ಕಲಬುರಗಿ: ಕಟ್ಟಿಗೆಯಿಂದ ಹೊಡೆದು ಪತ್ನಿ ಮತ್ತು ಮಗಳನ್ನ ಕೊಲೆ ಮಾಡಿರುವ ಘಟನೆ ಸೇಡಂ ಪಟ್ಟಣದ ಈಶ್ವರ್ ನಗರದಲ್ಲಿ ನಡೆದಿದೆ. ದಿಗಂಬರ್ 46 ಅನ್ನೋ ವ್ಯಕ್ತಿಯಿಂದ ಪತ್ನಿ ಮತ್ತು ಮಗಳನ್ನ ಕಗ್ಗೊಲೆ ಮಾಡಿದ್ದಾನೆ. ಜಗದೀಶ್ವರಿ 45, ಪ್ರಿಯಾಂಕಾ 11 ಕೊಲೆಯಾದ ದುರ್ದೈವಿಗಳು. ಮಧ್ಯರಾತ್ರಿ ಮನೆಯಲ್ಲಿ ಜಗಳ ತೆಗೆದು ಕೊಲೆ ಮಾಡಿದ್ದಾರೆ. ಪತ್ನಿ ಶೀಲ ಶಂಕಿಸಿ ಕೊಲೆ ಮಾಡಿರೋ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ. ಆರೋಪಿ ದಿಗಂಬರ್ನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸೇಡಂ ಪೊಲೀಸ್ …
Read More »ಇನ್ಮುಂದೆ ಕ್ರಿಕೆಟ್ನಲ್ಲಿ ‘ಬ್ಯಾಟ್ಸ್‌ಮನ್’ ಎನ್ನುವಂತಿಲ್ಲ: ಲಿಂಗ ಸಮಾನತೆಗಾಗಿ ‘ಬ್ಯಾಟರ್’ ಪದ ಬಳಕೆಗೆ ಆದೇಶ
ಕ್ರಿಕೆಟ್ ಆಟದಲ್ಲಿ ಇನ್ನು ಬ್ಯಾಟಿಂಗ್ ಮಾಡುವವರನ್ನು “ಬ್ಯಾಟ್ಸ್‌ಮನ್” (Batsman) ಎಂದು ಕರೆಯಲಾಗುವುದಿಲ್ಲ. ಕ್ರಿಕೆಟ್ ಅನ್ನು ಅಂತರ್ಗತ ಆಟವಾಗಿ ಬಲಪಡಿಸುವ ಪ್ರಯತ್ನವಾಗಿ ಬ್ಯಾಟ್ಸ್‌ಮನ್ ಎಂಬ ಪದದ ಬದಲು ಇನ್ನು ಮುಂದೆ ಲಿಂಗ ತಟಸ್ಥ ಪದ “ಬ್ಯಾಟರ್” (Batter) ಎಂಬ ಪದವನ್ನು ಕ್ರಿಕೆಟ್ ನಿಯಮಾವಳಿಯಲ್ಲಿ ಅಳವಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ನಿಯಮ ರೂಪಿಸಲಾಗಿದ್ದು ಬದಲಾವಣೆ ತಕ್ಷಣದಿಂದ ಜಾರಿಯಾಗಿದೆ ಎಂದು ಮೆರಿಲ್‌ಬಾರ್ನ್ ಕ್ರಿಕೆಟ್ ಕ್ಲಬ್ (MCC) ತಿಳಿಸಿದೆ. ಎಂಸಿಸಿ ಕ್ರಿಕೆಟ್ ನಿಯಮಗಳ ರಕ್ಷಕನಾಗಿದ್ದು, ಐಸಿಸಿ (ICC) …
Read More »ರಾಜ್ಯದಲ್ಲಿ ಇನ್ಮುಂದೆ ಭಾನುವಾರ ಕೊರೊನಾ ಲಸಿಕೆ ಸಿಗಲ್ಲ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಭಾನುವಾರ ರಜೆ ದಿನ
