ಸೋಲ್ಲಾಪುರವೇನು ಕೊಲ್ಲಾಪುರವೂ ಒಂದು ಕಾಲಕ್ಕೆ ಕನ್ನಡ ಸೀಮೆಯೇ ಆಗಿತ್ತು! 20ನೇ ಶತಮಾನ ಕಾಲಿಡುವ ಸಮಯದಲ್ಲೂ ಬ್ರಿಟಿಷರು ಕೊಲ್ಲಾಪುರ ಜಿಲ್ಲೆಯನ್ನು ಕರ್ನಾಟಕ ಪ್ರಾಯಂತ್ಯದಲ್ಲೇ ಗುರುತಿಸಿದ್ದರು. ಆಗ ಬ್ರಿಟಿಷರ ಪ್ರತಿನಿಧಿಯನ್ನು ಕೊಲ್ಲಾಪುರದಲ್ಲಿ ಇಟ್ಟಿದ್ದರು. ಈ ರಾಜಕೀಯ ಏಜೆಂಟ್ ಜೊತೆ ಪತ್ರ ವ್ಯವಹಾರ ನಡೆಸುವಾಗ ವಿಳಾಸದಲ್ಲಿ ಕೊಲ್ಲಾಪುರ ರಾಜಕೀಯ ಏಜೆಂಟ್, ಕರ್ನಾಟಕ ಪ್ರಾಂತ್ಯ ಎಂದೇ ಬರೆಯುತ್ತಿದ್ದರು. ಕರ್ನಾಟಕದ ಬದಲು ಕರವೀರ ಇಲಾಖಾ ಎಂದು ಕೊಲ್ಲಾಪುರವನ್ನು ಕರೆಯುತ್ತಿದ್ದುದೂ ಇದೆ. ಅಂದರೆ ಇಪ್ಪತ್ತನೇ ಶತಮಾನದ ಉದಯದ ತನಕ …
Read More »ಸರ್ಕಾರಕ್ಕೆ ಮೀಸಲು ಸಂಕಷ್ಟ: ಜ. 23ರ ಗಡುವು ಕೊಟ್ಟ ಒಕ್ಕಲಿಗ ಸಮುದಾಯ; ಶ್ರೀಗಳ ನೇತೃತ್ವದಲ್ಲಿ ಹಕ್ಕೊತ್ತಾಯ ಪತ್ರ
ಬೆಂಗಳೂರು: ಎಸ್ಸಿ-ಎಸ್ಟಿ ಮೀಸಲು ಪ್ರಮಾಣ ಹೆಚ್ಚಳ ಮಾಡಲು ಸರ್ಕಾರ ಒಂದು ಹೆಜ್ಜೆ ಮುಂದಿಡುತ್ತಿದ್ದಂತೆ ಉಳಿದ ಸಮುದಾಯಗಳು ಮೀಸಲು ಬುಟ್ಟಿಗೆ ಕೈಹಾಕಿ ಹೆಚ್ಚು ಪಾಲು ಪಡೆಯಲು ಅಥವಾ ಮೀಸಲು ಕೆಟಗರಿ ಬದಲಾವಣೆಗೆ ಸರ್ಕಾರದ ಮೇಲೆ ಒತ್ತಡ ಹೇರಲು ಯತ್ನಿಸಿವೆ. ಪಂಚಮಸಾಲಿ ಸಮುದಾಯ ಸರ್ಕಾರಕ್ಕೆ ಡಿ.19ರ ಗಡುವು ನೀಡಿದ್ದರೆ, ಕುರುಬ, ಈಡಿಗ, ಬಿಲ್ಲವ ಬಲಿಜ, ವಿಶ್ವಕರ್ಮ ಮೊದಲಾದ ಸಮುದಾಯಗಳೂ ಬೇಡಿಕೆ ಈಡೇರಿಕೆಗೆ ಗಡುವಿನ ಹೋರಾಟ ನಡೆಸಿವೆ. ಇನ್ನೊಂದೆಡೆ ರಾಜ್ಯದಲ್ಲಿ ಪ್ರಬಲ ಒಕ್ಕಲಿಗ ಸಮುದಾಯವೂ ಈಗಿರುವ …
Read More »ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಮುಂದಿನ ಸಿಎಂ ಆಗುವ ಸರಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಮುಂದಿನ ಸಿಎಂ ಆಗುವ ಸರಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಮಾತನಾಡಿದ ಅವರು ನನಗೆ ಯತ್ನಾಳ ಮೇಲೆ ಭಾರಿ ಪ್ರೀತಿ ಇದೆ ಎನ್ನೋ ಮೂಲಕ ಯತ್ನಾಳ ಬಗ್ಗೆ ಸಿಎಂ ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ. ಹಿಂದೂ ಬಿಟ್ಟು ಬಸವತತ್ವವನ್ನು ಶಾಸಕ ಯತ್ನಾಳ ಪಾಲನೆ ಮಾಡಬೇಕು, ಅಂದಾಗ ಮಾತ್ರ ಶಾಸಕ ಯತ್ನಾಳ ಮುಂದಿನ ಸಿಎಂ ಆಗುವ ಸರಕು ನೀವು ಎಂದು …
