ಉಡುಪಿ: ಕೊರೊನಾ ವೈರಸ್ ಸೋಂಕು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ ಮಾಡುವ ಕುರಿತು ಸರಕಾರ ಚಿಂತನೆ ಮಾಡಿಲ್ಲ. ಈ ಬಗ್ಗೆ ಯಾವುದೇ ಮಾತುಕತೆಯೂ ಆಗಿಲ್ಲ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಉಡುಪಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನ ಸೊಂಕು ಹೆಚ್ಚುತ್ತಿರುವುದು ನಿಜ. ಅದನ್ನು ನಿಯಂತ್ರಣಕ್ಕೆ ತರುವಲ್ಲಿ ಸರಕಾರ ಒತ್ತು ನೀಡುತ್ತಿದೆ. ನೈಟ್ ಕರ್ಪ್ಯೂ ಕುರಿತು ಯಾವ ಚರ್ಚೆಯು ಆಗಿಲ್ಲ …
Read More »ಸಚಿವ ರಮೇಶ್ ಜಾರಕಿಹೊಳಿಗೆ ಬುಧವಾರ ಭೇಟಿಯಾಗಿ, ಅಭಿನಂಧನೆ ಸಲ್ಲಿಸಿದ ಅಧ್ಯಕ್ಷೆ ಪವಿತ್ರ ರಾಮಯ್ಯ
ಗೋಕಾಕ : ಭದ್ರ ಅಚ್ಚು ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಗೆ ಬುಧವಾರ ಭೇಟಿಯಾಗಿ, ಅಭಿನಂಧನೆ ಸಲ್ಲಿಸಿದರು. ಸಚಿವರಿಗೆ ಸನ್ಮಾನಿಸಿದ ಅವರು, ಪ್ರಾಧಿಕಾರದ ವ್ಯಾಪ್ತಿಯ ಅಚ್ಚುಕಟ್ಟು ಭಾಗದ ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ, ಅಧಿಕಾರಿಗಳು ರಚಿಸಿರುವ ಸುಮಾರು 400ಕೋಟಿ ರೂಗಳ ಕ್ರಿಯಾ ಯೋಜನೆಯ ಬಗ್ಗೆ ಹಾಗೂ ರೈತರಿಂದ ಬಂದಂತಹ ಅರ್ಜಿಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿ ಗಮನ ಸೆಳೆದರು. …
Read More »ಜೈಲಿಗೆ ಹೋಗಿ ಬಂದರೂB.S.Y.ಗೆ ಬುದ್ಧಿ ಇಲ್ಲ: ವಾಟಾಳ್
ಹಾಸನ: ಜೈಲಿಗೆ ಹೋಗಿ ಬಂದರೂ ಯಡಿಯೂರಪ್ಪರಿಗೆ ಬುದ್ಧಿ ಇಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸಿಎಂ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.ಇಂದು ಹಾಸನದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪರವರೇ ನಾವು ಹೋರಾಟದ ಮೂಲಕ ಜೈಲಿಗೆ ಹೋಗುತ್ತಿದ್ದೇವೆ. ನಿಮ್ಮ ಹಾಗೆ ಬೇರೆಯದಕ್ಕೆ ಜೈಲಿಗೆ ಹೋಗಿಲ್ಲ. ನಾಳೆ ಕೇರಳ ಮತ್ತು ತಮಿಳುನಾಡಿನವರು ಪ್ರಾಧಿಕಾರ ಮಾಡಲು ಕೇಳಬಹುದು. ಎಲ್ಲರೂ ಪ್ರಾಧಿಕಾರ ಮಾಡಿ ಎಂದು ಹೇಳ್ತಾರೆ ಆಗ ಪ್ರಾಧಿಕಾರ ಮಾಡ್ತೀರಾ ಎಂದು ಪ್ರಶ್ನೆ ಮಾಡಿದರು. ಗೋವಾದಲ್ಲಿ ಶೇ …
