Breaking News

Uncategorized

ಗೀತಾ ಶಿವರಾಜ್‌ಕುಮಾರ್ ಸಾಧಾರಣ ಮಹಿಳೆಯಲ್ಲ, ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು: DK ಶಿವಕುಮಾರ್

ಅಧಿಕೃತವಾಗಿ ಕಾಂಗ್ರೆಸ್‌ ಸೇರಲಿರುವ ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಜತೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಸಮಾಲೋಚನೆ ನಡೆಸಿದ ಬಳಿಕ ಅವರ ಜತೆ ಡಿಕೆ ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಧು ಬಂಗಾರಪ್ಪ ಅವರು ತಮ್ಮ ಸಹೋದರಿ ಗೀತಾ ಶಿವರಾಜ್‌ಕುಮಾರ್‌ ಕಾಂಗ್ರೆಸ್‌ ಸೇರುವುದನ್ನು ಸ್ಪಷ್ಟಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್‌ ಗೀತಾ ಅವರು ಸಾಧಾರಣ ಮಹಿಳೆ ಅಲ್ಲ, ಅವರಿಗೆ ಸೂಕ್ತ ಗೌರವ ನೀಡಬೇಕು ಎಂದು ಹೇಳಿದ್ದಾರೆ. …

Read More »

ಸಹೋದರನ ಹಾದಿಯನ್ನೇ ಹಿಡಿದ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸಗೆ ಸೇರ್ಪಡೆ…

ನಟ, ರಾಜಕಾರಣಿ ಮಧು ಬಂಗಾರಪ್ಪ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಕೈಹಿಡಿದಿದ್ದಾರೆ. ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಈ ನಡುವೆ ಸಹೋದರನ ಹಾದಿಯನ್ನೇ ಅಕ್ಕ ಗೀತಾ ಶಿವರಾಜ್ ಕುಮಾರ್ ಸಹ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ. ನಟ ಶಿವರಾಜ್ ಕುಮಾರ್ ಅವರ ಪತ್ನಿ, ಜೆಡಿಎಸ್ ಸದಸ್ಯೆ ಗೀತಾ ಶಿವರಾಜ್‌ ಕುಮಾರ್ ಅವರು ಸಹ ಕಾಂಗ್ರೆಸ್‌ಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಬಲವಾಗಿ ಕೇಳಿ ಬರುತ್ತಿದೆ. ಸದಾಶಿವನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ …

Read More »

ಕಿವಿ ಕೇಳದೇ-ಮಾತೂ ಬಾರದೇ ಪಾಕ್​ನಲ್ಲಿ ಸಿಲುಕಿದ್ದ ಗೀತಾ; ಕೊನೆಗೂ ತಾಯಿ ಮಡಿಲು ಸೇರಿದ್ರು

2015ರಲ್ಲಿ ತೆರೆ ಕಂಡಿದ್ದ ಸಲ್ಮಾನ್ ಖಾನ್ ಅಭಿನಯದ ‘ಭಜರಂಗಿ ಭಾಯಿಜಾನ್’ ಸಿನಿಮಾದ ಮುನ್ನಿ ಕ್ಯಾರೆಕ್ಟರ್​ಗೆ ಇಡೀ ದೇಶವೇ ಸಲಾಂ ಹೊಡೆದಿತ್ತು. ಸಿನಿಮಾ ರಿಲೀಸ್ ಆದ ಕೆಲವೇ ತಿಂಗಳಲ್ಲಿ ಅದಕ್ಕಿಂತ ಹೆಚ್ಚು ಸದ್ದು ಮಾಡಿದ್ದು, ಭಾರತದಿಂದ ಆಕಸ್ಮಿವಾಗಿ ಪಾಕ್ ಸೇರಿ ಅಲ್ಲಿನ ಎನ್​ಜಿಓ ಒಂದರಲ್ಲಿ ರಕ್ಷಣೆ ಪಡೆದಿದ್ದ ಗೀತಾ ಎಂಬ ಹೆಸರಿನ ರಿಯಲ್ ಮುನ್ನಿ. ಈಕೆಗೆ ನಿಜವಾದ ಭಾಯಿಜಾನ್ ಆಗಿದ್ದು ಅಂದಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್. ಪಾಕಿಸ್ತಾನದಲ್ಲಿದ್ದ ಕಿವುಡ …

