Breaking News

Uncategorized

ಉಡುಪಿ; ಕನ್ನಡ ಶಾಲೆಯಲ್ಲಿ ಮಕ್ಕಳಿದ್ದರೂ ಶಿಕ್ಷಕರಿಲ್ಲ!

ಉಡುಪಿ, ಡಿಸೆಂಬರ್ 28; ಸರ್ಕಾರಿ ಶಾಲೆ ಅದು ಊರಿನ ನೆನಪಿದ ಬುತ್ತಿ. ಜ್ಞಾನ ನೀಡುವ ಅಕ್ಷರ ಧಾಮ. ಸರ್ವ ಧರ್ಮಗಳ ಮಂದಿರ. ಇಂತಹ ಸರ್ಕಾರಿಗಳು ಇಂದು, ವಿದ್ಯಾರ್ಥಿಗಳಿಲ್ಲದೇ ಸೊರಗಿ, ಶಿಕ್ಷರಿಲ್ಲದೇ ಬಾಗಿಲು ಮುಚ್ಚುತ್ತಿವೆ. ಆದರೆ ಬುದ್ಧಿವಂತರ ಜಿಲ್ಲೆಯ ಶಾಲೆಯೊಂದರಲ್ಲಿ ಕನ್ನಡ ಕಲಿಯಬೇಕು ಅಂತ ಬಂದಿರುವ ವಿದ್ಯಾರ್ಥಿಗಳಿದ್ದರೂ, ಖಾಯಂ ಶಿಕ್ಷಕರಿಲ್ಲದೇ ಮುಚ್ಚುವ ಹಂತಕ್ಕೆ ಬಂದಿದೆ. ತಾಯಂದಿರು, ಖಾಯಂ ಶಿಕ್ಷಕರನ್ನು ನೇಮಿಸಿ ಶಾಲೆ ಉಳಿಸಿ ಎನ್ನುವ ಹೋರಾಟಕ್ಕೆ ಮುಂದಾಗಿದ್ದಾರೆ. “ಐಸಿಯುನಲ್ಲಿ ಪೇಶೆಂಟ್ ಇಲ್ಲಾ …

Read More »

ಗಂಡ ಹೆಂಡತಿ ಜಗಳದಲ್ಲಿ ಮಧ್ಯೆ ಪ್ರವೇಶಿಸಿ ದುಡ್ಡು ಮಾಡಲು ಯತ್ನ: ಇನ್ಸ್​ಪೆಕ್ಟರ್​ ವಿರುದ್ಧ ಎಫ್ಐಆರ್

ಬೆಂಗಳೂರು: ಗಂಡ ಹೆಂಡತಿಯ ಜಗಳದಲ್ಲಿ ಲಾಭ ಪಡೆಯಲು ಯತ್ನಿಸಿದ ಪೊಲೀಸ್ ಇನ್ಸ್​ಪೆಕ್ಟರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಎಫ್‌ಐಆರ್ ದಾಖಲಿಸಿದೆ. ಕೆ.ಆರ್. ಪುರ ಠಾಣೆಯಲ್ಲಿ ಇನ್ಸ್​ಪೆಕ್ಟರ್ ಆಗಿದ್ದ ಜಯರಾಜ್ ಮತ್ತು ಎಎಸ್ಐ ಶಿವಕುಮಾರ್ ಎಂಬವರ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಸಂಜು ರಾಜನ್ ವಿರುದ್ಧ ಆಕೆಯ ಪತ್ನಿ ದೂರು ದಾಖಲಿಸಿದ್ದರು. ಹೀಗಾಗಿ ಬಂಧನಕ್ಕೆ ಒಳಗಾಗಿದ್ದ ಸಂಜು ರಾಜನ್ ಬಳಿಕ ಜಾಮೀನಿನ ಮೇರೆಗೆ ಹೊರಬಂದಿದ್ದ. ನಂತರ ಪ್ರತಿ ಬಾರಿ ಠಾಣೆಗೆ …