Read More »ಸಕ್ಕರೆ ಗೊಂಬೆ ತಯಾರಿಕೆ ಒಂದು ಕಲೆ
ಸಕ್ಕರೆ ಆರತಿಯ ಪರಿಷೆ- ಗೌರಿಹಬ್ಗೌರಿಹಬ್ಬ ಎಂದರೆ ಅಣ್ಣ ತಂಗಿಯರ ಹಾಗೂ ಸೊಸೆ ಮಾವಂದಿರ, ಭಾವನಾತ್ಮಕ ಸಂಬಂಧಕ್ಕೆ ಬೆಸುಗೆ ಹಾಕುವ ಹಬ್ಬ ಎನ್ನಲಾಗುತ್ತಿದೆ.ಕೆಲವು ಪ್ರತಿಷ್ಠಿತ ಮನೆಗಳಲ್ಲಿ ಹಾಗೂ ದೇವಸ್ಥಾನದಲ್ಲಿ ಮಾತ್ರ, ಪ್ರತಿಷ್ಠಾಪಿಸುವ ಗೌರಮ್ಮನ ವಿಗ್ರಹಕ್ಕೆ ಗೌರಿ ಹುಣ್ಣಿಮೆ ರಾತ್ರಿಯಂದು ಸಕ್ಕರೆ ಗೊಂಬೆಗಳಿಂದ ಬೆಳಗುವ ಮೂಲಕ ಹಬ್ಬ ಪರಿಪೂರ್ಣವಾಗಲಿದೆ.ಮಕ್ಕಳು ಹೆಂಗಳೆಯರು ಗೌರಿಗೆ ಬೆಳಗಲು ಓಡಾಡುವ ಹೆಣ್ಣು ಮಕ್ಕಳ ಸಂಭ್ರಮ ಹೇಳತೀರದು. ಸಕ್ಕರೆ ಗೊಂಬೆಗಳಿರುವ ತಟ್ಟೆಯಲ್ಲಿ ದೀಪ ಹಚ್ಚಿಕೊಂಡು ಗೌರಮ್ಮನ ವಿಗ್ರಹಕ್ಕೆ ಆರತಿ ಎತ್ತಿ …
Read More »ಬೆಳಗಾವಿ, ನಿಪ್ಪಾಣಿ ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು,ಅಜಿತ್ ಪವಾರ್ ಹೇಳಿಕೆ ನೀಡಿ ಇತ್ತೀಚೆಗೆ ಕನ್ನಡಿಗರ ಆಕ್ರೋಶಕ್ಕೆ ಕಾರಣ
ಕಾರವಾರ: ಬೆಳಗಾವಿ, ನಿಪ್ಪಾಣಿ, ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬುದಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆ ನೀಡಿ ಇತ್ತೀಚೆಗೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದರು. ಆದರೆ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಕಾರವಾರವನ್ನು ಈಗಾಗಲೇ ಮಹಾರಾಷ್ಟ್ರಕ್ಕೆ ಸೇರಿಸುವ ಮೂಲಕ ಕಾರವಾರದ ತನ್ನ ಗ್ರಾಹಕರಿಗೆ ‘ವೆಲ್ ಕಮ್ ಟು ಮಹಾರಾಷ್ಟ್ರ’ ಎಂಬ ಸಂದೇಶ ರವಾನಿಸಿ ಕೆಣಕಿದೆ. ಯಾವುದೇ ಕಂಪನಿಯ ನೆಟ್‍ವರ್ಕ್ ಇರಲಿ ಗ್ರಾಹಕರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆರಳಿದಾಗ ಆ ರಾಜ್ಯಕ್ಕೆ …
Read More »ಫೋನ್ ಕಾಲ್, ಮೂರುಸಾವಿರಕ್ಕೆ ಕೇಸ್ ಖಲಾಸ್.!? ಪೊಲೀಸ್ ಇಲಾಖೆಯ ಕೆಲ ಭ್ರಷ್ಠ ಅಧಿಕಾರಿಗಳಿಂದಲೇ ತನಗೆ ಅನ್ಯಾಯವಾಗಿದೆ.
