ಘಟಪ್ರಭಾ: ಜೂನ್ 10 ರಂದು ರಾಜಾಪೂರ ಗ್ರಾಮದಲ್ಲಿ ನಡೆದ ಮಹಾಯುದ್ಧ ಯೂಟ್ಯೂಬ ಚಾನಲ್ ಸಂಪಾದಕ ಶಿವಾನಂದ ಬಸಪ್ಪಾ ಕಾಚಾಗೋಳ (27) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಮೂವರು ಆರೋಪಿಗಳನ್ನು ಘಟಪ್ರಭಾ ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರಾದ ಜೋತೆಪ್ಪಾ ವಿಠ್ಠಲ ಮಗದುಮ್ (27) , ಬೀರಪ್ಪಾ ನಿಂಗಪ್ಪಾ ಬಾನಸಿ (27) , ವಸಂತ ಬಮ್ಮಪ್ಪಾ ಬಮ್ಮವ್ವಗೋಳ (27) ಮೂವರು ರಾಜಾಪೂರ ಗ್ರಾಮದ ನಿವಾಸಿಯಾಗಿದ್ದು, ಕೊಲೆಯಾದ ಶಿವಾನಂದನ ಪರಿಚಯಸ್ಥರಾಗಿದ್ದಾರೆ. ಕೊಲೆಗೆ ನಿಖರವಾರದ ಕಾರಣ …
Read More »ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ಸಮಸ್ಯೆ: ಅಧಿಕಾರಿಗಳೊಂದಿಗೆ ಶಾಸಕ ಸತೀಶ ಜಾರಕಿಹೊಳಿ ಸಭೆ
ಬೆಳಗಾವಿ ಜಿಲ್ಲೆ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರು, ವಿದ್ಯುಚ್ಚಕ್ತಿ ಪೂರೈಕೆ, ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಆಗಿರುವ ಸಮಸ್ಯೆಗಳ ಕುರಿತು ಚರ್ಚಿಸಲು ತಾಲೂಕು ಪಂಚಾಯಿತಿಯಲ್ಲಿ ಶಾಸಕ ಸತೀಶ ಜಾರಕಿಹೊಳಿ ಅಧಿಕಾರಿಗಳ ಸಭೆ ನಡೆಸಿ, ಸಲಹೆ ಸೂಚನೆ ನೀಡಿದರು. ಯಮಕನಮರಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರು, ವಿದ್ಯುಚ್ಚಕ್ತಿ ಪೂರೈಕೆ, ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಆಗಿರುವ ಸಮಸ್ಯೆಗಳ ಕುರಿತು ಗ್ರಾಮಗಳ ಜನರು ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ಚರ್ಚಿಸಲು ತಾಲೂಕು …
Read More »ಗೋಕಾಕ ಸಾರ್ವಜನಿಕರ ಗಮನಕ್ಕೆ,ನಗರದಲ್ಲಿ ನಾಲ್ಕು ಕೇಂದ್ರಗಳಲ್ಲಿ ಅಂದರೆ.
ಗೋಕಾಕ ಸಾರ್ವಜನಿಕರ ಗಮನಕ್ಕೆ, ದಿನಾಂಕ: 22.06.2021 ರಂದು ಮಾತ್ರ ಗೋಕಾಕ ನಗರದಲ್ಲಿ ನಾಲ್ಕು ಕೇಂದ್ರಗಳಲ್ಲಿ ಅಂದರೆ 1. ಮಯೂರ್ ಸ್ಕೂಲ್ 2. ಅಕ್ಕಮಹಾದೇವಿ ದೇವಸ್ಥಾನ ಬಣಗಾರ್ ಗಲ್ಲಿ 3. ಸಿಟಿ PHC, ಗೊಂಬಿ ಗುಡಿ ಹತ್ತಿರ 4. ನ್ಯೂ ಇಂಗ್ಲಿಷ್ ಸ್ಕೂಲ್ ( ಸರಕಾರಿ ಆಸ್ಪತ್ರೆ ಬದಲಾಗಿ) ಗಳಲ್ಲಿ ಮಾತ್ರ ಲಸಿಕಾ ಮೇಳ (vaccin camp) ನಡೆಯಲಿದ್ದು, ಇವನ್ನು ಹೊರತು ಪಡಿಸಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹಾಗು ಇತರ ಕಡೆಗಳಲ್ಲಿ …
Read More »ತಿಹಾರ್ ಜೈಲಿನಲ್ಲಿ ನೆರವಿಗೆ ನಿಂತವನ ಕೈಬಿಡದ ಕಾಂಗ್ರೆಸ್ ನಾಯಕ; ಡಿ.ಕೆ. ಶಿವಕುಮಾರ್
