ಬೆಳಗಾವಿ ನಾಯಕರು ಮನಸ್ಸು ಮಾಡಿದರೆ ರಾಜ್ಯದ ಸರ್ಕಾರವನ್ನು ಬದಲಿಸುವ ಶಕ್ತಿಯನ್ನು ಹೊಂದಿದ್ದಾರೆ. ಹಲವಾರು ದಶಕಗಳಿಂದ ಚಿಕ್ಕೋಡಿ ಜಿಲ್ಲೆ ಮಾಡಿ ಎಂದು ಹೋರಾಟಗಳು, ಪ್ರತಿಭಟನೆಗಳು ನಡೆಯುತ್ತಲ್ಲೇ ಇವೆ. ಆದರೆ, ಇನ್ನೂ ಕೂಡ ಜಿಲ್ಲೆಯ ಕನಸು ನನಸಾಗದೆ ಉಳಿದಿದೆ. ಹೀಗಾಗಿ ಜನಪ್ರತಿನಿಧಿಗಳ ವಿರುದ್ಧ ಚಿಕ್ಕೋಡಿ ಜಿಲ್ಲಾ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆಡಳಿತಾತ್ಮಕವಾಗಿ, ಜನಸಂಖ್ಯಾನುಸಾರವಾಗಿ, ವಿಸ್ತಿರ್ಣಾನುಸಾರವಾಗಿ ಅತ್ಯಂತ ದೊಡ್ಡ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಸದ್ಯ 14 ತಾಲೂಕುಗಳಿವೆ. ಬಹುಷ: …
Read More »ಮಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್; ಕಿಡ್ನ್ಯಾಪ್ ಮಾಡಿ ಅತ್ಯಾಚಾರವೆಸಗಿದ ಆರೋಪಿಗಳು
ದಕ್ಷಿಣ ಕನ್ನಡ: ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ. ಅಪ್ರಾಪ್ತೆಯನ್ನು ಅಪಹರಿಸಿದ ಐವರು ಆರೋಪಿಗಳು ಈ ದುಷ್ಕೃತ್ಯ ಎಸಗಿದ್ದಾರೆ. ಬಾಲಕಿಗೆ ಮತ್ತುಬರಿಸಿ ಅತ್ಯಾಚರವೆಸಗಿರುವ ಆರೋಪ ಕೇಳಿಬಂದಿದೆ. ಸಂತ್ರಸ್ತ ಅಪ್ರಾಪ್ತೆಯನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಂಟ್ವಾಳದಿಂದ ಬಾಲಕಿಯನ್ನು ಅಪಹರಿಸಿ ಅಮ್ಟಾಡಿಯ ರೂಂ ಒಂದಕ್ಕೆ ಕರೆದೊಯ್ದು ಆರೋಪಿಗಳು ಅತ್ಯಾಚಾರವೆಸಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ …
Read More »ಮೀನು ಹಿಡಿಯಲು ತೆರಳಿದ್ದ ಯುವಕನೋರ್ವ ನಾಪತ್ತೆ: ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ ಅಧಿಕಾರಿಗಳು
ಮೂಡಲಗಿ: ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕನೋರ್ವ ಗುರುವಾರ ರಾತ್ರಿ ನಾಪತ್ತೆಯಾಗಿರುವ ಘಟನೆ ಕಮಲದನ್ನಿಯಲ್ಲಿ ನಡೆದಿದೆ. ಉದಯ ಪರಿಶುರಾಮ ಹಾದಿಮನಿ (17) ನಾಪತ್ತೆಯಾದ ಯುವಕ. ಮೂಡಲಗಿ ತಾಲೂಕಿನ ಕಮಲದಿನ್ನಿಯ, ಘಟಪ್ರಭಾ ನದಿಯಲ್ಲಿ ಯುವಕ ನಿನ್ನೆ ಸಂಜೆ ವೇಳೆಗೆ ಮೀನು ಹಿಡಿಯಲು ಹೋಗಿದಾಗ ಆಕಸ್ಮಿಕ ಜಾರಿ ಬಿದಿದ್ದು, ನೀರಿನ ರಭಸಕ್ಕೆ ಉದಯ ಕೊಚ್ಚಿ ಹೋಗಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಗ ನಾಪತ್ತೆ ಬಳಿಕ ಕುಟುಂಬಸ್ಥರ ಆಕ್ರಂದನ ಮುಗಿಲು …
Read More »ಬಾಗಲಕೋಟೆಯಲ್ಲಿ IT ದಾಳಿ ಅಂತ್ಯ; ತುಮಕೂರಲ್ಲಿ ಮುಂದುವರಿದ ಶೋಧಕಾರ್ಯ
