ಬೆಂಗಳೂರು: ರಾಜ್ಯ ಸರ್ಕಾರದ ಬಳಿ ಇರುವ ರೈತರು ಮತ್ತು ವಿದ್ಯಾರ್ಥಿಗಳ ಸಮಗ್ರ ಮಾಹಿತಿಯುಳ್ಳ ದತ್ತಾಂಶವನ್ನು ಸಂಪೂರ್ಣ ಸಹಮತಿಯ ಆಧಾರದಲ್ಲಿ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸುವ ‘ಇ-ಸಹಮತಿ’ ಯೋಜನೆ ಅಂತಿಮ ಅನುಮೋದನೆಗಾಗಿ ಕಾನೂನು ಇಲಾಖೆಯನ್ನು ತಲುಪಿದೆ. ತನ್ನ ಬಳಿ ಇರುವ ದತ್ತಾಂಶವನ್ನು ಮಾರಾಟ ಮಾಡುವುದಕ್ಕಾಗಿ ‘ಸಹಮತಿ ಆಧಾರದ ವ್ಯವಸ್ಥೆ’ಯೊಂದನ್ನು ರೂಪಿಸುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ 2020ರ ಡಿಸೆಂಬರ್ನಲ್ಲಿ ಆರಂಭಿಸಿತ್ತು. ಅದರ ಮುಂದುವರಿದ ಭಾಗವಾಗಿಯೇ ಕೃಷಿ ಉತ್ಪನ್ನ ಮಾರುಕಟ್ಟೆ …
Read More »ಹಿಂದುಳಿದ ವರ್ಗಗಳ 2ಎ ಪಟ್ಟಿಗೆ ಸೇರಿಸುವಂತೆ 24 ದಾಖಲೆ ಸಲ್ಲಿಸಿದ ಪಂಚಮಸಾಲಿ ನಿಯೋಗ
ಬೆಂಗಳೂರು: ಪಂಚಮಸಾಲಿ ಸಮು ದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ 2-ಎ ಪಟ್ಟಿಗೆ ಸೇರಿಸುವ ಬೇಡಿಕೆ ಕುರಿತು ಅಧ್ಯಯನ ನಡೆಸುತ್ತಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ನೇತೃತ್ವದ ಸಮಿತಿ ಎದುರು ಸೋಮವಾರ ಹಾಜರಾದ ಹರಿಹರ ಪಂಚಮಸಾಲಿ ಪೀಠದ ವಚನಾ ನಂದ ಸ್ವಾಮೀಜಿ ನೇತೃತ್ವದ ನಿಯೋಗ, ತಮ್ಮ ಬೇಡಿಕೆಗೆ ಪೂರಕವಾಗಿ 24 ದಾಖಲೆಗಳನ್ನು ಸಲ್ಲಿಸಿತು. ಪಂಚಮಸಾಲಿ ಮಠಾಧೀಶರು ಮತ್ತು ಮುಖಂಡರ ನಿಯೋಗದ ಪರವಾಗಿ ವಾದ ಮಂಡಿಸಿದ ವಕೀಲ ಬಿ.ಎಸ್.ಪಾಟೀಲ, ‘1871 …
Read More »ಮೂರ್ನಾಲ್ಕು ತಿಂಗಳಿಂದ ಸುಳ್ಳು ಹೇಳುತ್ತಿರುವ ಸಿದ್ದರಾಮಯ್ಯ ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.
👉👉ನಿನ್ನೆ ಸಿದ್ದರಾಯ್ಯನವರು ಹೇಳಿದ್ದಕ್ಕೆ ಇವತ್ತು ಉತ್ತರ ಕೊಡಲು ಬಂದಿದ್ದೆನೆ..👍👍👍👍 ————- ರಾಯಬಾಗ: ಸಿದ್ದರಾಮಯ್ಯ ಅವರು ಯಾವತ್ತೂ ಸುಳ್ಳು ಹೇಳುವುದಿಲ್ಲ. ನಮ್ಮಂತೆಯೇ ಅವರು ಬಹಳ ನಿಷ್ಠುರವಾದಿ. ಆದರೆ, ಕಳೆದ ಮೂರ್ನಾಲ್ಕು ತಿಂಗಳಿಂದ ಅವರು ಯಾರ ಒತ್ತಡಕ್ಕೆ ಒಳಗಾಗಿ ಸುಳ್ಳು ಹೇಳುತ್ತಿದ್ದಾರೋ ಗೊತ್ತಿಲ್ಲ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಯಿಂದ ಆಯ್ಕೆಯಾಗುವ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ ರಾಯಬಾಗದಲ್ಲಿ ಮಹಾವೀರ ಭವನದಲ್ಲಿ ಸೋಮವಾರ ನಡೆದ …
Read More »ಚಾಮುಂಡಿ, ವರುಣಾ ಬಿಟ್ಟು ಬಾದಾಮಿಗೆ ಯಾಕೆ ಬಂದ್ರಿ?, ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಚಿಮ್ಮನಕಟ್ಟಿ ಬಹಿರಂಗ ವಿರೋಧ
