ಕುರಿಗಾಯಿಗೆ ಬೈಕ್ ಡಿಕ್ಕಿಯಾಗಿ ಕುರಿಗಾಯಿ ಸ್ಥಳದಲ್ಲಿ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ಹತ್ತಿರದಲ್ಲಿ ನಡೆದಿದೆ. ಮೃತನನ್ನು ಚಿಕ್ಕೋಡಿ ಮೂಲದ ನಿಂಗಪ್ಪ ಹಾಲಪ್ಪ ಕದ್ದಿ ಗುರುತಿಸಲಾಗಿದೆ. ಬೈಕ್ ಸವಾರ ಕವಡಿಮಟ್ಟಿ ಗ್ರಾಮದ ಹಣಮಂತ ನಿಂಗಪ್ಪ ಮಾದರಗೆ ಸಣ್ಣಪುಟ್ಟ ಗಾಯಗಳಾಗಿವೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
Read More »ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುತ್ತಿದ್ದ ಬಸ್‍ಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.
ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುತ್ತಿದ್ದ ಬಸ್‍ಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಮಹಾರಾಷ್ಟ್ರದಲ್ಲಿ ಕರ್ನಾಟಕದ ಕೆಎಸ್‍ಆರ್‍ಟಿಸಿ ಬಸ್‍ಗಳಿಗೆ ಅಲ್ಲಿನ ಪುಂಡರು ಮಸಿ ಬಳಿದಿದ್ದಾರೆ. ಈಗ ಮಹಾರಾಷ್ಟ್ರ ಬಸ್‍ಗಳಿಗೂ ಕರ್ನಾಟಕದಲ್ಲಿ ಕಪ್ಪು ಮಸಿ ಬಳಿಯೂ ಭೀತಿ ಹಿನ್ನೆಲೆ ಏಕಾಏಕಿ 300ಕ್ಕೂ ಅಧಿಕ ಬಸ್‍ಗಳ ಸಂಚಾರವನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ಥಗಿತಗೊಳಿಸಿದೆ. ಬೆಳಗಾವಿ, ಚಿಕ್ಕೋಡಿ ಸೇರಿದಂತೆ ರಾಜ್ಯದ ಹಲವು ಭಾಗಗಳಿಗೆ ಎಮ್‍ಎಸ್‍ಆರ್‍ಟಿಸಿ ಬಸ್‍ಗಳು ಸಂಚರಿಸುತ್ತಿದ್ದವು. ಆದರೆ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಎಂದಿನಂತೆ ಬಸ್‍ಗಳು ತೆರಳುತ್ತಿವೆ.
Read More »ಬೀದಿ ನಾಯಿಗಳ ಹಾವಳಿಗೆ ಬೆಚ್ಚಿದ ಜನರು
ಬೀದಿ ನಾಯಿ ಹಾವಳಿಗೆ ವಾಣಿಜ್ಯನಗರಿ ಹುಬ್ಬಳ್ಳಿಯ ಜನರು ಬೆಚ್ಚಿ ಬಿದ್ದಿದ್ದಾರೆ. ಹಾಡಹಗಲೇ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿರುವ ಬೀದಿ ನಾಯಿಗಳ ಹಾವಳಿ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೌದು..ಹುಬ್ಬಳ್ಳಿ ನಗರದ ಸಾಕಷ್ಟು ಜನನಿಬಿಡ ಪ್ರದೇಶದಲ್ಲಿ ಒಂದಾಗಿರುವ ಕೊಪ್ಪಿಕರ ರಸ್ತೆಯಲ್ಲಿ ಇಬ್ಬರು ಯುವಕರ ಮೇಲೆ ಬೀದಿ ನಾಯಿ ಅಟ್ಯಾಕ್ ಮಾಡಿದ್ದು, ಬೀದಿ ನಾಯಿ ಅಟ್ಯಾಕ್ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿನ್ನೆ ಬೆಳಗಿನ ಜಾವ ಇಬ್ಬರು ಯುವಕರನ್ನು ಬೆನ್ನು ಹತ್ತಿ …
Read More »ಬೆಳೆದು ನಿಂತ ಬೆಳೆಯನ್ನು ಜೆಸಿಬಿಯಿಂದ ನಾಶ ಮಾಡಿ ದರ್ಪ ಮೆರೆದ ಅಧಿಕಾರಿಗಳು.!?
ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಬೆಳೆದು ನಿಂತ ರೈತರ ಬೆಳೆಗಳನ್ನು ತೇರವುಗೊಳಿಸಿ ರಸ್ತೆ ನಿರ್ಮಾಣಕ್ಕೆ ಮುಂದಾದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಅಥಣಿ ತಹಶೀಲ್ದಾರ್ ಸುರೇಶ್ ಮುಂಜೆ ಹಾಗೂ ಐಗಳಿ ಪೋಲಿಸ್ ಠಾಣೆ ಪಿಎಸ್ಐ ಎಸ್ ಎಚ್ ಪವಾರ ಅವರ ನೇತೃತ್ವದಲ್ಲಿ ಜೆಸಿಬಿ ಮುಖಾಂತರ ಬೆಳೆ ತೆರವುಗೊಳಿಸಿ ರೈತರು ಮೇಲೆ ಅಧಿಕಾರ ದರ್ಪ ಮೆರೆದಿದ್ದಾರೆ ಎಂಬ ಗಂಭಿರ ಆರೋಪ ಕೇಳಿ ಬಂದಿದೆ. ಅಥಣಿ ತಾಲೂಕಿನ ಸುಟ್ಟಟ್ಟಿ …
Read More »ಗಡಿ ವಿವಾದವನ್ನು ಮಾತುಕತೆಯ ಮೂಲಕ ಸರ್ವಸಮ್ಮತದಿಂದ ಬಗೆಹರಿಸಿಕೊಳ್ಳುವುದು ನಮ್ಮ ನಿಲುವು:’ಏಕನಾಥ ಶಿಂಧೆ
ಬೆಳಗಾವಿ: ‘ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದವನ್ನು ಮಾತುಕತೆಯ ಮೂಲಕ ಸರ್ವಸಮ್ಮತದಿಂದ ಬಗೆಹರಿಸಿಕೊಳ್ಳುವುದು ನಮ್ಮ ನಿಲುವು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದ್ದಾರೆ. ಮುಂಬೈನಲ್ಲಿ ಗುರುವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಗಡಿ ಸಮಸ್ಯೆ ಕುರಿತ ನಮ್ಮ ದಾವೆ ಸುಪ್ರೀಂಕೋರ್ಟಿನಲ್ಲಿದೆ. ಕಾನೂನು ವ್ಯಾಪ್ತಿಯ ಚರ್ಚೆ ಅಲ್ಲಿ ನಡೆಯಲಿ. ಕೇಂದ್ರ ಸರ್ಕಾರ ಹಾಗೂ ಎರಡೂ ರಾಜ್ಯಗಳ ನಡುವೆ ಮಾತುಕತೆ ಮೂಲಕ ಈ ವಿವಾದ ಬಗೆಹರಿಸಿಕೊಳ್ಳುವುದು ಸೂಕ್ತ ಎಂಬುದು ನಮಗೆ ಅನ್ನಿಸುತ್ತಿದೆ’ ಎಂದರು. …
Read More »ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ
ಅಥಣಿ: ಮನಷ್ಯ ಮನಸ್ಸು ಮಾಡಿದರೇ ಯಾವುದೂ ಅಸಾಧ್ಯವಲ್ಲ. ಕಳೇದ ಮೂರು ದಿನಗಳಿಂದ ಸತ್ತಿ ಗ್ರಾಮದಲ್ಲಿ ಪ್ರತಿ ದಿನ ಬೆಳೆಗ್ಗೆ ‘ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ’ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಗ್ರಾಮದ ನೂರಾರು ಯುವಕರು ಸ್ವಯಂ ಪ್ರೇರಿತರಾಗಿ ದುಶ್ಚಟಗಳನ್ನು ಜೋಳಿಗೆಯಲ್ಲಿ ಹಾಕಿದ್ದಾರೆ. ಇದವೇ ಗ್ರಾಮದ ನಿಜವಾದ ಪರಿವರ್ತನೆ ಎಂದು ಗುಣದಾಳ ಕಲ್ಯಾಣ ಮಠದ ವಿವೇಕಾನಂದ ದೇವರು ಹೇಳಿದರು. ಸಮೀಪದ ಸತ್ತಿ ಗ್ರಾಮದಲ್ಲಿ ಬಾಳಕೃಷ್ಣ ಮಹಾರಾಜರ 25ನೇ ವರ್ಷದ ಪುಣ್ಯಾರಾಧನೆಯ ಅಂಗವಾಗಿ ಮಂಗಳವಾರ …
Read More »ಬೆಳಗಾವಿಯಲ್ಲಿ ಬೃಹತ್ ಆಟೋಮೊಬೈಲ್ ಉದ್ಯಮ ಸ್ಥಾಪನೆಗೆ ಉತ್ತೇಜನ: ಮುಖ್ಯಮಂತ್ರಿ
