ಹಾವೇರಿ: ಕೊರೋನಾ, ಅಕಾಲಿಕ ಮಳೆ, ಅತಿವೃಷ್ಟಿಯಂತಹ ಸಾಲು ಸಾಲು ಸಂಕಷ್ಟಗಳಿಂದ ಚೇತರಿಸಿಕೊಳ್ಳಲಾಗದೆ ಸಾಲ ಮಾಡಿಕೊಂಡು ಕಂಗಾಲಾಗಿದ್ದ ರೈತ ದಂಪತಿ ನೇಣಿಗೆ ಕೊರಳೊಡ್ಡಿದ ಘಟನೆ ಸಿಎಂ ತವರೂರು ಜಿಲ್ಲೆಯ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ. ಇತ್ತೀಚಿಗೆ ಜಿಲ್ಲೆಯಲ್ಲಿ ಸುರಿದ ಧಾರಕಾರ ಮಳೆಗೆ ಕೈಗೆ ಬಂದ ಬೆಳೆಯೆಲ್ಲವು ಜಲಾವೃತಗೊಂಡು ಹಾಳಾಗಿತ್ತು. ಇನ್ನು ಬಂಗಾರದ ಬೆಳೆ ಬೆಳೆಯಲು ಈ ದಂಪತಿ ಸಾಕಷ್ಟು ಸಾಲ ಸೂಲ ಮಾಡಿದ್ದು ಸಾಲಗಾರರ ಕಾಟ ತಾಳಲಾರದೇ ನೇಣಿಗೆ ಶರಣಾಗಿದ್ದಾರೆ. ಸಾಲ ತೀರಿಸೋ …
Read More »202ತೆಂಗಿನಕಾಯಿ ಒಡೆಯುವ ಮೂಲಕ ಹರಕೆ ತೀರಿಸಿದ ಲಖನ ಜಾರಕಿಹೊಳಿ ಅಭಿಮಾನಿಗಳೂ
ಗೋಕಾಕ: ಗೋಕಾಕ ನಗರದ ಲಕ್ಷ್ಮಿ ದೇವಸ್ಥಾನ ಮುಂದೆ ಲಖನ ಜಾರಕಿಹೊಳಿ ಅಭಿಮಾನಿ ಬಳಗ ವತಿಯಿಂದ ಹರಕೆ ಪೂರ್ತಿ ಮಾಡಿದ್ದಾರೆ. ವಿಧಾನ ಪರಿಷತ್ ಚುನಾವಣೆ ಎಲ್ಲಾಕಡೆ ಭಾರಿ ಸಂಚಲನ ಮೂಡಿಸಿತ್ತು ಅದಕ್ಕೆ ನಿನ್ನೆ ತೆರೆ ಬಿದ್ದಿದ್ದು ಪಕ್ಷೇತರ ಅಭ್ಯರ್ಥಿ ಲಖನ ಜಾರಕಿಹೊಳಿ ಎರಡನೇ ಸುತ್ತಿನಲ್ಲಿ ಆಯ್ಕೆ ಆಗಿದ್ದಾರೆ. ಆಯ್ಕೆ ಆದ ಬೆನ್ನಲ್ಲೇ ಅಭಿಮಾನಿ ಗಳ ಸಂಭ್ರಮ ಜೋರಾಗಿತ್ತು ಇನ್ನು ಇದಷ್ಟೇ ಅಲ್ಲದೆ ಕೆಲವೊಂದು ಜನ ಅಭಿಮಾನಿಗಳು ಗೋಕಾಕ ನಗರದ ಆರಾಧ್ಯ ದೇವತೆ …
Read More »ನಿರ್ದಿಷ್ಟ ಕಾಲಮಿತಿಯಲ್ಲಿ ನ್ಯಾಯ ಬೆಲೆ ಅಂಗಡಿಗೆ ಅನುಮತಿ: ಸಚಿವ ಉಮೇಶ್ ಕತ್ತಿ
: ಕನಿಷ್ಟ 100 ರೇಷನ್ ಕಾರ್ಡ್ ಇರುವ ತಾಂಡಾ ಹಾಗೂ ಎಸ್ಸಿ/ಎಸ್ಟಿ ಕಾಲೋನಿಗಳಿಗೆ, ಅರ್ಜಿ ಸಲ್ಲಿಸಿದ ನಿಯಮಿತ ಕಾಲಮಿತಿಯಲ್ಲಿ ನ್ಯಾಯ ಬೆಲೆ ಅಂಗಡಿಗೆ ಅನುಮತಿ ನೀಡಲಾಗುವುದೆಂದು ಆಹಾರ ಸಚಿವ ಉಮೇಶ್ ಕತ್ತಿ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು. ತಾಂಡಾಗಳಲ್ಲಿ ನ್ಯಾಯ ಬೆಲೆ ಅಂಗಡಿ ಪ್ರಾರಂಭಿಸಲು ಅನುಮತಿ ನೀಡುವ ಕುರಿತು, ಪರಿಷತ್ ಕಲಾಪದಲ್ಲಿ ಪ್ರಕಾಶ ರಾಥೋಡ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ್ ಕತ್ತಿ, ರಾಜ್ಯದ …
Read More »ಕಲ್ಲೋಳಿ, ನಾಗನೂರ, ಅರಭಾವಿ ಪಟ್ಟಣ ಪಂಚಾಯತಿ ಚುನಾವಣೆ ನಿಮಿತ್ಯ ಪೂರ್ವಭಾವಿ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಪಟ್ಟಣ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡುವಾರು ಸಭೆಗಳನ್ನು ನಡೆಸಿ ನಾಳೆಯೊಳಗೆ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಾಗಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಸೋಮವಾರದಂದು ಮಾರುತಿ ದೇವಸ್ಥಾನದ ಸಭಾ ಭವನದಲ್ಲಿ ಪಟ್ಟಣ ಪಂಚಾಯತಿ ಚುನಾವಣೆ ನಿಮಿತ್ಯ ಜರುಗಿದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಸಮುದಾಯದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು. ಇದೇ ತಿಂಗಳ 27 ರಂದು …
Read More »ವಿಧಾನಮಂಡಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಪ್ರತ್ಯೇಕವಾಗಿ ಎರಡು ದಿನ ಮೀಸಲಿಡುವ ಸಾಧ್ಯತೆ: ವಿಶ್ವೇಶ್ವರ ಹೆಗಡೆ ಕಾಗೇರಿ
ವಿಧಾನಮಂಡಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಪ್ರತ್ಯೇಕವಾಗಿ ಎರಡು ದಿನ ಮೀಸಲಿಡುವ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ಕರ್ನಾಟಕ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಕಾಗೇರಿ, ಉತ್ತರ ಕರ್ನಾಟಕ ಭಾಗದ ನಿರ್ದಿಷ್ಟ ವಿಷಯಗಳನ್ನು ಚರ್ಚೆಗೆ ತೆಗೆದುಕೊಳ್ಳಲು ಹಲವು ಸದಸ್ಯರಿಂದ ಮನವಿಗಳು ಬಂದಿವೆ. ‘ನಾನು ಕಲಾಪ ಪ್ರಾರಂಭವಾಗುವ ಮೊದಲು ಬೆಳಿಗ್ಗೆ 10.30 ಕ್ಕೆ ನಿಗದಿಪಡಿಸಲಾದ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸುತ್ತೇನೆ ಮತ್ತು …
Read More »ಚಳಿಗಾಲದ ಅಧಿವೇಶನದಲ್ಲಿ (Winter session) ಮತಾಂತರ ನಿಷೇಧ ವಿಧೇಯಕ ಮಂಡನೆಯಾಗುವ ಸಾಧ್ಯತೆ?
ಬೆಳಗಾವಿಯಲ್ಲಿ (Belagavi) ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ (Winter session) ಮತಾಂತರ ನಿಷೇಧ ವಿಧೇಯಕ ಮಂಡನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ಮಾಡುವಂತೆ ಧಾರ್ಮಿಕ ಮುಖಂಡರು ಹಾಗೂ ಮಠಾಧೀಶರು ಒತ್ತಡ ತಂದಿದ್ದು, ಈ ಹಿನ್ನೆಲೆಯಲ್ಲಿ ಮತಾಂತರ ನಿಷೇಧ ವಿಧೇಯಕದ ಕರಡು ಸಿದ್ದಪಡಿಸಲಾಗಿದ್ದು, ಕಾನೂನು ಪರಾಮರ್ಶೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲೇ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ರಾಜ್ಯ ಸರ್ಕಾರ …
Read More »35 ಸಾವಿರ ವರ್ಷಗಳ ಬಳಿಕ ಭೂಮಿಯ ಸನಿಹಕ್ಕೆ ಲಿಯೋನಾರ್ಡ್ ಧೂಮಕೇತು
