ಸವದತ್ತಿ: ಅನ್ನದಾನ ಮಹಾದಾನ ಹೇಳಿಕೆ ಯೊಂದಿಗೆ ಇವತ್ತಿನ ವಿಷಯ ಮತ್ತೆ ಇವತ್ತು ಶನಿವಾರ ಬಂತು ನಮ್ಮ ತಂಡ ಅನ್ನ ಸಂತರ್ಪಣೆ ಮಾಡಲು ಇವತ್ತು ಸಜ್ಜಾಗಿದ್ದು ಇಂದು ಸವದತ್ತಿ ತಾಲೂಕಿನ ಕಡಬಿ ಗ್ರಾಮದಲ್ಲಿ ನಮ್ಮ ತಂಡ ಇಂದಿನ ಕಾರ್ಯಕ್ರಮ ರೂಪಿಸಿದೆ ಹೌದು ಇಂದು ಸವದತ್ತಿ ತಾಲೂಕಿನ ಕಡಬಿ ಗ್ರಾಮದ ಸಿದ್ದಾರೂಢ ಮಠದಲ್ಲಿ ಇಂದಿನ ಅನ್ನ ಸಂತರ್ಪಣೆ ಮಾಡಲು ಶ್ರೀ ಸಂತೋಷ್ ಜಾರಕಿಹೊಳಿ ಅವರ ಆದೇಶದ ಮೇರೆಗೆ ಅಲ್ಲಿ ಎಲ್ಲ ತಂಡ …
Read More »ರಾಜ್ಯದಲ್ಲಿ ಮಳೆಗೆ 3 ವರ್ಷಕ್ಕೆ 302 ಬಲಿ; 1.78 ಲಕ್ಷ ಮನೆ ಹಾನಿ, 2,934 ಲಕ್ಷ ಹೆಕ್ಟೇರ್ ಬೆಳೆ ನಾಶ; ದೇಶಾದ್ಯಂತ 7,467 ಸಾವು
ಬೆಂಗಳೂರು: ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಮಳೆಗೆ 302 ಜನ ಬಲಿಯಾಗಿದ್ದು, ದೇಶದಲ್ಲಿ 2018-19ರಿಂದ 2021-22ರ ಆ.3ರವರೆಗೆ 7,467 ಮಂದಿ ಮೃತಪಟ್ಟಿದ್ದಾರೆ. 35,20,467 ಮನೆಗಳು, ಲಕ್ಷಾಂತರ ಹೆಕ್ಟರ್ ಪ್ರದೇಶಗಳಲ್ಲಿ ಬೆಳೆದಿದ್ದ ಬೆಳೆ ಹಾನಿ ಬಗ್ಗೆ ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ವಿವಿಧ ರಾಜ್ಯಗಳ ಮಳೆ ಅನಾಹುತದ ವರದಿಯಲ್ಲಿ ಉಲ್ಲೇಖಿಸಲಾಗಿದೆ. 3 ವರ್ಷಗಳಲ್ಲಿ ಕರ್ನಾಟಕದಲ್ಲಿ 1,78,722 ಮನೆಗಳಿಗೆ ಹಾನಿಯಾಗಿದ್ದು, 2,934 ಲಕ್ಷ ಹೆಕ್ಟರ್ ಪ್ರದೇಶಗಳಲ್ಲಿ ಬೆಳೆ ನಾಶವಾಗಿದೆ. ರಾಜ್ಯ ಸರ್ಕಾರ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ …
Read More »ರಸ್ತೆ ಅಪಘಾತ ಸ್ಥಳದಲ್ಲೇ “ವಿದ್ಯಾಗಿರಿ ಠಾಣೆಯ ಕಾನ್ಸ್ಟೇಬಲ್” ಸಾವು.
