ಗೋಕಾಕ: ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಮುಖಾಂತರ ಕಲೆ, ಸಾಹಿತ್ಯದ ಜೊತೆಗೆ ಕೃಷಿ, ಉದ್ದಿಮೆಗಳ ಬಗ್ಗೆಯೂ ಪ್ರಾಮುಖ್ಯತೆ ನೀಡಬೇಕು ಎಂದು ಯಮಕನಮರಡಿ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಹೇಳಿದರು. ಅವರು ಶನಿವಾರದಂದು ಸಂಜೆ ಇಲ್ಲಿಯ ಎನ್‍ಇಎಸ್ ಶಾಲಾ ಆವರಣದಲ್ಲಿ ಜರುಗಿದ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಖಂಡ ಗೋಕಾಕದ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಕೃಷ್ಣಮೂರ್ತಿ ಪುರಾಣಿಕ, ಬಸವರಾಜ ಕಟ್ಟೀಮನಿ ಕಾಲದಿಂದಲೂ …
Read More »ಗೋಕಾಕ: ಸಚಿವರ ಕಛೇರಿಯಲ್ಲಿ ಕೊಣ್ಣೂರ ಪುರಸಭೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅನುದಾನವನ್ನು ಸಚಿವ ರಮೇಶ ಜಾರಕಿಹೊಳಿ ವಿತರಿಸಿದರು.
ಗೋಕಾಕ : ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿರಿ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅವರು ತಮ್ಮ ಕಛೇರಿಯಲ್ಲಿ ತಾಲೂಕಿನ ಕೊಣ್ಣೂರ ಪುರಸಭೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅನುದಾನ ವಿತರಿಸಿ ಮಾತನಾಡಿದರು. ಸನ್ 2019-20 ಮತ್ತು 2020-21 ರ ಸಾಲಿನ ಎಸ್.ಎಫ್.ಸಿ ಅನುದಾನ ಶೇ 24.10% ರ ಯೋಜನೆಯಡಿಯಲ್ಲಿ ರೂ 2.42 ಲಕ್ಷಗಳ ಅನುದಾನದಲ್ಲಿ 5 ಫಲಾನುಭವಿಗಳಿಗೆ ಪರಿಶಿಷ್ಟ ಜಾತಿ ವರ್ಗದ ಬಿ.ಇ …
Read More »ಇಂದು ಸಂಜೆ 6 ಗಂಟೆಗೆ ಬಿಗ್ ಬಾಸ್ 8 ಪ್ರಾರಂಭ!; ಮನೆ ಒಳಗೆ ಹೋಗುವವರು ಇವ್ರೇನಾ?
ಕನ್ನಡ ಬಿಗ್ ಬಾಸ್ ಸೀಸನ್ 8 ಫೆಬ್ರವರಿಯಿಂದ ಆರಂಭವಾಗಲಿದೆ ಎನ್ನುವ ಸುದ್ದಿ ಹೊರ ಬಿದ್ದಿದ್ದೇ ತಡ, ಪ್ರೇಕ್ಷಕರು ಮನೆ ಒಳಗೆ ಯಾರು ಹೋಗಲಿದ್ದಾರೆ? ಈ ಬಾರಿ ಮನೆ ಸೇರುವ ಸ್ಪರ್ಧಿಗಳೆಷ್ಟು? ಸುದೀಪ್ ಯಾವ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದರು. ಈ ಎಲ್ಲಾ ಪ್ರಶ್ನೆ ಹಾಗೂ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಸೀಸನ್ 8 ಗ್ರ್ಯಾಂಡ್ ಆಗಿ ಪ್ರಾರಂಭಗೊಳ್ಳಲಿದೆ. …