Read More »

ಶಿವರಾತ್ರಿಯ ವಿಶೇಷ ಪೂಜೆ ವೇಳೆ ನಾಗರಾಜ ಪ್ರತ್ಯಕ್ಷ; ಭಕ್ತಿ, ಭಾವದಿಂದ ಕೈಮುಗಿದ ಭಕ್ತರು

ಕೊಪ್ಪಳ: ಶಿವರಾತ್ರಿಯ ದಿನವಾದ ಇಂದು ಕೊಪ್ಪಳದ ಹೊರವಲಯದಲ್ಲಿರುವ ಮಳೆ ಮಲ್ಲೇಶ್ವರ ದೇವಾಲಯದಲ್ಲಿ ಅಚ್ಚರಿಯೊಂದು ನಡೆದಿದೆ. ಶಿವರಾತ್ರಿಯ ಹಿನ್ನೆಲೆಯಲ್ಲಿ ಇಂದು ದೇವಾಲಯಕ್ಕೆ ಸಾಕಷ್ಟು ಭಕ್ತರು ಆಗಮಿಸಿದ್ದರು. ಶಿವನಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದೇವಾಲಯದ ಹೊರಗಿನಿಂದ ಬಂದ ನಾಗರ ಹಾವೊಂದು ಗರ್ಭಗುಡಿಯ ಒಳಗಡೆ ಪ್ರವೇಶಿಸಿದೆ. ಲಿಂಗದ ಕಡೆಗೆ ತೆರಳಿದ ಹಾವು ಅಲ್ಲಿಂದ ಕಾಣೆಯಾಗಿದೆ. ಹಾವನ್ನು ಕಂಡ ಭಕ್ತರು ಧನ್ಯತಾಭಾವದಿಂದ ಕೈಮುಗಿದಿದ್ದಾರೆ.

Read More »

ಕೆ,ಪಿ,ಸಿ,ಸಿ ಕಾರ್ಯಧ್ಯಕ್ಷರಾದ ಸತೀಶ ಜಾರಕಿಹೊಳಿಯವರು ಅವರ ಮಕ್ಕಳೊಂದಿಗೆ ಹಳೆಯ ನೆನಪುಗಳನ್ನು ಹಂಚಿಕೊಂಡರು.

ಗೋಕಾಕ : ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಅವರು ಗೋಕಾಕಿನ ಕ್ರಿಂ ಕಾರ್ನರ್ ರಿಂದ ಆನಂದ ಟಾಕೀಸ್ ವರೆಗೆ ಸಾಯಂಕಾಲ ಸಮಯದಲ್ಲಿ ಸತೀಶ ಜಾರಕಿಹೊಳಿ ಅವರು ತಮ್ಮ ಸ್ನೇಹಿತರಿಗೆ ಭೇಟಿ ನೀಡಿ ತಮ್ಮ ಮಕ್ಕಳಾದ ಪುತ್ರ ರಾಹುಲ್ ಜಾರಕಿಹೊಳಿ ಮತ್ತು ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ತಮ್ಮ ಗೋಕಾಕಿನ ಸ್ನೇಹಿತರಿಗೆ ಪರಿಚಯ ಮಾಡಿಸುವ ಮೂಲಕ ದಿಡೀರ್ ಭೇಟಿ ನೀಡಿದರು.  

