ಚಿಕ್ಕೋಡಿ: ಹಿಂದೂ ದೇವಸ್ಥಾನಗಳನ್ನು ಕೆಡವಿ ಅದರ ಮೇಲೆ ಕಟ್ಟಿರುವ ಒಂದೇ ಒಂದು ಮಸೀದಿಯನ್ನೂ ಬಿಡುವುದಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಳಲಿ ಮಸೀದಿ ಒಂದೇ ಅಲ್ಲ. ದೇಶದಲ್ಲಿ 36 ಸಾವಿರ ದೇವಸ್ಥಾನಗಳನ್ನ ಪುಡಿ ಮಾಡಿ ಮಸೀದಿಗಳನ್ನು ನಿರ್ಮಿಸಲಾಗಿದೆ. ದೇವಸ್ಥಾನಗಳ ಮೇಲೆ ಕಟ್ಟಿರುವ ಒಂದೇ ಒಂದು ಮಸೀದಿಯನ್ನೂ ಬಿಡುವುದಿಲ್ಲ. ಅಂತಹ ಮಸೀದಿಗಳನ್ನು ಒಡೆದು 36 ಸಾವಿರ ದೇವಸ್ಥಾನವನ್ನು ಮತ್ತೆ …
Read More »ಬಿಎಸ್ ವೈ ಪಕ್ಷದ ದೊಡ್ಡ ಶಕ್ತಿ, : ಬಿ.ಶ್ರೀರಾಮುಲು
ಬಳ್ಳಾರಿ: ಬಿಜೆಪಿ ಪಕ್ಷದ ದೊಡ್ಡ ಶಕ್ತಿಯಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದಿಂದ ಸೈಡ್ ಲೈನ್ ಮಾಡುವ ಮಾತೇ ಇಲ್ಲ ಎಂದು ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದರು. ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಕೆಡಿಪಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್‌ಯಡಿಯೂರಪ್ಪನವರು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅವರು ಪಕ್ಷದ ದೊಡ್ಡ ಶಕ್ತಿ. ಅವರ ಶಕ್ತಿ ಕುಗ್ಗಿಸುವ ಕೆಲಸ ಪಕ್ಷದಲ್ಲಿ ಎಂದೂ ನಡೆಯುವುದಿಲ್ಲ. ಎಂಥ ಪರಿಸ್ಥಿತಿಯಲ್ಲೂ ಬಿಎಸ್ …
Read More »ಚಿಕ್ಕೋಡಿ: ಕಲಿಕೆಯಿಂದ ದೂರ, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು
ಚಿಕ್ಕೋಡಿ: ಪಟ್ಟಣದ ವಿವಿಧೆಡೆ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗುವುದು ಕಂಡುಬರುತ್ತಿದೆ. ಶಾಲೆಗಳು ಪುನರರಾರಂಭವಾಗಿದ್ದರೂ ಅವರು ಕಲಿಕೆಯಿಂದ ದೂರ ಉಳಿದಿದ್ದಾರೆ. ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಈ ಸಾಮಾಜಿಕ ಪಿಡುಗು ರಾಜಾರೋಷವಾಗಿ ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಪ್ರಜ್ಞಾವಂತರ ಅಸಮಾಧಾನಕ್ಕೆ ಕಾರಣವಾಗಿದೆ. ಪಟ್ಟಣದ ಬಸವ ವೃತ್ತ, ಕೋರ್ಟ್ ಸಂಕೀರ್ಣದ ಎದುರು, ಕೇಂದ್ರ ಬಸ್ ನಿಲ್ದಾಣ, ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಬಳಿ ಮಕ್ಕಳು ಗುಂಪು ಗುಂಪಾಗಿ ಬೇಡುವುದು ಸಾಮಾನ್ಯವಾಗಿದೆ. ಚಿಕ್ಕ ವಯಸ್ಸಿನವರಿಂದ ಹದಿಹರೆಯದವರೆಗಿನವರು …
Read More »ಕಮಿಷನ್ ಆರೋಪ: ಮಂತ್ರಿಯನ್ನೇ ವಜಾಗೊಳಿಸಿದ ಪಂಜಾಬ್ ಸಿಎಂ! ದೇಶವೇ ಬೆರಗು
ಪಂಜಾಬ್‌ನಲ್ಲಿ ಒಂದು ಅಪರೂಪದ ಬೆಳವಣಿಗೆಯಾಗಿದೆ. ಕಮಿಷನ್ ತಗೆದುಕೊಂಡ ಆರೋಪದ ಮೇಲೆ ಅಲ್ಲಿನ ಸಚಿವರೊಬ್ಬರನ್ನ ವಜಾಗೊಳಿಸಲಾಗಿದೆ. ವಿಶೇಷ ಅಂದ್ರೆ ಖುದ್ದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮನ್ ಈ ಕ್ರಮ ಕೈಗೊಂಡಿದ್ದು ಆರೋಪಿ ಮಂತ್ರಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಂದ್ಹಾಗೆ ಈ ರೀತಿ ಕಮಿಷನ್ ಕೇಳಿ ತಮ್ಮ ಸರ್ಕಾರದಿಂದಲೇ ವಜಾಗೊಂಡವರು ಪಂಜಾಬ್‌ನ ಆರೋಗ್ಯ ಮಂತ್ರಿ ವಿಜಯ್ ಸಿಂಗ್ಲಾ. ಟೆಂಡರ್‌ನಲ್ಲಿ ಒಂದು ಪರ್ಸೆಂಟ್ ಕಮಿಷನ್ ಕೇಳಿದ್ರು ಅಂತ ಅಲ್ಲಿನ ಅಧಿಕಾರಿಗಳು ಹಿಂದಿನ ವಾರವಷ್ಟೇ ಸಿಎಂ …
Read More »ಯಡಿಯೂರಪ್ಪ ಮತ್ತು ಪಕ್ಷದ ನಡುವಿನ ಶೀತಲ ಸಮರ ಮತ್ತಷ್ಟು ಬಿಗಡಾಯಿಸುವಂತೆ ಮಾಡುವ ಸಾಧ್ಯತೆ.?
