ಬೆಂಗಳೂರು: ನನಗೆ ಯಾವ ನಿರೀಕ್ಷೆ ಇರಲಿಲ್ಲ. ನಾನು ಬಹಳ ನಿಷ್ಠೆಯಿಂದ ಪಕ್ಷಕ್ಕೆ ಕೆಲಸ ಮಾಡಿದ್ದೆ ಸಿಎಂ ಹಾಗೂ ಸ್ನೇಹಿತರು, ಶಾಸಕರು ಸಂಘದ ಹಿರಿಯರು ಎಲ್ಲರೂ ನಿರ್ಧಾರ ಮಾಡಿ ಈ ಸ್ಥಾನ ಕೊಟ್ಟಿದ್ದಾರೆ. ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಬಿಜೆಪಿ ರಾಜ್ಯಸಭೆ ಅಭ್ಯರ್ಥಿ ನಟ ಜಗ್ಗೇಶ್ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಮಾತಾನಾಡಿದ ಅವರು, ಚಿಂತನೆಗಳು ಇತ್ತು ಮುಂದಿನ ದಿನಗಳಲ್ಲಿ ಯಾವ ರೀತಿ ಕೆಲಸ ಮಾಡಬೇಕು ಅಂತ ನನಗೆ ಕಲ್ಪನೆ ಇರಲಿಲ್ಲ. ಪಕ್ಷ ಹಾಗೂ ಸಂಘಟನೆಗೆ …
Read More »ಎನ್‌ಆರ್‌ಐ ಫೋರಂಗೆ ಉಪಾಧ್ಯಕ್ಷರಿಲ್ಲದೆ 4 ವರ್ಷ; 2018ರ ಮೇ ಬಳಿಕ ಆಗದ ನೇಮಕಾತಿ
ಕುಂದಾಪುರ: ವಿದೇಶಗಳಲ್ಲಿ ಯುದ್ಧ, ನೆರೆ, ಪ್ರಾಕೃತಿಕ ವಿಪತ್ತು, ಕೊರೊನಾದಂತಹ ಸಂಕಷ್ಟ ಮಯ ಸಂದರ್ಭಗಳಲ್ಲಿ ಅಲ್ಲಿ ನೆಲೆಸಿರುವ ರಾಜ್ಯದ ಜನರು, ವಿದ್ಯಾರ್ಥಿಗಳಿಗೆ ತುರ್ತು ನೆರವಾಗಲು ಸ್ಥಾಪನೆಯಾಗಿರುವ ಅನಿವಾಸಿ ಭಾರತೀಯ ಸಮಿತಿ (ಎನ್‌ಆರ್‌ಐ ಫೋರಂ)ಗೆ ನಾಲ್ಕು ವರ್ಷಗಳಿಂದ ಉಪಾಧ್ಯಕ್ಷರೇ ಇಲ್ಲ. ಈ ಸಮಿತಿಗೆ ಮುಖ್ಯಮಂತ್ರಿಗಳು ಅಧ್ಯಕ್ಷರು. ಇದರ ಕಾರ್ಯಭಾರವೆಲ್ಲ ಉಪಾಧ್ಯಕ್ಷ ರದ್ದೇ ಆಗಿರುತ್ತದೆ. ಎಲ್ಲವನ್ನು ಮುಖ್ಯಮಂತ್ರಿ ಯವರೇ ನಿಭಾಯಿಸಲು ಅಸಾಧ್ಯ. ಆದ್ದರಿಂದ ಉಪಾಧ್ಯಕ್ಷರ ಹುದ್ದೆಯೇ ಪ್ರಮುಖ. ಭರ್ತಿ ನಾಲ್ಕು ವರ್ಷ ಉಡುಪಿ ಮೂಲದ ಆರತಿ …
Read More »ಹುಕ್ಕೇರಿ: ವಿಜೃಂಭಣೆಯ ಲಕ್ಷ್ಮೀದೇವಿ ಜಾತ್ರೆ
ಹುಕ್ಕೇರಿ: ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಶುಕ್ರವಾರ ಮಹಾಲಕ್ಷ್ಮೀ (ಮಲೆವ್ವ)ದೇವಿ ಮತ್ತು ದುರ್ಗಾದೇವಿ ಜಾತ್ರೆ ವಿಜೃಂಭಣೆಯಿಂದ ಜರುಗಿತು. ಗ್ರಾಮದ ಜಡಿಸಿದ್ಧೇಶ್ವರ ಆನಂದಾಶ್ರಮದಿಂದ ಪ್ರಮುಖ ಬೀದಿಗಳ ಮೂಲಕ ಮಹಾಲಕ್ಷ್ಮೀದೇವಿ ಮಂದಿರದವರೆಗೆ ಮೆರವಣಿಗೆಯಲ್ಲಿ ಬಂದರು. ನಂತರ ದೇವಿಗೆ ಉಡಿ ತುಂಬುವುದು ಮತ್ತು ಮಹಿಳೆಯರಿಗೆ ಉಡಿ ತುಂಬುವ (ಬೊಟ್ಟು ಕೊಡುವ) ಕಾರ್ಯಕ್ರಮ ಜರುಗಿತು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ದೇವಿಯ ದರ್ಶನ ಪಡೆದರು. ಸಚಿವರ ಭೇಟಿ: ಶುಕ್ರವಾರ ಮುಂಜಾನೆ ಅರಣ್ಯ, ಆಹಾರ ಖಾತೆ ಸಚಿವ ಉಮೇಶ್ …