ಬಾಗಲಕೋಟೆ/ ತುಮಕೂರು: ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸುತ್ತಿರುವ ಐಟಿ ಅಧಿಕಾರಿಗಳು ಇಂದು ಕೂಡ ಹಲವು ಭಾಗಗಳಲ್ಲಿ ದಾಳಿಯನ್ನ ಮುಂದುವರಿಸಿದ್ದಾರೆ. ಅದರಂತೆ ತುಮಕೂರು ಜಿಲ್ಲೆಯಲ್ಲಿ ಇಂದು ಕೂಡ ದಾಳಿ ಕಂಟಿನ್ಯೂ ಆಗಿದೆ. ಕೊರಟಗೆರೆ ತಾಲೂಕಿನ ಸಿಂಗ್ರಿಹಳ್ಳಿ ಬಳಿಯ ಸತ್ಯನಾರಾಯಣ ಕನ್ಸ್ಟ್ರಕ್ಷನ್ ಪ್ರೈ.ಲಿ. ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸ್ಎನ್ಸಿ ಕಂಪನಿಯ ಕಡತಗಳ ಪರಿಶೀಲನೆ ಮಾಡುತ್ತಿದ್ದಾರೆ. ಇನ್ನು ಎಸ್ಎನ್ಸಿ ಎತ್ತಿನಹೊಳೆ ಯೋಜನೆಯ ಪೈಪ್ ಲೈನ್ ಕಾಮಗಾರಿಯನ್ನ ನಡೆಸುತ್ತಿದೆ. ಅದರಂತೆ …
Read More »RCBಗೆ ಇಂದು ತಪ್ಪು ತಿದ್ದುಕೊಳ್ಳಲು ಉತ್ತಮ ಅವಕಾಶ; ಅಂಕಪಟ್ಟಿ ಮೇಲೂ ಇದೆ ಸಣ್ಣ ಕಣ್ಣು..!
14ನೇ ಆವೃತ್ತಿಯ ಮಿಲಿಯನ್ ಡಾಲರ್ ಟೂರ್ನಿ ಲೀಗ್ ಪಂದ್ಯಗಳಿಗೆ ಇಂದು ತೆರೆ ಬೀಳಲಿದ್ದು, ಇನ್ನು ಮುಂದೆ ಕ್ವಾಲಿಫೈಯರ್ ಹಣಾಹಣಿ ರಂಗೇರಲಿದೆ. ಎರಡು ಪಂದ್ಯಗಳು ಇಂದು ನಡೆಯಲಿದ್ದು, ಒಂದು ಪಂದ್ಯದಲ್ಲಿ ಮುಂಬೈ-ಸನ್ರೈಸರ್ಸ್ ನಡುವೆ ಕಾದಾಟ ನಡೆಸಲಿವೆ. ಇನ್ನೊಂದು ಪಂದ್ಯದಲ್ಲಿ ಆರ್ಸಿಬಿ-ಡೆಲ್ಲಿ ನಡುವೆ ಸೆಣಸಾಟ ನಡೆಯಲಿದೆ. ಆದರೆ ಇಲ್ಲಿ ಮುಂಬೈ ಪಾಲಿಗೆ ಇಂದಿನ ಪಂದ್ಯ ಮಹತ್ವದ್ದಾಗಿದೆ. ಆರ್ಸಿಬಿ ಹಿಂದಿನ ಪಂದ್ಯದ ತಪ್ಪಗಳನ್ನ ತಿದ್ದಿಕೊಂಡು ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಂಡಿದೆ. ಜೊತೆಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ …
Read More »ಸಿಎಂ ಬೊಮ್ಮಾಯಿ ‘ದೆಹಲಿ ಯಾತ್ರೆ’.. ಸಚಿವಾಕಾಂಕ್ಷಿಗಳಲ್ಲಿ ಚಿಗುರಿದ ಆಸೆ
ಬೆಂಗಳೂರು: ಇವತ್ತು ಸಿಎಂ ಬಸವರಾಜ್ ಬೊಮ್ಮಾಯಿ ಹೈಕಮಾಂಡ್ ನಾಯಕರ ಭೇಟಿಗಾಗಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿ, ಕೇಂದ್ರದ ಸಚಿವರನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಲಿದ್ದಾರೆ. ಜೊತೆಗೆ ಹೈಕಮಾಂಡ್ ನಾಯಕರ ಬಳಿ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಲಿದ್ದಾರೆ. ಅಲ್ಲದೇ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿರುವ ಅನುದಾನದ ಬಗ್ಗೆಯೂ ಪ್ರಸ್ತಾಪ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇವರೆಲ್ಲರ ಭೇಟಿ ಮುಗಿದ ನಂತರ …
Read More »ಗೋಕಾಕ ನಗರದಲ್ಲಿ ವ್ಯಾಕ್ಸಿನೇಷನ್ ಬೃಹತ್ ಮೇಳ*
*ಗೋಕಾಕ ನಗರದಲ್ಲಿ ವ್ಯಾಕ್ಸಿನೇಷನ್ ಬೃಹತ್ ಮೇಳ* *ಗೋಕಾಕ ನಗರದಲ್ಲಿರುವ ಸಮಸ್ತ ನಾಗರಿಕರು “ಬೃಹತ್ ವ್ಯಾಕ್ಸಿನೇಷನ್” ಮೇಳದ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕರಾದ ಶ್ರೀ ರಮೇಶ ಜಾರಕಿಹೊಳಿ ಅವರು ಸಮಸ್ತ ಗೋಕಾಕ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ* *ನಿಮ್ಮ ಹತ್ತಿರದ ಲಸಿಕಾ ಕೇಂದ್ರದ ಮಾಹಿತಿ* *08/10/21** * *COVID* **VACCINE*CENTERS* **GOKAK * *CITY* 1)Mayur school covaxin 100 doses Covishield 150 doses. 2)Valmiki ground Covishield …
