ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ರನ್ನು ಹೈದ್ರಾಬಾದ್ನಲ್ಲಿ ಕಲಬುರಗಿಯ ಬ್ರಹ್ಮಪುರ ಪೊಲೀಸರು ಬಂಧಿಸಿದ್ದು, ನಿನ್ನೆ(ಭಾನುವಾರ) ತಡ ರಾತ್ರಿಯೇ ಕಲಬುರಗಿಗೆ ಕರೆತಂದಿದ್ದಾರೆ. ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಶೂಟ್ ಮಾಡುವುದಾಗಿ ಮಣಿಕಂಠ ರಾಠೋಡ್ ಹೇಳಿಕೆ ನೀಡಿದ್ದರು. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ 506 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಬಿಜೆಪಿ ಮುಖಂಡನ ಬಂಧನಕ್ಕೆ ಆಗ್ರಹಿಸಿ ಕಲಬುರಗಿ ಎಸ್‍ಪಿ ಕಚೇರಿ ಮುಂಭಾಗ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಕೂಡ ನಡೆಸಿತ್ತು. ಇಂದು(ಸೋಮವಾರ) ಕಲಬುರಗಿಗೆ …
Read More »ಪೊಲೀಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ಅವರು ಫೋನ್ ಇನ್ ಕಾರ್ಯಕ್ರಮ ಇದೇ ನವೆಂಬರ್ 12ರಂದು 0831-2405204. ಎಸ್‍ಪಿ ರವರಿಗೆ ಕರೆ ಮಾಡಿ ಮಾತನಾಡಿ,
ಬೆಳಗಾವಿ ಜಿಲ್ಲಾ ಪೊಲೀಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ಅವರು ಫೋನ್ ಇನ್ ಕಾರ್ಯಕ್ರಮವನ್ನು ಇದೇ ನವೆಂಬರ್ 12ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರ ಈಗ ಕೇವಲ ಒಂದು ಫೋನ್ ಕರೆಯ ದೂರದಲ್ಲಿ. ನೀವು ಇದ್ದಲ್ಲಿಂದ ಬೆಳಗಾವಿ ಎಸ್‍ಪಿ ರವರಿಗೆ ಕರೆ ಮಾಡಿ ಮಾತನಾಡಿ, ಈ ಕೆಳಕಂಡ ವಿಷಯಗಳ ಬಗ್ಗೆ ಮತ್ತು ಇನ್ನಿತರ ಯಾವುದೇ ವಿಷಯಗಳ ಕುರಿತಂತೆ ಕರೆ ಮಾಡಬಹುದು. …
Read More »ಪಕ್ಷದೊಳಗೆ ಯಾರನ್ನೂ ಬೈಯ್ಯದಂತೆ ಸೂಚನೆ; ಬ್ರಾಹ್ಮಣರನ್ನ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿಸಲು ಮನವಿ”
ಪಕ್ಷದೊಳಗೆ ಯಾರನ್ನೂ ಬೈಯ್ಯದಂತೆ ಸೂಚನೆ; ಬ್ರಾಹ್ಮಣರನ್ನ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿಸಲು ಮನವಿ” ಬೆಂಗಳೂರು : ಪಕ್ಷದೊಳಗೆ ಯಾರನ್ನು ಬೈಯದಂತೆ ಬಿಜೆಪಿ ಪಕ್ಷದ ಹೈ ಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ಇನ್ಮುಂದೆ ಕಾಂಗ್ರೆಸ್ ಪಕ್ಷದವರನ್ನ ಮಾತ್ರ ಬೈತೀನಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಇದು ಪಕ್ಷದ ಬೆಳವಣಿಗೆ ಹಾಗೂ ವೈಯಕ್ತಿಕ ಬೆಳವಣಿಗೆಗೂ ಒಳ್ಳೆಯದು. ಯಡಿಯೂರಪ್ಪ ಅವರು ರಾಜಕೀಯದಿಂದ ದೂರಾಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೆ ಸಂದರ್ಭದಲ್ಲಿ ಹೇಳಿದರು. …
Read More »ಸಿಸಿಟಿವಿ ಕಣ್ಣು ತಪ್ಪಿಸಿ ನೆಲಮಾಳಿಗೆಯಲ್ಲಿ ಚಾಕು ತೋರಿಸಿ ಬಾಲಕಿಯರ ಮೇಲೆ ಅತ್ಯಾಚಾರ, ಬಳಿಕ ಅಬಾಶನ್ : ಮುರುಘ ಶ್ರೀಗಳ ವಿರುದ್ದ ಚಾರ್ಚ್ ಶೀಟ್‌ನಲ್ಲಿ ಸ್ಪೋಟಕ ಮಾಹಿತಿ
