Breaking News

Uncategorized

ಮಾತನಾಡಲು ಅವಕಾಶವಿಲ್ಲ, ಪಾದಯಾತ್ರೆ ಬಿಟ್ಟು ನಮಗೆ ಬೇರೆ ದಾರಿಯಿಲ್ಲ; ರಾಹುಲ್ ಗಾಂಧಿ

ಚಾಮರಾಜನಗರ: ನಮ್ಮ ವಿಚಾರಗಳನ್ನು ಹೇಳಲು ಅವಕಾಶವಿಲ್ಲ. ಸಂಸತ್ತಿನಲ್ಲಿ ಮಾತನಾಡುವಾಗ ಮೈಕ್ ಬಂದ್ ಮಾಡಲಾಗುತ್ತದೆ, ವಿಧಾನಸಭೆಗಳಲ್ಲೂ ಮಾತನಾಡಲು ಅವಕಾಶವಿಲ್ಲ. ಆದ್ದರಿಂದ ಪಾದಯಾತ್ರೆ ಬಿಟ್ಟು ಬೇರೆ ದಾರಿ ನಮಗಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.   ಗುಂಡ್ಲುಪೇಟೆಯ ಮೂಲಕ ಶುಕ್ರವಾರ ರಾಜ್ಯ ಪ್ರವೇಶಿಸಿದ ‘ಭಾರತ್ ಜೋಡೋ ಯಾತ್ರೆ’ಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಈ ಯಾತ್ರೆ ದೇಶದ ಧ್ವನಿ. ಇಲ್ಲಿ ನಾನೊಬ್ಬನೇ ಅಲ್ಲ.‌ ಲಕ್ಷಾಂತರ ಜನರು ಭಾಗವಹಿಸುತ್ತಿದ್ದಾರೆ. ಅವರ ಕಷ್ಟಗಳನ್ನು …

Read More »

ದಸರಾ ಹಿನ್ನೆಲೆ KSRTCಯಿಂದ 2000 ಹೆಚ್ಚುವರಿ ಬಸ್ ಸೇವೆ

ಬೆಂಗಳೂರು: ಕೋವಿಡ್ ನಂತರ ಅದ್ಧೂರಿಯಾಗಿ ನಡೆಯುತ್ತಿರುವ ಮೈಸೂರು ದಸರಾ ಮಹೋತ್ಸವದ ನಿಮಿತ್ತ ರಾಜ್ಯದ ಹಾಗೂ ದೇಶದ ವಿವಿಧ ಕಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಜೊತೆಗೆ ರಜೆಗಳ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವಿಶೇಷ ಸಾರಿಗೆ ಬಸ್ ಸೇವೆಗಳನ್ನು ಒದಗಿಸಿದ್ದು, ಕಳೆಗುಂದಿರುವ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಿದೆ ಕರ್ನಾಟಕ ಸಾರಿಗೆ (ವೇಗದೂತ) ರಾಜಹಂಸ, ಸ್ವೀಪರ್, ಐರಾವತ, ಐರಾವತ ಕ್ಲಬ್ …

Read More »

