ಮುಂಬಯಿ: ಠಾಕ್ರೆ ಗುಂಪಿನ ನಾಯಕ ಸಂಸದ ಸಂಜಯ್ ರಾವತ್ ಅವರು ಶುಕ್ರವಾರ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿಯಾದರು. ಭೇಟಿಯ ಸಂದರ್ಭದಲ್ಲಿ ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತು ಚರ್ಚೆ ನಡೆಸಲಾಯಿತು. ಅಲ್ಲದೆ, ಉದ್ಧವ್ ಠಾಕ್ರೆ ನೀಡಿರುವ ಮಹಾರಾಷ್ಟ್ರ ಬಂದ್ ಕರೆಗೆ ಎನ್‌ಸಿಪಿ ಬೆಂಬಲ ಘೋಷಿಸಿದ್ದು, ಹಾಗಾಗಿ ರಾಜ್ಯಪಾಲರ ಹೇಳಿಕೆ ವಿವಾದ ಭುಗಿಲೇಳುವ ಸಾಧ್ಯತೆ ಇದೆ. ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ರಾಜ್ಯಪಾಲ ಭಗತ್ ಸಿಂಗ್ …
Read More »ಮಹಾರಾಷ್ಟ್ರ ಗಡಿ ವಿಚಾರ ಮುಂದಿನ ವಾರ ಸರ್ವಪಕ್ಷ ಸಭೆ: ಸಿಎಂ
ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಇರುವ ಪ್ರಕರಣಗಳಲ್ಲಿ ರಾಜ್ಯಕ್ಕೆ ಗಟ್ಟಿಯಾದ ಕಾನೂನು ನೆಲೆಗಟ್ಟಿದೆ. ಈ ವಿಷಯದಲ್ಲಿ ನಾವು ಸ್ಪಷ್ಟವಾಗಿದ್ದೇವೆ. ಗಡಿ ವಿಚಾರವಾದ್ದರಿಂದ ಮುಂದಿನ ವಾರ ಸರ್ವಪಕ್ಷ ಸಭೆ ಕರೆದಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಗಡಿ ವಿಚಾರವಾದ್ದರಿಂದ ಮುಂದಿನ ವಾರ ಸರ್ವಪಕ್ಷ ಸಭೆ ಕರೆದಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ವಪಕ್ಷಗಳ ಸಭೆಯಲ್ಲಿ ಮತ್ತಷ್ಟು ಸಂಗತಿಗಳನ್ನು ಚರ್ಚಿಸಲಾಗುವುದು ಎಂದರು. ಮಹಾರಾಷ್ಟ್ರದ ಕೆಲ …
Read More »ಲಂಚ ಪಡೆಯುತ್ತಿದ್ದ ಕಿತ್ತೂರು ತಹಶೀಲ್ದಾರ ಲೋಕಾಯುಕ್ತ ಬಲೆಗೆ
ಬೆಳಗಾವಿ: ತಂದೆ ಹೆಸರಿನಲ್ಲಿದ್ದ ಜಮೀನನ್ನು ಮಗನ ಹೆಸರಿಗೆ ಬದಲಾವಣೆ ಮಾಡಲು ಲಂಚ ಪಡೆಯುತ್ತಿದ್ದ ಚನ್ನಮ್ಮನ ಕಿತ್ತೂರು ತಹಶೀಲ್ದಾರ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಚನ್ನಮ್ಮನ ಕಿತ್ತೂರು ತಹಶೀಲ್ದಾರ ಸೋಮಲಿಂಗಪ್ಪ ಹಾಲಗಿ ಹಾಗೂ ಕಚೇರಿ ಭೂ ಸುಧಾರಣಾ ವಿಷಯಗಳ ನಿರ್ವಾಹಕ ಪ್ರಸನ್ನ ಜಿ. ಎಂಬವರು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಸಿಬ್ಬಂದಿ ದಾಳಿ ನಡೆಸಿ ಲಂಚ ಸಮೇತ ಖೆಡ್ಡಾಕ್ಕೆ ಬೀಳಿಸಿದ್ದಾರೆ. ಕಿತ್ತೂರು ತಾಲೂಕಿನ ಖೋದನಾಪುರ ಗ್ರಾಮದ ರಾಜೇಂದ್ರ ಬಾಪುಸಾಹೇಬ ಇನಾಮದಾರ ಎಂಬವರ ಪಹಣಿ …
Read More »ಅರಿಯಿರಿ ನಮ್ಮ ಸಂವಿಧಾನ
ಪ್ರಜಾಪ್ರಭುತ್ವ ರೀತಿಯಲ್ಲಿ ಆಡಳಿತ ವ್ಯವಸ್ಥೆ ಹೊಂದಿದ ದೇಶಗಳ ಪೈಕಿ ನಮ್ಮ ದೇಶವೇ ಅತ್ಯುತ್ತಮವಾದದ್ದು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ನ.26 ಶನಿವಾರ ದೇಶಾದ್ಯಂತ “ಸಂವಿಧಾನ ದಿನ’ ಎಂದು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಆಡಳಿತ ವ್ಯವಸ್ಥೆ ಮತ್ತು ಕಾನೂನಿನ ಬೆನ್ನೆಲುಬು ಆಗಿರುವ ಸಂವಿಧಾನದ ಕೆಲವು ಕುತೂಹಲಕಾರಿ ಅಂಶಗಳನ್ನು ಇಲ್ಲಿ ವಿವರಿಸುವ ಪ್ರಯತ್ನ ಮಾಡಲಾಗಿದೆ. – 1950ರಲ್ಲಿ ರಚಿಸಲಾಗಿರುವ ಮೂಲ ಸಂವಿಧಾನವನ್ನು ಸಂಸತ್ ಭವನದಲ್ಲಿ ಸುರಕ್ಷಿತವಾಗಿ ಸಂರಕ್ಷಿಸಿ ಇರಿಸಲಾಗಿದೆ. – ದೇಶದ ಖ್ಯಾತ …
Read More »40 ಪರ್ಸೆಂಟ್ ಸರ್ಕಾರ ಎಂಬುದನ್ನು ಒಪ್ಪಿಕೊಳ್ಳುವಿರಾ ?
