Breaking News

Uncategorized

ಅಡುಗೆ ವ್ಯವಸ್ಥಾಪಕನಿಗೆ ಕಪಾಳಮೋಕ್ಷ ಮಾಡಿದ ಶಿವಸೇನಾ ಮುಖಂಡ

ಮುಂಬೈ: ಶಿವಸೇನಾ ಮುಖಂಡರೊಬ್ಬರು ಖಾಸಗಿ ಅಡುಗೆ ವ್ಯವಸ್ಥಾಪಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಮಹಾರಾಷ್ಟ್ರದ ತಮ್ಮ ಕ್ಷೇತ್ರವಾದ ಹಿಂಗೋಲಿಯಲ್ಲಿ ಕಾರ್ಮಿಕರಿಗೆ ಕಳಪೆ ಗುಣಮಟ್ಟದ ಮಧ್ಯಾಹ್ನದ ಊಟ  ಬಡಿಸಿದ ಕಾರಣಕ್ಕೆ ಶಿವಸೇನೆಯ ಬಂಡಾಯ ಶಾಸಕ ಸಂತೋಷ್ ಬಂಗಾರ್ ಅವರು ಅಡುಗೆ ವ್ಯವಸ್ಥಾಪಕನನ್ನು ನಿಂದಿಸಿ ಅವರಿಗೆ ಎಲ್ಲರ ಸಮ್ಮುಖದಲ್ಲೇ ಕಪಾಳಮೋಕ್ಷ ಮಾಡಿದರು. ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಮನಾರ್ಹವೆಂದರೆ, ಬಂಗಾರ್ ಅವರು ಈ ಘಟನೆಗೆ ಕೆಲವೇ ನಿಮಿಷ ಮೊದಲು  ವಿಧಾನಸಭೆಯಲ್ಲಿ  ಮುಖ್ಯಮಂತ್ರಿ …

Read More »

. ಸುವರ್ಣಸೌಧ ಕೇವಲ ಜಿಲ್ಲಾಮಟ್ಟದ ಕಚೇರಿಗೆ ಸೀಮಿತ, ಪತ್ರಕರ್ತರಿಗೂ ನಿಷೇಧ: ಅವಕಾಶ ನೀಡದ ಜಿಲ್ಲಾಡಳಿತದ ನಡೆಗೆ ವಿರೋಧ ವ್ಯಕ್ತ

ಬೆಳಗಾವಿ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಬೆಳಗಾವಿ ಜಿಲ್ಲಾಡಳಿತ ಸುವರ್ಣಸೌಧಕ್ಕೆ ಕೆಸರಿ, ಬಿಳಿ, ಹಸಿರು ಬಣ್ಣಗಳಿಂದ ಕೂಡಿದ ದೀಪಾಲಂಕಾರ ಮಾಡಿದ್ದು,‌ ಸುವರ್ಣಸೌಧ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಬೆಳಗಾವಿ ತಾಲೂಕಿನ ಹಲಗಾ – ಬಸ್ತವಾಡ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಪಕ್ಕದಲ್ಲಿ ನಿರ್ಮಾಣಗೊಂಡಿರುವ ಸುವರ್ಣ ವಿಧಾನಸೌಧ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಸುವರ್ಣಸೌಧವನ್ನ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಆದರೆ, ಈ ಬಾರಿ ಆಂತರಿಕ ಭದ್ರತೆ ನೆಪವೊಡ್ಡಿ …

Read More »

ವಿಜಯಪುರ: ಶಿವಲಿಂಗದಲ್ಲಿ ಅರಳಿದ ರಾಷ್ಟ್ರಧ್ವಜ

ವಿಜಯಪುರ: ದೇವಸ್ಥಾನದಲ್ಲಿ 75 ನೇ ಸ್ವಾತಂತ್ರ್ಯ ಅಮೃತ‌ ಮಹೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು. ವಿಜಯಪುರದಲ್ಲಿ ಶಿವಲಿಂಗದಲ್ಲೂ ರಾಷ್ಟ್ರಾಭಿಮಾನ ಮೆರೆಯಲಾಗಿದೆ. ವಿಜಯಪುರದ ಜಾಡರ ಗಲ್ಲಿಯಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿರುವ ಲಿಂಗಕ್ಕೆ ರಾಷ್ಟ್ರಧ್ವಜದ ಅಲಂಕಾರ ಮಾಡಿ ಸಂಭ್ರಮಿಸಲಾಯಿತು. ಮಲ್ಲಿಕಾರ್ಜುನ ದೇವಸ್ಥಾನದ ಪೂಜಾರಿ ಈರಯ್ಯ ಸ್ವಾಮಿ ಹಾಗೂ ಸ್ಥಳೀಯರಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

Read More »

