Breaking News

Uncategorized

ಕರ್ನಾಟಕದಲ್ಲೇ ಬೆಳಗಾವಿ ಉಳಿಸಲು ಹೋರಾಡಿದ್ದ ನಾಗನೂರು ಶ್ರೀ

ಅಥಣಿ(ನ.01): ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಅಗ್ರಗಣ್ಯರಲ್ಲಿ ಬೆಳಗಾವಿ ರುದ್ರಾಕ್ಷಿ ಮಠದ ನಾಗನೂರಿನ ಡಾ. ಶಿವಬಸವ ಸ್ವಾಮೀಜಿಯೂ ಒಬ್ಬರು. ಅವರು ಸ್ವಾತಂತ್ರ್ಯಕ್ಕೆ ಎಷ್ಟು ಶ್ರಮಿಸಿದ್ದರೋ ಅಷ್ಟೇ ಶ್ರಮವಹಿಸಿ ಗಡಿ ನಾಡುವ ಬೆಳಗಾವಿಯಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ. ಆಗ ಕನ್ನಡ-ಮರಾಠಿಗರ ಭಾಷಾ ಏಕೀಕರಣ ದನಿ ಮುಗಿಲೆತ್ತರಕ್ಕೆ ಏರಿತ್ತು. ಕೇಂದ್ರ ಸರ್ಕಾರ ಫಜಲ್‌ ಅಲಿ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ನೇಮಿಸಿತ್ತು. ಈ ಸಮಿತಿ ಬೆಳಗಾವಿಗೆ ಭೇಟಿ ನೀಡಿದ್ದಾಗ ಸಮಿತಿಯ ಮುಂದೆ ಶಿವಬಸವ …

Read More »

ಕೈ ಮುಗಿದು ಏರು, ಇದು ಕನ್ನಡದ ತೇರು!

ಹಾವೇರಿ: ‘ಕೈ ಮುಗಿದು ಏರು ಇದು ಕನ್ನಡದ ತೇರು’ ಎಂದು ಬಸ್‌ ಪ್ರಯಾಣಿಕರನ್ನು ಪ್ರೀತಿಯಿಂದ ಸ್ವಾಗತಿಸುತ್ತಿದೆ ‘ಕನ್ನಡ ರಥ’ವಾಗಿ ಪರಿವರ್ತನೆಗೊಂಡಿರುವ ಸಾರಿಗೆ ಬಸ್‌. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದ, ಹಿರೇಕೆರೂರು ಘಟಕದ ‘ಶ್ರೀ ದುರ್ಗಾ ಎಕ್ಸ್‌ಪ್ರೆಸ್‌’ ಎಂಬ ಹೆಸರಿನ ಬಸ್‌ ಮಧುವಣಗಿತ್ತಿಯಂತೆ ಕನ್ನಡ ರಾಜ್ಯೋತ್ಸವಕ್ಕಾಗಿ ವಿಶಿಷ್ಟವಾಗಿ ಅಲಂಕೃತಗೊಂಡಿದೆ. ಪ್ರಯಾಣಿಕರಲ್ಲಿ ಕನ್ನಡಾಭಿಮಾನವನ್ನು ಜಾಗೃತಗೊಳಿಸುತ್ತಿದೆ.   ಬಸ್‌ ಮುಂಭಾಗದಲ್ಲಿ ಕನ್ನಡಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಹಿಂಭಾಗದಲ್ಲಿ ‘ಕರುನಾಡ ಕನ್ನಡಿಗ’ ಎಂಬ …

Read More »

ವಿಜಯಪುರ ಪಾಲಿಕೆ ಫಲಿತಾಂಶ ಇಡೀ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರುತ್ತೆ: ಬಸನಗೌಡ ಪಾಟೀಲ್ ಯತ್ನಾಳ

