Breaking News

Uncategorized

ಭಾಲ್ಕಿ ಶ್ರೀಗಳಿಗೆ ರಾಷ್ಟ್ರೀಯ ಪ್ರಶಸ್ತಿ

ಗದಗ: ‘ತೋಂಟದ ಸಿದ್ಧಲಿಂಗ ಸ್ವಾಮೀಜಿ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ಯನ್ನು ಪ್ರಸಕ್ತ ಸಾಲಿನಲ್ಲಿ ಬೀದರ್‌ನ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು ಅವರಿಗೆ ಪ್ರದಾನ ಮಾಡಲಾಗುವುದು’ ಎಂದು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್‌.ಎಸ್‌.ಪಟ್ಟಣಶೆಟ್ಟಿ ತಿಳಿಸಿದ್ದಾರೆ. ಪ್ರಶಸ್ತಿಯು ₹ 5 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಅ.6ರಂದು ಇಲ್ಲಿ ನಡೆಯುವ ಲಿಂ.ಡಾ.ತೋಂಟದ ಸಿದ್ಧಲಿಂಗಸ್ವಾಮೀಜಿಯವರ ನಾಲ್ಕನೇ ಪುಣ್ಯಸ್ಮರಣೆ, ‘ಮರಣವೇ ಮಹಾನವಮಿ’ ಕಾರ್ಯಕ್ರಮದಲ್ಲಿ ಸಚಿವ ಸಿ.ಸಿ.ಪಾಟೀಲ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

Read More »

194 ಕೋಟಿ ರೂ. ವೆಚ್ಚದ ಕೌಜಲಗಿ ಭಾಗದ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿ ರೈತರಿಗೆ ವರದಾನ : ಶಾಸಕ ಬಾಲಚಂದ್ರ ಜಾರಕಿಹೊಳಿ

  ಗೋಕಾಕ : ಕೌಜಲಗಿ ಭಾಗದ ರೈತರ ಬಹು ವರ್ಷಗಳ ಬೇಡಿಕೆಯಾಗಿರುವ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿಯು ಈಗಾಗಲೇ ಪೂರ್ಣಗೊಂಡಿದ್ದು, ರೈತರ ಎಫ್.ಐ.ಸಿ ಕಾಮಗಾರಿಗೆ 32 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಚಿಕ್ಕ ನೀರಾವರಿ ಇಲಾಖೆಯಿಂದ 162 ಕೋಟಿ ರೂ. ಮೊತ್ತದ ಕಲ್ಮಡ್ಡಿ ಏತ ನೀರಾವರಿ ಯೋಜನೆಯ ಕಾಮಗಾರಿಯು ಈಗಾಗಲೇ ಪೂರ್ಣಗೊಂಡಿದೆ. ರೈತರ ಜಮೀನುಗಳಿಗೆ ಹೊಲಗಾಲುವೆ ಮೂಲಕ ನೀರು …

Read More »

ಬೆಳಗಾವಿ:ರೈಲ್ವೆ ನಿಲ್ದಾಣ ಅಭಿವೃದ್ಧಿ ಪರಿಶೀಲನೆ

ಬೆಳಗಾವಿ: ಬೆಳಗಾವಿ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿ ವೀಕ್ಷಿಸಲು ಶನಿವಾರ ಭೇಟಿ ನೀಡಿದ ನೈರುತ್ಯ ವಲಯ ರೇಲ್ವೆ ಮಹಾಪ್ರಬಂಧಕ ಸಂಜೀವ ಕಿಶೋರಿ ಅವರಿಗೆ ಸಂಸದೆ ಮಂಗಲಾ ಅಂಗಡಿ ಅವರು ಸುಧಾರಣಾ ಕಾಮಗಾರಿಗಳ ಪಟ್ಟಿ ನೀಡಿದರು. ಬೆಳಗಾವಿ- ಕಿತ್ತೂು- ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಬೇಗ ಪ್ರಾರಂಭಿಸಬೇಕು. ನಗರದ ಟಿಳಕವಾಡಿ ಸಿಎಲ್‌ಸಿ ಸಂಖ್ಯೆ 383 ಹಾಗೂ 382 (ಟಿಳಕವಾಡಿ ಗೇಟ್‌ ನಂಬರ್‌ 1 ಹಾಗೂ 2) ಹತ್ತಿರ ರೈಲ್ವೆ …