ಚಿತ್ರದುರ್ಗ: ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ಸದ್ಯ ಮುರುಘಾ ಶ್ರೀಗಳ ಮೇಲೆ ಗಂಭೀರ ಆರೋಪ ಕೇಳಿ ಬಂದಿದ್ದು, ಪ್ರಕರಣ ಸಂಬಂಧ ಈಗಾಗಲೇ ಪೋಲಿಸರು ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಸಲ್ಲಿಸಲಾಗಿದೆ. ಇನ್ನೂ ಮುರುಘ ಶ್ರೀಗಳು ಬಾಲಕಿಯರ ಮೇಲೆ ಅತ್ಯಾಚಾರ ಮಾಡಲು ರಹಸ್ಯ ನೆಲಮಾಳಿಗೆಯನ್ನು ಮಾಡಿಕೊಂಡಿದ್ದು ಅಂತ ಪೋಲಿಸರ ಮುಂದೆ ಬಾಲಕಿಯರು ಹೇಳಿದ್ದಾರೆ ಎನ್ನಲಾಗಿದ್ದು, ಚೀಟಿಗಳಲ್ಲಿ ಇಂತಹ ಮಕ್ಕಳು ಬೇಕು ಬರೆದುಕೊಡುತ್ತಿದ್ದರು ಎನ್ನಲಾಗಿದೆ. ಇದಕ್ಕೇ ವಾರ್ಡನ್ ರಶ್ಮಿ ಸಾಥ್ ನೀಡುತ್ತಿದ್ದಳು ಎನ್ನಲಾಗಿದೆ. ಇದಲ್ಲದೇ …
Read More »ನಕಲಿ ಚಿನ್ನ: 10 ಬ್ಯಾಂಕ್‌ಗಳಿಗೆ ವಂಚನೆ
ಬೆಳಗಾವಿ: ಜಿಲ್ಲೆಯ ಹತ್ತು ವಿವಿಧ ಬ್ಯಾಂಕ್ ಹಾಗೂ ಸಹಕಾರ ಸಂಸ್ಥೆಗಳಲ್ಲಿ ನಕಲಿ ಚಿನ್ನದ ಮೇಲೆ ಸಾಲ ಪಡೆದ ಒಂಬತ್ತು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾದ ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿಯ ಭೋಜ ಶಾಖೆಯ ವ್ಯವಸ್ಥಾಪಕ ಸದಲಗಾ ಗ್ರಾಮದ ಆನಂದ ಚಿದಾನಂದ ಕಮತೆ ಅವರು ದೂರು ನೀಡಿದ ನಂತರ ಈ ಪ್ರಕರಣಗಳು ಬೆಳಕಿಗೆ ಬಂದಿವೆ. ಭೋಜ ಗ್ರಾಮದ ನಿವಾಸಿ ದಾದಾ ಸಾಹೇಬ ದತ್ತು ತಿಲಕ …
Read More »ಅರುಣಸಿಂಗ್ ಅವರನ್ನು ಅಪ್ಪಿಕೊಂಡು ಸುಮಾರು 15 ನಿಮಿಷಗಳ ಕಾಲ ಗೌಪ್ಯವಾಗಿ ಮಾತುಕತೆ ನಡೆಸಿದ ಯತ್ನಾಳ
ವಿಜಯಪುರ ಜಿಲ್ಲೆಯ ಪ್ರವಾಸದಲ್ಲಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಭೇಟಿ ಮಾಡಿ 15 ನಿಮಿಷ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಬಿಜೆಪಿ ಸಂಕಲ್ಪ ಯಾತ್ರೆಯ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅರುಣಸಿಂಗ್, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಶಾಸಕ ರವಿಕಗಾಂತ ಪಾಟೀಲ ಸೇರಿದಂತೆ ಬಿಜೆಪಿಯ ನಾನಾ ಮುಖಂಡರು …
Read More »ಅಂಬೇಡ್ಕರ್ ಪ್ರತಿಮೆ ಧ್ವಂಸ – ಮಹಿಳೆಯರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್
ಲಕ್ನೋ: ಉತ್ತರ ಪ್ರದೇಶದಲ್ಲಿ (Uttar Pradesh) ಮಹಿಳೆಯರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ, ನಿಂದಿಸಿ ಕಿರುಚಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪೊಲೀಸರ ವಾಹನದ ಮೇಲೆ ಮಹಿಳೆಯರು ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದ ಬಳಿಕ ಪರಿಸ್ಥಿತಿ ಅತೀರೇಕಕ್ಕೆ ತಲುಪಿ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ವೈರಲ್ ಆಗುತ್ತಿರುವ ವೀಡಿಯೋ ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ (Ambedkar Nagar district) ಜಲಾಲ್‍ಪುರದಾಗಿದ್ದು (Jalalpur), ಇತ್ತೀಚೆಗಷ್ಟೇ ಬಿ.ಆರ್. ಅಂಬೇಡ್ಕರ್ ಪ್ರತಿಮೆ …
