಗಿದೆ. 2019 -20 ಮತ್ತು 2020 – 21 ನೇ ಸಾಲಿನ ಬಜೆಟ್ ನಲ್ಲಿ ಮಠ-ಮಂದಿರ, ಧಾರ್ಮಿಕ ಸಂಸ್ಥೆಗಳಿಗೆ …

Read More »

ಉಡುಪಿಯಲ್ಲಿ ಸೌಂಡ್ ಮಾಡ್ತಿದೆ ಬಿದಿರು ಪಟಾಕಿ

ಉಡುಪಿ: ಕೊರೊನಾ ಕರಾಳತೆಯಿಂದ ಹೊರಬಂದು ದೀಪಾವಳಿಗೆ ಪಟಾಕಿ ಸಿಡಿಸೋಣ ಅಂತ ಜನ ಹಾಕಿದ್ದ ಲೆಕ್ಕಾಚಾರ ಉಲ್ಟಾ ಆಗಿದೆ. ರಾಜ್ಯ ಸರ್ಕಾರ ರಾಸಾಯನಿಕ ಪಟಾಕಿ ನಿಷೇಧ ಮಾಡಿ, ದುಷ್ಪರಿಣಾಮ ರಹಿತ ಪಟಾಕಿಗೆ ಮಣೆ ಹಾಕಿದೆ. ನಿಮ್ಮ ಪಟಾಕಿ ರಗಳೆಯೇ ಬೇಡ ಅಂತ ಉಡುಪಿಯ ಪರ್ಕಳ ಫ್ರೆಂಡ್ಸ್ ತಾವೇ ಪಟಾಕಿ ತಯಾರು ಮಾಡಲು ಮುಂದಾಗಿದ್ದಾರೆ. ಭೂಮಿ ಅದುರಿ ಬಾನು ಬಿರಿಯುವ ಪಟಾಕಿಗೆ ಈ ಬಾರಿ ಕೊರೊನಾ ಬ್ರೇಕ್ ಹಾಕಿದೆ. ಕಣ್ಣು ಬಿಡಲಾಗದ, ದಟ್ಟ …

Read More »

ಬೆಳಗಾವಿ ಡಿಸಿಸಿ ಬ್ಯಾಂಕ್  ಅಧ್ಯಕ್ಷ, ಉಪಾಧ್ಯಕ್ಷ ಗದ್ದುಗೆಯ ಹಗ್ಗ ಜಗ್ಗಾಟಕ್ಕೆ ಶನಿವಾರ ತೆರೆ

ಬೆಳಗಾವಿ: ಭಾರೀ ಕುತೂಹಲ ಮೂಡಿಸಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್  ಅಧ್ಯಕ್ಷ, ಉಪಾಧ್ಯಕ್ಷ ಗದ್ದುಗೆಯ ಹಗ್ಗ ಜಗ್ಗಾಟಕ್ಕೆ ಶನಿವಾರ ತೆರೆ ಬಿದ್ದಿದ್ದು, ಅಧ್ಯಕ್ಷ,ಉಪಾಧ್ಯಕ್ಷ ಹೆಸರುಗಳನ್ನು ಘೋಷಣೆ ಮಾಡಲಾಗಿದೆ. ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಬೆಳಿಗ್ಗೆ ಘಟಾನುಘಟಿ ಬಿಜೆಪಿ ನಾಯಕರು ನಡೆಸಿದ ಸಭೆಯಲ್ಲಿ ಅವಿರೋಧ ಆಯ್ಕೆ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ. ಇದರಿಂದ ರಮೇಶ ಕತ್ತಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಸುಭಾಷ್ ಢವಳೇಶ್ವರ ಅವರನ್ನು ಆಯ್ಕೆ ಮಾಡಿದ್ದಾರೆ. ಸಭೆ ಬಳಿಕ …

Read More »

ನಟಿ ಮಯೂರಿ ದೀಪಾವಳಿ ದಿನದಂದೇ ಗುಡ್ ನ್ಯೂಸ್ಬಹಿರಂಗ

ಬೆಂಗಳೂರು: ನಟಿ ಮಯೂರಿ ದೀಪಾವಳಿ ದಿನದಂದೇ ಗುಡ್ ನ್ಯೂಸ್ ಒಂದನ್ನು ಬಹಿರಂಗಪಡಿಸಿದ್ದಾರೆ. ಮದುವೆ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದ ಮಯೂರಿ, ಇದೀಗ ತಾನು ತಾಯಿಯಾಗುತ್ತಿರುವ ವಿಚಾರ ಕೂಡ ತಿಳಿಸಿದ್ದಾರೆ. ಈಗಾಗಲೇ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಕೊಂಡಿದ್ದು, ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಶುಭದಿನದಂದು ನಾವು ಪುಟ್ಟ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.ಇದೇ ವರ್ಷ ಜೂನ್ 12ರಂದು ತನ್ನ ಬಹುಕಾಲದ ಗೆಳೆಯ ಅರುಣ್ …

Read More »