ವಿಜಯಪುರ: ವಿಜಯಪುರ ನಗರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳೀಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ (Basanagouda Patil Yatnal) ನಿನ್ನೆ ಪ್ರಕಟಗೊಂಡ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ (Vijayapura Corporation Result) ವಿಚಾರವಾಗಿ ಮಾತನಾಡಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಇಡೀ ಕರ್ನಾಟಕ ವಿಧಾನಸಭಾ ಚುನಾವಣೆ (Assembly Elections 2023) ಮೇಲೆ ಪರಿಣಾಮ ಬೀರುತ್ತದೆ. ರಾಜಕಾರಣದ ವಾತಾವರಣ ಬದಲಾವಣೆಯಾಗುತ್ತಿದೆ. ಎಲ್ಲರ ವಿಶ್ವಾಸ ಪ್ರಧಾನಿ …

Read More »

ಬೆಳಗಾವಿಯಲ್ಲಿ ಶ್ವಾನಗಳ ಭರ್ಜರಿ ಪ್ರದರ್ಶನ; ದೇಶದ ನಾನಾ ರಾಜ್ಯದಿಂದ ಬಂದ ಶ್ವಾನಗಳು

ಬೆಳಗಾವಿ ನಗರದ ಶಗುನ್ ಗಾರ್ಡನ್​ನಲ್ಲಿ 1000ಕ್ಕೂ ಅಧಿಕ ಶ್ವಾನಗಳ ಪ್ರದರ್ಶನ ಭಾನುವಾರ (ಅ.30) ವಿಕೇಂಡ್ ಇದ್ದ ಹಿನ್ನೆಲೆ ಕುಂದಾನಗರಿಯಲ್ಲಿ ಶ್ವಾನಗಳ ಭರ್ಜರಿ ಪ್ರದರ್ಶನ ನಡೆಯಿತು. ವರ್ಷಕ್ಕೊಮ್ಮೆ ನಡೆಯುವ ಈ ಶ್ವಾನಗಳ ಪ್ರದರ್ಶನಕ್ಕೆ ದೇಶದ ನಾನಾ ರಾಜ್ಯಗಳಿಂದ ಶ್ವಾನಗಳು ಬಂದಿರುತ್ತವೆ. ಎರಡು ದಿನದಲ್ಲಿ ಸಾವಿರಕ್ಕೂ ಅಧಿಕ ಶ್ವಾನಗಳು, 43 ವಿವಿಧ ತಳಿಗಳು ಪ್ರದರ್ಶನದಲ್ಲಿ ಭಾಗಿಯಾಗಿ ಟ್ರೋಫಿ ಮುಡಿಗೇರಿಸಿಕೊಂಡಿವೆ. ಅಷ್ಟಕ್ಕೂ ಯಾವೆಲ್ಲಾ ತಳಿಗಳು ಭಾಗಹಿಸಿದ್ದವೂ? ಹೇಗೆ ಶ್ವಾಗಳನ್ನ ಇಲ್ಲಿ ಆಯ್ಕೆ ಮಾಡಿ ಟ್ರೋಫಿ …

Read More »

ಬೆಳಗಾವಿ ಕನ್ನಡಿಗರ ಉಸಿರು: ಸಚಿವ ಗೋವಿಂದ ಕಾರಜೋಳ

ಬೆಳಗಾವಿ: ‘ಇತಿಹಾಸದಲ್ಲಿ ‘ವೇಣುಗ್ರಾಮ’ ಎಂದೇ ಹೆಸರಾದ ಬೆಳಗಾವಿಯು ಕನ್ನಡಿಗರ ಉಸಿರು. ಕನ್ನಡಿಗರೇ ಆದ ಕದಂಬರು ಸಮೃದ್ಧ ಸಾಮ್ರಾಜ್ಯ ಕಟ್ಟಿದ್ದೂ ಇದೇ ನೆಲದಲ್ಲಿ. ಕರ್ನಾಟಕ ಏಕೀಕರಣದಲ್ಲೂ ಇಲ್ಲಿನ ಕನ್ನಡಿಗರ ದಿಟ್ಟ ಹೋರಾಟ ಮೈಲಿಗಲ್ಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಬಣ್ಣಿಸಿದರು. ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 67ನೇ ಕರ್ನಾಟಕ ರಾಜ್ಯೋತ್ಸವ ಭಾಷಣ ಮಾಡಿದ ಅವರು, ‘ರಾಜ್ಯದ ಏಕೀಕರಣ ಚಳವಳಿಯಲ್ಲಿ ಜಿಲ್ಲೆಯ ಹಲವಾರು ಮಹನೀಯರು ತ್ಯಾಗ ಮಾಡಿದ್ದಾರೆ. ಬೈಲಹೊಂಗಲದ …