ಬೆಂಗಳೂರು: ಇಂಧನ ಇಲಾಖೆಯ ಕಮಿಷನ್ ವ್ಯವಹಾರದ ಬಗ್ಗೆ ಈಗ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಈಗಲಾದರೂ ನಿಮ್ಮದು 40 ಪರ್ಸೆಂಟ್ ಸರ್ಕಾರ ಎಂಬುವುದನ್ನು ಒಪ್ಪಿಕೊಳ್ಳುವಿರಾ ಎಂದು ಕಾಂಗ್ರೆಸ್ ಟ್ವಿಟರ್‌ನಲ್ಲಿ ಕೆಣಕಿದೆ. ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಕಾಂಗ್ರೆಸ್ “ಎಲ್ಲಿದೆ ಕಮಿಷನ್, ದಾಖಲೆ ಕೊಡಿ” ಇದು ಕರ್ನಾಟಕ ಬಿಜೆಪಿ ಪಕ್ಷದ ಪಕ್ಷದ ಬಂಡತನದ ಮಾತುಗಳಾಗಿದ್ದವು. ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಎಲ್ಲಾ ಕಮಿಷನ್ ಆರೋಪಗಳನ್ನೂ …
Read More »ಐನಾಪುರ-ಮೂಳೆ, ಶೇಡಬಾಳ ಸ್ಟೇಷನ್ ರಸ್ತೆ ಕಾಮಗಾರಿಗೆ ಶ್ರೀಮಂತ ಪಾಟೀಲ್ ಚಾಲನೆ
ಕಳೆದ ಅನೇಕ ವರ್ಷಗಳಿಂದ ಹದಗೆಟ್ಟು ಹೋದ ಐನಾಪುರ್ -ಮೂಳೆ,3 ಕೋಟಿ ಸೇಡಬಾಳ ಸ್ಟೇಷನ ದಲ್ಲಿ 60 ಲಕ್ಷ ರೂ ವೆಚ್ಚದಲ್ಲಿ ರಸ್ತೆ ನಿರ್ಮಿಸುವ ಕಾಮಗಾರಿಗೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಶುಕ್ರವಾರ ರಂದು ಶಾಸಕ ಶ್ರೀಮಂತ ಪಾಟೀಲರು ಸೇಡಬಾಳ ಸ್ಟೇಷನ್ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸಿದರು. ಶಾಸಕ ಶ್ರೀಮಂತ ಪಾಟೀಲರು ಅಭಿಯಂತರಿಗೆ ಮತ್ತು ಗುತ್ತಿಗೆದಾರರಿಗೆ ಗುಣಮಟ್ಟದ ರಸ್ತ ಕಾಮಗಾರಿ ನಿರ್ಮಿಸಲು ಸೂಚನೆ ನೀಡಿದರು …
Read More »2 ದಿನದಲ್ಲಿ ಸಮಸ್ಯೆ ಪರಿಹಾರ ಆಗದಿದ್ರೆ ರೈತರೊಂದಿಗೆ ನಾನೂ ಹೋರಾಟಕ್ಕೆ ಇಳಿಯುತ್ತೇನೆ:ಶ್ರೀಮಂತ ಪಾಟೀಲ್
ಕಾಗವಾಡ ತಾಲೂಕಿನ ಏತ ನೀರಾವರಿ ಯೋಜನೆಗಳ ಮೇಲೆ ಅವಲಂಬಿತವಾಗಿರುವ ರೈತರು ಈ ಮೊದಲಿನಂತೆ ನಿರಂತರವಾಗಿ 7 ಗಂಟೆ ವಿದ್ಯುತ್ಪೂ ರೈಸುವಂತೆ ಶಾಸಕ ಶ್ರೀಮಂತ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು. ಶುಕ್ರವಾರ ಕಾಗವಾಡ ಸರ್ಕಾರಿ ವಿಶ್ರಾಂತಿ ಗೃಹದಲ್ಲಿ ಈ ಸಂಬಂಧ ರೈತರು ಶಾಸಕರನ್ನು ಭೇಟಿಯಾದರು. ಈ ವೇಳೆ ಶ್ರೀಮಂತ ಪಾಟೀಲ್ ಅವರು ನೇರವಾಗಿ ಹುಬ್ಬಳ್ಳಿಯ ಹೆಸ್ಕಾಂ ಇಲಾಖೆಯ ಎಂಡಿ ಡಿ.ಭಾರತಿ ಅವರೊಂದಿಗೆ ವಿಡಿಯೋ ಕಾಲ್ ಮುಖಾಂತರ ಇಲ್ಲಿಯ ರೈತರ ಸಮಸ್ಯೆಗಳು ಹಾಗೂ …
Read More »ಮಹಾರಾಷ್ಟ್ರಕ್ಕೆ ಸೇರಿದ ಒಂದಿಂಚೂ ಜಾಗ ಕರ್ನಾಟಕ ಸೇರಲು ಬಿಡಲ್ಲ: ಸಿಎಂ ಶಿಂಧೆ
