ಮೈಸೂರು : ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬೊಕ್ಕಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ಕಣಕ್ಕೆ ಇಳಿಸಿದರುವ ಭಿಕ್ಷುಕ ಅಂಕ ನಾಯಕ ಮತದಾನ ಮಾಡಿದರು. ಅಂಕ ನಾಯಕ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಗ್ರಾಮ ಪಂಚಾಯಿತಿ ಬ್ಲಾಕ್ ನಂ.1ರಲ್ಲಿ ಭಾನುವಾರ ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು, “ಗ್ರಾಮದ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಹೀಗಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ ಎಂಬ ವಿಶ್ವಾಸ ವಿದೆ” ಎಂದರು. ಈ ಹಿಂದೆ ಗ್ರಾಪಂ.ಸದಸ್ಯರು ಯಾವುದೇ ಮೂಲ ಸೌಕರ್ಯ …
Read More »ಎರಡನೇ ಹಂತದ ಚುನಾವಣೆ: 1789 ಮತಗಟ್ಟೆಗಳು ಚಿಕ್ಕೋಡಿ, ರಾಯಬಾಗಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭೇಟಿ
ಬೆಳಗಾವಿ: ಎರಡನೇ ಹಂತದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಯಲಿರುವ ಚಿಕ್ಕೋಡಿ ಮತ್ತು ರಾಯಬಾಗ ತಾಲ್ಲೂಕುಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಸ್ಟರಿಂಗ್, ಮತ ಎಣಿಕೆ ಕೇಂದ್ರ ಹಾಗೂ ಸ್ಟ್ರಾಂಗ್ ರೂಮ್ ಸೇರಿದಂತೆ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸಿದರು. ಎರಡೂ ತಾಲ್ಲೂಕುಗಳಿಗೆ ಶನಿವಾರ (ಡಿ.27) ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಮಸ್ಟರಿಂಗ್ ವ್ಯವಸ್ಥೆ ಮತ್ತು ಮತ ಎಣಿಕೆ ಕೇಂದ್ರಗಳನ್ನು ವೀಕ್ಷಿಸಿದರು. ಚುನಾವಣಾ ಪ್ರಕ್ರಿಯೆ ಸುಸೂತ್ರವಾಗಿ ನಡೆಯುವಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. …
Read More »KSRTC ಸಹಾಯವಾಣಿ ಸಂಖ್ಯೆ ಬದಲಾವಣೆ
ಬೆಂಗಳೂರು, – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಯಾಣಿಕರ ಪ್ರಯಾಣ ಸುಗಮಗೊಳಿಸಲು ಸಹಾಯವಾಣಿ ವ್ಯವಸ್ಥೆ ಒದಗಿಸುತ್ತಿದೆ. ನಿಗಮವು ಪ್ರಯಾಣಿಕರಿಗಾಗಿ ಒದಗಿಸಿರುವ ಕಾಲ್ ಸೆಂಟರ್ ಸಹಾಯವಾಣಿ ಸಂಖ್ಯೆ: 9449596666 ಬದಲಾಯಿಸಿ, ನೂತನ ಸಹಾಯವಾಣಿ ಸಂಖ್ಯೆ: 080-26252625ನ್ನು ಜ.1ರರಿಂದ ಜಾರಿಗೊಳಿಸಲು ತೀರ್ಮಾನಿಸಿದೆ. ಪ್ರಯಾಣಿಕರಿಗೆ ಸಲಹೆ/ದೂರುಗಳು ಹಾಗೂ ಇನ್ನಿತರೆ ಸಂಸ್ಥೆಯ ವಿಚಾರಣೆ/ಮಾಹಿತಿಗಾಗಿ ಕಾಲ್ ಸೆಂಟರ್ ಸಹಾಯವಾಣಿ ಸಂಖ್ಯೆ: 080-26252625 ಗೆ ಸಂಪರ್ಕಿಸುವಂತೆ ಕೋರಲಾಗಿದೆ.
