Breaking News

Uncategorized

ಭದ್ರತಾ ದಾರ’ ತಯಾರಿ: ಪಾಕ್‌-ಚೀನದ ನೆರಳೂ ಬೀಳುವಂತಿಲ್ಲ!

ನವದೆಹಲಿ: ಕರೆನ್ಸಿ ನೋಟುಗಳ ಮುದ್ರಣಕ್ಕಾಗಿ 3 ಲಕ್ಷ ಕಿಲೋಮೀಟರ್‌ ಉದ್ದದ “ಬಣ್ಣ ಬದಲಿಸುವಂಥ ಭದ್ರತಾ ದಾರ’ವನ್ನು ತಯಾರಿಸಲು ದೇಶವು ಜಾಗತಿಕ ಕಂಪನಿಗಳನ್ನು ಸಂಪರ್ಕಿಸಿದ್ದು, ಅವುಗಳಿಗೆ ಹಲವು ಷರತ್ತುಗಳನ್ನೂ ಸರ್ಕಾರ ವಿಧಿಸಿದೆ. ಭದ್ರತಾ ದಾರ ತಯಾರಿ ಪ್ರಕ್ರಿಯೆಯು ಸಂಪೂರ್ಣ ಭದ್ರತಾ ವಲಯದೊಳಗೆ ನಡೆಯಬೇಕು. ಪಾಕಿಸ್ತಾನ ಮತ್ತು ಚೀನಗೆ ಸಂಬಂಧಿಸಿದವರು ಇದರ ಹತ್ತಿರವೂ ಸುಳಿಯಬಾರದು. ಈ ಎರಡು ದೇಶಗಳ ನಾಗರಿಕರು ಅಥವಾ ಈ ಹಿಂದೆ ಪಾಕಿಸ್ತಾನ ಅಥವಾ ಚೀನದಲ್ಲಿ ಕೆಲಸ ಮಾಡಿರುವವರು, ಅಲ್ಲಿ …

Read More »

ಮನೆ ಮನೆಗೆ ಬುದ್ಧ, ಬಸವ-ಅಂಬೇಡ್ಕರ್: ಸತೀಶ್ ಜಾರಕಿಹೊಳಿಯಿಂದ ವಿನೂತನ ಕಾರ್ಯಕ್ರಮ

ಬೆಳಗಾವಿ: ಹರ್ ಘರ್ ತಿರಂಗಾ, ಮನೆಮನೆಗೂ ಕನ್ನಡ ಧ್ವಜ ಅಭಿಯಾನ ಆಯ್ತು. ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್ ಕಾರ್ಯಕ್ರಮ ಆಯೋಜಿಸಿದ್ದಾರೆ.   ಇದೇ ನ. 6ರಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಸಮಾವೇಶ ಮಾಡಿ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.   ಇನ್ನು ಈ ಬಗ್ಗೆ ಇಂದು(ನ.02) ನಿಪ್ಪಾಣಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, …

Read More »

ಗೋಕಾಕ: ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪಪ್ರಾಚಾರ್ಯ ಎಮ್ ಬಿ ಬಳಗಾರ ಮಾತನಾಡುತ್ತಿರುವದು.

ಗೋಕಾಕ: ಪ್ರತಿ ಮನೆ ಮನೆಯಲ್ಲಿ ಕನ್ನಡ ಭಾಷೆಯನ್ನು ಬಳಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ನಾವೆಲ್ಲ ಕಾರ್ಯಪ್ರವೃತ್ತರಾಗಬೇಕೆಂದು ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಎಮ್ ಬಿ ಬಳಗಾರ ಹೇಳಿದರು. ಅವರು, ಮಂಗಳವಾರದಂದು ಸಂಜೆ ನಗರದ ಬಸವ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ ತಾಲೂಕ ಘಟಕ ಮತ್ತು ಭಾವಯಾನ ಮಹಿಳಾ ಸಾಹಿತ್ಯ ಮತ್ತು ಸಂಸ್ಕøತಿಕ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು …

Read More »