Read More »

ಕೊರೊನಾ ಪ್ರಕರಣ ಏರಿಕೆ; ರಾಜ್ಯದಲ್ಲಿ ರಾತ್ರಿ ಪಾರ್ಟಿ ಮೇಲೆ ನಿಷೇಧ

ಬೆಂಗಳೂರು, ಮಾರ್ಚ್ 11: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ರಾತ್ರಿ ಪಾರ್ಟಿಗಳಿಗೆ ರಾಜ್ಯ ಸರ್ಕಾರ ನಿಷೇಧ ಹೇರಿದೆ. ಗುರುವಾರ(ಮಾರ್ಚ್ 11) ದಿಂದ ರಾಜ್ಯಾದ್ಯಂತ, ಪ್ರಮುಖವಾಗಿ ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತ ರಾತ್ರಿ ಹೊತ್ತು ಪಾರ್ಟಿಗಳನ್ನು ನಡೆಸುವುದರ ಮೇಲೆ ನಿಷೇಧ ಹೇರಿದ್ದು, ಸ್ಟಾರ್ ಹೋಟೆಲ್‌, ರೆಸ್ಟೊರೆಂಟ್‌ಗಳಿಗೆ ಸೂಚಿಸಿರುವುದಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಈ ಪಾರ್ಟಿಗಳು ಕೊರೊನಾ ಸೋಂಕಿನ ಸೂಪರ್‌ ಸ್ಪ್ರೆಡರ್‌ಗಳಾಗುವ ಎಲ್ಲಾ …

Read More »

ಗೋಕಾಕ ಫಾಲ್ಸ್‌ನಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ..

ಗೋಕಾಕ ಫಾಲ್ಸ್‌ನಲ್ಲಿ ಗೋಕಾಕ ಖ್ಯಾತ ಶಿಲ್ಪಿ ಜಕಣಾಚಾರಿ ಅವರಿಂದ ನಿರ್ಮಿತವಾಗಿರುವ ಐತಿಹಾಸಿಕ ತಡಸಲ ಮಹಾಲಿಂಗೇಶ್ವರ “ತಟಾಕೇಶ್ವರ” ದೇವಸ್ಥಾನದಲ್ಲಿ ಮಹಾಶಿವರಾತ್ರಿವನ್ನು ಪ್ರತಿ ವರ್ಷದಂತೆ ಇ ವರ್ಷವು ಅತಿ ವಿಜೃಂಭಣೆಯಿಂದ ಆಚರಣೆ ಮಾಡಿದಲಾಗಿತ್ತು. 1153 ನೇ ಕಾಲದಲ್ಲಿ ನಿರ್ಮಿತವಾದ ಈ ದೇವಸ್ಥಾನ ಪ್ರತಿ ಶಿಲ್ಪಗಳೂ ಐತಿಹಾಸಿಕ ಮಹತ್ವ ಸಾರುತ್ತವೆ. ಪಕ್ಕದಲ್ಲಿ ಫಾಲ್ಸ್ ಹಸಿರಿನ ನಿಸರ್ಗ ತಾಣ ಇದ್ದು ಇದರ ಮುಂದೆ ಹರಿದು ಬರುವ ಘಟಪ್ರಭೆ 134 ಕಲ್ಲಿನ ಪದರಗಳ ಮಧ್ಯೆ ಸಾಗಿ ಜಲಪಾತವಾಗಿ …

Read More »