Read More »

ವಾರ ಭವಿಷ್ಯ

  ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1) ಸಂಪನ್ಮೂಲಗಳಿಗಾಗಿ ಸಾಕಷ್ಟು ಹುಡುಕಾಟ ನಡೆಸುವಿರಿ. ಇತರರ ಕೆಲಸಗಳ ಯಶಸ್ಸಿಗಾಗಿ ಸಲಹೆ ನೀಡುವ ಅವಕಾಶ ದೊರೆಯುತ್ತದೆ. ಈ ಹಿಂದೆ ನಿಲ್ಲಿಸಿದ್ದ ವಿದ್ಯಾಭ್ಯಾಸವನ್ನು ಪುನಃ ಆರಂಭಿಸಲು ಸೂಕ್ತ ಆಲೋಚನೆ ಮಾಡುವಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಇದ್ದೇ ಇರುತ್ತದೆ. ಸದ್ಯದಲ್ಲೇ ಕೌಟುಂಬಿಕ ಸಮಸ್ಯೆಗಳು ಎದುರಾದರೂ ನಂತರ ತಿಳಿಯಾಗುತ್ತವೆ. ಹೊಸ ವ್ಯವಹಾರದಲ್ಲಿ ಭಾಗವಹಿಸಲು ಅವಕಾಶವನ್ನು ಪಡೆಯುವ ಯತ್ನದಲ್ಲಿ ಯಶಸ್ವಿಯಾಗುವಿರಿ. ನಿಮ್ಮ ಹಿರಿಯರಿಗೆ ಆರೋಗ್ಯ …

Read More »

ಸಂತೋಷ್ ಜಾರಕಿಹೊಳಿ ಅವರಿಂದ 49ನೆಯ ವಾರದ ಅನ್ನ ಸಂತರ್ಪಣೆ ಕಾರ್ಯಕ್ರಮ

ಗೋಕಾಕ: ಗೋಕಾಕ ತಾಲೂಕಿನ ಚಿಕ್ಕ ನಂದಿ ಗ್ರಾಮದ ಶ್ರೀ ಸಿದ್ದಾರೂಢ ಮಠದಲ್ಲಿ ಇಂದು ಪ್ರತಿ ಶನಿವಾರ ದಂತೆ ಈ ಶನಿವಾರ ಕೂಡ ಅನ್ನ ಸಂತರ್ಪಣೆ ನಡೆಯಿತು. ಇಂದು ಚಿಕ್ಕನಂದಿ ಗ್ರಾಮದ ಜನತೆಗೆ ಸಾಹುಕಾರ ಹಾಗೂ ಅವರ್ ಅಭಿಮಾನ ಬಳಗದ ವತಿಯಿಂದ ಈ ಒಂದು ಕಾರ್ಯಕ್ರಮ ನಡೆಯಿತು ಚಿಕ್ಕ ಮಕ್ಕಳು ಸೇರಿದಂತೆ ಗುರು ಹಿರಿಯರು ಕೂಡ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಅನ್ನ ಸಂತರ್ಪಣೆಯ ಲಾಭ ಪಡೆದರು   ಸುಮಾರು 49 …

Read More »

ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಅವಘಡ ಆಘಾತಕಾರಿ ಭವಿಷ್ಯ ನುಡಿದ ಕೋಡಿಮಠದ ಡಾ. ಶಿವಾನಂದ ಸ್ವಾಮೀಜಿ