Read More »

ನಿಂಗಾನಂದಗೆ ‘ಮಿಸ್ಟರ್‌ ಲಿಂಗರಾಜ’ ಪಟ್ಟ

ಬೆಳಗಾವಿ: ಇಲ್ಲಿನ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಕ್ರೀಡಾ ವಿಭಾಗ ಹಾಗೂ ಜಿಲ್ಲಾ ದೇಹದಾರ್ಢ್ಯ ಅಸೋಸಿಯೇಷನ್ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ 36ನೇ ‘ಮಿಸ್ಟರ್ ಲಿಂಗರಾಜ’ ಸ್ಪರ್ಧೆ ಗಮನ ಸೆಳೆಯಿತು. ಸ್ಪರ್ಧೆಯಲ್ಲಿ ಬಿ.ಎ ಪ್ರಥಮ ವರ್ಷದ ನಿಂಗಾನಂದ ಹಿರೇಮಠ ‘ಮಿಸ್ಟರ್ ಲಿಂಗರಾಜ’ ಪ್ರಶಸ್ತಿ ಪಡೆದುಕೊಂಡರು. ಪ್ರವೀಣ ಕುದರಿಮುತಿ ದ್ವಿತೀಯ, ಅರ್ಪಿತ್‌ ತೋರಗಲ್ ತೃತೀಯ ಸ್ಥಾನ ಪಡೆದರು. ಸ್ಪರ್ಧೆಯ ನಿರ್ಣಾಯಕರಾಗಿ ಅಂತರರಾಷ್ಟ್ರೀಯ ಖ್ಯಾತಿಯ ಅಜಿತ್ ಸಿದ್ದಣ್ಣವರ, ಜಿಲ್ಲಾ ದೇಹದಾರ್ಢ್ಯ ಅಸೋಸಿಯೇಷನ್‍ ಅಧ್ಯಕ್ಷ ಎಂ.ಕೆ.ಗುರವ್, …

Read More »

ಅಕ್ಟೋಬರ್ ತಿಂಗಳಾಂತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ: ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಉಪನೋಂದಣಾಧಿಕಾರಿಗಳ ಕಛೇರಿಯು ಈ ತಿಂಗಳ ಅಂತ್ಯದೊಳಗೆ ಆರಂಭಗೊಳ್ಳಲಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಈಗಾಗಲೇ ಈ ಕಛೇರಿ ಆರಂಭಕ್ಕೆ ಎಜಿ ಕೋಡ್ (ಅಕೌಂಟಂಟ್ ಜನರಲ್) ಬಂದಿದ್ದು, ಇನ್ನು ಡಿಡಿಓ ಕೋಡ್ ಬರಬೇಕಿದೆ. ಇದರ ಜೊತೆಗೆ ಎಂಪಿಎಸ್ ಕೋಡ್, ಖಜಾನೆ-1 ಮತ್ತು ಖಜಾನೆ-2 ಕೂಡ ಅನುಮತಿಗೆ ಕಾಯುತ್ತಿದ್ದು, ಈ ತಿಂಗಳಾಂತ್ಯಕ್ಕೆ ಮೂಡಲಗಿಗೆ ಉಪನೋಂದಣಾಧಿಕಾರಿಗಳ ಕಾರ್ಯಾಲಯ ಆರಂಭವಾಗಲಿದೆ …

Read More »