Read More »ಕಣ್ಮನ ಸೆಳೆಯಿತು ಬೆಳಗಾವಿಯಲ್ಲಿ ಆಯೋಜಿಸಿದ್ದ ಕ್ಯಾಟ್ ಶೋ ,ಬೆಕ್ಕು ಪ್ರಿಯರು ನಾನಾ ತರಹದ ಬೆಕ್ಕುಗಳನ್ನು ನೋಡಿ ಪುಳಕಿತರಾದರು.
ಬೆಳಗಾವಿಯಲ್ಲಿ ಆಯೋಜಿಸಿದ್ದ ಕ್ಯಾಟ್ ಶೋ ಕುಂದಾನಗರಿ ಜನರ ಕಣ್ಮನ ಸೆಳೆಯಿತು. ಬೆಕ್ಕು ಪ್ರಿಯರು ನಾನಾ ತರಹದ ಬೆಕ್ಕುಗಳನ್ನು ನೋಡಿ ಪುಳಕಿತರಾದರು. ಒಂದಕ್ಕಿಂತ ಒಂದು ಸುಂದರ, ಡಿಫರೆಂಟ್ ಬೆಕ್ಕುಗಳು. ಮುದ್ದಾದ ಬೆಕ್ಕುಗಳನ್ನು ಮುಗಿ ಬಿದ್ದು ನೋಡುತ್ತಿರುವ ಜನ. ಹೌದು ನೀವು ನೋಡುತ್ತಿರುವ ಈ ದೃಶ್ಯ ಬೆಳಗಾವಿಯ ಭಾಗ್ಯ ನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕ್ಯಾಟ್ ಶೋದಲ್ಲಿ. ಹೌದು ಫೆಲೈನ್ ಕ್ಲಬ್ ಆಫ್ ಇಂಡಿಯಾ, ಮಾರ್ಸ ಇಂಡಿಯಾ ಸಹಯೋಗದಲ್ಲಿ ರವಿವಾರ …
Read More »ಡಿಸೆಂಬರ್ 19 ರೊಳಗೆ ಮೀಸಲಾತಿ ಕೊಡದಿದ್ದರೆ 22ರಂದು 25 ಲಕ್ಷ ಜನರೊಂದಿಗೆ ಸುವರ್ಣ ಸೌಧ ಕ್ಕೇ ಮುತ್ತಿಗೆ
ಡಿಸೆಂಬರ್ 19ರೊಳಗಾಗಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಂಬಂಧ ಮುಖ್ಯಮಂತ್ರಿಗಳು ಶಾಶ್ವತ ಹಿಂದುಳಿದ ಆಯೋಗದಿಂದ ವರದಿ ಪಡೆದುಕೊಳ್ಳಬೇಕು. ಇಲ್ಲದಿದ್ರೆ ಡಿ.22ರಂದು ಸುವರ್ಣಸೌಧ ಮುಂದೆ 25 ಲಕ್ಷ ಪಂಚಮಸಾಲಿಗರನ್ನು ಸೇರಿ ವಿರಾಟ ಪಂಚ ಶಕ್ತಿ ಸಮಾವೇಶ ನಡಸುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ಕೊಟ್ಟಿದ್ದಾರೆ. ಬೆಳಗಾವಿಯ ಗಾಂಧಿಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ 12ನೇ ತಾರೀಖು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ …
Read More »ಳಕಲ್ ಸೀರೆ ಫ್ಯಾಶನ್ ಶೋಗೆ ಫುಲ್ ಫಿದಾ ಆದ ಕುಂದಾನಗರಿ ಜನ
