Breaking News

Uncategorized

ಬೆಳಗಾವಿಯಲ್ಲಿ 75 ಮೀ ಉದ್ದದ ಧ್ವಜ ಹಿಡಿದು 7.5 ಕಿ.ಮಿ ಪಾದಯಾತ್ರೆ

ಆಜಾದಿಕಾ ಅಮೃತಮಹೋತ್ಸವ ಪ್ರಯುಕ್ತ ದಾಲ್ಮಿಯಾ ಭಾರತ್ ಫೌಂಡೇಶನ್ ದೀಕ್ಷಾ ಬೆಳಗಾವಿ ವತಿಯಿಂದ 7.5 ಕಿಮಿ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ 75 ಮೀಟರ್ ಉದ್ದದ ರಾಷ್ಟ್ರಧ್ವಜದೊಂದಿಗೆ 7.5 ಕಿ.ಮಿ ಕಾಲ್ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಕಾಲ್ನಡಿಗೆಯಲ್ಲಿ 75 ಜನ ಭಾಗಿಯಾಗಿದ್ದರು. ಇಂದು ಮುಂಜಾನೆ 7:50ಕ್ಕೆ 75 ಜನ ಕೈಯ್ಯಲ್ಲಿ 75 ಮೀ ರಾಷ್ಟ್ರಧ್ವಜವನ್ನು ಹಿಡಿದು ಮಾನವ ಸರಪಳಿಯನ್ನು ರಚಿಸಿ ಕಣಬರ್ಗಿಯ ಸಿದ್ದೇಶ್ವರ ದೇವಸ್ಥಾನಕ್ಕೆ ತಲುಪಿದರು

Read More »

ಹೆಣ ಕಂಡ್ರೆ ಓಡೋಡಿ ಬರೋ ಶೋಭಾ ಕರಂದ್ಲಾಜೆ ಸಮಸ್ಯೆಗಳಿಗೆ ಬಾಯಿ ಬಿಡಲ್ಲ ಯಾಕೆ?

ಬೆಂಗಳೂರು: ಸಂಸದೆ ಶೋಭಾ ಕರಂದ್ಲಾಜೆ (Shobha Karandlaje) ವಿರುದ್ಧ ಕಾಂಗ್ರೆಸ್​ ಟ್ವೀಟ್​ ಮಾಡಿ ಕಿಡಿಕಾರಿದ್ದಾರೆ. ರೈತ ವಿರೋಧಿ ಬಿಜೆಪಿ ಸರ್ಕಾರ ರೈತರಿಗೆ ಮೇಲಿಂದ ಮೇಲೆ ಅನ್ಯಾಯವೆಸಗುತ್ತಿದೆ ಎಂದು ಕಾಂಗ್ರೆಸ್ (Congress) ಆಕ್ರೋಶ ವ್ಯಕ್ತಪಡಿಸಿದೆ. ಪತ್ರಿಕೆಯೊಂದರ ‘ರೈತರಿಗೂ ಬಡ್ಡಿ ಬರೆ’ ಎಂಬ ವರದಿಯ ತುಣುಕೊಂದನ್ನು ಟ್ವೀಟ್ (Tweet) ಮಾಡಿರುವ ಕಾಂಗ್ರೆಸ್, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಹೆಣ ಕಂಡರೆ ಓಡೋಡಿ ಬರ್ತಾರೆ, ಸಮಸ್ಯೆ ಕೇಳಲ್ಲ ಯಾಕೆ? ‘ರೈತ ವಿರೋಧಿ ಬಿಜೆಪಿ ಸರ್ಕಾರ ರೈತರಿಗೆ …

Read More »

ಎಸ್‌ಪಿ ನಾಯಕರ ಕಾರ್​ಗೆ ಡಿಕ್ಕಿ ಹೊಡೆದು 500 ಮೀಟರ್‌ಗಳವರೆಗೆ ಎಳೆದೊಯ್ದ ಟ್ರಕ್!

ಉತ್ತರಪ್ರದೇಶದಲ್ಲಿ ಘೋರ ದುರಂತವೊಂದು ಬೆಳಕಿಗೆ ಬಂದಿದೆ. ಮೈನಪುರಿಯಲ್ಲಿ ಎಸ್‌ಪಿ ನಾಯಕರ ಕಾರ್​ಗೆ ಟ್ರಕ್​ ಡಿಕ್ಕಿ ಹೊಡೆದಿದ್ದಲ್ಲದೇ, ಆ ಕಾರನ್ನು 500 ಮೀಟರ್‌ಗಳವರೆಗೆ ಎಳೆದೊಯ್ದಿರುವುದು ವಿಡಿಯೋವೊಂದರಲ್ಲಿ ಸೆರೆಯಾಗಿದೆ. ಎಸ್‌ಪಿ ಜಿಲ್ಲಾಧ್ಯಕ್ಷ ದೇವೇಂದ್ರ ಸಿಂಗ್ ಯಾದವ್ ಕಾರ್​ಗೆ ಡಿಕ್ಕಿ ಹೊಡೆದ ಲಾರಿ ಸುಮಾರು 500 ಮೀಟರ್‌ಗಳವರೆಗೆ ಎಳೆದೊಯ್ದಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಟಾವಾ ಮೂಲದ ಟ್ರಕ್ ಚಾಲಕನನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಮೈನ್​ಪುರಿ ಎಸ್​ಪಿ ಕಮಲೇಶ್ ದೀಕ್ಷಿತ್ ಹೇಳಿಕೆ ನೀಡಿದ್ದಾರೆ.

