ದಾವಣಗೆರೆ: ಜಿಲ್ಲೆಯಲ್ಲಾದ ಭಾರಿ ಮಳೆಗೆ ಚಿರಡೋಣಿ ಹಾಗೂ ದೊಡ್ಡಘಟ್ಟ ಗ್ರಾಮಗಳ ನಡುವಿನ ಹಳ್ಳ ತುಂಬಿ ಹರಿಯುತ್ತಿದೆ. ಈ ಹಳ್ಳದಾಟಲು ಹೋಗಿ ಯುವಕ ಕೊಚ್ಚಿ ಹೋದ ಘಟನೆ ದಾವಣಗೆರೆಯಲ್ಲಿ ಸಂಭವಿಸಿದೆ. ಶಿವರಾಜ್ (23) ನೀರು ಪಾಲದ ಯುವಕ. ಘಟನೆ ಸಂಭವಿಸಿ 24 ಗಂಟೆ ಕಳೆದರೂ ಯುವಕನ ಶವ ಪತ್ತೆಯಾಗಿಲ್ಲ. ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ಹಳ್ಳವನ್ನು ದಾಟಲು ಮುಂದಾಗಿದ್ದ ಯುವಕ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ಕಳೆದ 24 ಗಂಟೆಗಳಿಂದ ಹಳ್ಳಕ್ಕೆ …
Read More »ಬಿಟ್ ಕಾಯಿನ್, ಡ್ರಗ್ಸ್ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದರೆ ಹೇಳಿ: ಸಿದ್ದುಗೆ ಸಿಎಂ ಬೊಮ್ಮಾಯಿ ಸವಾಲ್
ಹುಬ್ಬಳ್ಳಿ: ಬಿಟ್ ಕಾಯಿನ್ ಮತ್ತು ಡ್ರಗ್ಸ್ ಪ್ರಕರಣದ ವಿಚಾರವಾಗಿ ಈಗಾಗಲೇ ರಾಜ್ಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತೀವೆ. ಅದರಲ್ಲಿ ರಾಜಕಾರಣಿಗಳು ಮತ್ತು ಪ್ರಭಾವಿಗಳು ಭಾಗಿಯಾಗಿದ್ದರೆ ಹೆಸರು ಹೇಳಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಸಿಎಂ ಬಸವರಾಜ ಬೊಮ್ಮಾಯಿ ಸವಾಲು ಹಾಕಿದರು. ನಗರದಲ್ಲಿ ಗುರುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗೆ ನಾವೇ ಸ್ವತಃ ವಹಿಸಿದ್ದೇವೆ. ಈ ಪ್ರಕರಣದಲ್ಲಿ ಭಾಗಿಯಾದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲಾ ಎಂದು …
Read More »ಜಮೀನು ವಿವಾದ; ಎರಡು ಗ್ರಾಮಗಳ ನಡುವೆ ಮಾರಾಮಾರಿ; ಆಸ್ಪತ್ರೆ ಸೇರಿದ 13 ಮಂದಿ
ದಾವಣಗೆರೆ: ಜಮೀನು ವಿವಾದಕ್ಕೆ ಎರಡು ಗ್ರಾಮಗಳ ನಡುವೆ ಮಾರಾಮಾರಿ ಸಂಭವಿಸಿದೆ. ದೊಣ್ಣೆ, ಕುಡುಗೋಲುಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡು ಬಡಿದಾಡಿಕೊಂಡಿದ್ದಾರೆ. ನ್ಯಾಮತಿ ತಾಲ್ಲೂಕಿನ ಕಂಚಿಕೊಪ್ಪ, ಹಾಗೂ ಹೊನ್ನಾಳಿಯ ತುಗ್ಗಲಹಳ್ಳಿ ಗ್ರಾಮಸ್ಥರ ನಡುವೆ ಮಾರಾಮಾರಿ ನಡೆದಿದೆ. ಕಂಚಿಕೊಪ್ಪ ಗ್ರಾಮದ 30 ದಲಿತ ಕುಟುಂಬಗಳು ತುಗ್ಗಲಹಳ್ಳಿ ಗ್ರಾಮದ ಬಳಿ ಇರುವ ಸರ್ವೇ ನಂಬರ್ 29- 30 ರಲ್ಲಿ 40 ಎಕರೆ ಜಮೀನನಲ್ಲಿ ಉಳುಮೆ ಮಾಡುತ್ತಿದ್ದರು. ಇದು ತುಗ್ಗಲಹಳ್ಳಿ ಗ್ರಾಮದ ಗೋಮಾಳ ಜಾಗ ಅಂತ ಬೆಳೆ ನಾಶ …
Read More »ಬೆಳಗಾವಿಯ ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಗುರುವಾರ ಲಕ್ಷ ಕಂಠ ಗೀತಗಾಯನ ನಡೆಯಿತು.
ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ‘ಕನ್ನಡಕ್ಕಾಗಿ ನಾವು’ ಅಭಿಯಾನದಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಗುರುವಾರ ಲಕ್ಷ ಕಂಠ ಗೀತಗಾಯನ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿರುವ ಲಕ್ಷ ಕಂಠ ಕನ್ನಡ ಗೀತಗಾಯನ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಗೀತಗಾಯನವನ್ನು ಪ್ರಸ್ತುತಪಡಿಸಿದರು. ರಾಷ್ಟ್ರಕವಿ ಕುವೆಂಪು ವಿರಚಿತ ‘ಬಾರಿಸು ಕನ್ನಡ ಡಿಂಡಿಮ’; ನಿಸಾರ್ ಅಹಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ …
Read More »ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೇಸ್; ವಕೀಲ ರಾಜೇಶ್ ಭಟ್ ಗೆ ಸಹಾಯ ಮಾಡಿದ್ದ ಸ್ನೇಹಿತ ಅರೆಸ್ಟ್
ಮಂಗಳೂರು: ಇಂಟರ್ನ್ ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿ ವಕೀಲ ರಾಜೇಶ್ ಭಟ್ ನಾಪತ್ತೆಯಾಗಿದ್ದು, ಆತನಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದ ಸ್ನೇಹಿತ ಅನಂತ್ ಭಟ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಬೊಂದೆಲ್ ನಿವಾಸಿ ಅನಂತ್ ಭಟ್, ವಕೀಲ ರಾಜೇಶ್ ಭಟ್ ಪರಾರಿಯಾಗಲು ಸಹಾಯ ಮಾಡಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಇದೀಗ ಅನಂತ್ ಭಟ್ ನನ್ನು ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸಿದ್ದಾರೆ. ರಾಜೇಶ್ ತಪ್ಪಿಸಿಕೊಳ್ಳಲು ಬಳಸಿದ್ದ ಕಾರನ್ನು …
Read More »ಕನ್ನಡಕ್ಕಾಗಿ ನಾವುʼ ಅಭಿಯಾನಕ್ಕೆ ಚಾಲನೆ; ‘ಬಾರಿಸು ಕನ್ನಡ ಡಿಂಡಿಮವ’; ವಿಮಾನ ನಿಲ್ದಾಣ, ಮೆಟ್ರೋದಲ್ಲಿಯೂ ಮೊಳಗಿದ ಕನ್ನಡ ಕಲರವ
ಬೆಂಗಳೂರು: ಕನ್ನಡ ರಾಜ್ಯೋತ್ಸವಕ್ಕೆ ಕೆಲವು ದಿನಗಳು ಬಾಕಿ ಇದ್ದರೂ ಇಂದಿನಿಂದಲೇ ಸಂಭ್ರಮಾಚರಣೆ ಆರಂಭವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಠವಾಗಿ ಆಚರಿಸಲಾಗುತ್ತಿದ್ದು, ಕನ್ನಡಕ್ಕಾಗಿ ನಾವು ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ವಿಧಾನಸೌಧದ ಮೆಟ್ಟುಲುಗಳ ಮೇಲೆ ಕನ್ನಡಕ್ಕಾಗಿ ನಾವು ಅಭಿಯಾನಕ್ಕೆ ಸಾಮೂಹಿಕ ಗೀತ ಗಾಯನದ ಮೂಲಕ ಸಚಿವ ಸುನೀಲ್ ಕುಮಾರ್ ಚಾಲನೆ ನೀಡಿದರು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಿಂತು ಸಾವಿರಾರು ಗಾಯಕರು ಕನ್ನಡದ ಪ್ರಸಿದ್ದ ಮೂರು …
Read More »ಬರೋಬ್ಬರಿ 35 ಲಕ್ಷ ರೂ. ಮೌಲ್ಯದ ಹಳೆ ನೋಟು ವಶ