ಬಾಗಲಕೋಟೆ : ಚಾಮುಂಡಿ, ವರುಣಾ ಕ್ಷೇತ್ರ ಬಿಟ್ಟು ಬಾದಾಮಿಗೆ ಬಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಶಾಸಕ ಬಿ ಬಿ ಚಿಮ್ಮನಕಟ್ಟಿ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿದ್ದಾರೆ.ವಿಧಾನ ಪರಿಷತ್ ಚುನಾವಣೆ ಪ್ರಚಾರದ ಅಂಗವಾಗಿ ಬಾದಾಮಿ ಪಟ್ಟಣದ ಅಕ್ಕ ಮಹಾದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರ ಎದುರೇ ಚಿಮ್ಮನಕಟ್ಟಿ ಟೀಕಾಪ್ರಹಾರ ನಡೆಸಿದ್ದಾರೆ. ಚಾಮುಂಡಿ, ವರುಣಾ ಬಿಟ್ಟು ಬಾದಾಮಿಗೆ ಯಾಕೆ ಬಂದ್ರಿ?, ನೀವು ಇಲ್ಲಿ ಬಂದ ಮೇಲೆ ‘ಹುಲಿ’ಯನಾಗಿದ್ದ ನನ್ನನ್ನು ‘ಇಲಿ’ …
Read More »ಧರ್ಮಸ್ಥಳ ಮೇಳ: ಬಯಲಾಟ ಪ್ರದರ್ಶನ ಪ್ರಾರಂಭ
ಬೆಳ್ತಂಗಡಿ: ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯ ಸೇವಾ ಬಯಲಾಟ ಪ್ರದರ್ಶನಗಳು ಭಾನುವಾರ ಮಂಗಳೂರಿನಲ್ಲಿ ಸೇವಾ ಪ್ರದರ್ಶನದೊಂದಿಗೆ ಪ್ರಸ್ತುತ ವರ್ಷದ ತಿರುಗಾಟ ಆರಂಭಗೊಂಡಿದೆ. ಈಗಾಗಲೇ ಕೆಲವು ದಿನಗಳಲ್ಲಿ ಧರ್ಮಸ್ಥಳದಲ್ಲಿ ಸೇವಾ ಹರಿಕೆ ಬಯಲಾಟ ಪ್ರದರ್ಶನಗಳು ನಡೆದಿವೆ. ಕಳೆದ ಆರು ವರ್ಷಗಳಿಂದ ಕಾಲಮಿತಿಯ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ. ಪ್ರತಿದಿನ ಸಂಜೆ ಗಂಟೆ 7 ರಿಂದ 12 ರ ವರೆಗೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯುತ್ತದೆ. ಪ್ರೇಕ್ಷಕರಿಂದ, ಸೇವಾಕರ್ತರಿಂದ ಹಾಗೂ ಕಲಾವಿದರಿಂದಲೂ ಇದಕ್ಕೆ ಉತ್ತಮ …
Read More »ಖಾನಾಪುರ ಅಭಿವೃದ್ಧಿಗೆ ಸ್ಪಂದಿಸದ ರಾಜ್ಯ ಸರಕಾರದ ವಿರುದ್ದ ಸುವರ್ಣಸೌಧವರೆಗೂ ಪಾದಯಾತ್ರೆಗೆ ಮುಂದಾದ ಅಂಜಲಿ ನಿಂಬಾಳ್ಕರ್
ಖಾನಾಪುರ ಅಭಿವೃದ್ಧಿಗೆ ಸ್ಪಂದಿಸದ ರಾಜ್ಯ ಸರಕಾರದ ವಿರುದ್ದ ಸುವರ್ಣ ಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಬೆಳಗಾವಿಯ ಅಧಿವೇಶನ ಹಿನ್ನೆಲೆ ಈ ಭಾಗದ ರೈತರು, ಸಾರ್ವಜನಿಕರು ಸೇರಿ ಹೆಸರಲ್ಲಿ ಡಿ. 12ರಂದು ಖಾನಾಪುರ ಸಂಘರ್ಷ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಮಾಹಿತಿ ನೀಡಿದ್ದಾರೆ. ಖಾನಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ 13ರಿಂದ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಮಗ್ರ …
Read More »ಬೆಳಗಾವಿಯಲ್ಲಿ ಅಂಬೇಡ್ಕರ್ರವರ 65ನೇ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಮೌಢ್ಯ ವಿರೋಧಿ ದಿನಾಚರಣೆ