Read More »ಚುನಾವಣಾ ಕಾರ್ಯಕ್ಕೆ 1615 ಕೆಎಸ್‌ಆರ್‌ಟಿಸಿ ಬಸ್
ಬೆಂಗಳೂರು,ಡಿ.26- ರಾಜ್ಯದಲ್ಲಿ ನಡೆಯುವ 2ನೇ ಹಂತದ ಗ್ರಾಮಪಂಚಾಯ್ತಿ ಚುನಾವಣೆಗೆ ಕೆಎಸ್‍ಆರ್‍ಟಿಸಿಯಿಂದ 1615 ಬಸ್‍ಗಳನ್ನು ನೀಡಲಾಗಿದೆ. ಗ್ರಾಮಪಂಚಾಯ್ತಿ ಚುನಾವಣಾ ಕಾರ್ಯಕ್ಕಾಗಿ ಸಾಂದರ್ಭಿಕ ಒಪ್ಪಂದದ ಆಧಾರದ ಮೇಲೆ ಇಂದು ಬಸ್‍ಗಳನ್ನು ನೀಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ. ಸುಮಾರು 5 ಸಾವಿರ ಬಸ್‍ಗಳು ಪ್ರತಿದಿನ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದ್ದು, ಚುನಾವಣಾ ಕಾರ್ಯಕ್ಕೆ ಬಸ್ ನೀಡಿರುವುದರಿಂದ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗುವುದಿಲ್ಲ. ರಾಜ್ಯದ 109 ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯುತ್ತಿದ್ದು, ಪ್ರಯಾಣಿಕರ ಸಂಖ್ಯೆಯು ಕಡಿಮೆ ಇರುತ್ತದೆ. …
Read More »ಲಕ್ಷ್ಮೀ ಹೆಬ್ಬಾಳ್ಕರ್ ವರಿಷ್ಠರು ಹೇಳುವಷ್ಟು ದೊಡ್ಡ ಲೀಡರ್ ಅಲ್ಲ..ರಮೇಶ ಜಾರಕಿಹೊಳಿ
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ವಾಗ್ದಾಳಿ ಮುಂದುವರಿಸಿದ್ದಾರೆ. ಆಕೆ ವರಿಷ್ಠರು ಹೇಳುವಷ್ಟು ದೊಡ್ಡ ಲೀಡರ್ ಅಲ್ಲ. ನನ್ನ ಹಿತೈಷಿಗಳು ಆಕೆಯ ಬಗ್ಗೆ ಮಾತನಾಡಬೇಡ ಎಂದಿದ್ದಕ್ಕೆ ಮಾತನಾಡುವುದನ್ನು ಬಿಟ್ಟಿದ್ದೇನೆ ಎಂದು ಹೇಳುವ ಮೂಲಕ ಮತ್ತೆ ತಿರುಗೇಟು ಕೊಟ್ಟಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾತನಾಡಬೇಡ ಎಂದು ವರಿಷ್ಠರು ಹೇಳುವಷ್ಟು ಆಕೆ ದೊಡ್ಡ …
Read More »ಶಿಕ್ಷಕರ ಸಂಘದಿಂದ ನಾಗಪ್ಪ ಶೇಖರಗೋಳ ಅವರಿಗೆ ಸತ್ಕಾರ
ಗೋಕಾಕ: ಶಿಕ್ಷಕರು ತಮ್ಮ ಕರ್ತವ್ಯದ ಜೊತೆಗೆ ಸಂಘದ ಪ್ರಗತಿಗೂ ಶ್ರಮಿಸಿ, ಶಿಕ್ಷಕರ ಸಂಘವನ್ನು ಮಾದರಿ ಸಂಘವನ್ನಾಗಿ ರೂಪಿಸಲು ಅರಭಾವಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು. ಶನಿವಾರದಂದು ನಗರದ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಮೂಡಲಗಿ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ನೀಡಿದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಕರು ರಾಷ್ಟ್ರದ ಶಿಲ್ಪಿಗಳಾಗಿದ್ದು, ಸಮಾಜವನ್ನು ಬದಲಿಸುವ ಶಕ್ತಿ ಶಿಕ್ಷಕರಿಗಿದೆ ಎಂದು ತಿಳಿಸಿದರು. ನೂತನವಾಗಿ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳು …
Read More »ಕಾರಿಗೆ ಲಾರಿ ಡಿಕ್ಕಿಕಾರು ನುಜ್ಜುಗುಜ್ಜಾಗಿದ್ದು, ಬೆಂಗಳೂರು ಮೂಲದ ನಂಬರಿನ ಕಾರು ಎಂಬುದು ತಿಳಿದು ಬಂದಿದೆ.
