Breaking News

Uncategorized

ರಸ್ತೆ ದಾಟುವಾಗಲೇ 130 ಕಿ.ಮೀ ವೇಗದಲ್ಲಿ ಬಂದ ಕಾರು ಡಿಕ್ಕಿ: ಇಬ್ಬರು ಮಹಿಳಾ ಟೆಕ್ಕಿಗಳು ದುರ್ಮರಣ

ಚೆನ್ನೈ: ಇಬ್ಬರು ಮಹಿಳಾ ಟೆಕ್ಕಿಗಳು ರಸ್ತೆ ದಾಟುವಾಗ ತುಂಬಾ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಚೆನ್ನೈನ ಐಟಿ ಕಾರಿಡಾರ್​ನಲ್ಲಿ ನಡೆದಿದೆ. ಎಸ್​. ಲಾವಣ್ಯ ಮತ್ತು ಆರ್​. ಲಕ್ಷ್ಮೀ ಮೃತ ದುರ್ದೈವಿಗಳು. ಇಬ್ಬರಿಗೂ 23 ವರ್ಷ ವಯಸ್ಸಾಗಿತ್ತು. ಚೆನ್ನೈ ಎಚ್​ಸಿಎಲ್​ ಸ್ಟೇಟ್​ ಸ್ಟ್ರೀಟ್​ ಸರ್ವೀಸ್​ ಸಂಸ್ಥೆಯಲ್ಲಿ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದರು. ಇಬ್ಬರು ಕೆಲಸ ಮುಗಿಸಿ ಬುಧವಾರ ರಾತ್ರಿ 11.30ಕ್ಕೆ ಮನೆಗೆ ಹಿಂದಿರುತ್ತಿದ್ದರು. ಈ …

Read More »

ಬೆಳಗಾವಿ: ಸಾವಿನಲ್ಲೂ ಒಂದಾದ ವೃದ್ದ ದಂಪತಿ

ಬೆಳಗಾವಿ: ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಯರಗಟ್ಟಿ ತಾಲ್ಲೂಕಿನ ತಲ್ಲೂರ ಗ್ರಾಮದಲ್ಲಿ ನಡೆದಿದೆ. ಅನಾರೋಗ್ಯದಿಂದ‌ ಬಳಲುತ್ತಿದ್ದ ಬಾಬಣ್ಣ ಅಣ್ಣಿಗೇರಿ(76) ಬುಧವಾರ ತಡರಾತ್ರಿ ಮೃತಪಟ್ಟರು. ಈ ವಿಷಯ ಕೇಳಿದ ಪತ್ನಿ ಶಿವಬಸವ್ವ(70) ಕೆಲಹೊತ್ತಿನಲ್ಲೇ ಹೃದಯಾಘಾತಕ್ಕೀಡಾಗಿ ನಿಧನರಾದರು. ಏಕಕಾಲಕ್ಕೆ ವೃದ್ಧ ದಂಪತಿ ಅಗಲಿದ್ದಕ್ಕೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇಂದು ಮಧ್ಯಾಹ್ನ 12 ಗಂಟೆಗೆ ಇಬ್ಬರ ಅಂತ್ಯಕ್ರಿಯೆಯನ್ನು ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Read More »

ಎಷ್ಟೇ ದೊಡ್ಡ ಹುಲಿ ಇದ್ರೂ ಕಾನೂನಿನ ಮುಂದೆ ಎಲ್ಲರೂ ಒಂದೇ; BSY ಮೊದಲು ರಾಜೀನಾಮೆ ನೀಡಲಿ; ಶಾಸಕ ಯತ್ನಾಳ್ ಆಗ್ರಹ

ಬೆಂಗಳೂರು: ಭ್ರಷ್ಟಾಚಾರ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮೊದಲು ಎಲ್ಲಾ ಹುದ್ದೆಗೂ ರಾಜೀನಾಮೆ ನೀಡಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಕೋರ್ಟ್ ಆದೇಶ ನೀಡಿದೆ. ಈ ವಿಚಾರವಾಗಿ ಮೊದಲು ಯಡಿಯೂರಪ್ಪ ರಾಜೀನಾಮೆ ಕೊಡಲಿ. ಎಷ್ಟೇ ದೊಡ್ಡ ಹುಲಿ ಇದ್ರೂ ಕಾನೂನಿನ …

Read More »

ಅಕ್ರಮ ಸಂಬಂಧಕ್ಕೆ ಬೇಸತ್ತು ತವರು ಸೇರಿದರೂ ಬಿಡದ ಅಥಣಿ ಪತಿ! ಎರಡು ಸುತ್ತು ಗುಂಡು ಹಾರಿಸಿದ ಭೂಪ.