Read More »ಜಾತಿ ಲೆಕ್ಕಾಚಾರ, ಬಿಜೆಪಿ ಚುನಾವಣಾ ತಂತ್ರ: ಜಗ್ಗೇಶ್ಗೆ ಬಂಪರ್, ರಾಮಮೂರ್ತಿಗೆ ಅರ್ಧಚಂದ್ರ | ಪ್ರಬಲ ಒಕ್ಕಲಿಗ ಸಮುದಾಯಕ್ಕೂ ಸಮಾಧಾನ
ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ವಿಷಯದಲ್ಲಿ ಬಿಜೆಪಿ ಎರಡು ಅಚ್ಚರಿ ನಿರ್ಧಾರಗಳನ್ನು ತೆಗೆದುಕೊಂಡಿದೆ. ಪಕ್ಷದ ರಾಜ್ಯ ಕೋರ್ ಕಮಿಟಿ ಕಳುಹಿಸಿದ್ದ ಪಟ್ಟಿಯಲ್ಲಿ ಇಲ್ಲದ ಹೆಸರು ಸೇರಿಸಿ, ಮತ್ತೊಂದು ಹೆಸರು ಕೈಬಿಡುವ ಮೂಲಕ ರಾಜ್ಯದ ಶಿಫಾರಸಿಗೆ ಮನ್ನಣೆಯಿಲ್ಲ ಎನ್ನುವುದನ್ನು ದೃಢಪಡಿಸಿದ್ದಾರೆ. ಪಕ್ಷದ ವರಿಷ್ಠರ ಈ ನಡೆಯಲ್ಲಿ ಎಲ್ಲ ಜಾತಿಗಳಿಗೆ ಆದ್ಯತೆ ನೀಡಲಾಗುವುದು ಎಂಬ ಸಂದೇಶ ರವಾನೆ, ಮುಂಬರುವ ಚುನಾವಣೆಗಳ ತಂತ್ರಗಾರಿಕೆಯಿದೆ ಎಂದು ಮೂಲಗಳು ವಿಶ್ಲೇಷಿಸಿವೆ. ಹಣಕಾಸು ಸಚಿವೆ …
Read More »ಪೋಷಕರಿಗೆ ಬಿಗ್ ಶಾಕ್: ಪಿಯುಸಿ ಶುಲ್ಕ ಶೇ. 40 ರವರೆಗೆ ಹೆಚ್ಚಳ
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಸಾರ್ವಕಾಲಿಕ ದಾಖಲೆಯ ಎಸ್‌ಎಸ್‌ಎಲ್ಸಿ ಫಲಿತಾಂಶ ಬಂದಿದ್ದು, 7,30,881 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಸಹಜವಾಗಿಯೇ ಪಿಯುಸಿ ಪ್ರವೇಶಕ್ಕೆ ಬೇಡಿಕೆ ಹೆಚ್ಚಾಗಿದ್ದು, ಕೆಲವು ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಶುಲ್ಕವನ್ನು ಶೇ. 5 ರಿಂದ ಶೇಕಡ 40 ರಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಪೋಷಕರು ಮತ್ತು ಆಡಳಿತ ಮಂಡಳಿಗಳ ನಡುವೆ ತಿಕ್ಕಾಟ ಶುರುವಾಗಿದೆ. 3500 ಕ್ಕೂ ಹೆಚ್ಚು ವಿದ್ಯಾರ್ಥಿಗಳು 620 ಕ್ಕಿಂತ ಹೆಚ್ಚು ಅಂಕ ಪಡೆದ ಹಿನ್ನೆಲೆಯಲ್ಲಿ ಈ ಬಾರಿ …
Read More »ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಹೊಸ ತಳಿ ಪ್ರಕರಣ ಪತ್ತೆ