ಚಿಕ್ಕ ಬಟ್ಟೆಗಳನ್ನು ಧರಿಸಿ ಫ್ಯಾಶನ್ ಶೋದಲ್ಲಿ ಯುವಕ-ಯುವತಿಯರು ಹೆಜ್ಜೆ ಹಾಕುವುದನ್ನು ಎಲ್ಲರೂ ನೋಡಿರುತ್ತಿರಿ. ಆದರೆ ನಮ್ಮ ಬೆಳಗಾವಿಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಅದರಲ್ಲಿಯೂ ಇಳಕಲ್ ಸೀರೆಗಳ ನಾನಾ ತರಹದ ಡಿಸೈನ್ ಬಟ್ಟೆಗಳನ್ನು ತೊಟ್ಟು ರ್ಯಾಂಪ್ ಮೇಲೆ ಸ್ಪರ್ಧಾಳುಗಳು ಹೆಜ್ಜೆ ಹಾಕಿ ಎಲ್ಲರನ್ನು ಆಕರ್ಷಿಸಿದರು. ಬ್ಬರಿಗಿಂತ ಒಬ್ಬರು ಸಾಂಪ್ರದಾಯಿಕ ಶೈಲಿಯಲ್ಲಿ ಫುಲ್ ಮಿಂಚಿಂಗ್..ಇಳಕಲ್ ಸೀರೆ, ಇಳಕಲ್ ಕುರ್ತಾ, ಇಳಕಲ್ ಧೋತರ, ಇಳಕಲ್ ಚೂಡಿದಾರ್ ಸೇರಿ ಇನ್ನಿತರ ಇಳಕಲ್ ಡ್ರೆಸ್‍ಗಳಲ್ಲಿ ರ್ಯಾಂಪ್ ಮೇಲೆ ಹೆಜ್ಜೆ …
Read More »ಬಾಗಲಕೋಟೆಯಲ್ಲಿ 187 ನಾಣ್ಯ ನುಂಗಿದ್ದ ವೃದ್ಧ
ಬಾಗಲಕೋಟೆ: ವೃದ್ಧರೊಬ್ಬರು ನುಂಗಿದ್ದ 187 ನಾಣ್ಯಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊಟ್ಟೆಯಿಂದ ತೆಗೆಯುವಲ್ಲಿ ಕುಮಾರೇಶ್ವರ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಹಾನಗಲ್ ಕುಮಾರೇಶ್ವರ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞ ವೈದ್ಯರಾಗಿರುವ ಡಾ.ಈಶ್ವರ ಕಲಬುರ್ಗಿ, ಡಾ.ಪ್ರಕಾಶ ಕಟ್ಟಿಮನಿ ಅವರೊಂದಿಗೆ ಅರಿವಳಿಕೆ ತಜ್ಞರಾದ ಡಾ.ಅರ್ಚನಾ ಮತ್ತು ಡಾ.ರೂಪಾ ಹುಲಕುಂದೆ ಅವರು ನಾಣ್ಯ ಹೊರ ತೆಗೆದಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗುಸುಗೂರು ತಾಲ್ಲೂಕಿನ ದ್ಯಾಮಪ್ಪ ಹರಿಜನ ಎಂಬ 58 ವರ್ಷ ವಯಸ್ಸಿನವರು …
Read More »ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ : ಇಂದು ಸಂಜೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ
ಬೆಂಗಳೂರು : ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಸಂಬಂಧ ಚರ್ಚೆ ನಡೆಸಲು ಇಂದು ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಇಂದು ಸಂಜೆ 7 ಗಂಟೆಗೆ ರೇಸ್ ಕೋರ್ಸ್ ರಸ್ತೆಯ ಸಿಎಂ ನಿವಾಸದಲ್ಲಿ ಸಭೆ ನಡೆಯಲಿದ್ದು, ಕರ್ನಾಟಕ ಗಡಿ, ನದಿ ರಕ್ಷಣಾ ಆಯೋಒಗದ ಅಧ್ಯಕ್ಷ ನ್ಯಾ. ಶಿವರಾಜ ಪಾಟೀಲ್, ಎ.ಜಿ ಪ್ರಭುಲಿಂಗ ನಾವದಗಿ, ಸುಪ್ರೀಂಕೋರ್ಟ್ ನ ಕೆಲ ವಕೀಲರ ಜೊತೆಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸುಪ್ರೀಂಕೋರ್ಟ್ …
Read More »ಕಾಂಗ್ರೆಸ್ `SC-ST’ ಐಕ್ಯತಾ ಸಮಾವೇಶಕ್ಕೆ ಮುಹೂರ್ತ ಫಿಕ್ಸ್
ಬೆಂಗಳೂರು : ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸಿರುವ ರಾಜ್ಯ ಕಾಂಗ್ರೆಸ್ ಇದೀಗ ಎಸ್ ಸಿ ಎಸ್ ಟಿ ಐಕ್ಯತಾ ಸಮಾವೇಶಕ್ಕೆ ದಿನಾಂಕ ನಿಗದಿ ಮಾಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮತಗಳನ್ನು ಸೆಳೆಯುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ಬೃಹತ್ ಸಮಾವೇಶ ಆಯೋಜಿಸಬೇಕು ಎಂಬ ಪ್ರಸ್ತಾವವನ್ನು ಶಾಸಕ ಜಿ. ಪರಮೇಶ್ವರ್ ಅವರು ಕಾಂಗ್ರೆಸ್ ನಾಯಕರ ಮುಂದಿಟ್ಟಿದ್ದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಆರ್. ಧ್ರುವ …
Read More »ರೈತರ ಪ್ರೋತ್ಸಾಹಧನ 10 ರೂ. ಗೆ ಏರಿಸಲು ಮನವಿ: ಬಾಲಚಂದ್ರ ಜಾರಕಿಹೊಳಿ
ಬೆಂಗಳೂರು: ಇತ್ತೀಚೆಗೆ ಸುರಿದ ಭಾರೀ ಮಳೆ ಹಿನ್ನೆಲೆಯಲ್ಲಿ ರೈತರು ಅಪಾರ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ ಹಿನ್ನೆಲೆಯಲ್ಲಿ ಮುಂಬರುವ ಬಜೆಟ್‌ನಲ್ಲಿ ಈಗ ಸರಕಾರ ರೈತರಿಗೆ ನೀಡುವ ಪ್ರೋತ್ಸಾಹ ಮೊತ್ತವನ್ನು 5ರಿಂದ 10 ರೂ.ಗೆ ಏರಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ ಶನಿವಾರ ಹೆಬ್ಬಾಳದ ಜಿಕೆವಿಕೆ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹಾಲು ದಿನಾಚರಣೆ ಕಾರ್ಯಕ್ರಮದಲ್ಲಿ ಅವರು …
Read More »