Read More »

ಕಾರ್ಯಕರ್ತರ ಮೇಲಿನ ಪ್ರಕರಣ ಹಿಂಪಡೆಯಲು ಒತ್ತಾಯ

ಬೈಲಹೊಂಗಲ: ಜೆಡಿಎಸ್‌ ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೋರಾಟ ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಡಿವೈಎಸ್ಪಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ತೆರಳಿ ಅಸಮಾಧಾನ ಹೊರ ಹಾಕಿದರು.   ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಪೊಲೀಸರು ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವುದು ಬಿಟ್ಟು ಜೆಡಿಎಸ್‌ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವುದು ಅಕ್ಷಮ್ಯ …

Read More »

ಕಲುಷಿತ ನೀರು ಸೇವನೆ, 84 ಮಂದಿ ಆಸ್ಪತ್ರೆಗೆ ದಾಖಲು

ಬಳ್ಳಾರಿ : ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥರಾಗಿ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗೆ ಕಂಪ್ಲಿ ತಾಲೂಕಿನ ಗೋನಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಬಾಲಕಿಯೊಬ್ಬಳು ಮೃತಪಟ್ಟಿದ್ದಳು. ಈ ಘಟನೆ ಮಾಸುವ ಮುನ್ನವೇ ಇದೇ ರೀತಿಯ ಪ್ರಕರಣಗಳು ಜಿಲ್ಲೆಯ ಸಂಡೂರು ತಾಲೂಕಿನ ಅಂಕಮನಾಳ ಗ್ರಾಮದಲ್ಲೂ ನಡೆದಿದೆ. ಗ್ರಾಮದಲ್ಲಿ ಕಳೆದ ಶುಕ್ರವಾರದಿಂದ ಇದುವರೆಗೆ ಒಟ್ಟು 84 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಸ್ವಸ್ಥರನ್ನು ಈಗಾಗಲೇ ಸಂಡೂರು ತಾಲೂಕು ಆಸ್ಪತ್ರೆ, ಬಳ್ಳಾರಿಯ ವಿಮ್ಸ್, …

Read More »

ರಾಜ್ಯದ ಸಂಸದರಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಸಾಧ್ಯತೆ ,

ಬೆಂಗಳೂರು: 2024 ರ ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿಯಲ್ಲಿ ಭಾರಿ ಬದಲಾವಣೆಯಾಗಲಿದ್ದು ಕಾರ್ಯತಂತ್ರ ನಡೆಯುತ್ತಿದೆ. ಹಿರಿಯ ಸಂಸದರಿಗೆ ಟಿಕೆಟ್ ನೀಡುವುದು ಬಹುತೇಕ ಅನುಮಾನ. ಹೊಸ ಮುಖಗಳಿಗೆ ಈಗಾಗಲೇ ಸದ್ದಿಲ್ಲದೇ ಶೋಧ ಶುರುವಾಗಿದೆ. 70-75 ವರ್ಷ ದಾಟಿದ ಸಂಸದರಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೊಕ್ ನೀಡುವುದು ಖಚಿತವಾಗಿದ್ದು, ಯುವಕರತ್ತ ಕೇಸರಿ ಪಕ್ಷದ ಹೈಕಮಾಂಡ್ ಮನಸ್ಸು ಮಾಡಿದೆ. ಮೂಲಗಳ ಪ್ರಕಾರ, ಆರರಿಂದ ಏಳು ಲೋಕಸಭಾ ಕ್ಷೇತ್ರದ ಹಾಲಿ ಎಂಪಿಗಳನ್ನು ಕೈ ಬಿಡುವ ಸಾಧ್ಯತೆ …

Read More »

ತುಂಬಿ ಹರಿಯುತ್ತಿದ್ದ ಸಾತಿಹಳ ಸೇತುವೆ ಮೇಲೆ ಬಸ್‌ ಚಾಲಕನ ದುಸ್ಸಾಹಸ;