ಭಾರತ್ ಜೋಡೋ ಯಾತ್ರೆ ಹುಚ್ಚರ ಜಾತ್ರೆ: ಗುಂಡ್ಲುಪೇಟೆ ಶಾಸಕ

ಚಾಮರಾಜನಗರ: ಭಾರತ್ ಜೋಡೋ ಯಾತ್ರೆ ಹುಚ್ಚರ ಜಾತ್ರೆ ಆಗಿದೆ. ಇದೊಂದು ಹುಚ್ಚನ ಮದುವೆ ಇದ್ದಂತೆ ಎಂದು ಗುಂಡ್ಲುಪೇಟೆ ಬಿಜೆಪಿ ಶಾಸಕ ಸಿ.ಎಸ್.ನಿರಂಜನ ಕುಮಾರ್ ಲೇವಡಿ ಮಾಡಿದ್ದಾರೆ. ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರಿಗೆ ಈಗ ಫೇಸ್ ವ್ಯಾಲ್ಯೂ ಇಲ್ಲ. ಜನರಿಗೆ ಈಗಾಗಲೇ ಅವರ ಕ್ಷಮತೆ ಬಗ್ಗೆ ಅರ್ಥವಾಗಿದೆ. ಇವರ ಕೈಯಲ್ಲಿ ದೇಶ ನಡೆಸಲು ಆಗ್ತಾ ಇಲ್ಲ ಎಂಬುದು ಗೊತ್ತಾಗಿದೆ. ಅವರ ಯಾತ್ರೆಯಿಂದ ಬಿಜೆಪಿಗೆ ಯಾವುದೇ ರೀತಿ ನಷ್ಟ ಇಲ್ಲ …

Read More »

ಕಟೀಲ್ ಬಫೂನ್ ಇದ್ದಂತೆ: ಅವರ ಮೆದುಳು-ನಾಲಿಗೆಗೆ ಸಂಪರ್ಕವೇ ಇರಲ್ಲ; ಎಂ.ಬಿ.ಪಾಟೀಲ್

ಬಳ್ಳಾರಿ: ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳೀನ್ ಕುಮಾರ್ ಕಟೀಲ್ ಅವರು `ಬಫೂನ್’ ಇದ್ದಂತೆ. ಅವರಿಗೆ ನಾಲಿಗೆ ಮತ್ತು ಮದುಳಿಗೆ ಸಂಪರ್ಕವೇ ಇಲ್ಲದಿದ್ದು, ಏನು ಮಾತನಾಡುತ್ತಾರೋ ಅವರಿಗೆ ಗೊತ್ತಿಲ್ಲ ಎಂದು ಮಾಜಿ ಸಚಿವ, ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಎಂ.ಬಿ.ಪಾಟೀಲ್ ಅವರು ವ್ಯಂಗ್ಯವಾಡಿದರು.   ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಳೀನ್ ಕುಮಾರ್ ಕಟೀಲ್ ಅವರು ಏನು ಮಾತನಾಡುತ್ತಾರೋ ಅವರಿಗೆ ಗೊತ್ತಿಲ್ಲ. ನಾಲಿಗೆ-ಮೆದುಳಿಗೆ ಸಂಪರ್ಕವಿಲ್ಲದಂತೆ ಮಾತನಾಡುತ್ತಾರೆ. ಅವರು ಒಂದು ರೀತಿ `ಬಫೂನ್’ ಇದ್ದಂತೆ. …

Read More »

ಭೂ ಪರಿವರ್ತನೆ ಸರಳ ಕ್ರಮ: ಸಚಿವ ಆರ್‌.ಅಶೋಕ್‌

ಬೆಂಗಳೂರು: ಯೋಜನಾ ಪ್ರಾಧಿಕಾರದ ವ್ಯಾಪ್ತಿಯ ಪ್ರದೇಶಗಳಲ್ಲಿ ಸರಳವಾಗಿ ಕೃಷಿ ಭೂಮಿ ಕೃಷಿಯೇತರ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಭೂ ಪರಿವರ್ತನೆ ಮಾಡಿಕೊಡಲು ಸರ್ಕಾರ ಮುಂದಾಗಿದೆ. ಸುದ್ದಿಗಾರರ ಜತೆ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ್‌, ಸಾರ್ವಜನಿಕರ ಅನುಕೂಲಕ್ಕಾಗಿ ಸುಗ್ರೀವಾಜ್ಞೆ ಮೂಲಕ ರಾಜ್ಯದಲ್ಲಿ ಜಾರಿಗೊಳಿಸಲಾಗುವುದು. ಬೆಳಗಾವಿ ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗುವುದು ಎಂದು ಹೇಳಿದರು. ಇದರಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಸಹಕಾರಿಯಾಗಲಿದೆ. ನಗರ ಪ್ರದೇಶದಲ್ಲಿ ಭೂ ಪರಿವರ್ತನೆಗೆ …