ಚಿಕ್ಕೋಡಿ: ಗಂಡನ ಅನೈತಿಕ ಸಂಬಂಧದಿಂದ ಬೇಸತ್ತು ತವರು ಸೇರಿದ ಪತ್ನಿಯ ಮೇಲೆ ಆತ ಗುಂಡು ಹಾರಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. ತವರು ಮನೆಯಿಂದ ವಾಪಸ್​ ಬರುವಂತೆ ಪತ್ನಿಯ ಮೇಲೆ ಹಲ್ಲೆ ಮಾಡಿ ಅವರ ಮೇಲೆ ಗುಂಡು ಹಾರಿಸಿರುವ ಆರೋಪವನ್ನು ಶಿವಾನಂದ ಕಾಗಲೆ (4೦) ಎದುರಿಸುತ್ತಿದ್ದಾನೆ. ಪತ್ನಿ ಪ್ರೀತಿ ಗಂಡನ ಅನೈತಿಕ ಸಂಬಂಧದಿಂದ ಬೇಸತ್ತು ತವರು ಮನೆ ಸೇರಿದ್ದರು. ಅವರ ಮನೆಗೆ ಹೋಗಿದ್ದ ಶಿವಾನಂದ ಕಾಗಲೆ, ವಾಪಸಾಗುವಂತೆ ಪತ್ನಿಯ …

Read More »

ಪುರುಷರು ಹೆಚ್ಚಾಗಿದ್ದರೂ ಮಹಿಳೆಯರಿಗೆ ವಾರ್ಡ್​ ಮೀಸಲಾತಿ: ಸರ್ಕಾರದ ನಿಲುವು ಕೇಳಿದ ಹೈಕೋರ್ಟ್​

ಬೆಂಗಳೂರು: ಬಿಬಿಎಂಪಿಯ 243 ವಾರ್ಡ್‌ಗಳಿಗೆ ನಿಗದಿ ಪಡಿಸಿರುವ ಮೀಸಲಾತಿ ಮರು ಪರಿಶೀಲನೆ ನಡೆಸುವ ಕುರಿತು ಸರ್ಕಾರದ ನಿಲುವು ತಿಳಿಸುವಂತೆ ಹೈಕೋರ್ಟ್​ ಸರ್ಕಾರಕ್ಕೆ ಕೇಳಿದೆ. ಈಜಿಪುರದ ಕೆ.ಮಹದೇವ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಈ ಸೂಚನೆ ನೀಡಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕೆಲವು ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಮಾತ್ರ ಮೀಸಲಿರಿಸಲಾಗಿದೆ. ಪುರುಷರು ಹೆಚ್ಚಾಗಿದ್ದರೂ ಮಹಿಳೆಯರಿಗೇ ಮೀಸಲಿರಿಸಲಾಗಿದೆ. ಆ …

Read More »

ಪಶು ವೈದ್ಯಕೀಯ ಸಂಸ್ಥೆಯಿಂದ ಶ್ವಾನಗಳಿಗೆ ಉಚಿತ ರೇಬೀಸ್ ಲಸಿಕಾ ಕಾರ್ಯಕ್ರಮ. ಡಾ :ಮೋಹನ ಕಮತ

ಗೋಕಾಕ ತಾಲೂಕಿನಲ್ಲಿ ಮಿಷನ್ ರೇಬೀಸ್ ಕಾರ್ಯಕ್ರಮವನ್ನು 15-09-2022 ರಿಂದ 30-09-2022 ರ ವರೆಗೆ   ಗೋಕಾಕ ತಾಲೂಕಿನ ಎಲ್ಲ ಪಶು ವೈದ್ಯಕೀಯ ಸಂಸ್ಥೆಗಳಲ್ಲಿ ಉಚಿತವಾಗಿ ಶ್ವಾನಗಳಿಗೆ ರೇಬೀಸ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಆದ್ದರಿಂದ ಶ್ವಾನ ಮಾಲೀಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಡಾ:ಮೋಹನ.ವಿ.ಕಮತ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಗೋಕಾಕ ಇವರು ತಿಳಿಸಿರುತ್ತಾರೆ.  

Read More »

ಖ್ಯಾತ ಚಿತ್ರ ನಟ ರಮೇಶ ಬುಧವಾರ ಬೆಳಗಾವಿಯ ಸುವರ್ಣಸೌಧಕ್ಕೆ ಬರ್ತಾರೆ…..!!