ಗೆಳೆಯರಿಬ್ಬರ ಹಳೇ ವೈಷಮ್ಯ ಮುಖಕ್ಕೆ ಆ್ಯಸಿಡ್ ಅಂಶವಿರುವ ಕೆಮಿಕಲ್ ಎರಚುವ ಮಟ್ಟಕ್ಕೆ ತಲುಪಿ ಗಲಾಟೆ

ಕಾರವಾರ: ಕುಚುಕು ಗೆಳೆಯರಿಬ್ಬರಲ್ಲಿ ಗಣಪತಿ ವಿಸರ್ಜನೆ ವೇಳೆ ಉಂಟಾದ ಬಿನ್ನಾಭಿಪ್ರಾಯ ದೀಪಾವಳಿಯಲ್ಲಿ ಸಿಡಿದಿದೆ. ಗೆಳೆಯರಿಬ್ಬರ ಹಳೇ ವೈಷಮ್ಯ ಮುಖಕ್ಕೆ ಆ್ಯಸಿಡ್ ಅಂಶವಿರುವ ಕೆಮಿಕಲ್ ಎರಚುವ ಮಟ್ಟಕ್ಕೆ ತಲುಪಿ ಗಲಾಟೆಯಾಗಿದೆ. ಇಂದು ರಾತ್ರಿ ಕಾರವಾರದ ಗ್ರೀನ್ ಸ್ಟ್ರೀಟ್ ಬಳಿ ಈ ಘಟನೆ ನಡೆದಿದೆ. ಕಾರವಾರದ ಮಾಜಾಳಿಯ ಹರೀಶ್ ಮತ್ತು ನಿತೇಶ್ ನಾಯ್ಕ ಇಬ್ಬರೂ ಮೊದಲು ಸ್ನೇಹಿತರಾಗಿದ್ದರು. ಹಳೇ ದ್ವೇಷದ ಹಿನ್ನೆಲೆಯಲ್ಲಿ ನಿತೇಶ್ ನಾಯ್ಕಗೆ ಹರೀಶ್ ಗ್ರೀನ್ ಸ್ಟ್ರೀಟ್ ಬಳಿ ಆಸಿಡ್ ಅಂಶವಿರುವ …

Read More »

ಅದ್ಯಕ್ಷ ಉಪಾದ್ಯಕ್ಷರ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದ್ದು ಅದ್ಯಕ್ಷ ಉಪಾದ್ಯಕ್ಷರ ಹೆಸರುಗಳನ್ನು ಇವತ್ತೇ ರಾತ್ರಿ ಹತ್ತು ಗಂಟೆಗೆ ಡಿಕ್ಲೇರ್ ಮಾಡುತ್ತೇವೆ: ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ- ಬೆಳಗಾವಿ ಡಿಸಿಸಿ ಬ್ಯಾಂಕ್ ಅದ್ಯಕ್ಷ ಉಪಾದ್ಯಕ್ಷರ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದ್ದು ಅದ್ಯಕ್ಷ ಉಪಾದ್ಯಕ್ಷರ ಹೆಸರುಗಳನ್ನು ಇವತ್ತೇ ರಾತ್ರಿ ಹತ್ತು ಗಂಟೆಗೆ ಡಿಕ್ಲೇರ್ ಮಾಡುತ್ತೇವೆ ಎಂದು ಕೆಏಂಎಫ್ ಅದ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯ ಸಂಕಮ್ ಹೊಟೇಲ್ ನಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಅದ್ಯಕ್ಷ ಆಗಬೇಕೆನ್ನುವ ಆಕಾಂಕ್ಷೆ ಎಲ್ಲರಿಗೂ ಇರುತ್ತದೆ ಲಕ್ಷ್ಮಣ ಸವದಿ,ರಮೇಶ್ ಜಾರಕಿಹೊಳಿ,ಮತ್ತು ಉಮೇಶ್ ಕತ್ತಿ ಮತ್ತು ಇನ್ನುಳಿದ …

Read More »

ದೆಹಲಿಯಲ್ಲಾಗಿರುವ ಬೆಳವಣಿಗೆಗಳB.S.Y.ಗೆ ಮಾಹಿತಿ ನೀಡಿದಶಂಕರಗೌಡ ಪಾಟೀಲ್

ಬೆಳಗಾವಿ – ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ರಾಜ್ಯದ ಯೋಜನೆಗಳ ಕುರಿತು ದೆಹಲಿಯಲ್ಲಾಗಿರುವ ಬೆಳವಣಿಗೆಗಳ ಮಾಹಿತಿ ನೀಡಿದರು.             ಕಳೆದ ನಾಲ್ಕು ದಿನಗಳಿಂದ ದೆಹಲಿ ಪ್ರವಾಸದಲ್ಲಿದ್ದ ಅವರು, ಹಲವು ಕೇಂದ್ರದ ಮಂತ್ರಿಗಳ ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದ ಅಭಿವೃದ್ಧಿ ಹಾಗೂ ಯೋಜನೆಗಳ ಬಗ್ಗೆ ಚರ್ಚಿಸಿದ ನಂತರ ನಿನ್ನೆ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ರಾಜ್ಯದ …

Read More »