Read More »ಹೆವಿ ಬ್ಯಾಡ್ಜ್ ಡಿಎಲ್ ರಿನಿವಲ್ಗೆ ಹರಸಾಹಸ: ಸಾರಿಗೆ ಇಲಾಖೆ ಹೊಸ ನಿಯಮದಿಂದ ಚಾಲಕರಿಗೆ ಸಂಕಷ್ಟ
ಕರೊನಾ ನಂತರ ವಾಹನ ಚಾಲಕರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಲೇ ಬಂದಿದ್ದಾರೆ. ಒಂದು ಕಡೆ ಕೆಲಸ ಇಲ್ಲ, ಮತ್ತೊಂದೆಡೆ ಬದುಕಿನ ಬವಣೆ. ಈ ನಡುವೆ ಡ್ರೖೆವಿಂಗ್ ಲೈಸೆನ್ಸ್ ಪರವಾನಗಿ ನವೀಕರಿಸಲು ದೂರದ ಬೆಂಗಳೂರು ಇಲ್ಲವೇ ಧಾರವಾಡಕ್ಕೆ ಹೋಗಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಭಾರಿ ವಾಹನ ಚಾಲನಾ ಪರವಾನಗಿ ಹೊಂದಿರುವ ಚಾಲಕರು ಈ ಹಿಂದೆ ಆಯಾ ಜಿಲ್ಲೆ ಇಲ್ಲವೇ ವಿಭಾಗೀಯ ಕೇಂದ್ರದಲ್ಲಿರುವ ಸಾರಿಗೆ ಇಲಾಖೆ ಕಚೇರಿಯಲ್ಲಿ ಚಾಲನಾ ಪರವಾನಗಿ ನವೀಕರಣ ಮಾಡಿಕೊಡಲಾಗುತ್ತಿತ್ತು. ಆದರೆ …
Read More »ಪೊಲೀಸ್ ಠಾಣೆ ಬಳಿ ತುಕ್ಕು ಹಿಡಿಯುತ್ತಿವೆ ವಾಹನಗಳು
ಸುರತ್ಕಲ್: ಹಲವು ದಿನ, ತಿಂಗಳು, ವರ್ಷ ಕಳೆದರೂ ಮಾಲಕ ಬರುತ್ತಾನೋ ಇಲ್ಲವೋ. ಇನ್ನೊಬ್ಬರ ಕೈ ಸೇರಬೇಕಾ ಅಥವಾ ಹೀಗೆ ನಿಂತಲ್ಲಿಯೇ ಅವಶೇಷವಾಗಬೇಕಾ? ಸುರತ್ಕಲ್, ಪಣಂಬೂರು, ಕಾವೂರು ಪೊಲೀಸ್ ಠಾಣೆಗಳ ಮುಂದೆ, ಪಕ್ಕ ಇಲ್ಲವೇ ಠಾಣೆಗೆ ಸಮೀಪದಲ್ಲೇ ಮಾಲಕನ ಬರುವಿಕೆಗಾಗಿ ಕಾಯುತ್ತಿರುವ ನಾನಾ ರೀತಿಯ ವಾಹನಗಳ ವ್ಯಥೆಯಿದು. ಅಪಘಾತ, ಕಳ್ಳತನ, ರಸ್ತೆ ನಿಯಮ ಉಲ್ಲಂಘನೆ ಹೀಗೆ ವಿವಿಧ ಕಾರಣಗಳಿಂದ ಪೊಲೀಸರು ವಶಪಡಿಸಿಕೊಂಡ ದ್ವಿಚಕ್ರ ವಾಹನ, ಕಾರು, ಲಾರಿ, ದೋಣಿ ಇತ್ಯಾದಿಗಳು ಪೊಲೀಸ್ …
Read More »ಸಿಹಿ ಕೊಟ್ಟು ಶುಭ ಕೋರಿದ ಬಾಲಚಂದ್ರ ಜಾರಕಿಹೊಳಿ
ಬೆಂಗಳೂರು. ಕೆಎಂಎಫ್ ಅಧ್ಯಕ್ಷ ಹಾಗೂ ಗೋಕಾಕ ತಾಲುಕಿನ ಅರಭಾವಿ ವಿಧಾನಸಭಾ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹುಟ್ಟು ಹಬ್ಬದ ನಿಮಿತ್ತ ಶುಭ ಕೋರಿದರು. ಕೆಎಂಎಫ್ನ ಸಿಹಿ ಪದಾರ್ಥಗಳನ್ನು ತಿನ್ನಿಸುವ ಮೂಲಕ ಬಾಲಚಂದ್ರ ಜಾರಕಿಜೊಳಿ ಅವರು ಸಿಎಂ ಯಡಿಯೂರಪ್ಪ ಅವರಿಗೆ ಶತಾಯುಷಿ ಆಗಲೆಂದು ಹಾರೈಸಿದರು.