ಬೆಳಗಾವಿಯ ಮಾಡಂಗೇರಿ ಗ್ರಾಮದಲ್ಲಿ ಮನೆಗೋಡೆ ಕುಸಿದು ತಾಯಿ ಮಗು ಸ್ಥಳದಲ್ಲೇ ಸಾವು

ಬೆಳಗಾವಿ : ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು ತಾಯಿ ಮತ್ತು ಮಗು ಸ್ಥಳದಲ್ಲೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಯರಗಟ್ಟಿ ತಾಲೂಕಿನ ಮಾಡಂಗೇರಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಯಲ್ಲವ್ವ ಮಹಾದೇವ ಬಾಗಿಲದ (40), ಪ್ರಜ್ಬಲ್ ಮಹಾದೇವ ಬಾಗಿಲದ (5) ಎಂದು ಗುರುತಿಸಲಾಗಿದೆ. ಮನೆಯಲ್ಲಿದ್ದ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಯರಗಟ್ಟಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಮೂರು ದಿನಗಳಿಂದ ಯರಗಟ್ಟಿ ತಾಲೂಕಿನಾದ್ಯಂತ ನಿರಂತರ ಮಳೆ ಆಗುತ್ತಿದ್ದು,ಇದರಿಂದ ಶಿಥಿಲಾವಸ್ಥೆಯಲ್ಲಿದ್ದ …

Read More »

ಮಕ್ಕಳ ಅಶ್ಲೀಲ ದೃಶ್ಯ ಚಿತ್ರೀಕರಿಸಿ, ಸೋಶಿಯಲ್​ ಮೀಡಿಯಾಕೆ ಹರಿಬಿಡುತ್ತಿದ್ದ ಭೂಪ.!

ಶಿವಮೊಗ್: ಸೊರಬ ತಾಲ್ಲೂಕಿನ ವಾಸಿಯಾದ ತಿಮ್ಮಪ್ಪ ಎಂಬ 42 ವರ್ಷದ ವಯಸ್ಸಿನ ವ್ಯಕ್ತಿಯು ಅಪ್ರಾಪ್ತ ವಯಸ್ಸಿನ ಬಾಲಕರ ಅಶ್ಲೀಲ ವೀಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದ.ಈ ಬಗ್ಗೆ ಸೈಬರ್ ಟಿಪ್ ಲೈನ್ ನಿಂದ ಬಂದ ದೂರಿನ ಮೇರೆಗೆ 12-01-2020 ರಂದು ಶಿವಮೊಗ್ಗ ಜಿಲ್ಲೆಯ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಐಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು.     ಈ ಸಂಬಂಧ ತನಿಖೆ ನಡೆಸಿದ್ದ ತನಿಖಾಧಿಕಾರಿ …

Read More »

ಗೃಹ, ವಾಹನ ಸಾಲ ಬಡ್ಡಿದರ ಮತ್ತಷ್ಟು ಹೆಚ್ಚಳ: ರೆಪೋ ದರ ಮತ್ತೆ ಶೇ.0.50ರಷ್ಟು ಹೆಚ್ಚಳ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ (ಸೆಪ್ಟೆಂಬರ್ 30) ಸತತ ನಾಲ್ಕನೇ ಬಾರಿಗೆ ಶೇ.05ರಷ್ಟು ರೆಪೋ ದರವನ್ನು ತಕ್ಷಣವೇ ಜಾರಿಗೆ ಬರುವಂತೆ ಹೆಚ್ಚಳ ಮಾಡಿದ್ದು, ಇದರೊಂದಿಗೆ ರೆಪೋ ದರ ಶೇ.5.9ಕ್ಕೆ ಏರಿಕೆಯಾದಂತಾಗಿದೆ.   ಪ್ರಸಕ್ತ ಸಾಲಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನಾಲ್ಕನೇ ಬಾರಿಗೆ ರೆಪೋ ದರ ಹೆಚ್ಚಳ ಮಾಡಿದಂತಾಗಿದೆ. ರೆಪೋ ದರ ಹೆಚ್ಚಳದಿಂದ ಗೃಹ, ವಾಹನ ಸಾಲದ ಬಡ್ಡಿದರ ಮತ್ತಷ್ಟು ಏರಿಕೆಯಾಗಿದೆ. ಕೋವಿಡ್ ಬಳಿಕ ಆರ್ ಬಿಐ ಮೇ ತಿಂಗಳಿನಲ್ಲಿ ರೆಪೋ …