ಕಲ್ಲೋಳಿಯಲ್ಲಿ ಬಂಡಿಗಣಿ ಮಠದ ಸದ್ಬಕ್ತರ ಸತ್ಕಾರ ಸ್ವೀಕರಿಸಿದ ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ : ಕರ್ನಾಟಕವಲ್ಲದೇ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಅಸಂಖ್ಯೆ ಭಕ್ತರಿಗೆ ಅನ್ನಪ್ರಸಾದ ಮಾಡುತ್ತಿರುವ ಬಂಡಿಗಣಿಯ ದಾಸೋಹ ಚಕ್ರವರ್ತಿ ದಾನೇಶ್ವರ ಮಹಾರಾಜರ ಕಾರ್ಯ ಶ್ಲಾಘನೀಯವಾದದ್ದು ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು. ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಮಂಗಳವಾರ ಸಂಜೆ ಬಂಡಿಗಣಿ ಮಹಾರಾಜರ ಭಕ್ತರು ಹಮ್ಮಿಕೊಂಡ ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದ ಅವರು, ಧಾರ್ಮಿಕ-ಶೈಕ್ಷಣಿಕ ಕ್ಷೇತ್ರಗಳಲ್ಲಿ ಕೈಗೊಳ್ಳುತ್ತಿರುವ ಶ್ರೀಗಳ ಕಾರ್ಯಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಕಳೆದ ಹಲವಾರು …

Read More »

ಗೋಕಾಕ: ಸಾಧಕರನ್ನು ಸತ್ಕರಿಸುತ್ತಿರುವದು

ಗೋಕಾಕ: ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲ ಕನ್ನಡಿಗರ ಮೇಲಿದೆ ಎಂದು ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಅರಿಹಂತ ಬಿರಾದಾರ ಪಾಟೀಲ ಹೇಳಿದರು. ಅವರು, ಮಂಗಳವಾರದಂದು ಸಂಜೆ ನಗರದ ಕೆಎಲ್‍ಇ ಶಾಲೆಯ ಆವರಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ ಹಾಗೂ ಸಿರಿಗನ್ನಡ ಮಹಿಳಾ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾವಿರಾರು ವರ್ಷಗಳ ಇತಿಹಾಸ ಹೊಂದಿ, ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ …

Read More »

ಬೆಳಗಾವಿ: ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾಗಿದ್ದ 12 ಮಂದಿ ಆರೋಪಿಗಳನ್ನ ಗಡಿಪಾರು ಮಾಡಲಾಗಿದೆ. ಇವರ ವಿರುದ್ಧ 132 ಪ್ರಕರಣಗಳಿವೆ ಎಂದು ಬೆಳಗಾವಿ ಎಸ್​​ಪಿ ಡಾ.ಸಂಜೀವ್ ಪಾಟೀಲ ಮಾಹಿತಿ ನೀಡಿದರು.

  ಬೆಳಗಾವಿ: ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾಗಿದ್ದ 12 ಮಂದಿ ಆರೋಪಿಗಳನ್ನ ಗಡಿಪಾರು ಮಾಡಲಾಗಿದೆ. ಇವರ ವಿರುದ್ಧ 132 ಪ್ರಕರಣಗಳಿವೆ ಎಂದು ಬೆಳಗಾವಿ ಎಸ್​​ಪಿ ಡಾ.ಸಂಜೀವ್ ಪಾಟೀಲ ಮಾಹಿತಿ ನೀಡಿದರು.         ಬೆಳಗಾವಿ ಜಿಲ್ಲೆಯ ಅಥಣಿ ಉಪವಿಭಾಗದಲ್ಲಿ ಮದಬಾವಿ ಗ್ರಾಮದ ಮೀರಸಾಬ್ ಬಾಗಡಿ, ರಡ್ಡೇರಹಟ್ಟಿ ಗ್ರಾಮದ ಸದಾಶಿವ ಗೊಡಮಾಲೆ, ಉಗಾರ ಬಿ.ಕೆ.ಗ್ರಾಮದ ಮಹಾದೇವ ಕಾಂಬಳೆ, ಕೋಹಳಿ ಗ್ರಾಮದ ರವಿ ಶಿಂಗೆ, ಹಾಲಳ್ಳಿ ಗ್ರಾಮದ ಕಾಶಪ್ಪ ಕಾರಿಕೊಳ್ಳ, …

Read More »

1 ಕೋಟಿ 40 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಚಾಲನೆ

    ಯಮಕನಮರಡಿ: ಕ್ಷೇತ್ರದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ರಾಜಿ ಮಾಡಿಕೊಳ್ಳದೇ ಗುಣಮಟ್ಟ ಕಾಯ್ದುಕೊಳ್ಳಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ಹೆಬ್ಬಾಳ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ಉಳ್ಳಾಗಡಿ ಖಾನಾಪುರದಿಂದ ರಾಷ್ಟ್ರೀಯ ಹೆದ್ದಾರಿ NH 4 ವರೆಗಿನ 1 ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾದ 1 ಕೋಟಿ 40 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.   ಇದೇ …

Read More »