Read More »

ಎಸ್‌ಸಿಗೆ ಶೇ 17, ಎಸ್‌ಟಿಗೆ ಶೇ 7 ಮೀಸಲಾತಿ: ಇಂದಿನಿಂದ ಜಾರಿ

ಬೆಂಗಳೂರು: ಶಿಕ್ಷಣ ಮತ್ತು ಉದ್ಯೋಗ ದಲ್ಲಿ ಪರಿಶಿಷ್ಟ ಜಾತಿಗೆ (ಎಸ್‌ಸಿ)ಶೇ 17, ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಶೇ 7 ಮೀಸಲಾತಿಯನ್ನು ರಾಜ್ಯೋತ್ಸವ ದಿನವಾದ ಮಂಗಳವಾರದಿಂದಲೇ (ನ.1) ಅನ್ವಯವಾಗುವಂತೆ ರಾಜ್ಯ ಸರ್ಕಾರ ಜಾರಿ ಮಾಡಿ ಸೋಮವಾರ ಅಧಿಸೂಚನೆ ಹೊರಡಿಸಿದೆ. ಆದರೆ, ಹೆಚ್ಚಳಗೊಳಿಸಿದ ಮೀಸ ಲಾತಿಯನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈ ಅಧಿಸೂಚನೆಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ.‌ ಹೀಗಾಗಿ, ಅಧಿಸೂಚನೆ ಜಾರಿಗೊಳಿಸುವ ಬಗ್ಗೆ ಗೊಂದಲವಿದೆ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಸರ್ಕಾರದ …

Read More »

ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಪ್ರತ್ಯೇಕ ರಾಜ್ಯ ಧ್ವಜಾರೋಹಣ; ಬಿಗಿ ಪೊಲೀಸ್ ಬಂದೋಬಸ್ತ್

ಒಂದೆಡೆ ಕಲಬುರಗಿಯಲ್ಲಿ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯಕ್ಕಾಗಿ ಆಗ್ರಹಿಸಲಾಗುತ್ತಿದ್ದು, ಬೆಳಗಾವಿಯಲ್ಲಿ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ನಾಡದ್ರೋಹಿ ಎಂಇಎಸ್‌ನಿಂದ ಕರಾಳ ದಿನಾಚರಣೆ ಆಚರಿಸುತ್ತಿದೆ. ಈ ಎಲ್ಲ ನಿಟ್ಟಿನಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಕಲಬುರಗಿ: ಕನ್ನಡ ಮಾತನಾಡುವ ಪ್ರದೇಶಗಳು ಭೌಗೋಳಿಕವಾಗಿ ಒಂದುಗೂಡಿದ ಹೆಮ್ಮೆಯ ದಿನವಿಂದು. ನಾಡಿನ ಸಮಸ್ತ ಜನರು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿದ್ದರೆ ಕಲಬುರಗಿಯಲ್ಲಿ ಪ್ರತ್ಯೇಕ ಕಲ್ಯಾಣ ರಾಜ್ಯಕ್ಕಾಗಿ ಆಗ್ರಹಿಸಲಾಗುತ್ತಿದೆ. ಮಾತ್ರವಲ್ಲದೆ ಇಂದು ಪ್ರತ್ಯೇಕ ರಾಜ್ಯ ಧ್ವಜಾರೋಹಣ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ, ಇನ್ನೊಂದೆಡೆ …

Read More »

ಜನಸಾಮಾನ್ಯರಿಗೆ ಮತ್ತೊಂದು ಶಾಕಿಂಗ್!: ಶೀಘ್ರವೇ ನಂದಿನ ಹಾಲಿನ ದರ 3 ರೂ. ಹೆಚ್ಚಳ

ಬೆಳಗಾವಿ: ಶೀಘ್ರವೇ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸುತ್ತೇವೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಇದರಿಂದ ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯದಲ್ಲಿ ಪ್ರತಿ ಲೀಟರ್ ನಂದಿನಿ ಹಾಲಿಗೆ 3 ರೂ. ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ದರ ಪರಿಷ್ಕರಣೆಯ ಸಂಪೂರ್ಣ ಹಣವು ರೈತರಿಗೆ ಸಿಗಲಿದೆ ಎಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಬಾಲಚಂದ್ರ …