ವಿಜಯಪುರ:ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರೆದಿದೆ. ನಿರಂತರವಾಗಿ ವರುಣ ಅಬ್ಬರದಿಂದ ಸೇತುವೆಗಳೆಲ್ಲ ತುಂಬಿ ಹರಿಯುತ್ತಿದೆ. ದೇವರಹಿಪ್ಪರಗಿ ತಾಲೂಕಿನ ಸಾತಿಹಳ ಗ್ರಾಮದ ಸೇತುವೆ ಫುಲ್‌ ಜಲಾವೃತಗೊಂಡಿದೆ. ಈ ವೇಳೆ ಬಸ್‌ ಚಾಲಕನೊಬ್ಬ ತುಂಬಿ ಹರಿಯುತ್ತಿರುವ ಸೇತುವೆ ಮೇಲೆ ಬಸ್‌ ಚಲಾಯಿಸುತ್ತಿದ್ದು, ದುಸ್ಸಾಹಸಕ್ಕೆ ಇಳಿದಿದ್ದಾನೆ. ಗ್ರಾಮದ ಡೋಣಿ ನದಿಯಲ್ಲಿ ಪ್ರವಾಹ ಉಂಟಾಗಿ ಇಲ್ಲಿನ ಸೇತುವೆ ಮುಳುಗಡೆಯಾಗಿದೆ. ಈ ಸೇತುವೆಯ ಮೇಲೆ ಬಸ್ ಚಲಾಯಿಸಬೇಡ ಎಂದು ಗ್ರಾಮಸ್ಥರು ಹೇಳಿದರೂ ಬಸ್ ಚಾಲಕ ಅದನ್ನು ಲೆಕ್ಕಿಸದೇ ಬಸ್ …

Read More »

ಬೀದಿ ನಾಯಿಗಳ ದಾಳಿ – ಮಹಿಳೆಗೆ ಗಂಭೀರ ಗಾಯ ಅಂಬೇಡ್ಕರ್ ನಗರದಲ್ಲಿ ಘಟನೆ

    ಗೋಕಾಕ ಅ 5 : ಮನೆಯಿಂದ ಶೌಚಾಲಯಕ್ಕೆ ತೆರಳುತ್ತಿರುವ ಮಹಿಳೆಯ ಮೇಲೆ ಬೀದಿ ನಾಯಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ನಗರದ 21 ನೇ ವಾರ್ಡ್‍ನ ಅಂಬೇಡ್ಕರ್ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಅಬೇದಾ ಮುಸ್ತಫಾ ಕಲ್ಲೋಳಿ ಎಂಬ ಮಹಿಳೆ ಮಧ್ಯಾಹ್ನ ಶೌಚಾಲಯಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಬೀದಿ ನಾಯಿಯು ಮಹಿಳೆಯ ಕಾಲಿಗೆ ಕಚ್ಚಿ ಗಂಭೀರವಾಗಿ ಗಾಯಗೋಳಿಸಿದ್ದು, ಮಹಿಳೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಂಬೇಡ್ಕರ್ …

Read More »

ರಸ್ತೆ ಸುಧಾರಣೆಗೆ ₹ 2 ಕೋಟಿ ವೆಚ್ಚ

ಕಾಗವಾಡ: ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಮಕೇರಿ- ಬೇಡರಟ್ಟಿ ರಸ್ತೆ ಸುಧಾರಣೆಗೆ ₹ 2 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ ಗುರುವಾರ ಭೂಮಿಪೂಜೆ ನೆರವೇರಿಸಿದರು. ‘ಚಮಕೇರಿ ಹಾಗೂ ಬೇಡರಟ್ಟಿಯ ನಡುವಿನ ರಸ್ತೆ ಬಹಳಷ್ಟು ಹದಗೆಟ್ಟು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದನ್ನು ಮನಗಂಡು ರಸ್ತೆ ಕಾಮಗಾರಿಗೆ ಅನುದಾನ ಮಂಜೂರು ಮಾಡಿಸಿದ್ದು, ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಳ್ಳಲಾಗುವುದು’ ಎಂದು ಶಾಸಕ ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು, …

Read More »

ಅಮಾಯಕರನ್ನು ಬಂಧಿಸಿದರೆ 5 ಲಕ್ಷ ರೂ. ಪರಿಹಾರ; ಪೊಲೀಸ್ ಅಧಿಕಾರಿಯೇ ಕೊಡಬೇಕು; ಹೈಕೋರ್ಟ್

ಬೆಂಗಳೂರು: ತಪ್ಪು ಮಾಡದ ವ್ಯಕ್ತಿಯನ್ನು ಬಂಧಿಸಿದರೆ ಅದಕ್ಕೆ ಪೊಲೀಸರೇ ಜವಾಬ್ದಾರರಾಗಿದ್ದು, ವ್ಯಕ್ತಿಯನ್ನು ಬಂಧಿಸಿದ ಪೊಲೀಸ್ ಅಧಿಕಾರಿಯೇ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಿಂಗರಾಜು ಎನ್ ಎಂಬ ಅಮಾಯಕರೊಬ್ಬರನ್ನು ಪೊಲೀಸರು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಇಂತದ್ದೊಂದು ಮಹತ್ವದ ತೀರ್ಪು ಪ್ರಕಟಿಸಿದೆ.   ಓರ್ವ ವ್ಯಕ್ತಿ ಮೇಲೆ ಯಾವುದೇ ರೀತಿಯ ಆಪಾದನೆ ವಾರಂಟ್ ಹೊರಡಿಸಿದಾಗ ಜಾಮೀನು …

Read More »