ಮುಂಬೈ: ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಕೋವಿಡ್ ರೂಪಾಂತರಿಯಾಗಿರುವ ಓಮಿಕ್ರಾನ್ ಬಿಎ.4 ಉಪತಳಿ 4 ರೋಗಿಗಳಲ್ಲಿ ಪತ್ತೆಯಾಗಿದೆ. ಇನ್ನೊಂದು ಓಮಿಕ್ರಾನ್‌ನ ಹೊಸ ಉಪತಳಿ ಬಿಎ.5 3 ರೋಗಿಗಳಲ್ಲಿ ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಓಮಿಕ್ರಾನ್‌ನ ಈ ಹೊಸ ಉಪತಳಿಗಳು ಹೆಚ್ಚು ಅಪಾಯಕಾರಿ ಅಲ್ಲದಿರುವುದರಿಂದ ಜನರು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಓಮಿಕ್ರಾನ್‌ನ ಈ ಹೊಸ ಉಪತಳಿಗಳು ಮೊದಲ ಬಾರಿಗೆ ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾ ಸೇರಿದಂತೆ …
Read More »ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 854 ಹುದ್ದೆಗಳಿಗೆ ನೇರ ನೇಮಕಾತಿ
ಬೆಂಗಳೂರು : ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಲ್ಯಾಣ ಕರ್ನಾಟಕ ಹಾಗೂ ಉಳಿದ ಮೂಲ ವೃಂದದ ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್, ಜೂನಿಯರ್ ಹೆಲ್ತ್ ಅಸಿಸ್ಟಂಟ್ ಹಾಗೂ ಫಾರ್ಮಸಿ ಆಫೀಸರ್ / ಫಾರ್ಮಸಿಸ್ಟ್ ಹುದ್ದೆಗಳು ಸೇರಿದಂತೆ ಒಟ್ಟು 854 ಹುದ್ದೆಗಳಿಗೆ ನೇರ ನೇಮಕಾತಿಯನ್ನು ನಡೆಸಲು ಮುಂದಾಗಿದೆ. ಈ ಹುದ್ದೆಗಳಿಗೆ ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಬಿಡುಗಡೆ ಆಗಲಿದೆ. ಒಟ್ಟು 854 ಸ್ಥಾನಗಳಿಗೆ ಸರ್ಕಾರವು ನೇಮಕಾತಿಗೆ ಸಂಬಂಧಿಸಿದಂತೆ ನಿಯಮಾವಳಿ ಅಂತಿಮಗೊಳಿಸಿ, …
Read More »ಶಿಕ್ಷಕರ ನೇಮಕಾತಿ ಪರೀಕ್ಷೆ; ಇನ್ನೆರಡು ದಿನದಲ್ಲಿ ಕೀ ಉತ್ತರ ಬಿಡುಗಡೆ
ಬೆಂಗಳೂರು, ಮೇ 26: ಶಿಕ್ಷಕ ನೇಮಕಾತಿಯ ಸಿಇಟಿ ಪರೀಕ್ಷೆಗಳು ಮುಗಿದಿದೆ. ಶಿಕ್ಷಣ ಇಲಾಖೆ ಇರಡು ಮೂರು ದಿನಗಳಲ್ಲಿ ಕೀ ಉತ್ತರವನ್ನು ಬಿಡುಗಡೆ ಮಾಡಲಿದೆ. 15,000 ಶಿಕ್ಷಕರು ಅಧಿಕೃತವಾಗಿ ಕೀ ಉತ್ತರಗಳು ಪ್ರಕಟವಾದ ನಂತರ ತಮ್ಮ ಓಎಂಆರ್ ಕಾಪಿಗಳನ್ನು ಪರಿಶೀಲಿಸಿಕೊಂಡು ತಾವೂ ಸರ್ಕಾರಿ ಶಿಕ್ಷಕರಾಗಬಹುದೇ ಎಂಬುದನ್ನು ತಾಳೆಹಾಕಬಹುದು. ಶಿಕ್ಷಕರ ಹುದ್ದೆ ನೇಮಕಾತಿ 2022ರ ಪರೀಕ್ಷೆಯು ಮೇ21 ಮತ್ತು ಮೇ22 ನಡೆದಿದೆ. ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಅಭ್ಯರ್ಥಿಗಳು ಬರೆದಿದ್ದಾರೆ. ಕರ್ನಾಟಕ ಶಿಕ್ಷಕರ …
Read More »T20 ಸರಣಿಯಲ್ಲಿ ಟೀಂ ಇಂಡಿಯಾದಿಂದ ಹೊರಬಿದ್ದ ಧವನ್‌ಗೆ ಅಪ್ಪನಿಂದಲೇ ಥಳಿತ!
