ರಾಮದುರ್ಗ (ಬೆಳಗಾವಿ): ಇತ್ತೀಚೆಗೆ ನಿಧನರಾದ ವಿಧಾನಸಭೆ ಉಪಸಭಾಧ್ಯಕ್ಷ, ಸವದತ್ತಿ ಶಾಸಕ ಆನಂದ ಮಾಮನಿ ಅವರ ಪತ್ನಿ ರತ್ನಾ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ತಾಲ್ಲೂಕಿನ ದೊಡ್ಡಮಂಗಡಿಯಲ್ಲಿ ಬಸವೇಶ್ವರರ ಪುತ್ಥಳಿ ಅನಾವರಣ ಮಾಡಿದ ಬಳಿಕ ರತ್ನಾ ಮಾಮನಿ ಅವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ‘ನಿಮ್ಮ ವಿಚಾರವಾಗಿ ದೆಹಲಿಯಲ್ಲಿ ಮಾತನಾಡಿದ್ದೇನೆ. ಕಾಳಜಿ ಮಾಡಬೇಡಿ’ ಎಂದರು.
Read More »ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕುತ್ತಿಗೆಗೆ ಕಬ್ಬಿಣದ ರಾಡ್ ತಗುಲಿ ವ್ಯಕ್ತಿ ಸ್ಥಳದಲ್ಲೇ ಸಾವು
ನವದೆಹಲಿ : ದೆಹಲಿ-ಕಾನ್ಪುರ್ ನೀಲಾಚಲ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಬ್ಬಿಣದ ರಾಡ್ ತಗುಲಿ ಪ್ರಯಾಣಿಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಉತ್ತರ ಮಧ್ಯ ರೈಲ್ವೆಯ ಪ್ರಯಾಗ್‌ರಾಜ್ ವಿಭಾಗದಲ್ಲಿ ದನ್ವಾರ್ ಮತ್ತು ಸೋಮ್ನಾ ನಡುವೆ ಬೆಳಿಗ್ಗೆ 8.45 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಕೋಚ್ ಗಾಜಿನ ಕಿಟಕಿಯನ್ನು ಒಡೆದ ಕಬ್ಬಿಣದ ರಾಡ್ ವ್ಯಕ್ತಿಯ ಕುತ್ತಿಗೆಗೆ ತಗುಲಿದ್ದು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯನ್ನು ಹೃಷೇಕೇಶ್ ದುಬೆ ಎಂದು …
Read More »ಮಹಿಳೆ ಜೀವ ತೆಗೆದ 40 ರೂಪಾಯಿ: ಕ್ಷುಲ್ಲಕ ಕಾರಣಕ್ಕೆ ಅತ್ತೆ-ಸೊಸೆ ಜಗಳ, ಪತಿಯ ಏಟಿಗೆ ಪತ್ನಿ ಸಾವು
ಬಾಗಲಕೋಟೆ : ಜಿಲ್ಲೆಯ ಬೀಳಗಿ ತಾಲೂಕಿನ ನಕ್ಕರಗುಂದಿ ಗ್ರಾಮದಲ್ಲಿ ನನ್ನ 40 ರೂಪಾಯಿ ತೆಗೆದುಕೊಂಡಿದ್ದೀಯಾ ಎಂದು ಅತ್ತೆ ಭೀಮವ್ವ ಗುಳ್ಳಣ್ಣವರು ಸೊಸೆ ರಂಗವ್ವ ಗುಳ್ಳಣ್ಣವರ ಮೇಲೆ ಆರೋಪ ಮಾಡಿದ್ದಾಳೆ. ಸೊಸೆ ನಾನು ತೆಗೆದುಕೊಂಡಿಲ್ಲವೆಂದು ಹೇಳಿದ್ದಾಳೆ. ಆದರೂ ನಂಬದ ಅತ್ತೆ, ಸೊಸೆಯ ಜಗಳ ತಾರಕಕ್ಕೇರಿದೆ. ಪತ್ನಿ ಹಾಗೂ ತಾಯಿ ಜಗಳದಿಂದ ಕೋಪಗೊಂಡ ಮಗ ಮಳಿಯಪ್ಪ ಜಗಳ ಬಿಡಿಸುವ ವೇಳೆ ಪತ್ನಿ ಕಪಾಳಕ್ಕೆ ಪತಿ ಹೊಡೆದಿದ್ದಾನೆ. ಮೊದಲೇ ಅಸ್ತಮಾ, ಬಿ.ಪಿಯಿಂದ ಬಳಲುತ್ತಿದ್ದ ಪತ್ನಿ, …
Read More »ತಟ್ಟೆ ತೊಳೆಯಲು ಹೋದ ಮಗಳನ್ನು ಚಿರತೆ ಎಳೆದುಕೊಂಡು ಹೋಯಿತು..