ಬಂಡೇಮಠ ಶ್ರೀಗಳ ಆತ್ಮಹತ್ಯೆ ಕೇಸ್- ವೀರಶೈವ ಲಿಂಗಾಯತ ಮುಖಂಡನಿಗೆ ನೋಟಿಸ್

ರಾಮನಗರ: ಬಂಡೇಮಠದ ಬಸವಲಿಂಗ ಸ್ವಾಮೀಜಿ (BandeMutt Basavalinga Swamji) ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಮೇಜರ್ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದೀಗ ಪ್ರಕರಣ ಸಂಬಂಧ ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿಯಾಗಿರುವ ವೀರಶೈವ ಲಿಂಗಾಯತ ಮುಖಂಡನಿಗೆ ನೋಟಿಸ್ ನೀಡಲಾಗಿದೆ.   ಡೆತ್‍ನೋಟ್‍ನಲ್ಲಿ ಸಚ್ಚಿದಾನಂದ ಮೂರ್ತಿ ಹೆಸರು ಉಲ್ಲೇಖ ಆಗಿದ್ದರಿಂದ ಮಾಗಡಿ ಪೋಲಿಸರು (Magadi Police) ನೋಟಿಸ್ ನೀಡಿದ್ದಾರೆ. ಸಚ್ಚಿದಾನಂದ ಮೂರ್ತಿಯಿಂದಲೂ ಅಪಪ್ರಚಾರ ಎಂದು ಬಸವಲಿಂಗ ಶ್ರೀಗಳು ಬರೆದಿದ್ದರು. ಹೆಸರು ಪ್ರಸ್ತಾಪ ಹಿನ್ನಲೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‍ನಲ್ಲಿ …

Read More »

ನೂರು ಕ್ಷೇತ್ರಗಳಿಗೆ ಜೆಡಿಎಸ್‌ ಇಂದು ಅಭ್ಯರ್ಥಿಗಳ ಘೋಷಣೆ ?

ಗಡಿ ಜಿಲ್ಲೆಯ ಕುರುಡು ಮಲೆಯ ಗಣಪತಿಗೆ ಮಂಗಳವಾರ (ನ.1) ಬೆಳಿಗ್ಗೆ 9 ಗಂಟೆಗೆ ಪೂಜೆ ಸಲ್ಲಿಸಿ ಜೆಡಿಎಸ್‌ನ ಮಹತ್ವಾಕಾಂಕ್ಷೆಯ ‘ಪಂಚರತ್ನ’ ರಥಯಾತ್ರೆ ಹಾಗೂ ಚುನಾ ವಣಾ ಪ್ರಚಾರಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಅಧಿಕೃತ ಚಾಲನೆ ನೀಡಲಿದ್ದಾರೆ.     ವಿಧಾನಸಭೆ ಚುನಾವಣೆ ಘೋಷಣೆಗೆ ಮುನ್ನವೇ ಪಕ್ಷದ 100 ಅಭ್ಯರ್ಥಿಗಳ ಪಟ್ಟಿಯನ್ನೂ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.   ಮಧ್ಯಾಹ್ನ 2.30ಕ್ಕೆ ಮುಳಬಾಗಿಲು ನಗರದ …

Read More »

S.C.ಗೆ ಶೇ 17, S.T ಶೇ 7 ಮೀಸಲಾತಿ: ಇಂದಿನಿಂದ ಜಾರಿ

ಕ್ಷಣ ಮತ್ತು ಉದ್ಯೋಗ ದಲ್ಲಿ ಪರಿಶಿಷ್ಟ ಜಾತಿಗೆ (ಎಸ್‌ಸಿ)ಶೇ 17, ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಶೇ 7 ಮೀಸಲಾತಿಯನ್ನು ರಾಜ್ಯೋತ್ಸವ ದಿನವಾದ ಮಂಗಳವಾರದಿಂದಲೇ (ನ.1) ಅನ್ವಯವಾಗುವಂತೆ ರಾಜ್ಯ ಸರ್ಕಾರ ಜಾರಿ ಮಾಡಿ ಸೋಮವಾರ ಅಧಿಸೂಚನೆ ಹೊರಡಿಸಿದೆ.     ಆದರೆ, ಹೆಚ್ಚಳಗೊಳಿಸಿದ ಮೀಸ ಲಾತಿಯನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈ ಅಧಿಸೂಚನೆಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ.‌ ಹೀಗಾಗಿ, ಅಧಿಸೂಚನೆ ಜಾರಿಗೊಳಿಸುವ ಬಗ್ಗೆ ಗೊಂದಲವಿದೆ ಎಂದು ಹೆಸರು ಬಹಿರಂಗ ಪಡಿಸಲು ಬಯಸದ …

Read More »