Read More »ಮಾ.2ರಂದು ಅಂಗನವಾಡಿ ಕಾರ್ಯಕರ್ತರಿಂದ ‘ವಿಧಾನಸೌಧ ಚಲೋ
ಬೆಂಗಳೂರು, ಫೆ. 27: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸರಕಾರದ ‘ಸಿ’ ಮತ್ತು ‘ಡಿ’ ಗ್ರೂಪ್ ನೌಕರರೆಂದು ಪರಿಗಣಿಸಬೇಕು. ಇಲಾಖೆಯು ಈ ವೃಂದಗಳ ನೌಕರರಿಗೆ ನೀಡುವ ಎಲ್ಲ ಶಾಸನಬದ್ಧ ಸೌಕರ್ಯಗಳನ್ನು ನೀಡಬೇಕೆಂದು ಆಗ್ರಹಿಸಿ ಮಾ.2ರಂದು ಎಐಯುಟಿಯುಸಿ ‘ವಿಧಾನಸೌಧ ಚಲೋ’ ಹಮ್ಮಿಕೊಂಡಿದೆ. ಸರಕಾರಿ ನೌಕರರಿಗೆ ಸರಿಸಮನಾಗಿ ಮಾಸಿಕ ವೇತನ ಮತ್ತಿತರ ಸೌಕರ್ಯಗಳನ್ನು ನೀಡಬೇಕು ಅಥವಾ ಕಾರ್ಯಕರ್ತೆಯರಿಗೆ 25 ಸಾವಿರ ರೂ.ಹಾಗೂ ಸಹಾಯಕಿಯರಿಗೆ 21 ಸಾವಿರ ರೂ.ಮಾಸಿಕ ವೇತನ ನೀಡಬೇಕು. ಸೇವಾ ಹಿರಿತನ …
Read More »ಚನ್ನಪಟ್ಟಣದ ಆಟಿಕೆಗಳು ಪ್ರಪಂಚದಾದ್ಯಂತ ಎಲ್ಲಾ ಮಕ್ಕಳ ಮೊಗದಲ್ಲೂ ನಗು ತರಿಸಬೇಕು: ಪ್ರಧಾನಿ ಮೋದಿ
ನವದೆಹಲಿ : ನಮ್ಮ ಸಂಸ್ಕೃತಿಯ ಪ್ರತಿರೂಪದಂತಿರುವ ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಆಟಿಕೆ ಕ್ಲಸ್ಟರ್ ನಮ್ಮ ದೇಶಕ್ಕೆ ಮಾತ್ರ ಸೀಮಿತಗೊಳ್ಳಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ . ಶನಿವಾರ ದೆಹಲಿಯಲ್ಲಿ ವರ್ಚುವಲ್ ಕಾನ್ಸರೆನ್ಸ್ ಮೂಲಕ ಆಟಿಕೆ ಮೇಳಕ್ಕೆ ಚಾಲನೆ ನೀಡಿ, ಚನ್ನಪಟ್ಟಣದ ಆಟಿಕೆ ತಯಾರಕರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು,ಚನ್ನಪಟ್ಟಣದ ಬೊಂಬೆಯನ್ನು ವಿಶ್ವಮಟ್ಟದಲ್ಲಿ ಪ್ರಸಿದ್ಧಿಗೆ ತರಲು ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡಬೇಕು. ಆಟಿಕೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು …
Read More »ಜೂನ್ ನಲ್ಲಿ ನಡೆಯಲಿದೆ ಎನ್‍ಐಒಎಸ್ ಪರೀಕ್ಷೆಗಳು
ಬೆಂಗಳೂರು, ಫೆ.27- ರಾಷ್ಟ್ರೀಯ ಮುಕ್ತ ಶಿಕ್ಷಣ ಇಲಾಖೆ (ಎನ್‍ಐಒಎಸ್) ವತಿಯಿಂದ ಮಾರ್ಚ್-ಏಪ್ರಿಲ್-2021ನೆ ಸಾಲಿನ ಸೆಕೆಂಡರಿ (10ನೇ ತರಗತಿ) ಮತ್ತು ಸೀನಿಯರ್ ಸೆಕೆಂಡರಿ (ದ್ವಿತೀಯ ಪಿಯುಸಿ) ಪರೀಕ್ಷೆಗಳನ್ನು ಜೂನ್ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಆನ್‍ಲೈನ್ ಮೂಲಕ ಪರೀಕ್ಷಾ ಶುಲ್ಕ ಪಾವತಿಸಲು ಸೂಚಿಸಲಾಗಿದೆ. ಮಾರ್ಚ್ 1ರಿಂದ 31ರ ವರೆಗೆ ಪರೀಕ್ಷಾ ಶುಲ್ಕ ಪಾವತಿಸಬಹುದಾಗಿದೆ. ಏಪ್ರಿಲ್ 1ರಿಂದ 13ರ ವರೆಗೆ ವಿಳಂಬ ಶುಲ್ಕ ಸಹಿತ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಳ್ಳಬಹುದಾಗಿದೆ. ಜನವರಿ, ಫೆಬ್ರವರಿ 2021ರ ಪರೀಕ್ಷೆಯಲ್ಲಿ …
Read More »ಚಲಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನಿಂದ ಪೆಪ್ಪರ್ ಸ್ಪ್ರೇ
ಇನ್ನೇನು ಟೇಕಾಫ್ ಆಗಲಿದ್ದ ವಿಮಾನದೊಳಗೆ ಆಸೀನನಾಗಿದ್ದ ಪ್ರಯಾಣಿಕ ಅಕಸ್ಮಾತ್ಗಿ ಆ ಪೆಪ್ಪರ್ ಸ್ಪ್ರೇಯನ್ನ ಒತ್ತಿದ ಕಾರಣ ಫ್ಲೈಟ್ನಲ್ಲಿದ್ದ ಪ್ರತಿಯೊಬ್ಬರು ಕೆಮ್ಮಿನಿಂದ ಬಳಲಿದ ಘಟನೆ ನಡೆಸಿದೆ. ಫ್ಲೋರಿಡಾದಿಂದ ನ್ಯೂ ಜೆರ್ಸಿಗೆ ಸಂಚರಿಸುತ್ತಿದ್ದ ವಿಮಾನ ಈ ಘಟನೆ ಬಳಿಕ ವಿಳಂಬವಾಗಿ ನಿಲ್ದಾಣ ತಲುಪಿದೆ. ಯುನೈಟೆಡ್ ಫ್ಲೈಟ್ 1061 ಈಶಾನ್ಯ ಫ್ಲೋರಿಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆಗಲು ತಯಾರಾಗುತ್ತಿತ್ತು.ಆದರೆ ಈ ವೇಳೆ ಪ್ರಯಾಣಿಕರೊಬ್ಬರು ಪೆಪ್ಪರ್ ಸ್ಪ್ರೇಯನ್ನ ಅಚಾನಕ್ ಆಗಿ ಪ್ರೆಸ್ ಮಾಡಿದ್ದಾರೆ. ಚಲಾವಣೆಯಲ್ಲಿದ್ದ …
Read More »