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಊಟ ಕೊಡಲು ಹೊರಟಿದ್ದ ಪೊಲೀಸ್ ಪೇದೆಯೊಬ್ಬರು ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿಂಗಪ್ಪ ಬುಸಣ್ಣವರ ಎಂಬ ಪೊಲೀಸ್ ಪೇದೆಯೇ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳಿಗೆ ಊಟ ಕೊಡಲು ಹೋದಾಗ ನವಲೂರು ಬಳಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೈಕ್ ಹಾಗೂ ಲಾರಿಯ ನಡುವೆ ಡಿಕ್ಕಿ ಸಂಭವಿಸಿ ಲಾರಿ …
Read More »ದೇವಸ್ಥಾನಗಳಲ್ಲಿ ಮಾತ್ರ ಗಣಪತಿ ಮೂರ್ತಿ ಪ್ರತಿಷ್ಠಾಪನೆ: ಕಮಲ್‌ಪಂತ್
ಬೆಂಗಳೂರು: ಬೆಂಗಳೂರು ನಗರದಲ್ಲಿ ಸಾರ್ವಜನಿಕವಾಗಿ ದೇವಸ್ಥಾನಗಳಲ್ಲಿ ಮಾತ್ರ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿದೆ. ಸಾರ್ವಜನಿಕ ರಸ್ತೆಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ ಎಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದರು. ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಿಯಮಗಳನ್ವಯ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶವಿದೆ. ಉಳಿದಂತೆ, ಕೋವಿಡ್ ನಿಯಮಗಳು ಜಾರಿಯಲ್ಲಿ ಇರಲಿವೆ. ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಪೊಲೀಸರು ಹಾಗೂ ಬಿಬಿಎಂಪಿ ಅವರಿಂದ ಅನುಮತಿ …
Read More »ರಾಹುಲ್ ಪ್ರಕಾರ ಜಿಡಿಪಿ ಎಂದರೆ ಗಾಂಧಿ, ದಿಗ್ವಿಜಯ್, ಪಿ. ಚಿದಂಬರಂ’: ನರೋತ್ತಮ್ ವ್ಯಂಗ್ಯ
ಭೋಪಾಲ್, ಸೆಪ್ಟೆಂಬರ್ 02: ಜಿಡಿಪಿಯ ಬಗ್ಗೆ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯ ವಿರುದ್ದ ವಾಗ್ದಾಳಿ ನಡೆಸಿರುವ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ಜಿಡಿಪಿಯ ಬಗ್ಗೆ ಹೊಸ ವಿವರಣೆ ನೀಡಿದ್ದಾರೆ. ಜಿಡಿಪಿ ಮತ್ತು ಇಂಧನ ದರ ಏರಿಕೆಯಾದ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಹಿನ್ನೆಲೆ ಮಧ್ಯಪ್ರದೇಶ ಗೃಹಸಚಿವ ನರೋತ್ತಮ್ ಮಿಶ್ರಾ ಕಿಡಿ ಕಾರಿದ್ದಾರೆ. ಅಡುಗೆ ಅನಿಲ, ಪೆಟ್ರೋಲ್ …
Read More »ಗೋಕಾಕ ನಗರದ ಸಾರ್ವಜನಿಕಕರಿಗೆ ನಗರಸಭೆಯಿಂದ ಸೂಚನೆ?
ಗೋಕಾಕ ನಾಗರಿಕರಲ್ಲಿ ಈ ಮೂಲಕ ತಿಳಿಸುವುದೇನೆಂದರೆ ಗೋಕಾಕ ನಗರಕ್ಕೆ ನೀರು ಪೂರೈಕೆ ಮಾಡುವ ನಗರದ ನದಿಯ ದಡದಲ್ಲಿರುವ ಜಾಕವೆಲ್ ನಲ್ಲಿರುವ 200 ಎಚ್.ಪಿ ಪಂಪಸೆಟ್ ಮೋಟಾರ್ ರಿಪೇರಿ ಇದ್ದ ಕಾರಣ ಗೋಕಾಕ ನಗರದಲ್ಲಿ ಶುಕ್ರವಾರ ದಿ.3-9-2021ಮತ್ತು ಶನಿವಾರ ದಿ.4-9-2021 ರಂದು ನೀರು ಸರಬುರಾಜಿನಲ್ಲಿ ವ್ಯತ್ಯಯವಾಗಲಿದೆ ಕಾರಣ ಸಾರ್ವಜನಿಕರು ಸಹಕರಿಸಲು ನಗರಸಭೆಯ ಅಧ್ಯಕ್ಷರಾದ ಶ್ರೀ ಜಯಾನಂದ ಹುಣಶ್ಯಾಳಿ,ಪೌರಾಯುಕ್ತರಾದ ಶ್ರೀ ಶಿವಾನಂದ ಹಿರೇಮಠ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ …
Read More »ರೈತರ ತಲೆ ಒಡೆಯಿರಿ ಎಂದ ಅಧಿಕಾರಿ ವರ್ಗಾವಣೆ
ಪ್ರತಿಭಟನಾನಿರತ ರೈತರ ಮೇಲೆ ದಾಳಿ ಮಾಡಲು ಆದೇಶಿಸುತ್ತಾ ಕ್ಯಾಮೆರಾದಲ್ಲಿ ಸಿಕ್ಕಿಹಾಕಿಕೊಂಡ ಹರಿಯಾಣಾ ಸರ್ಕಾರದ ಉನ್ನತ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ. ‘ರೈತರ ತಲೆಗಳನ್ನು ಒಡೆಯಿರಿ’ ಎಂದು ಪೊಲೀಸ್ ಸಿಬ್ಬಂದಿಗೆ ಆದೇಶ ಕೊಟ್ಟ ಕರ್ನಲ್ ಜಿಲ್ಲೆಯ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಆಯುಶ್ ಸಿನ್ಹಾರನ್ನು ಹರಿಯಾಣಾ ಸರ್ಕಾರದ ನಾಗರಿಕ ಸಂಪನ್ಮೂಲ ಮಾಹಿತಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. “ಅದೇನೇ ಆಗಲಿ, ಯಾರೊಬ್ಬರೂ ಈ ಬ್ಯಾರಿಕೇಡ್‌ಗಳನ್ನು ದಾಟಕೂಡದು. ಸ್ಪಷ್ಟವಾಗಿ ಹೇಳುತ್ತೇನೆ, ಈ ಗೆರೆ ದಾಟಲು …
Read More »ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆ ಚುನಾವಣೆ; ಎಲ್ಲೆಲ್ಲಿ ರಜೆ?