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿದ್ದು, ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಿಜಯೇಂದ್ರಗೆ ಟಿಕೆಟ್ ನಿರಾಕರಣೆ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್ ಕುಟುಂಬ ರಾಜಕಾರಣಕ್ಕೆ ಬೆಂಬಲ ನೀಡುವುದಿಲ್ಲ ಎನ್ನುವ ತನ್ನ ನಿರ್ಧಾರವನ್ನು ಮತ್ತೆ ಪ್ರಕಟಿಸುವ ಕೆಲಸ ಮಾಡಿದೆ. ಹಲವು ರೀತಿ ವ್ಯಾಖ್ಯಾನ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಅಧಿಕೃತವಾಗಿ …
Read More »ಮಕ್ಕಳ ಅಕ್ರಮ ಸಾಗಾಟ ಪ್ರಕರಣ: ಆರೋಪಿ ಸ್ಟಾಪ್ ನರ್ಸ್ ಅರೆಸ್ಟ್,
ವಿಜಯಪುರ: ಮಕ್ಕಳ ಅಕ್ರಮ ( Illegal ) ಸಾಗಾಟ ( Trafficking ) ಪ್ರಕರಣ ಪತ್ತೆ ಸಂಬಂಧ ಓರ್ವ ಮಹಿಳಾ ಆರೋಗ್ಯ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಡಚಣ ತಾಲೂಕಿನ ಜಿಗಜಿವಣಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಜಯಮಾಲಾ ಬಂಧಿತ ಆರೋಪಿಯಾಗಿದ್ದಾಳೆ. ಈಕೆ ವಿಜಯಪುರ ನಗರದ ಅಥಣಿ ಗಲ್ಲಿ ವಾಸಿಯಾಗಿದ್ದಾಳೆ. ಐದುಮಕ್ಕಳ ಸಾಕಾಣಿಕೆಹಾಗೂ ಸಾಗಾಟ ಮಾಡಿದ್ದ ಆರೋಪದ ಮೇಲೆ ವಿಜಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ತಾಯಿಯಿಂದ ಪರಿತ್ಯಕವಾದ, …
Read More »5 ರೂಪಾಯಿ ಡಾಕ್ಟರ್ ಎಂದೇ ಖ್ಯಾತರಾದ ಡಾ.ಶಂಕರೇಗೌಡರಿಗೆ ಹೃದಯಾಘಾತ!?