ಹಾವೇರಿ: ತಮ್ಮ ನಿಖರವಾದ ಭವಿಷ್ಯಕ್ಕೆ ಹೆಸರಾದ ಕೋಡಿಮಠದ ಡಾ. ಶಿವಾನಂದ ಸ್ವಾಮೀಜಿ ರಾಜಕೀಯದ ಬಗ್ಗೆ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಅವಘಡ ಸಂಭವಿಸಿದೆ ಎಂದು ಕೋಡಿಮಠದ ಸ್ವಾಮೀಜಿ ಹೇಳಿದ್ದಾರೆ. ರಾಣೆಬೆನ್ನೂರಿನಲ್ಲಿ ಮಾತನಾಡಿದ ಅವರು, ಕಾಯಿಲೆ ರೂಪಾಂತರ ಹೆಚ್ಚಿದೆ. ಮಳೆಯಾಗುವ ಲಕ್ಷಣವಿದೆ. ನಾನು ಈ ಹಿಂದೆ ಹೇಳಿದಂತೆ ರಾಷ್ಟ್ರಮಟ್ಟದಲ್ಲಿ ಅವಘಡ ಸಂಭವಿಸಲಿದೆ ಎಂಬುದು ನಿಜವಾಗಿದೆ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಅವಘಡ ಸಂಭವಿಸಲಿದೆ ಎಂದು ಹೇಳಿದ್ದಾರೆ.

Read More »

ರಾಜ್ಯದ ರೈತರಿಗೆ ಮಹತ್ವದ ಮಾಹಿತಿ: ಈ ದಿನಾಂಕದಂದು ಶುರುವಾಗಲಿದೆ ‘ಕಿಸಾನ್ ಕ್ರೆಡಿಟ್ ಕಾರ್ಡ್’ ವಿತರಣಾ ಅಭಿಯಾನ

ಹಾವೇರಿ: ರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪಶು ಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ನಿರ್ವಹಣಾ ವೆಚ್ಚ ಭರಿಸಲು ರಾಷ್ಟ್ರಿಕೃತ ಬ್ಯಾಂಕ್, ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲು ನವಂಬರ್ 15 ರಿಂದ ಫೆಬ್ರುವರಿ 15ರವರೆಗೆ ಹೊಸ ಕಿಸಾನ ಕ್ರೆಡಿಟ್ ಕಾರ್ಡ್‍ಗಳನ್ನು ವಿತರಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.   ಆಸಕ್ತ ರೈತರು ಹತ್ತಿರದ ಪಶುವೈದ್ಯಕೀಯ ಸಂಸ್ಥೆಯಲ್ಲಿ ಅರ್ಜಿ ನಮೂನೆ ಪಡೆದು ಆಧಾರ್, ಪಹಣಿ ಪತ್ರ, ಬ್ಯಾಂಕ್ ಖಾತೆ …

Read More »

ಕೇಂದ್ರ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

  ಅಥಣಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾರ್ವಜನಿಕರ ಸಮಸ್ಯೆಗೆ ಸ್ಪಂದನೆ ನೀಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆರೋಪಿಸಿದರು. ಅಥಣಿ ಪಟ್ಟಣದಲ್ಲಿ ಪುರಸಭೆ ಚುನಾವಣಾ ನಿಮಿತ್ತ ಹಮ್ಮಿಕೊಂಡಿದ್ದ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಡಿ. 27ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ, ಕಾಂಗ್ರೆಸ್ ಪಕ್ಷದ ಶಕ್ತಿ ಬಲಪಡಿಸಬೇಕು ಎಂದರು. ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಹೆಚ್ಚಿನ ಅಭ್ಯರ್ಥಿಗಳು …

Read More »

ನಾಯಕತ್ವ ಬದಲಾವಣೆ ಹೇಳಿಕೆ ನೀಡಿದ ಸಚಿವರಿಗೆ ಬಿಜೆಪಿ ಬಿಗ್ ಶಾಕ್: ಸಂಕ್ರಾಂತಿಗೆ ಅನೇಕ ಮಂತ್ರಿಗಳಿಗೆ ಗೇಟ್ ಪಾಸ್