ಕೂಡ್ಲಿಗಿ :ಆರೋಪಿಯಿಂದಲೇ ಗಂಭೀರ ಆರೊಪನೂತನ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಎಂ.ಬಿ ಅಯ್ಯನಹಳ್ಳಿಯ,ಅಕ್ರಮ ಮಧ್ಯ ಪ್ರಖರಣ ಆರೋಪಿಯೋರ್ವನು, ಪೊಲೀಸ್ ಇಲಾಖೆಯ ಕೆಲ ಭ್ರಷ್ಠ ಅಧಿಕಾರಿಗಳಿಂದಲೇ ತನಗೆ ಅನ್ಯಾಯವಾಗಿದೆ. ಅವರ ದ್ವಿಮುಖ ನೀತಿಯಿಂದಾಗಿ ಅನ್ಯಾಯವಾಗಿದೆ ಹಾಗೂ ತಾರತಮ್ಯವಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದು,ತಮ್ಮ ಗ್ರಾಮಸ್ಥರೊಡಗೂಡಿ ಈ ಕುರಿತು ಹೇಳಿಕೆ ನೀಡಿದ್ದಾನೆ.ಸದರಿ ಪ್ರಕರಣದಲ್ಲಿ ತನ್ನೊಟ್ಟಿಗೆ ಬಂಧಿಸಿದ್ದ ಮೂವರು ಆರೋಪಿಗಳನ್ನುಆರೋಪದಿಂದ ಕೈಬಿಡಲಾಗಿದೆ,ಠಾಣೆಯಲ್ಲಿರುವ ಕೆಲ ಭ್ರಷ್ಠರೇ ಅವರನ್ನು ಕೇಸ್ ನಿಂದ ಖುಲಾಸೆಯಾಗಿಸಿದ್ದಾರೆ, ಆರೋಪಿಗಳನ್ನು ಹಣ ಹಾಗೂ ಪ್ರಭಾವಿಗಳ …
Read More »ಸನ್ನಿಡಿಯೋಲ್ ಅವರಿಗೆ ಕೊರೊನಾ ಪಾಸಿಟಿವ್
ಮುಂಬೈ,ಡಿ.2- ಇತ್ತೀಚೆಗೆ ಭುಜದ ಶಸ್ತ್ರ ಚಿಕಿತ್ಸೆಗೆ ಒಳ ಗಾಗಿದ್ದ ಬಾಲಿವುಡ್ ನಟ ಹಾಗೂ ಸಂಸದ ಸನ್ನಿಡಿಯೋಲ್ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಸನ್ನಿಡಿಯೋಲ್ ಅವರು ತಮ್ಮ ಟ್ವಿಟ್ಟರ್ ಮೂಲಕ ಈ ಸುದ್ದಿ ತಿಳಿಸಿದ್ದು ನನಗೆ ಕೊರೊನಾ ಸೋಂಕು ಬಂದಿರುವುದು ದೃಢಪಟ್ಟಿರುವುದರಿಂದ ನಾನು ವಿಶ್ರಾಂತಿ ಪಡೆಯುತ್ತಿದ್ದೇನೆ, ನನ್ನ ಸಂಪರ್ಕದಲ್ಲಿ ಇರುವವರು ಕೂಡ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಭುಜದ ಶಸ್ತ್ರಚಿಕಿತ್ಸೆಯ ನಂತರ ಸನ್ನಿಡಿಯೋಲ್ ಮನಾಲಿ ಯಲ್ಲಿರುವ ತಮ್ಮ ಫಾರ್ಮ್‍ಹೌಸ್‍ನಲ್ಲಿ ವಿಶ್ರಾಂತಿ …
Read More »ರಾಜ್ಯದಲ್ಲಿ ಆಲ್ ಲೈನ್ ಗೇಮ್ ಗಳನ್ನು ಬ್ಯಾನ್ ಮಾಡಿ ಆದೇಶ