ಬೆಂಗಳೂರು: ಬೆಳಗಾವಿಯಲ್ಲಿ ಬೃಹತ್ ಆಟೋಮೊಬೈಲ್ ಉದ್ಯಮ ಸ್ಥಾಪನೆಗೆ ಉತ್ತೇಜನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಳಗಾವಿಯ ಅಭಿವೃದ್ಧಿ ಕುರಿತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಅಲ್ಲಿನ ವಾಣಿಜ್ಯೋದ್ಯಮಿಗಳ ನಿಯೋಗದೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಯವರು, ರಾಜ್ಯದ ಆರ್ಥಿಕ ಬೆಳವಣಿಗೆ ಹಾಗೂ ಕೈಗಾರಿಕಾ ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಮಹತ್ವದ ಜಿಲ್ಲೆಯಾಗಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಉದ್ಯಮ ಸ್ಥಾಪನೆಯಿಂದ ಕೈಗಾರಿಕಾ ಅಭಿವೃದ್ಧಿ ಇನ್ನಷ್ಟು ವೇಗವಾಗಿ ಆಗಲಿದೆ …
Read More »ಸಾಲಬಾಧೆ ತಾಳಲಾರದೆ ಯುವಕನ ಆತ್ಮಹತ್ಯೆ
ಸಾಲಬಾಧೆ ತಾಳಲಾರದೆ ಯುವಕನೊರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ತಾಲೂಕಿನ ಬಸರೀಕಟ್ಟಿ ಗ್ರಾಮದಲ್ಲಿ ನಡೆದಿದೆ 32 ವರ್ಷದ ಲಕ್ಷ್ಮಣ ದಿಲೀಪ ನಾಗರೋಳಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ದುರ್ದೈವಿ ಯುವಕ. ಮಂಗಳವಾರ ಬೆಳಿಗ್ಗೆ ಮನೆಯಿಂದ ಹೋದವನು ವಾಪಸ್ ಮನೆಗೆ ಬಂದಿರಲಿಲ್ಲ. ಇದರಿಂದ ತೀವ್ರ ಆತಂಕಿತರಾಗಿದ್ದ ಆತನ ಪತ್ನಿ ಮತ್ತು ತಾಯಿ ಕಳೆದ ಮೂರು ದಿನಗಳಿಂದ ಹುಡುಕಾಟ ನಡೆಸಿದ್ದರು. ಆದರೆ ಗುರುವಾರ ಅವರ ಜಮೀನಿನ ಬಾವಿಯಲ್ಲಿ ಈತನ ಶವ ಪತ್ತೆಯಾಗಿದೆ. ಸ್ಥಳಕ್ಕೆ ಮಾರಿಹಾಳ …
Read More »ಚುನಾವಣೆಗೆ 5 ತಿಂಗಳು ಬಾಕಿ ಇರುವಾಗಲೇ ಫಿಲ್ಡಿಗಿಳಿದ ರಮೇಶ ಜಾರಕಿಹೊಳಿ
ಚುನಾವಣೆಗೆ 5 ತಿಂಗಳು ಬಾಕಿ ಇರುವಾಗಲೇ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅದರಲ್ಲಿಯೂ ಇಷ್ಟು ದಿನ ಸೈಲೆಂಟ್ ಆಗಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ ಈಗ ಫಿಲ್ಡಿಗಿಳಿದಿದ್ದು. ಗ್ರಾಮೀಣ ಕ್ಷೇತ್ರದಲ್ಲಿ ನಾಗೇಶ ಮನ್ನೋಳ್ಕರ್ ಪರ ಭರ್ಜರಿ ಬ್ಯಾಟಿಂಗ್ ಬೀಸಿದ್ದಾರೆ. ಹೌದು ಬೆಳಗಾವಿ ಗ್ರಾಮೀಣ ಕ್ಷೇತ್ರ ಹೇಳಿಕೇಳಿ ರಮೇಶ ಜಾರಕಿಹೊಳಿ ಬದ್ಧವೈರಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರ. ಹೇಗಾದ್ರೂ ಮಾಡಿ ಮುಂದಿನ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‍ನ್ನು ಸೋಲಿಸಲೇಬೇಕು ಎಂದು ರಮೇಶ ಪಣ …
Read More »ಅನಾರೋಗ್ಯ.ಬಹುಭಾಷಾ ನಟ ಕಮಲಹಾಸನ್ ಚೆನ್ನೈ ಖಾಸಗಿ ಆಸ್ಪತ್ರೆಗೆ ದಾಖಲು
ಚೆನ್ನೈ: ಬಹುಭಾಷಾ ನಟ, ಉಳಗನಾಯಕನ್ ಕಮಲ್ ಹಾಸನ್ ಅನಾರೋಗ್ಯದಿಂದಾಗಿ ಬುಧವಾರ (ನವೆಂಬರ್ 23) ಶ್ರೀರಾಮಚಂದ್ರ ಮೆಡಿಕಲ್ ಸೆಂಟರ್(ಎಸ್ ಆರ್ ಎಂಸಿ)ಗೆ ದಾಖಲಾಗಿದ್ದಾರೆ ಎಂದು ವರದಿ ತಿಳಿಸಿದೆ. ಜ್ವರದಿಂದ ಬಳಲುತ್ತಿರುವ ಕಮಲ್ ಹಾಸನ್ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಟ ಕಮಲ್ ಹಾಸನ್ ಅವರು ಇಂದು (ನ.24) ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗುವ ಸಾಧ್ಯತೆ ಇದ್ದಿರುವುದಾಗಿ ಮೂಲಗಳು …
Read More »