Read More »

ಸರ್ಕಾರ ಮಾಡಬೇಕಾದ ಕೆಲಸವನ್ನು ನಟಿ ಲೀಲಾವತಿ ಮಾಡಿದ್ದಾರೆ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು: ಸರ್ಕಾರ ಮಾಡುವ ಕೆಲಸವನ್ನು ಹಿರಿಯ ನಟಿ ಲೀಲಾವತಿ ಅವರು ಮಾಡಿದ್ದಾರೆ. ಆಸ್ಪತ್ರೆಗೆ ಬೇಕಾದ ಸೌಕರ್ಯಗಳು, ಸೌಲಭ್ಯಗಳು, ಸಿಬ್ಬಂದಿಗಳನ್ನು ಒದಗಿಸುವ ಪ್ರಾಮಾಣಿಕ ಕೆಲಸ ಸರ್ಕಾರದಿಂದ ಮಾಡುತ್ತೇವೆ. ಆಸ್ಪತ್ರೆಯ ಉದ್ಘಾಟನೆಗೆ ಬರದಿದ್ದರೆ ನಮ್ಮ ಹುದ್ದೆಯ ಘನತೆಗೆ ಚ್ಯುತಿ ಬರುತ್ತಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.   ಅವರು ಸೋಲದೇವನಹಳ್ಳಿ ಗ್ರಾಮದಲ್ಲಿ ಹಿರಿಯ ನಟಿ ಲೀಲಾವಲಿ ಅವರು ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಈ ಭಾಗದಲ್ಲಿ ಪಶುವೈದ್ಯಕೀಯ ಆಸ್ಪತ್ರೆ ಆಗಬೇಕಾಗಿದೆ …

Read More »

ಕಾರಲ್ಲಿ ಅತ್ಯಾಚಾರ, ವಿಷ ಕುಡಿದು ಆತ್ಮಹತ್ಯೆ ಯತ್ನ.. ಇದು ಲವ್​, ಸೆಕ್ಸ್​, ದೋಖಾ ಸ್ಟೋರಿ

ಠಾಣೆ (ಮಹಾರಾಷ್ಟ್ರ): ಇಲ್ಲಿನ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವತಿಯ ಜೀವನದಲ್ಲಿ ಲವ್ ಸೆಕ್ಸ್ ದೋಖಾ ಹಿಂದಿ ಚಲನಚಿತ್ರದ ರೀತಿಯಲ್ಲಿ ಘಟನೆಗಳು ಘಟಿಸಿದ್ದು ಅಚ್ಚರಿಯಾದರೂ ನಿಜ. ಈ ಯುವತಿಯು ಒಬ್ಬಾತನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಪ್ರೀತಿಯ ನಾಟಕವಾಡುತ್ತಲೇ ಆತ ಅನೇಕ ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಆದರೆ, ಇದೆಲ್ಲ ಸಾಕು ನಾವಿನ್ನು ಲಗ್ನವಾಗೋಣ ಎಂದಾಗ ಮಾತ್ರ ಆತ ತನ್ನ ಅಸಲಿ ಬಣ್ಣ ತೋರಿಸಲಾರಂಭಿಸಿದ್ದ. ಹೀಗಾಗಿ ಯುವತಿಯು ಬೇರೆ ದಾರಿ ಕಾಣದೇ ಆನ್ಲೈನ್ ಮೂಲಕ ವಿಷ …

Read More »

