ಬೆಂಗಳೂರು: ನಗರದ ಲುಂಬಿನಿ ಗಾರ್ಡನ್ನಲ್ಲಿದ್ದ ವರನಟ ಡಾ.ರಾಜ್ ಕುಮಾರ್ ಪುತ್ಥಳಿಯನ್ನ ಕಳ್ಳರು ಕದ್ದೊಯ್ದಿದ್ದಾರೆ. ಎರಡು ದಿನಗಳ ಹಿಂದೆ ಕಂಚಿನ ಪ್ರತಿಮೆಯನ್ನ ಕಳ್ಳತನ ಮಾಡಲಾಗಿದೆ. ಈ ಸಂಬಂಧ ಅರಣ್ಯಾಧಿಕಾರಿ ಯೋಗೇಶ್ ಅನ್ನೋರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಇಬ್ಬರು ಶಂಕಿತ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
Read More »ಭೀಕರವಾಗಿ ಮರಕ್ಕೆ ಗುದ್ದಿದ ಕಾರು; ಐದು ವರ್ಷದ ಮಗು ಸೇರಿ ಮೂರು ಸಾವು
ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನ ಜೋಡಿ ಶ್ರೀರಂಗಾಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐದು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಕುಂದಾಪುರ ಮೂಲದ ಧೃತಿ (5), ಗೀತಾ(32), ಶಾರದಾ (60) ಮೃತ ದುರ್ದೈವಿಗಳು. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜೋಡಿ ಶ್ರೀರಂಗಾಪುರ ಬಳಿ ರಸ್ತೆ ಬದಿಯಲ್ಲಿ ಮರಕ್ಕೆ ಕಾರು ಡಿಕ್ಕಿಯಾಗಿ ದುರ್ಘಟನೆ ನಡೆದಿದೆ. ಕಾರಿನಲ್ಲಿದ್ದವರು ಕುಂದಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಹೊಸದುರ್ಗ ಪೊಲೀಸ್ …
Read More »ವಸತಿ ಸಹಿತ ಉದ್ಯಮಶೀಲತಾ ತರಬೇತಿ ನೀಡಲು ಮುಂದಾದ ಸತೀಶ್ ಜಾರಕಿಹೊಳಿ
ಬೆಳಗಾವಿ: ಸತೀಶ್ ಜಾರಕಿಹೊಳಿ ಫೌಂಡೇಷನ್ ನಿಂದ ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಉದ್ಯೋಗ ಅರಸುತ್ತಿರುವ ಮತ್ತು ಸ್ವಯಂ ಉದ್ಯೋಗ ಮತ್ತು ಉದ್ದಿಮೆ ಸ್ಥಾಪಿಸಲು ಆಸಕ್ತಿ ಇರುವ ನಿರುದ್ಯೋಗಿ ಯುವಕ, ಯುವತಿಯರಿಗೆ ಮೂರು ದಿನಗಳ ಕಾಲ ಉಚಿತ ವಸತಿ ಸಹಿತ ಉದ್ಯಮಶೀಲತಾ ತರಬೇತಿ ಶಿಬಿರವನ್ನು ಇದೇ ಫೆ. 12 ರಿಂದ 14ರವರೆಗೆ ನಡೆಸಲಾಗುವುದು. ಸರ್ಕಾರದ ವಿವಿಧ ಯೋಜನೆಗಳ ಕುರಿತು, ಬ್ಯಾಂಕ್ ಗಳಲ್ಲಿ ಸಿಗುವ ಸಾಲ ಸೌಲಭ್ಯಗಳ ಬಗ್ಗೆ, ಮಾರುಕಟ್ಟೆ ಸಮೀಕ್ಷೆ, ಉದ್ದಿಮೆಯ …
Read More »ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶೋಕ.