ಮಂಡ್ಯ: ಐದು ರೂಪಾಯಿ ಡಾಕ್ಟರ್ ಎಂದೇ ಖ್ಯಾತರಾಗಿರುವ ಡಾ.ಶಂಕರೇಗೌಡರಿಗೆ ಲಘು ಹೃದಯಾಘಾತವಾಗಿದೆ. ಸದ್ಯ ಅವರನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತೀಚಿಗಿನ ವರದಿ ಪ್ರಕಾರ ಶಂಕರೇಗೌಡರ ಆರೋಗ್ಯ ಸುಧಾರಿಸಿಕೊಳ್ಳುತ್ತಿದೆ. ಅಪೊಲೋದ ತಜ್ಞ ವೈದ್ಯರಿಂದ ಚಿಕಿತ್ಸೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ. ಒಂದು ವಾರದ ಬಳಿಕ ಬೈಪಾಸ್ ಸರ್ಜರಿ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಡಾ. ಶಂಕರೇಗೌಡ ಅವರು ಮಂಡ್ಯದ ಚರ್ಮ ರೋಗ ತಜ್ಞರಾಗಿದ್ದು, ಭಾರೀ ಜನಪ್ರಿಯತೆಯನ್ನ ಗಳಿಸಿದ್ದಾರೆ. ಮಂಡ್ಯದಲ್ಲಿರುವ …
Read More »ಯುವತಿಗೆ ರಿವಾಲ್ವಾರ್ ತೋರಿಸಿ ಪಿಜಿ ಮಾಲೀಕನಿಂದ ಅತ್ಯಾಚಾರ
ಬೆಂಗಳೂರು: ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ಬಂದಿದ್ದ ಯುವತಿಗೆ ರಿವಾಲ್ವಾರ್ ತೋರಿಸಿ ಅತ್ಯಾಚಾರವೆಸಗಿದ ಆರೋಪ ಕೇಳಿಬಂದಿದೆ. ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ಬಿಹಾರ ಮೂಲದ ಉದ್ಯಮಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅನಿಲ್ ರವಿಶಂಕರ್ ಪ್ರಸಾದ್ ಬಂಧಿತ. ಈತ ಟೈಲ್ಸ್ ಬಿಸಿನೆಸ್ ಮಾಡುತ್ತಿದ್ದ. ಈತನ ಒಡೆತನದ ಪಿಜಿಯಲ್ಲಿದ್ದ ಯುವತಿಯೊಬ್ಬಳಿಗೆ ಆರೋಪಿಯು ರಿವಾಲ್ವಾರ್ ತೋರಿಸಿ ಬೆದರಿಕೆ ಹಾಕಿ ಅತ್ಯಾಚಾರವೆಸಗಿದ್ದಾನೆ ಎಂದು ದೂರು ದಾಖಲಾಗಿದೆ. ಪೊಲೀಸರು ಆರೋಪಿ ಜತೆಗೆ ರಿವಾಲ್ವರ್ ಅನ್ನೂ ಜಪ್ತಿ ಮಾಡಿದ್ದಾರೆ. ಆರೋಪಿಯನ್ನ ನ್ಯಾಯಾಲಯಕ್ಕೆ …
Read More »ಗಾಯಕ್ಕೆ ನಮ್ಮಿಂದ್ಲೆ ಬ್ಯಾಂಡೇಜ್ ಮಾಡಿಸ್ತಾರ್ರೀ…
ಹುಬ್ಬಳ್ಳಿ: ರಕ್ತ ಪರೀಕ್ಷೆಗೆ ಹಣ ಕೇಳ್ತಾರ, ನಮ್ಮಿಂದ್ಲೆ ಗಾಯಕ್ಕೆ ಬ್ಯಾಂಡೇಜ್ ಮಾಡಿಸ್ತಾರ, ಔಷಧಿಗಳನ್ನು ಹೊರಗಡೆಯಿಂದ ತರಾಕ ಹೇಳ್ತಾರ, ಸರಿಯಾಗಿ ಚಿಕಿತ್ಸೆ ನೀಡ್ತಿಲ್ಲ… ಧಾರವಾಡದ ಬಾಡ ಕ್ರಾಸ್ ಬಳಿ ಶುಕ್ರವಾರ ರಾತ್ರಿ ನಡೆದ ಅಪಘಾತದಲ್ಲಿ ಗಾಯಗೊಂಡು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಸಂಬಂಧಿಕರು, ಭಾನುವಾರ ಕಿಮ್ಸ್‌ಗೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಎದುರು ಆಸ್ಪತ್ರೆ ಸಿಬ್ಬಂದಿಯ ವರ್ತನೆ ಕುರಿತು ಮಾಡಿದ ಆರೋಪಗಳಿವು. ‘ಒಡಹುಟ್ಟಿದವರು ಮತ್ತು ಸಂಬಂಧಿಕರನ್ನು ಕಳೆದುಕೊಂಡು …
Read More »ಗೋವಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಳಗಾವಿಯ ಮೂವರು ಯುವಕರು ಸಾವಿಗೀಡಾಗಿದ್ದಾರೆ.
ಬೆಳಗಾವಿ: ಗೋವಾದ ಮಾಪ್ಸಾ ಬಳಿ ಇಂದು ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಳಗಾವಿಯ ಮೂವರು ಯುವಕರು ದುರ್ಮರಣ ಹೊಂದಿದ್ದಾರೆ. ನಾಯರ್ ಅನಗೋಲ್ಕರ್ (28), ರೋಹನ್ ಗದಗ (26) ಹಾಗೂ ಸನ್ನಿ ಅವನೇಕರ್ (31) ಮೃತಪಟ್ಟಿರುವ ಯುವಕರೆಂದು ಗುರುತಿಸಲಾಗಿದೆ. ಮಾಪ್ಸಾ ಜಿಲ್ಲೆಯ ಕುಛೇಲಿ ಬಳಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕಾರು ಅಪಘಾತ ಸಂಭವಿಸಿತು. ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದ ಪರಿಣಾಮ ದುರ್ಘಟನೆ …
Read More »