Read More »ನಾಳೆಯಿಂದ – ಗುರುವಾರದವರೆಗೆ ಅಪ್ಪು ʼಗಂಧದ ಗುಡಿʼ ರಿಯಾಯಿತಿ ದರದಲ್ಲಿ ಪ್ರದರ್ಶನ
ಬೆಂಗಳೂರು: ಅಮೋಘ ವರ್ಷ ನಿರ್ದೇಶನದ ಅಪ್ಪು ಅಭಿನಯದ ʼಗಂಧದ ಗುಡಿʼ ಸಾಕ್ಷ್ಯ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿರಂಗ, ಪ್ರೇಕ್ಷಕರು ಸಾಕ್ಷ್ಯ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ನಮ್ಮ ನಾಡಿನ ಜೀವ ವೈವಿಧ್ಯತೆಯನ್ನು ಸಾರುವ ʼಗಂಧದ ಗುಡಿʼಯನ್ನು ಎಲ್ಲರೂ ನೋಡಬೇಕು ಮಕ್ಕಳಿಗೆ ಉಚಿತವಾಗಿ ಸಾಕ್ಷ್ಯ ಚಿತ್ರವನ್ನು ತೋರಿಸಬೇಕೆನ್ನುವ ಕೂಗು ಕೇಳಿ ಬಂದಿತ್ತು. ಈ ಮಾತಿಗೆ ಸ್ವತಃ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸ್ಪಂದಿಸಿದ್ದಾರೆ. ಈ ಬಗ್ಗೆ ಟ್ವೀಟ್ ನಲ್ಲಿ …
Read More »ಇಂದು ರಾಜ್ಯಕ್ಕೆ ‘AICC’ ಅಧ್ಯಕ್ಷ ‘ಮಲ್ಲಿಕಾರ್ಜುನ ಖರ್ಗೆ’ ಆಗಮನ : ಅದ್ದೂರಿ ಸ್ವಾಗತಕ್ಕೆ ‘ಕೈ’ ನಾಯಕರು ಸಜ್ಜು
ಬೆಂಗಳೂರು ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ನಂತರ ಇಂದು ಮೊದಲು ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಅವರಿಗೆ ಭವ್ಯ ಸ್ವಾಗತ ನೀಡಲು ರಾಜ್ಯ ಕಾಂಗ್ರೆಸ್ ಸಜ್ಜಾಗಿದೆ. ಜೊತೆಗೆ ಸರ್ವೋದಯ ಸಮಾವೇಶ ಹೆಸರಿನಲ್ಲಿ ಅದ್ಧೂರಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಕೆಪಿಸಿಸಿ ವತಿಯಿಂದ ನವೆಂಬರ್ 6 ರಂದು ಬೃಹತ್ ಅಭಿನಂದನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮಕ್ಕೆ ‘ಸರ್ವೋದಯ ಸಮಾವೇಶ’ ಎಂದು ನಾಮಕರಣ ಮಾಡಲಾಗಿದೆ. ಖರ್ಗೆ …
Read More »ಅಲೋಕ್ ಕುಮಾರ್ ಯಾರು?.. ಪೊಲೀಸರ ಜೊತೆಗೆ ಶಾಸಕ ರೇಣುಕಾಚಾರ್ಯ ವಾಗ್ವಾದ … ವಿಡಿಯೋ!
ದಾವಣಗೆರೆ: ಸಹೋದರ ಮಗ ಚಂದ್ರು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಂಪಿ ರೇಣುಕಾಚಾರ್ಯ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಇದೇ ವೇಳೆ ರೇಣುಕಾಚಾರ್ಯ ಹೊನ್ನಾಳಿ ಪೊಲೀಸ್ ಠಾಣೆಯ ಸಿಪಿಐ ಸಿದ್ದನಗೌಡರವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಸೊರಟೂರು ಬಳಿಯ ತುಂಗಾ ಕಾಲುವೆಯಲ್ಲಿ ಮೃತ ಚಂದ್ರು ಶವದೊಂದಿಗೆ ಪತ್ತೆಯಾದ ಕಾರನ್ನು ಈಗಾಗಲೇ ಪೋಲಿಸರ ವಶದಲ್ಲಿದೆ. ಚಂದ್ರು ಶವವಾಗಿ ಪತ್ತೆಯಾದ ಕಾರನ್ನು ಹೊನ್ನಾಳಿ ಪೋಲಿಸ್ ಠಾಣೆ ಬಳಿ ನಿಲ್ಲಿಸಲಾಗಿದ್ದು, …
Read More »