Read More »ಮೂಢನಂಬಿಕೆಗೆ ಸೆಡ್ಡು -ಚಾಮರಾಜನಗರಕ್ಕೆ ನಾಳೆ ಸಿಎಂ ಬೊಮ್ಮಾಯಿ ಭೇಟಿ
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಇಂದು ಮತ್ತು 7ನೇ ತಾರೀಕಿನಂದು ಎರಡು ದಿನಗಳ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಳ್ಳಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಸಿಎಂ ಮೈಸೂರು ತೆರಳಲಿದ್ದು, ಸಂಜೆ 4 ಗಂಟೆಗೆ ಮೋದಿ ಯುಗ್ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಗುರುವಾರ ಬೆಳಗ್ಗೆ ಚಾಮುಂಡಿ ದೇವಿಯ ದರ್ಶನ ಪಡೆಯಲಿದ್ದು, ದಸರಾ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಗುರುವಾರ ಬೆಳಗ್ಗೆ 10.40 ಕ್ಕೆ ಮೈಸೂರು ವಿಮಾನನಿಲ್ದಾಣದಲ್ಲಿ ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳಲಿದ್ದು, …
Read More »ರಸ್ತೆ ಗುಂಡಿಗಳ ಬಗ್ಗೆ ವರದಿ ತಯಾರಿಸಲು ಕಾರ್ಯಪಡೆ ರಚಿಸಲು ನಿರ್ಧರಿಸಲಾಗಿದೆ:ಬೊಮ್ಮಾಯಿ
ಮೈಸೂರು: ಬೆಂಗಳೂರಿನಲ್ಲಿನ ರಸ್ತೆ ಗುಂಡಿಗಳ ಬಗ್ಗೆ ವರದಿ ತಯಾರಿಸಲು ಕಾರ್ಯಪಡೆ ರಚಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದರು. ರಸ್ತೆ ಗುಣಮಟ್ಟದ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ. ಕಳಪೆ ಕಾಮಗಾರಿಯಿಂದ ಗುಂಡಿಗಳು ಬಿದ್ದಿದ್ದರೆ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ನಿಶ್ಚಿತ ಎಂದು ಬೊಮ್ಮಾಯಿ ಎಚ್ಚರಿಸಿದರು. ಯಾವ ಅವಧಿಯಲ್ಲಿ ರಸ್ತೆ ಆಗಿದೆ? ರಸ್ತೆಗಳನ್ನು ನಿರ್ಮಿಸುವಾಗ ಗುಣಮಟ್ಟ ಕಾಪಾಡಲಾಗಿದೆಯೇ ಎಂಬ ಬಗ್ಗೆ ವಿಸ್ತೃತ ವರದಿ ತರಿಸಿಕೊಳ್ಳುತ್ತೇನೆ. ಕಳಪೆ ಕಾಮಗಾರಿಯಿಂದ ರಸ್ತೆಯಲ್ಲಿ ಗುಂಡಿ …
Read More »ಮಹಾಮಳೆಗೆ ಕುಸಿದುಬಿದ್ದ ಮನೆ.. ಒಂದೇ ಕುಟುಂಬದ 7 ಮಂದಿ ಸಾವು
ಬೆಳಗಾವಿ: ನಿನ್ನೆಯಿಂದ ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆಗೆ ಮನೆ ಬಿದ್ದು ಒಂದೇ ಕುಟುಂಬದ ಏಳು ಜನರು ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ಮಳೆಗೆ ಮನೆ ಕುಸಿದಿದ್ದರಿಂದ ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದರೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮತ್ತಿಬ್ಬರು ಸಾವಿನ ಕದ ತಟ್ಟಿದ್ದಾರೆ. ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಮೃತರೆಲ್ಲರೂ ಭೀಮಪ್ಪಾ ಖನಗಾವಿ ಕುಟುಂಬದ ಸದಸ್ಯರಾಗಿದ್ದಾರೆ. ಮೃತರನ್ನು ಗಂಗವ್ವ ಖನಗಾವಿ (50), ಸತ್ಯವ್ವ ಖನಗಾವಿ (45), ಪೂಜಾ …
Read More »