ಬೆಳಗಾವಿ- ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವ ನಾಡಿದ್ದು ಬುಧವಾರ ನಡೆಯಲಿದ್ದು ಡಾಕ್ಟರೇಟ್ ಪದವಿ ಸ್ವೀಕರಿಸಲು ಖ್ಯಾತ ಕನ್ನಡ ಚಿತ್ರನಟ ರಮೇಶ್ ಅರವಿಂದ ಬುಧವಾರ ಬೆಳಗಾವಿಗೆ ಬರ್ತಾರೆ..   ಸೆ.14ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ 10ನೇ ಘಟಿಕೋತ್ಸವ ನಡೆಲಿದೆ.ಬೆಳಗಾವಿಯಲ್ಲಿ ಆರ್.ಸಿ.ಯು ಕುಲಪತಿ ಪ್ರೋ.ಎಂ ರಾಮಚಂದ್ರ ಗೌಡ ಮಾಧ್ಯಮದಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು.ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಘಟಿಕೋತ್ಸವ ನಡೆಯಲಿದೆ.ಇದೇ ತಿಂಗಳು 14ರಂದು ಮಧ್ಯಾಹ್ನ 12.30ಕ್ಕೆ ಘಟಿಕೋತ್ಸವ ಸಮಾರಂಭ ನಡೆಯಲಿದೆ. ರಾಜಪಾಲ …

Read More »

ಚಿನ್ನ,ಎಮ್ಮೆ, ಕದ್ದವರು,ಪೋಲೀಸರ ಬಲೆಗೆ

ಬೆಳಗಾವಿ-ಮಹಿಳೆಯರ ಚಿನ್ನಾಭರಣ,ಮನೆ ಮುಂದೆ ಕಟ್ಟಿದ ಎಮ್ಮೆಗಳನ್ನು ದೋಚುತ್ತಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ ಹಾರುಗೇರಿ ಠಾಣೆಯ ಪೋಲೀಸರ ಬಲೆಗೆ ಬಿದ್ದಿದೆ.   ಹಾರೂಗೇರಿ ಮುಗುಳಖೋಡ,ತೇರದಾಳ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಮಹಿಳೆಯರ ಕೊರಳಲ್ಲಿದ್ದ ಚಿನ್ನಾಭರಣ ಎಮ್ಮೆ ಕಳುವು ಮಾಡಿ ಮಾರಾಟ ಮಾಡುತ್ತಿದ್ದ ಹಲವಾರು ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು ಐದು ಜನ ಆರೋಪಿಗಳನ್ನು ಹಾರೂಗೇರಿ ಪೋಲೀಸರು ಬಂಧಿಸಿದ್ದಾರೆ.   ಕಳವು ಮಾಡಲಾಗಿದ್ದ,49 ಗ್ರಾಂ ಚಿನ್ನಾಭರಣ,ಎರಡು ಎಮ್ಮೆ,ಒಂದು ಗೂಡ್ಸ್ ವಾಹನ ಸೇರಿದಂತೆ ಆರು ಲಕ್ಷಕ್ಕೂ …

Read More »

ಭೀಕರ ಬಸ್ ಅಪಘಾತ;7 ಜನ ಸ್ಥಳದಲ್ಲೇ ದುರ್ಮರಣ

ಛತ್ತೀಸ್ ಗಢ: ನಿಂತಿದ್ದ ಟ್ರಕ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.   ಛತ್ತೀಸ್ ಗಢದ ಮದಾಯಿ ಘಾಟ್ ನಲ್ಲಿ ಇಂದು ಬೆಳಿಗ್ಗೆ ಈ ಅಪಘಾತ ಸಂಭವಿಸಿದ್ದು, ಬಸ್ ಕೊರ್ಬಾ ದಿಂದ ರಾಯಪುರಕ್ಕೆ ತೆರಳುತ್ತಿತ್ತು. ಈ ವೇಳೆ ನಿಂತಿದ್ದ ಟ್ರಕ್ ಗೆ ಬಸ್ ಡಿಕ್ಕಿ ಹೊಡೆದಿದೆ ಎಂದು ಕೊರ್ಬಾ ಪೊಲೀಸ್ ಅಧೀಕ್ಷಕ ಸಂತೋಷ್ ತಿಳಿಸಿದ್ದಾರೆ.   ಎದುರಿನಿಂದ …

Read More »

ಐಎಎಸ್ ಅಧಿಕಾರಿ ವಿರುದ್ಧ 1 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಜೆಡಿಎಸ್ ಶಾಸಕ

ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರ ಜಟಾಪಟಿ ಮುಂದುವರೆದಿದ್ದು, ಇದೀಗ ಶಾಸಕರು ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.   ಶಾಸಕ ಸಾ.ರಾ.ಮಹೇಶ್ ಭೂ ಅಕ್ರಮ ಮಾಡಿದ್ದಾರೆ. ಎಂಬ ರೋಹಿಣಿ ಸಿಂಧೂರಿ ಅವರ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕರು, ನಾನು ಯಾವುದೇ ಭೂ ಕಬಳಿಕೆ ಮಾಡಿಲ್ಲ. ಆದರೂ ರೋಹಿಣಿ ಸಿಂಧೂರಿ ನನ್ನ ವಿರುದ್ಧ ಆರೋಪ ಮಾಡಿದ್ದಲ್ಲದೇ …

Read More »