ಮಾನವ ಬಂಧುತ್ವ ವೇದಿಕೆ ಬೆಳಗಾವಿಯ ವತಿಯಿಂದ ಡಾ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ರ 65ನೇ ಮಹಾಪರಿನಿರ್ವಾಣ ದಿನವನ್ನು ಆಚರಣಾ ಮಾಡಲಾಯಿತು. ಬೆಳಗಾವಿಯ ಸದಾಶಿವ ನಗರದ ಬೌದ್ಧವಿಹಾರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ರವರ 65ನೇ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಮೌಢ್ಯ ವಿರೋದಿ,ü ಪರಿವರ್ತನಾ ದಿನ ಆಚರಿಸಲಾಯಿತು. ಈ ವೇಳೆ ಮಾತನಾಡಿದ ರವೀಂದ್ರ ನಾಯ್ಕರ್, ಸಮಾಜಿಕ, ಧಾರ್ಮಿಕ, ಮೂಢನಂಬಿಕೆಗಳ ಆಚರಣೆ ಮತ್ತು ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಈ …
Read More »ದುಷ್ಕರ್ಮಿಗಳ ತಂಡವೊಂದು ಐದು ಮಂದಿ ಯುವಕರ ಮೇಲೆ ಮಾರಣಾಂತಿಕ ಹಲ್ಲೆ
ಉಪ್ಪಿನಂಗಡಿ:ದುಷ್ಕರ್ಮಿಗಳ ತಂಡವೊಂದು ಐದು ಮಂದಿ ಯುವಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಇಲಂತಿಲ ಗ್ರಾಮದ ಅಂಡೆತಡ್ಕದಲ್ಲಿ ನಡೆದಿದೆ. ಮೂವರು ಯುವಕರಿಗೆ ಸಣ್ಣಪುಟ್ಟ ಗಾಯ, ಆಸ್ಪತ್ರೆಗೆ ದಾಖಲಾಗಿದ್ದಾರೆ. ಫಯಾಝ್ (26), ಹಫೀಝ್ (19) ಎಂಬುವವರು ರಾತ್ರಿ ಅಂಗಡಿಯೊಂದರ ಬಳಿ ಇದ್ದರು. ಇದೇ ವೇಳೆ ಅಲ್ಲಿಗೆ ಬಂದ 4ರಿಂದ 5 ಮಂದಿಯ ತಂಡ ಅವರ ಮೇಲೆ ಏಕಾಏಕಿ ತಲ್ವಾರು …
Read More »ರಾಜ್ಯದಲ್ಲಿ ಕೊರೋನಾ ಹೆಚ್ಚಾದರೆ ಶಾಲೆ ಬಂದ್ – ಸಚಿವ ಬಿ.ಸಿ.ನಾಗೇಶ್
ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ಕಾಲಿಟ್ಟ ನಂತರ, ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸೋದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೊರೋನಾ ಹೆಚ್ಚಾದ್ರೆ ಶಾಲೆ ಬಂದ್ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ. ಕೋವಿಡ್ ತೀವ್ರತೆಯನ್ನು ಆಧರಿಸಿ, ಶಾಲಾ-ಕಾಲೇಜು ಮುಚ್ಚೋ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯದಲ್ಲಿನ ಕೊರೋನಾ ಸೋಂಕಿನ ತೀವ್ರತೆ ಬಗ್ಗೆ ತಜ್ಞರಿಂದ ಪ್ರತಿ ದಿನ …
Read More »ಕಾಮಸೂತ್ರ – ವಾತ್ಸ್ಯಾಯನ ಮಹರ್ಷಿಗಳು ಬರೆದ ಒಂದು ಶಾಸ್ತ್ರಗ್ರಂಥ. ಇದರ ಯಥಾರೂಪ ಅನುವಾದ ಇದೀಗ ಕನ್ನಡಕ್ಕೆ
ಬೆಂಗಳೂರು – ಕಾಮಸೂತ್ರ – ವಾತ್ಸ್ಯಾಯನ ಮಹರ್ಷಿಗಳು ಬರೆದ ಒಂದು ಶಾಸ್ತ್ರಗ್ರಂಥ. ಇದರ ಯಥಾರೂಪ ಅನುವಾದ ಇದೀಗ ಕನ್ನಡಕ್ಕೆ ಬರುತ್ತಿದೆ. ವಿಶೇಷವೆಂದರೆ ಇದು ವಾತ್ಸ್ಯಾಯನ ಕೃತಿಯಿಂದ ಏನನ್ನೂ ಕೈಬಿಡದ, ಹಾಗೆಯೇ ಏನನ್ನೂ ಹೊಸದಾಗಿ ಸೇರಿಸದ, “ಇದ್ದದ್ದು ಇದ್ದ ಹಾಗೆ” ಎಂದು ಹೇಳಬಹುದಾದ ಪ್ರಥಮ ಕನ್ನಡ ಅನುವಾದ! ಈ ಕೃತಿಯು ಇದೇ ಸೋಮವಾರ, ಡಿಸೆಂಬರ್ 6ರಂದು ಬಸವನಗುಡಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ರ್ಡ್ ಕಲ್ಚರ್ನಲ್ಲಿ ಸಂಜೆ 5:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಯಾಗಲಿದೆ. ಕಾರ್ಯಕ್ರಮದ …
Read More »