Read More »

ಬೆಳಗಾವಿ: ಸಾಂಸ್ಕೃತಿಕ ಸಂಗಮ‌ ದಾಂಡಿಯಾ

ಬೆಳಗಾವಿ: ನವರಾತ್ರಿ ಉತ್ಸವಕ್ಕೆ ಬೆಳಗಾವಿಗೆ ಬರಬೇಕು ನೀವು. ಈ ಒಂಬತ್ತು ದಿನಗಳ ಪ್ರತಿ ರಾತ್ರಿಗೂ ರಂಗು ತುಂಬುತ್ತದೆ ದಾಂಡಿಯಾ. ಕನ್ನಡ, ಮರಾಠಿ, ಗುಜರಾತಿ ಮೂರೂ ಸಂಸ್ಕೃತಿಗಳ ‘ಕೂಡಲಸಂಗಮ’ ಈ ಕೋಲಾಟ. ಬೆಳಗಾವಿ ನಗರದ ಪ್ರತಿ ಗಲ್ಲಿ, ರಸ್ತೆ, ಬಡಾವಣೆ, ಅಪಾರ್ಟ್‌ಮೆಂಟ್‌, ಮೈದಾನಗಳು, ಕಲ್ಯಾಣ ಮಂಟಪಗಳು… ಹೀಗೆ ಎಲ್ಲೆಲ್ಲಿ ಜಾಗವಿದೆಯೋ ಅಲ್ಲಿ ದಾಂಡಿಯಾ ಗುಂಗೇರಿದೆ. ಈಗೀಗ ಹಳ್ಳಿಗಳಿಗೂ ಹರಿದುಹೋಗಿರುವ ಈ ನೃತ್ಯ ಗ್ರಾಮೀಣ ಹೃದಯಗಳನ್ನೂ ಕುಣಿಸುತ್ತಿದೆ. ಸಾಂಪ್ರದಾಯಿಕ ಹಾಡು, ಸಿನಿಮಾ ಗೀತೆಗಳನ್ನು …

Read More »

ಹೊಸೂರು ರಾಷ್ಟ್ರೀಯ ಹೆದ್ದಾರಿಯ RTO ಕಚೇರಿ ಮೇಲೆ ಲೋಕಾಯುಕ್ತ ಸಂಸ್ಥೆ ದಾಳಿ

ಆನೇಕಲ್(ಬೆಂಗಳೂರು): ಹೊಸೂರು ರಾಷ್ಟ್ರೀಯ ಹೆದ್ದಾರಿಯ ಆರ್​ಟಿಒ ಕಚೇರಿ ಮೇಲೆ ದಿಡೀರ್ ದಾಳಿ ನಡೆಸುವ ಮೂಲಕ ಲೋಕಾಯುಕ್ತ ಸಂಸ್ಥೆ ಸದ್ದು ಮಾಡಿದೆ. ಎರಡು ಜೀಪುಗಳಲ್ಲಿ ಆಗಮಿಸಿರುವ ಅಧಿಕಾರಿಗಳು 20 ಕ್ಕೂ ಹೆಚ್ಚು ಅಧಿಕಾರಿಗಳ ತ‌ಂಡದಿಂದ ತಪಾಸಣೆ ನಡೆಸಿದೆ. ಲೋಕಾಯುಕ್ತ ಎಸ್​ಪಿ ಶ್ರೀನಾಥ್ ಜೋಷಿ ನೇತೃತ್ವದಲ್ಲಿ ನಡೆಯುತ್ತಿರುವ ಪರಿಶೀಲನೆಯಲ್ಲಿ ಹಲವಾರು ದಾಖಲೆಗಳನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತರು ಖಾಸಗಿ ವ್ಯಕ್ತಿಗಳನ್ನೂ ಕೂಡ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಲೆಕ್ಕಪತ್ರಗಳಲ್ಲಿ ನಮೂದಾದ ಹಣಕ್ಕಿಂತ ಮೂರು ಪಟ್ಟು ನಗದು …

Read More »