: ಆನ್ ಲೈನ್ ಗೇಮ್ ಗಳಿಂದ ಹೆಚ್ಚುತ್ತಿರುವ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದಲ್ಲಿ ಆಲ್ ಲೈನ್ ಗೇಮ್ ಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದ್ದಾರೆ. ಆನ್ ಲೈನ್ ಗೇಮ್ ಗೆ ದಾಸರಾಗಿದ್ದ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿದ್ದರು. ಅಲ್ಲದೇ ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದ್ದವು. ಇದರ ಬೆನ್ನಲ್ಲೇ ದಿಟ್ಟ ಕ್ರಮ ಕೈಗೊಂಡಿರುವ ಆಂದ್ರ ಸರ್ಕಾರ, ರಾಜ್ಯದಲ್ಲಿ ಆನ್ ಲೈನ್ …
Read More »ಕಲಬುರಗಿ ಜಿಲ್ಲೆಯ 19 ಗ್ರಾಮ ಪಂಚಾಯತ್‍ಗಳಲ್ಲಿ ಚುನಾವಣೆ ನಡೆಸಲಾಗುತ್ತಿಲ್ಲ:ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ
ಕಲಬುರಗಿ : ನ್ಯಾಯಾಲಯದಲ್ಲಿನ ಪ್ರಕರಣ ಬಾಕಿ, ಅವಧಿ ಮುಕ್ತಾಯವಾಗದ ಹಾಗೂ ಮತ್ತಿತರರ ಕಾರಣದಿಂದ ಕಲಬುರಗಿ ಜಿಲ್ಲೆಯ 19 ಗ್ರಾಮ ಪಂಚಾಯತ್‍ಗಳಲ್ಲಿ ಚುನಾವಣೆ ನಡೆಸಲಾಗುತ್ತಿಲ್ಲ ಎಂದು ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ. ಯಾವ ಗ್ರಾಮ ಪಂಚಾಯತಿಗಳಲ್ಲಿ ಚುನಾವಣೆ ಇಲ್ಲ ಎಂದು ನೋಡುವುದಾದರೆ. ಚಿತ್ತಾಪುರ ತಾಲೂಕಿನ 20-ಡೊಣಾಗಾಂವ, 25-ಕೋಲ್ಲೂರ, 27-ರಾಂಪೂರಹಳ್ಳಿ. ಚಿಂಚೋಳಿ ತಾಲೂಕಿನ 14-ಕರ್ಚಖೇಡ, 15-ಗರಗಪಳ್ಳಿ. ಕಮಲಾಪುರ ತಾಲೂಕಿನ 03-ಮರಗುತ್ತಿ, 17-ಮುದ್ದಡಗಾ. ಕಾಳಗಿನ ತಾಲೂಕಿನ 11-ಶೇಳ್ಳಗಿ, 16-ಮೋಘಾ, …
Read More »ಸಂತೋಷ್ ಆತ್ಮಹತ್ಯೆ ಯತ್ನದ ಹಿಂದೆ ಹಲವು ರಹಸ್ಯಗಳಿವೆ: ಯತ್ನಾಳ್
ವಿಜಯಪುರ: ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದು, ಪ್ರಕರಣದ ಹಿಂದೆ ದೊಡ್ಡ ಕಥೆಯಿದೆ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಸಂತೋಷ್ ಆತ್ಮಹತ್ಯೆ ಯತ್ನದ ಹಿಂದೆ ಹಲವು ರಹಸ್ಯಗಳಿವೆ. ಈ ಬಗ್ಗೆ ಕಾಲ ಬಂದಾಗ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
Read More »