ಪೈರಸಿ ತಡೆಯುವುದಕ್ಕೆ ಮೊದಲು ನಾವು ಬದಲಾಗಬೇಕು: ಪುನೀತ್ ರಾಜ್​ಕುಮಾರ್

ಪೈರಸಿ ವಿಷಯ ಕಳೆದ ಕೆಲವು ದಿನಗಳಿಂದ ಬಹಳ ಸುದ್ದಿ ಮಾಡುತ್ತಿದೆ. ಪ್ರಮುಖವಾಗಿ ತಮ್ಮ’ಹೀರೋ’ ಚಿತ್ರ 3ನೇ ದಿನಕ್ಕೆ ಪೈರಸಿ ಆಗೋಯ್ತು ಎಂದು ನಟ -ನಿರ್ದೇಶಕ ರಿಷಬ್​ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದರು. ಪೈರಸಿ ಪ್ರೋತ್ಸಾಹಿಸುವ ಕೆಲವು ಆಯಪ್ ಮತ್ತು ವೆಬ್‍ಸೈಟ್‍ಗಳನ್ನು ಯಾಕೆ ಬ್ಯಾನ್ ಮಾಡಲಾಗುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದರು. ಅದರ ಹಿಂದೆಯೇ ‘ರಾಬರ್ಟ್’ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಒಂದು ಪಕ್ಷ ತಮ್ಮ ಚಿತ್ರವನ್ನೇನಾದರೂ ಪೈರಸಿ ಮಾಡಿದರೆ ಅವರನ್ನು ಸುಮ್ಮನೆ …

Read More »

ಪ್ರವಾಸಿಗರಿಗಾಗಿ ತಲೆ ಎತ್ತಲಿವೆ ತ್ರಿಸ್ಟಾರ್ ಹೋಟೆಲ್‌ಗಳು: ಸಿ.ಪಿ.ಯೋಗೇಶ್ವರ್

ಬೆಂಗಳೂರು: ರಾಜ್ಯದ ಪ್ರಮುಖ ನಾಲ್ಕು ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮ ಇಲಾಖೆಯು ನಾಲ್ಕು ತ್ರಿಸ್ಟಾರ್‌ ಹೋಟೆಲ್‌ಗಳನ್ನು ನಿರ್ಮಾಣ ಮಾಡಲಿದೆ. ಈ ಕುರಿತು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ರೈಟ್ಸ್‌ ಸಂಸ್ಥೆಯೊಂದಿಗೆ ಬುಧವಾರ ಒಪ್ಪಂದಕ್ಕೆ ಸಹಿ ಹಾಕಿದೆ. ‘ಬೇಲೂರು, ಬಾದಾಮಿ, ವಿಜಯಪುರ ಹಾಗೂ ಹಂಪಿಯಲ್ಲಿ ಈ ಹೋಟೆಲ್‌ಗಳು ತಲೆ ಎತ್ತಲಿವೆ. ಮುಂದಿನ ತಿಂಗಳು ಭೂಮಿ ಪೂಜೆ ನೆರವೇರಿಸಲಾಗುವುದು. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಪ್ರವಾಸಿಗರ ಸೇವೆಗೆ ಸಮರ್ಪಿಸಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. …

Read More »

ಗ್ರಾಹಕಿ ಮುಖಕ್ಕೆ ಪಂಚ್; ಜೊಮ್ಯಾಟೊ ಬಾಯ್ ಬಂಧನ

ಬೆಂಗಳೂರು: ‘ಜೊಮ್ಯಾಟೊ’ ಮೊಬೈಲ್ ಆಯಪ್ ಮೂಲಕ ಕಾಯ್ದಿರಿಸಿದ್ದ ಆಹಾರದ ಪೂರೈಕೆ ತಡವಾಗಿದ್ದಕ್ಕಾಗಿ ಗ್ರಾಹಕಿ ಹಾಗೂ ಡೆಲಿವರಿ ಬಾಯ್‌ ನಡುವೆ ಜಗಳವಾಗಿದ್ದು, ಸಿಟ್ಟಾದ ಡೆಲಿವರಿ ಬಾಯ್ ಗ್ರಾಹಕಿಯ ಮುಖಕ್ಕೆ ಪಂಚ್ ಮಾಡಿದ್ದಾನೆ. ಗ್ರಾಹಕಿ ಮುಖಕ್ಕೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬ್ಯಾಂಡೇಜ್‌ ಹಾಕಿಸಿಕೊಂಡಿದ್ದಾರೆ. ‘ಮಂಗಳವಾರ ರಾತ್ರಿ ಆಹಾರ ನೀಡಲು ಬಂದಿದ್ದ ಡೆಲಿವರಿ ಬಾಯ್ ಕಾಮರಾಜ್ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ’ ಎಂದು ಆರೋಪಿಸಿ ಸ್ಥಳೀಯ …

Read More »