ಮುಂಬೈ: ಬೆಳಗಾವಿ ಗಡಿ ಕುರಿತಂತೆ ಮಹಾರಾಷ್ಟ್ರ, ಕರ್ನಾಟಕ ನಡುವೆ ಜಟಾಪಟಿ ನಡೆದಿರುವ ನಡುವೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಕಾರಣಕ್ಕೂ ಮಹಾರಾಷ್ಟ್ರಕ್ಕೆ ಸೇರಿರುವ ಪ್ರದೇಶದ ಒಂದಿಂಚು ಭೂಮಿಯನ್ನು ನೆರೆರಾಜ್ಯಕ್ಕೆ ಹೋಗಲು ಬಿಡುವುದಿಲ್ಲ ಎಂದು ಹೇಳುವ ಮೂಲಕ ಉಭಯ ರಾಜ್ಯಗಳ ನಡುವಿನ ಗಡಿ ವಿವಾದ ಉಲ್ಬಣಗೊಳ್ಳುವಂತಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, ನಾವು ಗಡಿಭಾಗದ ಮರಾಠಿ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದೇವೆ. ಆ ನಿಟ್ಟಿನಲ್ಲಿ ಮಹಾರಾಷ್ಟ್ರದ …
Read More »ರಾಜ್ಯದ ಗಡಿ ಹಾಗೂ ಜನರನ್ನು ರಕ್ಷಿಸಲು ಶಕ್ತಿ ಮೀರಿ ಹೋರಾಟ: ಸಿಎಂ ಬೊಮ್ಮಾಯಿ
ಬೆಂಗಳೂರು: ನಮ್ಮ ಗಡಿ ಹಾಗೂ ಜನರನ್ನು ರಕ್ಷಿಸಲು ಶಕ್ತಿ ಮೀರಿ ಹೋರಾಟ ಮಾಡುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ,ನ್ಯಾಯ ನಮ್ಮ ಕಡೆಯಿದೆ. ಎರಡೂ ರಾಜ್ಯಗಳ ಮಧ್ಯೆ ಶಾಂತಿ ಕಾಪಾಡಲು ಮಹಾರಾಷ್ಟ್ರ ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಆಗ್ರಹಿಸಿದರು. ಅಂತರವನ್ನು ಕಡಿಮೆ ಮಾಡಲು ಮಹಾರಾಷ್ಟ್ರ ಕ್ರಮ ವಹಿಸಬೇಕು ಭಾರತ ರಾಜ್ಯಗಳ ಒಕ್ಕೂಟ. ಪ್ರತಿ ರಾಜ್ಯಕ್ಕೂ ತನ್ನದೇ ಆದ ಹಕ್ಕುಗಳಿವೆ. ರಾಜ್ಯಗಳನ್ನು ರಾಜ್ಯ ಮರುವಿಂಗಡನಾ …
Read More »ಕೊಪ್ಪಳ: ಲಿಂಗತ್ವ ಅಲ್ಪಸಂಖ್ಯಾತರಿಗೆ ನರೇಗಾ ಜಾಬ್ ಕಾರ್ಡ್ ವಿತರಿಸಿದ ಇಒ
ಕೊಪ್ಪಳ: ಬಿಜಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಬೋದೂರು ತಾಂಡಾದಲ್ಲಿರುವ ಐವರು ಲಿಂಗತ್ವ ಅಲ್ಪಸಂಖ್ಯಾತರ ಮನೆಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ ಸುಬೇದಾರ್ ಗುರುವಾರ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಪಾಲ್ಗೊಂಡು ವೇತನ ಪಡೆಯುವ ಮೂಲಕ ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಅನುವು ಮಾಡಿಕೊಡುವ ನರೇಗಾ ಯೋಜನೆಯ ವಿಶೇಷ ವರ್ಗದ ಜಾಬ್ ಕಾರ್ಡ್ ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲಿಂಗತ್ವ ಅಲ್ಪಸಂಖ್ಯಾತರು ಸಮಾಜದ ಮುಖ್ಯವಾಹಿನಿಗೆ …
Read More »