ಮುಂಬೈ: ಕನ್ನಡಿಗ ಮಯಾಂಕ್ ಅಗರ್‌ವಾಲ್ ನೇತೃತ್ವದ ಕಿಂಗ್ಸ್ ಪಂಜಾಬ್ ತಂಡವು ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಗಿದೆ. ಆದರೆ ತಮ್ಮ ಬ್ಯಾಟಿಂಗ್ ವೈಖರಿಯಿಂದ ಅತ್ಯುತ್ತಮ ಪ್ರದರ್ಶನ ನೀಡಿದ ಶಿಖರ್‌ಧವನ್ ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯಲಿರುವ ಟಿ20 ಸರಣಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಬೆನ್ನಲ್ಲೇ ಮನೆಗೆ ಹಿಂದಿರುಗುತ್ತಿದ್ದಂತೆ ಶಿಖರ್‌ಧವನ್ ಅವರ ತಂದೆ ಮನಬಂದಂತೆ ಥಳಿಸಿದ್ದಾರೆ. ಮನೆಗೆ ಬರುತ್ತಿದ್ದಂತೆ ಜಾಡಿಸಿ ಒದ್ದು, ಕೆಳಗೆ ಬೀಳಿಸಿದ್ದಾರೆ. ಕುಟುಂಬದವರು ತಡೆಯಲು ಬಂದರೂ ಸುಮ್ಮನಾಗದೇ ಧವನ್‌ಗೆ ಮನಬಂದಂತೆ ಥಳಿಸಿದ್ದಾರೆ. …
Read More »ನಕಲಿ ದಾಖಲೆ ಸೃಷ್ಟಿ; ಹದಿನೇಳು ಮಂದಿ ವಿರುದ್ಧ ಪ್ರಕರಣ
ಹೊಸಪೇಟೆ (ವಿಜಯನಗರ): ನಕಲಿ ದಾಖಲೆ ಸೃಷ್ಟಿಸಿ, ಜಮೀನು ಕಬಳಿಸಿ ಸರ್ಕಾರಕ್ಕೆ ವಂಚಿಸಿರುವ ದೂರಿನ ಮೇರೆಗೆ ಇಲ್ಲಿನ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಒಂದೇ ದಿನ ನಾಲ್ಕು ಪ್ರತ್ಯೇಕ ಘಟನೆಗಳಡಿ 17 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಒಂದು ಪ್ರಕರಣದಲ್ಲಿ ಹೊಸಪೇಟೆ ನಗರಸಭೆ ಸಿಬ್ಬಂದಿ ಹಾಗೂ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿ/ಸಿಬ್ಬಂದಿ ಎಂದಷ್ಟೇ ದೂರು ಕೊಡಲಾಗಿದೆ. ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ನಾಲ್ಕೂ ಪ್ರಕರಣಗಳಲ್ಲಿ ಅಧಿಕಾರಿಗಳೇ ಖುದ್ದು ಠಾಣೆಗೆ ದೂರು ಕೊಟ್ಟಿದ್ದಾರೆ. …
Read More »