ಬೆಂಗಳೂರು, ಆಗಸ್ಟ್ 31; ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆ ಹಾಗೂ ಪಟ್ಟಣ ಪಂಚಾಯಿತಿಗಳ ಚುನಾವಣೆ ಘೋಷಣೆ ಮಾಡಿದೆ. ಸೆಪ್ಟೆಂಬರ್ 3ರ ಶುಕ್ರವಾರ ಮತದಾನ ನಡೆಯಲಿದೆ. ಮತದಾನ ನಡೆಯುವ ಪ್ರದೇಶಗಳಲ್ಲಿ ಮತದಾನ ಮಾಡಲು ಅನುಕೂಲವಾಗುವಂತೆ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಸೆಪ್ಟೆಂಬರ್ 3ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ಚುನಾವಣೆ ನಡೆಯುವ ವಾರ್ಡ್‌ನ ವ್ಯಾಪ್ತಿಯಲ್ಲಿರುವ ಎಲ್ಲಾ ಸಾರ್ವಜನಿಕ …
Read More »ಮಹಿಳೆಗೆ ಚುಡಾಯಿಸಿದ ಆರೋಪ.. ಸ್ಥಳೀಯರಿಂದ ಪರಿಸರವಾದಿ ಡಿ.ವಿ.ಗಿರೀಶ್ ಮೇಲೆ ಹಲ್ಲೆ
ಚಿಕ್ಕಮಗಳೂರು: ಮಹಿಳೆಗೆ ಚುಡಾಯಿಸಿದರೆಂದು ಆರೋಪಿಸಿ ಪರಿಸರವಾದಿ ವೈಲ್ಡ್ ಕ್ಯಾಟ್ – ಸಿ ಸಂಸ್ಥೆಯ ಡಿ.ವಿ.ಗಿರೀಶ್ ಮೇಲೆ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಿಲ್ಲೆಯ ಕಂಬಿಹಳ್ಳಿ ಗ್ರಾಮದ ಮಹಿಳೆಯೊಬ್ಬರಿಗೆ ಚುಡಾಯಿಸಿದ್ದಾರೆ ಎಂದು ಆರೋಪಿಸಿ ಕೆಲ ಸ್ಥಳೀಯರು ಡಿ.ವಿ.ಗಿರೀಶ್ ಹಾಗೂ ಅವರ ಸ್ನೇಹಿತರು ತೆರಳುತ್ತಿದ್ದ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅವರ ಜೊತೆಯಲ್ಲಿದ್ದವರಿಗೂ ಥಳಿಸಿದ್ದಾರೆ ಎಂದು ಕೆಲ ಸ್ಥಳೀಯರು ಹೇಳುತ್ತಿದ್ದಾರೆ. ಇನ್ನೂ ಕೆಲ …
Read More »ಮಹಾಮಾರಿ ಕೋವಿಡ್‌ಗೆ ಕುಖ್ಯಾತ ರೌಡಿಶೀಟರ್ ಬಾಂಬೆ ರವಿ ಬಲಿ
ಬೆಂಗಳೂರು: ಕೊಲೆ, ಕೊಲೆ ಯತ್ನ ಹಾಗೂ ದರೋಡೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಹಲವು ವರ್ಷಗಳಿಂದ ಭೂಗತನಾಗಿದ್ದ ಕುಖ್ಯಾತ ರೌಡಿಶೀಟರ್ ಬಾಂಬೆ ರವಿ ಕೊರೊನಾಗೆ ಬಲಿಯಾಗಿದ್ದಾನೆ. ಹಲವು ವರ್ಷಗಳಿಂದ ದಕ್ಷಿಣ ಆಫ್ರಿಕಾದಲ್ಲಿ ತಲೆಮರೆಸಿಕೊಂಡಿದ್ದ ಬಾಂಬೆ ರವಿಗೆ ಕೋವಿಡ್ ಸೋಂಕು ತಗುಲಿ ಸ್ಥಳೀಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತ ರೌಡಿಶೀಟರ್ ಹಲವು ವರ್ಷಗಳಿಂದ ಬೆಂಗಳೂರು ಪೊಲೀಸರಿಗೆ ತಲೆನೋವಾಗಿದ್ದ. ಭೂಗತನಾಗಿದ್ದುಕೊಂಡೇ ನಗರದಲ್ಲಿ ರೌಡಿ ಚಟುವಟಿಕೆಯಲ್ಲಿ ಪರೋಕ್ಷವಾಗಿ ಭಾಗಿಯಾಗಿದ್ದ. ಕಳೆದ …
Read More »