ಅಮರಾವತಿ: ತಿರುಪತಿಯಿಂದ ಬರುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ತಿರುಪತಿಯ ಚಂದ್ರಗಿರಿ ಮಂಡಲದ ನೇಂಡ್ರಗುಂಟನಲ್ಲಿ ನಡೆದಿದೆ. ಮೃತ ಮಹಿಳೆಯರಲ್ಲಿ ಇಬ್ಬರು ಕರ್ನಾಟಕದ ನಂಗಿಲಿ ಪ್ರದೇಶವದವರೆಂದು ಗುರುತಿಸಲಾಗಿದೆ. ಇನ್ನೋರ್ವ ಮಹಿಳೆ ಬಂಗಾರುಪಾಲೆಂನ ನಿವಾಸಿಯಾಗಿದ್ದಾರೆ. ಕಾರು ಮತ್ತು ಲಾರಿಯ ನಡುವೆ ಸಂಭವಿಸಿದ ಅತಘಾದಲ್ಲಿ ಈ ಮೂವರು ಸಾವನ್ನಪ್ಪಿದ್ದಾರೆ. ಮೂವರು ಮಹಿಳೆಯರು ತಿರುಮಲ ವೆಂಕಟೇಶ್ವರನ ದರ್ಶನ ಪಡೆದು ಕಾರಿನಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಮೃತ …
Read More »ಹೊಸವೈರಸ್ ಬಗ್ಗೆ ಯಾವುದೇ ಘೋಷಣೆ ಮಾಡದಂತೆ ರಾಜ್ಯಗಳಿಗೆ ಕೇಂದ್ರದಿಂದ ಕಟ್ಟಪ್ಪಣೆ
ಬೆಂಗಳೂರು,ಡಿ.26- ಬ್ರಿಟನ್‍ನಲ್ಲಿ ರೂಪಾಂತರಗೊಂಡ ಹೊಸ ಸ್ವರೂಪದ ಕೊರೊನಾ ವೈರಸ್ ಕಾಣಿಸಿಕೊಂಡರೂ ಅದನ್ನು ಅಧಿಕೃತವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಕಟ್ಟಪ್ಪಣೆ ವಿಧಿಸಿದೆ. ಯಾವುದೇ ವ್ಯಕ್ತಿಗೆ ಹೊಸ ಮಾದರಿಯ ಸೋಂಕು ವರದಿಯಲ್ಲಿ ಖಚಿತವಾದರೆ ಅದನ್ನು ತಕ್ಷಣವೇ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್(ಐಸಿಎಂಆರ್‍ಗೆ) ಕಳುಹಿಸಿಕೊಡಬೇಕೆಂದು ಸೂಚನೆ ನೀಡಿದೆ. ಸ್ವತಃ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳೇ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರು, ಮುಖ್ಯ ಕಾರ್ಯದರ್ಶಿಗಳು ಹಾಗೂ ಇಲಾಖೆ ಅಧಿಕಾರಿಗಳ ಜೊತೆ ದೂರವಾಣಿ …
Read More »FDA, SDA ಅಬ್ಯರ್ಥಿಗಳ ಆದೇಶಕ್ಕೆ ಒಪ್ಪಿಗೆ ಸೂಚಿಸಲು ಅಬ್ಯರ್ಥಿಗಳಿಂದ ಸಚಿವರಿಗೆ ಮನವಿ
FDA, SDA ಅಬ್ಯರ್ಥಿಗಳ ಆದೇಶಕ್ಕೆ ಒಪ್ಪಿಗೆ ಸೂಚಿಸಲು ಅಬ್ಯರ್ಥಿಗಳಿಂದ ಸಚಿವರಿಗೆ ಮನವಿ 2017 ನೇ ಸಾಲಿನ ಎಸ್.ಡಿ.ಎ.ಹಾಗೂ ಎಫ್, ಡಿ,ಎ ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಲು ಆರ್ಥಿಕ ಇಲಾಖೆಗೆ ಒಪ್ಪಿಗೆ ಸೂಚಿಸುವಂತೆ ಸಚಿವ ರಮೇಶ ಜಾರಕಿಹೊಳಿ ಅವರಿಗೆ SDA ಹಾಗೂ FDA ಅಭ್ಯರ್ಥಿಗಳು ಮನವಿ ಮಾಡಿಕೊಂಡರು. 2017 ನೇ ಸಾಲಿನ SDA ಹಾಗೂ FDA ಪರೀಕ್ಷೆಯಲ್ಲಿ ಆಯ್ಕೆಗೊಂಡು ನಿಯಮಾನುಸಾರ ಎಲ್ಲ ಮೂಲ ದಾಖಲಾತಿ ಪರಿಶೀಲನೆ ಪ್ರಕ್ರಿಯೆ ಮುಗಿದಿದ್ದು, ಹಾಗೂ ಆರ್ಥಿಕ …
Read More »ಅಸಲಿ-ನಕಲಿ ದೇಶಭಕ್ತರು ಯಾರು ಎಂಬುದ್ದನ್ನು ಜನರು ತೀರ್ಮಾನ ಮಾಡುತ್ತಾರೆ: ಸತೀಶ್ ಜಾರಕಿಹೊಳಿ
ಗೋಕಾಕ: ಇತಿಹಾಸದಲ್ಲಿ ಬಹಳಷ್ಟು ಘಟನೆಗಳು ನಡೆದಿವೆ. ಬಿಜೆಪಿ ಪಕ್ಷವು ದೇಶದ ಇತಿಹಾಸವನ್ನು ತಿರುಚುವ ಮೂಲಕ ಜನರನ್ನು ದಾರಿ ತಪ್ಪಿ ಸುತ್ತಿದೆ. ದೇಶದಲ್ಲಿರುವ ಪ್ರತಿಯೊಂದು ಸಮುದಾಯವು ಸಮಾನತೆ ಹಾಗೂ ಪ್ರೀತಿಯಿಂದ ಬಾಳುತ್ತಿದೆ. ಆದರೆ ಬಿಜೆಪಿಯು ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚಿ ದೇಶದಲ್ಲಿನ ಶಾಂತಿ ಕದಡಲು ಮುಂದಾಗಿದೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ಗೋಕಾಕನ ತಮ್ಮ ಹಿಲ್ ಗಾರ್ಡನ್ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, …
Read More »
Laxmi News 24×7