ಗೋಕಾಕ್- ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಕಹಾಮ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಲತಾಜೀ ಅವರು ನಮ್ಮ ದೇಶದ ಅಮೂಲ್ಯ ಆಸ್ತಿಯಾಗಿದ್ದರು. ಸುಮಾರು ಏಳು ದಶಕಗಳಿಂದ ದೇಶದ ವಿವಿಧ ಭಾಷೆಗಳಲ್ಲಿ ಸುಮಾರು ೩೫ ಸಾವಿರಕ್ಕೂ ಅಧಿಕ ಹಾಡುಗಳನ್ನು ತಮ್ಮ ಕಂಠಸಿರಿಯಲ್ಲಿ ನಮಗೆಲ್ಲ ಉಣಬಡಿಸಿದ್ದರು. ಹಿನ್ನೆಲೆ ಗಾಯಕಿಯಾಗಿ ಬಾರತೀಯ ಚಿತ್ರರಂಗಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದರು. ಇವರ …
Read More »ಗೋಕಾಕ ಆತ್ಮಹತ್ಯೆ ಮಾಡಿಕೊಳ್ಳಲು ಬಂದ ವೃದ್ಧೆಯ ಪ್ರಾಣ ಉಳಿಸಿದ ಗೋಕಾಕ ಪಿಎಸ್‌ಐ ವಾಲೀಕರ
ಗೋಕಾಕ ಫಾಲ್ಸ್ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ ವೃದ್ದೆಯ ಪ್ರಾಣ ಉಳಿಸಿದ ಗೋಕಾಕ ಪಿಎಸ್‌ಐ ಕೆ.ವಾಲೀಕರ ಹಾಗೂ ಪೋಲಿಸ್ ಸಿಬ್ಬಂದಿ ವರ್ಗ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಅನುಮಾನ ಸ್ಪದವಾಗಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ ಮಹಿಳೆಯ ಚಲನ ಗಮನಿಸಿ ಬೆನ್ನಿಗೆ ಬಿದ್ದು ಗಮನಿಸಿದಾಗ ವೃದ್ಧ ಮಹಿಳೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಗಮನಿಸಿ ಪೊಲೀಸ ಹೆಡ್ ಕಾನ್ಸಟೇಬಲ್ ಕಲ್ಮಶ ಹಕ್ಕಾಗೋಳ ಹಾಗೂ ಸಿಬ್ಬಂದಿಗಳು ಕೂಡಲೇ ವೃದ್ಧಿಯನ್ನು ಸುಪರ್ಧಿಗೆ ಪಡೆದು ಪಿಎಸ್‌ಐ ವಾಲಿಕಾರ ಅವರಿಗೆ ವಿಷಯ …
Read More »ರಾಜಕೀಯ ದುರುದ್ದೇಶ ಪ್ರೇರಿತ ಸಿಡಿ ಪ್ರಕರಣ ಸಾಹುಕಾರ ರಮೇಶ ಜಾರಕಿಹೊಳಿ ಆರೋಪ ಮುಕ್ತ.!!
ರಾಜಕೀಯ ಪ್ರೇರಿತ ಸಿಡಿ ಪ್ರಕರಣ ಸಾಹುಕಾರ ಕ್ಲೀನ್ ಚೀಟ್.ರಾಜಕೀಯ ದುರುದ್ದೇಶ ದಿಂದ ಆರೋಪ ಮಾಡಲಾದ ಸಿಡಿ ಪ್ರಕರಣದ ಸುಳಿಯಿಂದ ಹೊರಗಡೆ ಬಂದ ಶಾಸಕರಾದ ರಮೇಶ ಜಾರಕಿಹೊಳಿ ಆರೋಪದಿಂದ ಮುಕ್ತ ಮುಕ್ತ. ಸುಧೀರ್ಘ ಎಂಟು ತಿಂಗಳ ಕಾಲ ನ್ಯಾಯಾಲಯದಲ್ಲಿ ನಡೆದ ಹೋರಾಟ.ಪ್ರಕರಣದಲ್ಲಿ ಸಾಕ್ಷಾಧಾರ ಕೊರತೆ ಹಿನ್ನೆಲೆ ನ್ಯಾಯ ದೇವತೆ ಸಾಹುಕಾರ ರಮೇಶ ಜಾರಕಿಹೊಳಿ ಅವರಿಗೆ ಕ್ಲೀನ್ ಚೀಟ್ ನೀಡಿದೆ.ಎಸ್.ಐ.ಟಿ ಅಂತಿಮ ವರದಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಸಂಪೂರ್ಣ ತನಿಖೆಯನ್ನು ಪರಿಗಣಿಸಿ ಎಸ್.ಐ.ಟಿ. ಬಿ-ರಿಪೋರ್ಟ್ …
Read More »ಅಟ್ಟಾಡಿಸಿ ಜೀಪ್ ಹರಿಸಿ ಕೊಲೆ