ನೋಟು ಅಮಾನ್ಯೀಕರಣಗೊಂಡು ಬರೋಬ್ಬರಿ ಐದು ವರ್ಷಗಳೇ ಕಳೆದಿವೆ. ಆದರೆ ಗೋವಿಂದಪುರದಲ್ಲಿ ಅಮಾನ್ಯೀಕರಣಗೊಂಡ ನೋಟು ವಿನಿಮಯ ಹಾಗೂ ನಕಲಿ ಹಣವನ್ನು ಉತ್ಪಾದಿಸುತ್ತಿದ್ದ ಆರೋಪದ ಅಡಿಯಲ್ಲಿ ಪೊಲೀಸರು ಬಿಬಿಎಂಪಿ ಉಪ ಗುತ್ತಿಗೆದಾರ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಬಟ್ಟೆ ವ್ಯಾಪಾರಿಗಳಾದ ಸುರೇಶ್ ಕುಮಾರ್(32), ರಾಮಕೃಷ್ಣ(32), ವೆಂಕಟೇಶ್ ಎಂ(53), ಮಂಜುನಾಥ್(43), ಹಾಗೂ ದಯಾನಂದ ಎಂಬವರು ಹೆಚ್ಬಿಆರ್ ಲೇ ಔಟ್ ನಲ್ಲಿ ಬರೋಬ್ಬರಿ 35 ಲಕ್ಷ ರೂಪಾಯಿ ಮೌಲ್ಯದ ಅಮಾನ್ಯೀಕರಣಗೊಂಡ 500 ಹಾಗೂ 1000 ರೂಪಾಯಿ …
Read More »ಚಿತ್ರದುರ್ಗ: ಎಸಿಬಿ ಬಲೆಗೆ ಬಿದ್ದ ಪ್ರಭಾರಿ ಆಹಾರ ಸಂರಕ್ಷಣಾಧಿಕಾರಿ
ಚಿತ್ರದುರ್ಗ: ಲಂಚ ಸ್ವೀಕಾರ ವೇಳೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ್ ಅವರು ಎಸಿಬಿ ಬಲೆಗೆ ಬಿದ್ದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಪ್ರಭಾರಿ ಆಹಾರ ಸಂರಕ್ಷಣಾಧಿಕಾರಿ ಆಗಿದ್ದ ತುಳಸಿ ರಂಗನಾಥ್, ಬೇಕರಿ ಪರವಾನಗಿ ನವೀಕರಣಕ್ಕಾಗಿ ‘ನಮ್ ಬೇಕರಿ’ ಮಾಲೀಕ ಮಂಜುನಾಥ್ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 8ಸಾವಿರ ರೂ. ಲಂಚ ಸ್ವೀಕಾರ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಎಸಿಬಿ ಎಸ್ ಐ ಪ್ರವೀಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
Read More »ಬೆಳಗಾವಿ ಜಿಲ್ಲೆಯ ವಿಧವೆಯರಿಗೆ 8 ಸಾವಿರ ಮನೆ ಮಂಜೂರು- ಕವಟಗಿಮಠ
ಚಿಕ್ಕೋಡಿ: ಸಮಾಜದಲ್ಲಿ ತುಳಿತಕ್ಕೆ ಒಳಗಾದ ವಿಧವೆಯರಿಗೆ ಬೆಳಗಾವಿ ಜಿಲ್ಲೆಗೆ 8 ಸಾವಿರ ಮನೆ ಮಂಜೂರು ಮಾಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ತಾಲೂಕಿನ 9 ಗ್ರಾಮ ಪಂಚಾಯತಿಯ 120 ಮನೆಗಳು ಮಂಜೂರಾಗಿವೆ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು. ಇಲ್ಲಿನ ಸಿಎಲ್ ಇ ಸಂಸ್ಥೆಯ ಸಭಾ ಭವನದಲ್ಲಿ ರಾಜೀವ ಗಾಂಧಿ ವಸತಿ ನಿಗಮ ಬೆಂಗಳೂರು ಇವರ ವತಿಯಿಂದ ದೇವರಾಜ ಅರಸು ವಿಶೇಷ ವಸತಿ ಯೋಜನೆಯಡಿ ಚಿಕ್ಕೋಡಿ ಸದಲಗಾ ಕ್ಷೇತ್ರದ ವಿವಿಧ ಗ್ರಾಮ …
Read More »ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಧಾರವಾಡ ಮೂಲದ ಪೈಲ್ವಾನ್ ರಫೀಕ್ ಹೊಳಿ
.ಧಾರವಾಡ: ಈ ಊರಿನ ಹೆಸರು ಕೇಳಿದ ಕೂಡಲೇ ಫೇಡಾ ನೆನಪಿಗೆ ಬರುತ್ತದೆ. ಅಷ್ಟೇ ಅಲ್ಲ ಧಾರವಾಡಕ್ಕೆ ವಿದ್ಯಾಕಾಶಿ ಅಂತಾನೂ ಕರೆಯುತ್ತಾರೆ. ಇದೀಗ ಇಂಥ ಧಾರವಾಡ ಬೇರೆ ಬೇರೆ ಕಾರಣಗಳಿಗೂ ಹೆಸರು ಪಡೆಯುತ್ತಿದೆ. ಅದರಲ್ಲೂ ಧಾರವಾಡ ಮೂಲದ ಕುಸ್ತಿಪಟುವೊಬ್ಬರು ರಾಷ್ಟ್ರ ಹಾಗೂ ಅಂತಾರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ತೀರಾ ಬಡ ಮನೆತನದಲ್ಲಿ ಹುಟ್ಟಿ ಬೆಳೆದ ಆ ಕುಸ್ತಿಪಟುವಿನ ಹೆಸರು ರಫೀಕ್ ಹೊಳಿ. ಕೃಷಿ ಕೂಲಿಕಾರರ ಮನೆಯಲ್ಲಿ ಜನಿಸಿ, ಇಂದು ಇಡೀ ದೇಶದಲ್ಲಿಯೇ ಕುಸ್ತಿಯಲ್ಲಿ …
Read More »