ಬೆಂಗಳೂರು: ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸದೇ ವಿನಾಕಾರಣ ನಾಯಕತ್ವದ ಬಗ್ಗೆ ಹರಡುವ ಮೂಲಕ ರಾಜ್ಯ ಸರ್ಕಾರದ ಘನತೆಗೆ ಧಕ್ಕೆ ತರುವಂತಹ ಹೇಳಿಕೆ ನೀಡುತ್ತಿರುವ ಸಚಿವರಿಗೆ ಗೇಟ್ ಪಾಸ್ ನೀಡಲು ಬಿಜೆಪಿ ಮುಂದಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ. ಕೆಲವು ಸಚಿವರು ತಮಗೆ ನೀಡಿದ ಇಲಾಖೆಯ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೇ, ಅನಗತ್ಯವಾಗಿ ವದಂತಿ ಹರಡುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಘನತೆಗೆ ಧಕ್ಕೆ …

Read More »

ಊಟಕ್ಕೆಂದು ಹೋದವರು ವಾಪಸ್​ ಬಂದದ್ದು ಹೆಣವಾಗಿ. ಅಯ್ಯೋ ವಿಧಿಯೇ ನೀನೇಷ್ಟು ಕ್ರೂರಿ?

ಬನ್ನೇರುಘಟ್ಟದ ಕೆಂಪನಾಯಕನ ಅಕ್ವೇರಲ್ ಗಾರ್ಮೆಂಟ್ಸ್ ಬಳಿ ಬುಧವಾರ ರಾತ್ರಿ ಟ್ಯಾಂಕರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾಲೇಜು ವಿದ್ಯಾರ್ಥಿಗಳಿಬ್ಬರು ಮೃತಪಟ್ಟಿದ್ದಾರೆ. ಎಎಂಸಿ ಕಾಲೇಜಿನ ವಿದ್ಯಾರ್ಥಿಗಳಾದ ಕೌಶಿಕ್ ಮತ್ತು ಸುಷ್ಮಾ ಮೃತ ದುರ್ದೈವಿಗಳು. ಬೆಂಗಳೂರಿನ ಸಾರಕ್ಕಿ‌ ನಿವಾಸಿಗಳಾದ ಇವರಿಬ್ಬರೂ ಊಟ ಮಾಡಲೆಂದು ಬುಧವಾರ ರಾತ್ರಿ ಬನ್ನೇರುಘಟಕ್ಕೆ ಬೈಕ್​ನಲ್ಲಿ ಹೋಗಿದ್ದರು. ಊಟ ಮುಗಿಸಿ ವಾಪಸ್ ಬರುವ ವೇಳೆ ಬೈಕ್​ಗೆ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ …

Read More »

ಇಂದು ರಾಜ್ಯಾಧ್ಯಂತ ಮತ್ತೆ ಐವರಿಗೆ ಓಮಿಕ್ರಾನ್ ವೈರಸ್ ಸೋಂಕು ದೃಢಪಟ್ಟಿದೆ.

ಇಂದು ರಾಜ್ಯಾಧ್ಯಂತ ಮತ್ತೆ ಐವರಿಗೆ ಓಮಿಕ್ರಾನ್ ವೈರಸ್ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.ಇಂದು ಒಬ್ಬರಿಗೆ ಓಮಿಕ್ರಾನ್ ವೈರಸ್ ಸೋಂಕು ದೃಢಪಡುವ ಮೂಲಕ, ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ರೂಪಾಂತರಿ ಸೋಂಕಿನ ಪ್ರಕರಣ ವರದಿಯಾಗಿದೆ. ಈ ಮೂಲಕ ಮಲೆನಾಡಿಗೂ ಓಮಿಕ್ರಾನ್ ವೈರಸ್ ಕಾಲಿಟ್ಟಂತೆ ಆಗಿದೆ. ಈ ಬಗ್ಗೆ ಮಾಹಿತಿ ನೀಡಿರುವಂತ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ರಾಜ್ಯದಲ್ಲಿ ಇಂದು ಮತ್ತೆ ಐವರಿಗೆ ಓಮಿಕ್ರಾನ್ ವೈರಸ್ ತಗುಲಿರೋದು ದೃಢಪಟ್ಟಿದೆ. ಅವರಲ್ಲಿ …

Read More »