ಬೆಂಗಳೂರು: ರಾಜ್ಯದಲ್ಲಿ ಇನ್ಮುಂದೆ ಭಾನುವಾರ ಕೊರೊನಾ ಲಸಿಕೆ ಹಾಕದಿರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ. ಇಡೀ ದೇಶವನ್ನು ಕೊರೊನಾ ಮುಕ್ತ ಮಾಡಲು ಮಕ್ಕಳು ಹೊರೆತು ಪಡಿಸಿ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆಯನ್ನು ಹಾಕಲಾಗುತ್ತಿತ್ತು. ವಾರದ 7 ದಿನವೂ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿತ್ತು. ಆದ್ರೆ ಈಗ ಭಾನುವಾರ ಕೊರೊನಾ ಲಸಿಕೆ ಹಾಕದಿರಲು ಆರೋಗ್ಯ ಇಲಾಖೆ ಮುಂದಾಗಿದೆ. ಯಾವುದೇ ರಜೆ ಇಲ್ಲದೇ, ನಿರಂತರವಾಗಿ ಆರೋಗ್ಯ ಸಿಬ್ಬಂದಿ ಕೆಲಸ ಮಾಡ್ತಾ ಇದ್ದರು. …
Read More »ಅಬುಧಾಬಿಯಲ್ಲಿಂದು ಹೈವೋಲ್ಟೇಜ್ ಪಂದ್ಯ: ಮುಂಬೈ-ಕೋಲ್ಕತ್ತಾ ನಡುವೆ ಯಾರಿಗೆ ವಿಜಯ?
ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯಲ್ಲಿಂದು (IPL 2021) 34ನೇ ಪಂದ್ಯ ನಡೆಯಲಿದ್ದು ರೋಹಿತ್ ಶರ್ಮಾ (Rohit Sharma) ನಾಯಕತ್ವದ ಮುಂಬೈ ಇಂಡಿಯನ್ಸ್ ಮತ್ತು ಇಯಾನ್ ಮಾರ್ಗನ್ (Eion Morgan) ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (MIvsKKR) ತಂಡಗಳು ಮುಖಾಮುಖಿ ಆಗುತ್ತಿವೆ. ಮುಂಬೈ ತಂಡ ಈ ಬಾರಿಯ ಟೂರ್ನಿಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಕಂಡಿದೆ. ಆಡಿದ ಎಂಟು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ನಾಲ್ಕರಲ್ಲಿ ಸೋಲು ಅನುಭವಿಸಿದೆ. ಇತ್ತ ಕೆಕೆಆರ್ ತಂಡ ಆಡಿದ …
Read More »ಕೊಡಗು, ಮಲೆನಾಡಿನಲ್ಲಿ ಇನ್ನೂ 3 ದಿನ ಮಳೆ ಹೆಚ್ಚಳ; ಹಲವೆಡೆ ಇಂದು ಹಳದಿ ಅಲರ್ಟ್ ಘೋಷಣೆ
ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಇನ್ನೂ ನಿಂತಿಲ್ಲ. ಸುಮಾರು 10 ದಿನಗಳಿಂದ ರಾಜ್ಯಾದ್ಯಂತ ಮಳೆ ಹೆಚ್ಚಾಗಿದ್ದು, ಇಂದಿನಿಂದ 3 ದಿನ ಮಳೆ ಸುರಿಯಲಿದೆ. ಇಂದು ಮತ್ತು ನಾಳೆ ಕರಾವಳಿ ಜಿಲ್ಲೆಗಳು, ಮಲೆನಾಡು ಹಾಗೂ ಕೊಡಗಿನಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಸೆ. 25ರಂದು ಕರ್ನಾಟಕದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಜಾಸ್ತಿಯಾಗಲಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸೆ. 26ರವರೆಗೂ ಮಳೆ …