ಆಕಾಶದಲ್ಲಿ ಈ ತಿಂಗಳು ಪೂರ್ತಿ ಪ್ರತಿ ದಿನವೂ ರಾತ್ರಿ ಸಮಯದಲ್ಲಿ ಧೂಮಕೇತುವೊಂದು ಕಾಣಿಸಲಿದೆ. ಇದುವೇ ಲಿಯೋನಾರ್ಡ್ ಧೂಮಕೇತು. 35 ಸಾವಿರ ವರ್ಷಗಳ ನಂತರ ಇದು ಭೂಮಿಗೆ ಸಮೀಪಿಸುತ್ತಿದೆ. ಅಲ್ಲದೇ, ತಿಂಗಳ ಕೊನೆಯಲ್ಲಿ ಇದು ಅತೀ ಪ್ರಕಾಶಮಾನವಾಗಿ ಗೋಚರಿಸಲಿದೆ. ಇದು ಹೆಚ್ಚು ಪ್ರಕಾಶಮಾನವಾಗಿರುವುದರಿಂದ ಬರಿಗಣ್ಣಿಗೆ ಗೋಚರಿಸಲಿದೆ ಎಂದು ಖಗೋಳ ವಿಜ್ಞಾನಿಗಳು ಹೇಳುತ್ತಿದ್ದಾರೆ. ಡಿ. 12ರಂದು ಈ ಧೂಮಕೇತು ಭೂಮಿಗೆ ಸಮೀಪಿಸುತ್ತಿದೆ. ಇದು ಭೂಮಿಯಿಂದ ಸುಮಾರು 523 ಶತಕೋಟಿ ಕಿ.ಮೀ ದರದಲ್ಲಿ ಇದೆ …
Read More »ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯ ಸಾಧಿಸುತ್ತಾರೆ. ಹಾನಗಲ್ ಉಪ ಚುನಾವಣೆಯ ಫಲಿತಾಂಶದಂತೆ ಈ ಫಲಿತಾಂಶವೂ ಬರಲಿದೆ
ಬೆಳಗಾವಿ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯ ಸಾಧಿಸುತ್ತಾರೆ. ಹಾನಗಲ್ ಉಪ ಚುನಾವಣೆಯ ಫಲಿತಾಂಶದಂತೆ ಈ ಫಲಿತಾಂಶವೂ ಬರಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು. ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮತ ಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ಸತೀಶ್ ಜಾರಕಿಹೊಳಿಯವರ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರ ಒಗ್ಗಟ್ಟನ್ನು ನೀವೇ ನೋಡುತ್ತಿದ್ದೀರಿ. ಜಿಲ್ಲೆಯ 14 ತಾಲೂಕುಗಳಲ್ಲಿ ನಮ್ಮ ಕಾಂಗ್ರೆಸ್ ಮತದಾರರಿದ್ದಾರೆ. ನಮ್ಮ ಬೆಂಬಲಿಗರ …
Read More »ಎಲ್ಲಿ, ಎಷ್ಟು ಮತದಾನ? – ಸಮಗ್ರ ವಿವರ
ಬೆಂಗಳೂರು –ನಡೆಯುತ್ತಿದ್ದು, ಬೆಳಗ್ಗೆ 10 ಗಂಟೆವರೆಗೆ ವಿಜಯಪುರದಲ್ಲಿ ಮಾತ್ರ ಶೂನ್ಯ ಮತದಾನವಾಗಿದೆ. ದಕ್ಷಿಣ ಕನ್ನಡದಲ್ಲಿ ಶೇ.45ರಷ್ಟು ಮತದಾನವಾಗಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ಮತ
Read More »ಕುತೂಹಲ ಮೂಡಿಸಿದ ಚುನಾವಣೆ ರಾಜ್ಯ ವಿಧಾನಪರಿಷತ್ ನ 25 ಸ್ಥಾನಕ್ಕೆ ಮತದಾನ ಆರಂಭವಾಗಿದೆ. 6,072 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ.
ತೀವ್ರ ಕುತೂಹಲ ಮೂಡಿಸಿರುವ ರಾಜ್ಯ ವಿಧಾನಪರಿಷತ್ ನ 25 ಸ್ಥಾನಕ್ಕೆ ಮತದಾನ ಆರಂಭವಾಗಿದೆ. 6,072 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಬೆಳಿಗ್ಗೆ 8ರಿಂದ ಸಂಜೆ 4 ಗಂಟೆವರೆಗೂ ಮತದಾನ ನಡೆಯಲಿದೆ. ಬೆಳಗಾವಿ, ಬಳ್ಳಾರಿ, ದಕ್ಷಿಣ ಕನ್ನಡ, ಧಾರವಾಡ, ವಿಜಯಪುರ, ಮೈಸೂರಿನ ತಲಾ 2 ಕ್ಷೇತ್ರ, ಚಿಕ್ಕಮಗಳೂರು, ಕಲಬುರಗಿ, ಉತ್ತರ ಕನ್ನಡ, ಬೀದರ್, ರಾಯಚೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಶಿವಮೊಗ್ಗ, ಹಾಸನ, ಚಿತ್ರದುರ್ಗ, ಕೋಲಾರ, ತುಮಕೂರು ಸೇರಿದಂತೆ ಒಟ್ಟು 20 …
Read More »