ರಾಷ್ಟ್ರದ ಉನ್ನತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ಅನನ್ಯ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

    *ಬೆಂಗಳೂರು* : ರಾಷ್ಟ್ರದ ಉನ್ನತಿ ಮತ್ತು ಪ್ರಗತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಅನನ್ಯವಾಗಿದ್ದು, ಮೋದಿಯವರ ದೂರದೃಷ್ಟಿಯ ನಾಯಕತ್ವದಿಂದಾಗಿ ಇಡೀ ಪ್ರಪಂಚವೇ ನಮ್ಮತ್ತ ತಿರುಗಿ ನೋಡುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.   ಇಲ್ಲಿಯ ಕೆಎಂಎಫ್ ಕೇಂದ್ರ ಕಛೇರಿಯಲ್ಲಿ ಜರುಗಿದ 76ನೇ ಸ್ವಾತಂತ್ರ್ಯ ವರ್ಷದ ಆಜಾದಿ ಕಾ ಅಮೃತ್ ಮಹೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಿಗಳ …

Read More »

ರಾಜಕುಮಾರ ಟಾಕಳೆಯವರನ್ನು ಬಂಧಿಸುವಂತೆ ಸಚಿವ ಕಾರಜೋಳರ ಮುಂದೆ ಧರಣಿಗೆ ಮುಂದಾದ ನವ್ಯಶ್ರಿ

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆಯವರನ್ನು ಬಂಧಿಸುವಂತೆ ಒತ್ತಾಯಿಸಿದ ಸಚಿವರ ಮುಂದೆ ಪ್ರತಿಭಟಿಸಿದ್ದ ಕಾಂಗ್ರೆಸ್‍ನ ನವ್ಯಶ್ರೀ ರಾವ್ ಅವರನ್ನು ಎಪಿಎಂಸಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳರ ಮುಂದೆ ಪ್ರತಿಭಟಿಸಲು ಬರುತ್ತಿದ್ದ ನವ್ಯಶ್ರೀಯ ಪ್ರೀ ಪ್ಲಾನ್ ಗೊತ್ತಾಗಿ , ಬೆಳಗಾವಿಯ ರಾಮದೇವ್ ಹೊಟೇಲ್ ಬಳಿಯೇ ಅವರನ್ನು ಎಪಿಎಂಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Read More »

ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ. ಲೋಳಸೂರ, ಅರಭಾವಿ, ದುರದುಂಡಿ, ಬಡಿಗವಾಡ ಮಾರ್ಗವಾಗಿ ನಾಗನೂರುವರೆಗೆ ರ್ಯಾಲಿ.

          ಗೋಕಾಕ: ನಾಳೆ ನಡೆಯಲಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ಯ ಅರಭಾವಿ ಬಿಜೆಪಿ ಮಂಡಲದಿಂದ ಬೃಹತ್ ಟ್ರ್ಯಾಕ್ಟರ್ ರ್ಯಾಲಿಯನ್ನು ರವಿವಾರದಂದು ಇಲ್ಲಿಯ ಎನ್‍ಎಸ್‍ಎಫ್‍ದಲ್ಲಿ ಚಾಲನೆ ನೀಡಲಾಯಿತು.   ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಅವರು ಈ ರ್ಯಾಲಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಈ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ನೂರಾರು ರೈತರು …

Read More »

ಸರ್ಕಾರ ಸ್ವಾತಂತ್ರ್ಯ ದಿನ ಆಚರಿಸಬಾರದೆಂದು ಹೇಳುವಷ್ಟು ಮೂರ್ಖರಲ್ಲ ಎಂದ ಡಿಕೆಶಿ

ಬೆಂಗಳೂರು: ಸರ್ಕಾರ ಸ್ವಾತಂತ್ರ್ಯ ದಿನ ಆಚರಿಸಬಾರದು ಎಂದು ಹೇಳುವಷ್ಟು ಮೂರ್ಖರು ನಾವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಹೇಳಿದರು. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ವಾತಂತ್ರ್ಯ ಕೇವಲ ಒಂದು ಪಕ್ಷಕ್ಕೆ ಸೇರಿದ್ದೆಂದು ನಾವು ಎಲ್ಲೂ ಹೇಳಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ಇತಿಹಾಸ ನಮ್ಮ ಪಕ್ಷಕ್ಕಿದೆ. ಇದನ್ನು ದೇಶದುದ್ದಗಲಕ್ಕೂ ಯುವ ಜನತೆಗೆ ತಿಳಿಸುವ ಕೆಲಸ ಮಾಡಿ ಎಂದು ನಾವು ಸೂಚನೆ ನೀಡಿದ್ದೇವೆ ಎಂದರು. ಕೇಂದ್ರ ಸಚಿವರು ಬಂದು …