ಪಿಎಫ್‌ಐ ನಿಷೇಧ: ಡಿಕೆಶಿ, ಸಿದ್ದರಾಮಯ್ಯ ಬಾಯಿ ತೆರೆದಿಲ್ಲ ಏಕೆ -ಬಿಜೆಪಿ ಪ್ರಶ್ನೆ

ನವದೆಹಲಿ: ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಆದೇಶ ಬಿಜೆಪಿ -ಕಾಂಗ್ರೆಸ್‌ ನಡುವೆ ರಾಜಕೀಯ ತಿರುವು ಪಡೆದುಕೊಂಡಿದೆ. ಪಿಎಫ್‌ಐ ನಿಷೇಧ ವಿಚಾರವನ್ನು ಪ್ರಸ್ತಾಪಿಸಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಪಿಎಫ್‌ಐ ಸೇರಿದಂತೆ ಅದರ ಸಹವರ್ತಿ ಸಂಘಟನೆಗಳು ಮಾಡುತ್ತಿದ್ದ ಎಲ್ಲಾ ದೇಶ ವಿರೋಧಿ ಚಟುವಟಿಕೆಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪಕ್ಷ (ಕಾಂಗ್ರೆಸ್) ಬೆಂಗಾವಲಾಗಿ ನಿಂತಿತ್ತು ಎಂದು ಆರೋಪಿಸಿದೆ.   ಪಿಎಫ್‌ಐ …

Read More »

ಮಂಗಳ ಗ್ರಹದಲ್ಲಿ ಈಗಲೇ 7118 ಕೆಜಿ ತ್ಯಾಜ್ಯ!

ಪ್ಯಾರಿಸ್, ಸೆ. 27: ಸುಮಾರು 50 ವರ್ಷಗಳ ಹಿಂದೆ ಮಂಗಳ ಗ್ರಹದ ಶೋಧ ಕಾರ್ಯಾಚರಣೆ ಆರಂಭಿಸಿರುವ ಮಾನವ ಕುಲವು, ಅಲ್ಲಿಗೆ ಹಲವು ಬಾಹ್ಯಾಕಾಶ ನೌಕೆಗಳನ್ನು ಈಗಾಗಲೇ ಕಳುಹಿಸಿದೆ. 2030ರ ದಶಕದ ವೇಳೆಗೆ ಅಲ್ಲಿಗೆ ಮೊದಲ ಬಾರಿಗೆ ಮಾನವನನ್ನು ಕಳುಹಿಸುವ ಯೋಜನೆಯನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಹೊಂದಿದೆ.   ಮಂಗಳ ಗ್ರಹದ ಮೇಲೆ ಮಾನವ ಕಾಲಿಡಲು ಇನ್ನೂ ತುಂಬಾ ಸಮಯವಿದೆಯಾದರೂ, ಅಲ್ಲಿ ಕಸವನ್ನು ಹರಡುವುದರಿಂದ ಮಾನವರೇನೂ ಹಿಂದೆ ಬಿದ್ದಿಲ್ಲ. …

Read More »

೪.೮೦ ಕೋಟಿ ರೂ ಅನುದಾನದಲ್ಲಿ ಸುಣಧೋಳಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ*

  ಮೂಡಲಗಿ: ಸುಣಧೋಳಿ ಗ್ರಾಮದ ಅಭಿವೃದ್ಧಿಗೆ ಈಗಾಗಲೇ ಕಹಾಮಾ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದಿಂದ ನಾನಾ ಯೋಜನೆಗಳಲ್ಲಿ ಅನುದಾನ ನೀಡಿ ಅಭಿವೃಧಿ ಪಡಿಸುತ್ತಿದ್ದಾರೆ. ಈಂತಹ ಶಾಸಕರು ಪಡೆದಿರುವುದು ಪುಣ್ಯ ಎಂದು ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಶಿವಾನಂದ ಸ್ವಾಮೀಜಿಗಳು ಹೇಳಿದರು. ಅವರು ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಸುಣಧೋಳಿಕ್ರಾಸ್‌ದಿಂದ ಸುಣಧೋಳಿ ಗ್ರಾಮದವರಿಗೆ ಸುಮಾರು ಮೂರು ಕಿ.ಮಿ ರಸ್ತೆಯನ್ನು ಲೋಕೊಪಯೋಗಿ ಇಲಾಖೆಯ ೪.೮೦ ಕೋಟಿ ರೂಪಾಯಿ …

Read More »