ಕಷ್ಟದ ದಿನಗಳಲ್ಲಿ ಕೈಚಾಚಿದವರನ್ನು, ಸಹಾಯ ಮಾಡಿದವರನ್ನು ಮರೆಯಲು ಸಾಧ್ಯವೇ? ಸೆರೆಯಾಗಿದ್ದ ಹಕ್ಕಿಯು ಬಿಡುಗಡೆಯಾಗುತ್ತಿದ್ದಂತೆಯೇ ಪಂಜರದಲ್ಲಿ ಜೊತೆಯಾಗಿದ್ದ ಮತ್ತೊಂದು ಹಕ್ಕಿಯತ್ತ ಸುಳಿಯುತ್ತದೆಯೇ? ಇಲ್ಲ. ಆದರೆ, ಒಡಲ ನೋವನ್ನು ಆಲಿಸಿದ, ಕಷ್ಟದ ಘಟನೆಗಳ ಕೇಳುಗನಾದ, ಸ್ಪಂದಿಸಿ, ಸಂತೈಸಿದ ವ್ಯಕ್ತಿ ಸೆರೆಯಲ್ಲಿದ್ದಾಗ, ಹೃದಯವಂತನಾದವನು ಮತ್ತೆ ಧಾವಿಸದೇ ಇರನು. ಹಾಗೆ ಧಾವಿಸಿ, ವ್ಯಕ್ತಿಯ ಕಷ್ಟಕ್ಕೆ ಸ್ಪಂದಿಸಿದವರು ರಾಜ್ಯದ ನಾಯಕರಲ್ಲೊಬ್ಬರು. ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ತಿಹಾರ್ ಜೈಲು ಸೇರಿದ್ರು.ಬರೋಬ್ಬರಿ …
Read More »ಮುಂದಿನ ಸಿಎಂ – ಸಿದ್ದರಾಮಯ್ಯ ಹೇಳಿದ್ದೇನು..?
ಕೊಪ್ಪಳ: ರಾಜು ಬಿಜೆಪಿಲ್ಲಿ ಆಗುತ್ತಿರುವ ಭಾರೀ ಬೆಳವಣಿಗೆಗಳ ಮಧ್ಯೆಯೇ ಇತ್ತ ಕಾಂಗ್ರೆಸ್ಸಿನಲ್ಲಿ ಮುಂದಿನ ಸಿಎಂ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಸಂಬಂಧ ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ. ಕೊಪ್ಪಳ ತಾಲೂಕಿನ ಬಸಾಪುರ ಬಳಿಯ ಏರ್ಪೋರ್ಟ್ ನಲ್ಲಿ ಮಾತನಾಡಿದ ಮಾಜಿ ಸಿಎಂ, ಮುಂದಿನ ಸಿಎಂ, ಬಗ್ಗೆ ನಮ್ಮ ಪಕ್ಷದಲ್ಲಿ ಚರ್ಚೆಯಾಗುತ್ತಿಲ್ಲ. ಒಂದಿಷ್ಟು ಶಾಸಕರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ ಹೊರತು ಪಕ್ಷದ ಅಭಿಪ್ರಾಯವಲ್ಲ …
Read More »ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ಮೂವರು ಉಗ್ರರು ಎನ್ ಕೌಂಟರ್
ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಮೂವರು ಪೊಲೀಸರು, ಇಬ್ಬರು ಕೌನ್ಸಿಲರ್, ಇಬ್ಬರು ನಾಗರಿಕರ ಸಾವಿಗೆ ಕಾರಣರಾಗಿದ್ದ ಲಷ್ಕರ್ ಉಗ್ರ ಮುದಸೀರ್ ಪಂಡಿತ್ ಸೇರಿದಂತೆ ಮೂವರು ಉಗ್ರರನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈಯ್ಯಲಾಗಿದೆ. ಸೋಪೋರ್ ಜಿಲ್ಲೆಯ ಗುಂಡ್ ಬ್ರಾತ್ ಪ್ರದೇಶದಲ್ಲಿ ನಡೆದ ಮ್ಯಾರಥಾನ್ ಎನ್ ಕೌಂಟರ್ ನಲ್ಲಿ ಲಷ್ಕರ್ ಉಗ್ರ ಮುದಸಿರ್ ಹಾಗೂ ಪಾಕಿಸ್ತಾನ ಮೂಲದ ಅಸ್ರಾರ್ ಅಲಿಯಾಸ್ ಅಬ್ದುಲ್ಲಾ …
Read More »ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವ ವಿಚಾರ ನನಗೆ ಗೊತ್ತಿಲ್ಲ: ಸತೀಶ್
ಚಿಕ್ಕೋಡಿ: ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನುವ ವಿಚಾರ ನನಗೆ ಗೊತ್ತಿಲ್ಲ. ರಾಜೀನಾಮೆ ಕೊಡುವ ಈ ಬಗ್ಗೆ ಅವರನ್ನೇ ಕೇಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ ಅವರು, ಅವರ ರಾಜೀನಾಮೆ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ಲಾಕ್‍ಡೌನ್ ಓಪನ್ ವಿಚಾರವಾಗಿ ಮಾತನಾಡಿದ ಅವರು, …