Read More »ಶ್ರೀ ಸನತ್ ಜಾರಕಿಹೊಳಿ ಅವರಿಗೆ ಹುಟ್ಟಹಬ್ಬದ ಶುಭಾಶಯ ತಿಳಿಸಿದ ಬಸವರಾಜ ಸಾಯನ್ನವ ರ
ಇಂದು ಜಾರಕಿಹೊಳಿ ಕುಟುಂಬದಲ್ಲಿ ಸಂಭ್ರಮದ ದಿನ ಇಂದು ಜಾರಕಿಹೊಳಿ ಕುಟುಂಬದಲ್ಲಿ ಹುಟ್ಟು ಹಬ್ಬದ ಸಂಭ್ರಮ ಭೀಮಶಿ ಜಾರಕಿಹೊಳಿ ಅವರ ಸುಪುತ್ರ ಹಾಗೂ ಗೋಕಾಕ ಲಕ್ಷ್ಮಿ ಎಜುಕೇಷನ್ ಟ್ರಸ್ಟ್ ವ್ಯವ್ಥಾಪಕ ನಿರ್ದೇಶಕ ರಾದ ಶ್ರೀ ಸನತ್ ಜಾರಕಿಹೊಳಿ ಅವರ್ ಹುಟ್ಟುಹಬ್ಬದ ಸಂಭ್ರಮ. ಹೌದು ಇಂದು ಸುಮಾರು ಜನ ಇವರ ಒಂದು ಜನ್ಮ ದಿನಕ್ಕೆ ಶುಭಕೋರಿದರು ಹಾಗೂ ಗೋಕಾಕ ನಗರದ ಎಪಿಎಂಸಿ ನಿರ್ದೇಶಕ ರಾದ ಬಸವರಾಜ್ ಸಾಯನ್ನವರ್ ಅವರು ಇಂದು ಅವರಿಗೆ ಶುಭ …
Read More »‘ಬೈಡನ್ ಆಹ್ವಾನದ ಮೇರೆಗೆ ಅಮೆರಿಕ ಪ್ರವಾಸ, ಜಾಗತಿಕ ವಿಚಾರಗಳ ಬಗ್ಗೆ ನಮ್ಮ ಚರ್ಚೆ’ ಅಂದ್ರು ಮೋದಿ
ನವದೆಹಲಿ: ಬೈಡೆನ್ ಅಮೆರಿಕ ಅಧ್ಯಕ್ಷರಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಅಮೆರಿಕಾ ಪ್ರವಾಸ ಕೈಗೊಳ್ತಿದ್ದಾರೆ. ಇಂದು ಅಮೆರಿಕಾಕ್ಕೆ ಹೊರಡಲಿರುವ ಮೋದಿ, ಕ್ವಾಡ್ ಶೃಂಗ ಸಮ್ಮೇಳನ, ವಿಶ್ವಸಂಸ್ಥೆ 76ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಜೋ ಬೈಡೆನ್ ಜತೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ. ಹೀಗಾಗಿ ಮೋದಿ-ಬೈಡೆನ್ ಭೇಟಿ ಮಹತ್ವ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಮಾಹಿತಿ ನೀಡಿರುವ ಪ್ರಧಾನಿ ಮೋದಿ..ಭೇಟಿ ವೇಳೆ ಗ್ಲೋಬಲ್ ಪಾರ್ಟನರ್ಶಿಪ್ ಬಗ್ಗೆ ಸಮಗ್ರವಾಗಿ …
Read More »ಬೆಂಗಳೂರು ಬಸ್‌ನಲ್ಲಿ ಗೀತ ಗೋವಿಂದಂ ಸಿನಿಮಾ ಸ್ಟೈಲ್‌ನಲ್ಲಿ ಹುಡುಗಿಗೆ ಮುತ್ತು ಕೊಟ್ಟಿದ್ದ ಬಳ್ಳಾರಿಯ ಇಂಜಿನಿಯರ್ ಬಂಧನ
ಬೆಂಗಳೂರು: ಸಿನಿಮಾ ಸ್ಟೈಲ್‌ನಲ್ಲಿ ಬಸ್‌ನಲ್ಲಿ ಯುವತಿಗೆ ಕಿಸ್ ಕೊಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಯುವತಿಗೆ ಕಿಸ್ ಕೊಟ್ಟಿದ್ದ ಯುವಕನನ್ನು ಬಂಧಿಸಲಾಗಿದೆ. ಬಳ್ಳಾರಿ ಮೂಲದ ಇಂಜಿನಿಯರ್ ಮಧುಸೂದನ್ ರೆಡ್ಡಿ(25)ಯನ್ನು ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಗೀತ ಗೋವಿಂದಂ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣಗೆ ವಿಜಯ್ ದೇವರಕೊಂಡ ಚಲಿಸುತ್ತಿರುವ ಬಸ್ಸಲ್ಲಿ ಮುತ್ತು ಕೊಡುತ್ತಾರೆ. ಅಂತಹುದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಸಿನಿಮಾ ವೀಕ್ಷಿಸಿ ಪ್ರೇರಣೆಗೊಂಡ ಯುವಕನೋರ್ವ ಚಲಿಸುತ್ತಿದ್ದ ಬಸ್ಸಲ್ಲಿಯೇ ಯುವತಿಗೆ ಗೀತ ಗೋವಿಂದಂ ಸಿನಿಮಾದ ದೃಶ್ಯದ ರೀತಿಯಲ್ಲೇ ಮುತ್ತು …
Read More »ಬಿಎಸ್ಎಫ್ ಕ್ಯಾಂಪ್ನಲ್ಲಿ ಕೊರೊನಾ ರಣಕೇಕೆ, ಮೇಘಾಲಯದಿಂದ ಬಂದಿದ್ದ 70 ಯೋಧರಿಗೆ ಕೊರೊನಾ ಸೋಂಕು
ದೇವನಹಳ್ಳಿ: ಬಿಎಸ್ಎಫ್ ಕ್ಯಾಂಪ್‌ನ 70 ಯೋಧರಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಾರಹಳ್ಳಿಯ BSF ಕ್ಯಾಂಪ್ನಲ್ಲಿ ಮೇಘಾಲಯದಿಂದ ಬಂದಿದ್ದ 70 ಯೋಧರಿಗೆ ಕೊರೊನಾ ತಗುಲಿದೆ. ಮೊದಲು 34 ಯೋಧರಲ್ಲಿ ಸೋಂಕು ಪತ್ತೆಯಾಗಿತ್ತು. ಬಳಿಕ ಇಂದು ಮತ್ತೆ 36 ಯೋಧರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 2 ದಿನದಲ್ಲಿ 70 ಯೋಧರಿಗೆ ಕೊರೊನಾ ಸೋಂಕು ತಗುಲಿರುವುದು ತಿಳಿದು ಬಂದಿದೆ. ಇನ್ನು 70 ಸೋಂಕಿತರ ಪೈಕಿ …
Read More »ಬೆಳಗಾವಿಯಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆ; ಯುವಕನಿಗೆ ಚಾಕು ಇರಿತ
ಬೆಳಗಾವಿ: ಗಣೇಶ ವಿಸರ್ಜನೆಯ ಮೆರವಣಿಗೆ ನೋಡಲು ಬಂದ ಮಹಾರಾಷ್ಟ್ರದ ಮೂಲದ ಯುವಕನಿಗೆ ಕಿಡಿಗೇಡಿಗಳು ಚಾಕು ಇರಿದ ಘಟನೆ ಜಿಲ್ಲೆಯ ಸದಲಗಾ ಪಟ್ಟಣದಲ್ಲಿ ನಡದಿದೆ. ಕೊಲ್ಹಾಪುರ ಮೂಲದ ವಿಶಾಲ್ ಶಿವಡೆ (27) ಚಾಕು ಇರಿತಕ್ಕೊಳಗಾದ ಯುವಕ. ಅಪರಿಚಿತ ಯುವಕರ ಗ್ಯಾಂಗ್ ನಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಚಾಕು ಇರಿತದಿಂದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಣೇಶ ವಿಸರ್ಜನೆ ಮೆರವಣಿಗೆ ವೀಕ್ಷಣೆಗೆ ಯುವಕ ಆತನ ಸ್ನೇಹಿತರು ಪಟ್ಟಣಕ್ಕೆ ಬಂದಿದ್ದು ಈ ವೇಳೆ ವೈಯಕ್ತಿಕ …
Read More »