ವಿಜಯಪುರ: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಮಹಿಳೆಯೊಬ್ಬಳ ಮೇಲೆ ಜೀಪ್ ಹರಿಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ನಡೆದಿದೆ. ಶೋಭಾ ಸೋಮನಿಂಗ ಮೊಗದರೆ (45) ಕೊಲೆಯಾದ ಮಹಿಳೆ. ಸಾಗರ ಖತಾರ ಮತ್ತು ಮಾರುತಿ ಥೋರತ ಕೊಲೆ ಮಾಡಿದ ಆರೋಪಿಗಳು. ಕಬ್ಬು ಕಟಾವು ಮಾಡಲು ಒಂದು ತಂಡವನ್ನು ಕರೆತರುತ್ತೇವೆ ಎಂದು ಕೊಲೆಯಾದ ಮಹಿಳೆಯ ಪತಿ ಸೋಮನಿಂಗನಿಂದ ಆರೋಪಿಗಳು 45 ಲಕ್ಷ ರೂ. ಹಣ ಪಡೆದಿದ್ದರು. ಆರೋಪಿ ಮಾರುತಿ …
Read More »ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಎರಡು ದಿನ ಮುಂಚೆ ದುಡ್ಡು ಕೊಟ್ಟಿದ್ದರಿಂದ ನಮಗೆ ಸೋಲಾಯಿತು
ಮಂಡ್ಯ: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಎರಡು ದಿನ ಮುಂಚೆ ದುಡ್ಡು ಕೊಟ್ಟಿದ್ದರಿಂದ ನಮಗೆ ಸೋಲಾಯಿತು ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ. ಬಿಜೆಪಿ ಸೋಲಿನ ಬಗ್ಗೆ ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪರಾಮರ್ಶೆ ನಡೆಸುತ್ತಿದ್ದ ಬಗ್ಗೆ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡುವಾಗ, ಬಿಜೆಪಿ ಅಭ್ಯರ್ಥಿ ಎರಡು ದಿನ ಮುಂಚೆ ದುಡ್ಡುಕೊಟ್ಟರು. ಇದರಿಂದ ನಮಗೆ ಸೋಲಾಯಿತು ಎಂದು ವಿಶ್ಲೇಷಿಸಿದರು. ತಕ್ಷಣ ಪಕ್ಕದಲ್ಲಿದ್ದ ಸಚಿವ ಕೆ.ಗೋಪಾಲಯ್ಯ …
Read More »ಸೋಮಾರಿ ಮಂತ್ರಿಗಳನ್ನ ಕೈಬಿಡಿ -ತಮ್ಮದೇ ಸರ್ಕಾರಕ್ಕೆ ವಿಶ್ವನಾಥ್ ಆಗ್ರಹ
ಬೆಂಗಳೂರು: ಸೋಮಾರಿ ಮಂತ್ರಿಗಳನ್ನ ಕೈಬಿಡಬೇಕು ಎಂದು ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ವಿಶ್ವನಾಥ್.. ಕೇವಲ ವಿಧಾನಸಭಾ ಕ್ಷೇತ್ರವನ್ನೇ ರಾಜ್ಯ ಅಂದುಕೊಂಡಿರುವ, ರಾಜ್ಯ ಪರ್ಯಟನೆ ಮಾಡದ ಸಚಿವರನ್ನ ಕೈಬಿಡಬೇಕು. ರಾಜ್ಯದ ಅಭಿವೃದ್ಧಿಗೆ ಬದಲಾವಣೆ ಅಗತ್ಯ ಇದೆ. ಸರಿಯಾದ ರೀತಿಯಲ್ಲಿ ಸಂಪುಟ ಪುನಾರಚಿಸಿ, ಆಡಳಿತಕ್ಕೆ ಚುರುಕು ಮುಟ್ಟಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಹಿರಿಯ ಸಚಿವರು ಪಕ್ಷದ ಕೆಲಸ ಮಾಡ್ಲಿ, ಯುವ ಶಾಸಕರಿಗೆ ಸಂಪುಟದಲ್ಲಿ ಅವಕಾಶ ನೀಡಲಿ ಎಂದು ಸಲಹೆ ನೀಡಿದ್ದಾರೆ.
Read More »ರಾಜ್ಯಕ್ಕೆ ಮತ್ತೆ ಅನ್ಯಾಯ ಮಾಡಿದ ಕೇಂದ್ರ: ಸತೀಶ್ ಜಾರಕಿಹೊಳಿ ಟೀಕೆ
ಬೆಳಗಾವಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ 2022-23ನೇ ಸಾಲಿನ ಬಜೆಟ್ ಶೂನ್ಯ ಬಜೆಟ್ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ 25 ಜನ ಬಿಜೆಪಿ ಸಂಸದರಿದ್ದರೂ, ರಾಜ್ಯವನ್ನೇ ಪ್ರತಿನಿಧಿಸಿದ್ದರೂ ಹಣಕಾಸು ಸಚಿವರು, ರಾಜ್ಯದ ಜನರ ನಿರೀಕ್ಷೆ ಹುಸಿಗೊಳಿಸಿದ್ದಾರೆ ಎಂದು ಟೀಕಿಸಿದ್ದಾರೆ. ದೇಶದ ಜನರು ಏಳು ವರ್ಷಗಳಿಂದ …
Read More »