Read More »3 ವರ್ಷಗಳ ಹಿಂದಿನ ಖೋಟಾನೋಟು ಪ್ರಕರಣಕ್ಕೆ ಟ್ವಿಸ್ಟ್: ಪ್ರಮುಖ ಬಾಂಗ್ಲಾದ ಆರೋಪಿ ಅರೆಸ್ಟ್
ಬೆಂಗಳೂರು: ಕರ್ನಾಟಕದಲ್ಲಿ ಖೋಟಾ ನೋಟು ಚಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಶರೀಫುಲ್ಲಾ ಇಸ್ಲಾಂ ಎಂಬಾತನನ್ನ ಎನ್ಐಎ ಬಂಧಿಸಿದೆ. ಈತನನ್ನ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಬಾಬಾಪುರದಲ್ಲಿ ಬಂಧಿಸಲಾಗಿದೆ.. ಬಾಂಗ್ಲಾ ಮೂಲದ ವ್ಯಕ್ತಿಗಳಿಂದ ಈತ ನಕಲಿ ಭಾರತೀಯ ನೋಟು ಪಡೆಯುತ್ತಿದ್ದ ಹಾಗೂ ಕರ್ನಾಟಕದಲ್ಲಿ ಆ ಖೋಟಾನೋಟುಗಳನ್ನ ಚಲಾವಣೆ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದ ಎನ್ನಲಾಗಿದೆ. ಏನಿದು ಪ್ರಕರಣ..? 2018 ರ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಖೋಟಾನೋಟು ಚಲಾವಣೆ ಪ್ರಕರಣ ದಾಖಲಾಗಿತ್ತು. …
Read More »ವಿದ್ಯಾರ್ಥಿಗಳೇ ಗಮನಿಸಿ : ರಾಜ್ಯದಲ್ಲಿ ಜುಲೈ 1 ರಿಂದ ತರಗತಿಗಳು ಆರಂಭ : ಸಚಿವ ಸುರೇಶ್ ಕುಮಾರ್
ಚಾಮರಾಜನಗರ : ಜುಲೈ 1 ರಿಂದ ತರಗತಿಗಳು ಆರಂಭವಾಗಲಿದ್ದು, ಆನ್ ಲೈನ್ ಮತ್ತು ದೂರದರ್ಶನದಿಂದಷ್ಟೇ ಪಾಠ ನಡೆಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಜುಲೈ 1 ರಿಂದ ತರಗತಿಗಳು ಆರಂಭವಾಗಲಿದ್ದು, ನೇರ ತರಗತಿ ಆರಂಭವಿಲ್ಲ. ಆನ್ ಲೈನ್ ಹಾಗೂ ದೂರದರ್ಶನದ ಮೂಲಕ ಶಿಕ್ಷಣ ನೀಡಲಾಗುವುದು. ಸರ್ಕಾರದ ಮಾರ್ಗಸೂಚಿ ಪಡೆದು ಶಾಲೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸರ್ಕಾರಿ …
Read More »ಗೋಕಾಕ ತಾಲೂಕಿನ ಅನ್ ಲಾಕ್ ನಿಯಮ ಜಾರಿ
ಗೋಕಾಕ ತಾಲೂಕಿನಲ್ಲಿ ಕಳೆದ ಒಂದು ವಾರದ Covid 19 ಪಾಜಿಟಿವಿಟಿ ದರದ ಆಧಾರದ ಮೇಲೆ ಮತ್ತು ಸರ್ಕಾರದ ನಿರ್ದೇಶನದಂತೆ ದಿನಾಂಕ: 21.06.2021, ಬೆಳಿಗ್ಗೆ 6.00 ರಿಂದ 05.07.2021, ಬೆಳಿಗ್ಗೆ 5.00 ರ ವರೆಗೆ ನಿರ್ಬಂಧಗಳ ಸಡಿಲಿಕೆಗಳನ್ನು ನೀಡಲಾಗಿದೆ. • ಎಲ್ಲಾ ಅಂಗಡಿಗಳನ್ನು ಸಂಜೆ 5.00 ಗಂಟೆವರೆಗೆ ತೆರೆಯಲು ಅನುವು ಮಾಡಿಕೊಡಲಾಗಿದೆ. • ಎಸಿ. ಚಾಲನೆಗೊಳಿಸದೇ ಹೋಟೆಲ್, ಕ್ಲಬ್ಸ್, ರೆಸ್ಟೋರೆಂಟ್‌ಗಳಲ್ಲಿ (ಮದ್ಯಪಾನ ಹೊರತುಪಡಿಸಿ) ಕುಳಿತು ತಿನ್ನಲು ಸಂಜೆ 5.00 ಗಂಟೆವರೆಗೆ …
Read More »