Read More »

ರಾಜ್ಯೋತ್ಸವ: ಕುಂದಾನಗರಿ ಸಜ್ಜು

ಬೆಳಗಾವಿ: ‘ಬೆಳಕಿನ ಹಬ್ಬ’ ದೀಪಾವಳಿ ಬೆನ್ನಲ್ಲೇ, ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸಲು ಕುಂದಾನಗರಿ ಸಿಂಗಾರಗೊಂಡಿದೆ. ನ.1ರಂದು ನಡೆಯಲಿರುವ ಕನ್ನಡೋತ್ಸವಕ್ಕೆ ಸಾಕ್ಷಿಯಾಗಲು ರಾಜ್ಯದ ವಿವಿಧೆಡೆಯಿಂದ ಸಾವಿರಾರು ಜನರ ದಂಡು ಸೋಮವಾರವೇ ಬೆಳಗಾವಿಯತ್ತ ಮುಖಮಾಡಿದೆ. ನಗರದ ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ನಾಡಧ್ವಜಗಳು ಮತ್ತು ಸ್ವಾಗತ ಕಮಾನುಗಳು ರಾರಾಜಿಸುತ್ತಿವೆ. ರಾಜ್ಯೋತ್ಸವಕ್ಕೆ ಶುಭಾಶಯ ಕೋರಿ ಕನ್ನಡ ಪರ ಸಂಘಟನೆಗಳು ಅಲ್ಲಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಿವೆ.   ಇದೇ ಮೊದಲ ಸಲ ರಾಜ್ಯಮಟ್ಟದಲ್ಲಿ ಆಚರಿಸಲಾದ ‘ಕಿತ್ತೂರು ಉತ್ಸವ’ ಅಂಗವಾಗಿ …

Read More »

ಬೆಳಗಾವಿ ಪ್ರವೇಶಕ್ಕೆ ಶಿವಸೇನೆ ಕಾರ್ಯಕರ್ತರ ಯತ್ನ: ತಡೆದ ಪೊಲೀಸ್ ಪಡೆ

ನಿಪ್ಪಾಣಿ (ಬೆಳಗಾವಿ ಜಿಲ್ಲೆ): ಗಡಿಭಾಗದಿಂದ ರಾಜ್ಯ ಪ್ರವೇಶಿಸಲು ಯತ್ನಿಸಿದ ಮಹಾರಾಷ್ಟ್ರದ ಶಿವಸೇನೆಯ ಕಾರ್ಯಕರ್ತರನ್ನು ಸೋಮವಾರ ತಾಲ್ಲೂಕಿನ ಕೊಗನೊಳಿ ಚೆಕ್ ಪೋಸ್ಟ್ ಬಳಿ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದ ರಾಜ್ಯ ಪೊಲೀಸರು ಅವರನ್ನು ಮರಳಿ ಕಳುಹಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವದಂದು ಬೆಳಗಾವಿಯಲ್ಲಿ ರ‍್ಯಾಲಿ ಆಯೋಜಿಸಲಾಗುವುದೆಂದು ಘೋಷಿಸಿ, ರಾಜ್ಯ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಶಿವಸೇನೆಯ ಕೊಲ್ಹಾಪುರ ಜಿಲ್ಲೆಯ ಅಧ್ಯಕ್ಷ ವಿಜಯ ದೇವಣೆ ಮತ್ತು ಕಾರ್ಯಕರ್ತರನ್ನು ಗಡಿಯಲ್ಲಿಯೇ ಪೊಲೀಸರು ತಡೆದರು. ಕೂಡಲೇ ಶಿವಸೇನೆಯ ಕಾರ್ಯಕರ್ತರು ರಾಷ್ಟ್ರೀಯ …

Read More »