Read More »

ದರ್ಪ ತೋರಿದ್ದ ಕುರುಗೋಡು ಪಿಎಸ್ ಐ ಮಣಿಕಂಠ ಅಮಾನತು

ಕುರುಗೋಡು : ಕುರುಗೋಡು ಪಿ ಎಸ್ ಐ ಆಗಿದ್ದ ಮಣಿಕಂಠ ಅವರನ್ನು ಬಳ್ಳಾರಿ ಎಸ್ ಪಿ ಸೈದುಲು ಅಡಾವತ್ ಅವರು ಅಮಾನತುಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಮೂರು ದಿನಗಳ ಹಿಂದೆ ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಿಸಿ ನಡೆದ ಸಾರ್ವಜನಿಕ ಸಭೆ ವೇಳೆ ಕಾನೂನು ಸುವ್ಯವಸ್ಥೆ ವಿಚಾರವಾಗಿ ಹೋದಾಗ ಸಾರ್ವಜನಿಕರ ಎದುರಲ್ಲೇ ವ್ಯಕ್ತಿಯೊಬ್ಬರ ಮೇಲೆ ಪಿ ಎಸ್ ಐ ಮಣಿಕಂಠ ಹಲ್ಲೆ ಮಾಡಿ ಅವಾಚ್ಯ ಶಬ್ದ ಗಳಿಂದ ನಿಂದಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ …

Read More »

ಕುರಿ, ಕೋಳಿ ಸಾಕಾಣಿಕೆ ಘಟಕ ಸ್ಥಾಪನೆಗೆ ಅರ್ಜಿ ಅಹ್ವಾನ

ಬೆಂಗಳೂರು, ಆಗಸ್ಟ್ 12: ‘ರಾಷ್ಟ್ರೀಯ ಜಾನುವಾರು ಮಿಷನ್’ ಯೋಜನೆಯಡಿ ಸಹಾಯಧನ ಸಹಿತ ಕುರಿ ಮತ್ತು ಕೋಳಿ ಸಾಕಾಣಿಕೆ ಘಟಕ ಸ್ಥಾಪಿಸುವವರಿಂದ ಕೇಂದ್ರ ಸರ್ಕಾರ ಅರ್ಜಿ ಅಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಲು ಅಗತ್ಯವಾಗಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.   ಕೇಂದ್ರ ಸರ್ಕಾರ ‘ರಾಷ್ಟ್ರೀಯ ಜಾನುವಾರು ಮಿಷನ್’ ಯೋಜನೆಯಡಿ ಉದ್ಯಮಶೀಲತೆಯ ಅಭಿವೃದ್ಧಿಗಾಗಿ 2021-22ರ ಸಾಲಿಗೆ ಯೋಜನೆಯ ಮಾರ್ಗಸೂಚಿ ಅಡಿಯಲ್ಲಿ ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ಬೆಂಗಳೂರು ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು, …

Read More »

ಹೊರಗುತ್ತಿಗೆ ಹುದ್ದೆ’ಯ ನಿರೀಕ್ಷೆಯಲ್ಲಿದ್ದ ‘ಮಹಿಳಾ ಅಭ್ಯರ್ಥಿ’ಗಳಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ‘ಶೇ.33ರಷ್ಟು ಹುದ್ದೆ’ ಮೀಸಲಾತಿ ನಿಗದಿ

ಬೆಂಗಳೂರು: ರಾಜ್ಯ ಸರ್ಕಾರದಿಂದ ಹೊರಗುತ್ತಿಗೆ ನೇಮಕಾತಿಯಲ್ಲಿ ಶೇ.33ರಷ್ಟು ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾತಿಗೊಳಿಸಿ ಆದೇಶಿಸಿದೆ. ಈ ಮೂಲಕ ಹೊರಗುತ್ತಿಗೆಯ ಹುದ್ದೆ ನಿರೀಕ್ಷೆಯಲ್ಲಿದ್ದಂತ ಮಹಿಳಾ ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.   ಈ ಕುರಿತಂತೆ ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ರಾಜ್ಯ ಸರ್ಕಾರದ ಕಚೇರಿಗಳಲ್ಲಿನ ವಾಹನ ಚಾಲಕರು, ಡಾಟಾ ಎಂಟ್ರಿ ಆಪರೇಟರ್, ಸ್ವಚ್ಛತಾ ಸಿಬ್ಬಂದಿ, ಗ್ರೂಪ್-ಡಿ ಹುದ್ದೆಗಳ್ನು ಹೊರಗುತ್ತಿಗೆ ಮೂಲಕ ಪಡೆಯಲಾಗುವ ಸೇವೆಗಳಲ್ಲಿ ಹಾಗೂ …

Read More »