ತಿ.ನರಸೀಪುರ: ಸಂಜೆ 6.45ರ ಸಮಯ.ನಾವು ಟಿವಿ ನೋಡುತ್ತಾ ಕುಳಿತಿದ್ದೆವು. ತಟ್ಟೆ ತೊಳೆದು ಬರುತ್ತೇನೆ ಎಂದು ಮೇಘನಾ ಹಿಂದೆ ಹೋಗಿದ್ದಳು. ಎಷ್ಟು ಹೊತ್ತಾದರೂ ಬಂದಿರಲಿಲ್ಲ. ಏಕಾಏಕಿ ಕೂಗಿಕೊಂಡ ಶಬ್ದ ಕೇಳಿ ನಾವೆಲ್ಲಾ ಓಡಿ ಹೋದೆವು. ಅಷ್ಟರಲ್ಲಿ ಚಿರತೆ ಎಳೆದುಕೊಂಡು ಹೋಗಿದ್ದನ್ನು ಕಣ್ಣಾರೆ ಕಂಡೆವು. ಕೂಗು ಹಾಕಿದ್ದರಿಂದ ಬಿಟ್ಟು ಚಿರತೆ ಓಡಿತು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಆಕೆ ಆಸ್ಪತ್ರೆಯಲ್ಲೇ ಮೃತಪಟ್ಟಳು. ಕಣ್ಣ ಮುಂದೆಯೇ ಪ್ರಾಣಿಯೊಂದು ದಾಳಿ ಮಾಡಿ ಮಗಳು ಸತ್ತಿದ್ದನ್ನು ನೋಡಲು ಆಗುತ್ತಿಲ್ಲ. ಹೀಗೆ …
Read More »ಮಹಾ ಸಚಿವರು ಗಡಿ ಪ್ರವೇಶಿಸದಂತೆ ಪ್ರತಿಬಂಧಕಾಜ್ಞೆ ಹೊರಡಿಸುವುದಾಗಿ ಎಚ್ಚರಿಕೆ:C.M.
ರಾಮದುರ್ಗ: ಮಹಾರಾಷ್ಟ್ರದ ಸಚಿವದ್ವಯರು ಡಿ. 6ರಂದು ಬೆಳಗಾವಿಗೆ ಬರಲು ಸಜ್ಜಾಗಿರುವಂತೆಯೇ ಅವರ ಭೇಟಿಗೆ ವಿರೋಧ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹಾ ಸಚಿವರು ಗಡಿ ಪ್ರವೇಶಿಸದಂತೆ ಪ್ರತಿಬಂಧಕಾಜ್ಞೆ ಹೊರಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಫ್ಯಾಕ್ಸ್ ಮೂಲಕ ಸಂದೇಶ ಕಳುಹಿಸಿದ್ದಾರೆ. ಎರಡೂ ರಾಜ್ಯಗಳ ಮಧ್ಯೆ ವಿಷಮ ಪರಿಸ್ಥಿತಿ ಇದೆ. ಹೀಗಿರುವಾಗ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರುವುದು ಸೂಕ್ತವಲ್ಲ. ಯಾವುದೇ ಕಾರಣಕ್ಕೂ ಬರಬಾರದು …
Read More »ಹತ್ತಿ ಹೊಲದಲ್ಲೇ ಬಿತ್ತು ಜೋಡಿ ಶವ!
ಕಲಬುರಗಿ: ಹತ್ತಿ ಹೊಲದಲ್ಲಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬರ್ಬರವಾಗಿ ಗಂಡನೇ ಕೊಂದ ಭೀಕರ ಘಟನೆ ಸುರಪುರ ತಾಲೂಕಿನ ಕಾಚಾಪುರದಲ್ಲಿ ಸಂಭವಿಸಿದೆ. ನಾಡಗೌಡ(36) ಮತ್ತು ಮಲ್ಲಮ್ಮ(30) ಕೊಲೆಯಾದ ದುರ್ದೈವಿಗಳು. ಹತ್ತಿ ಹೊಲದಲ್ಲಿ ರಕ್ತದ ಮಡುವಲ್ಲಿ ಬಿದ್ದಿದ್ದ ಜೋಡಿ ಶವ ನೋಡಿ ಸ್ಥಳೀಯರು ಬೆಚ್ಚಿಬಿದ್ದಾರೆ. ಕೊಲೆಗೆ ಅಕ್ರಮ ಸಂಬಂಧ ಕಾರಣ ಎನ್ನಲಾಗಿದೆ. ಪ್ರಿಯಕರನೊಂದಿಗೆ ಹೊಲದಲ್ಲಿದ್ದ ಪತ್ನಿಯನ್ನ ಗಂಡನೇ ಕುಡುಗೋಲಿನಿಂದ ಕೊಚ್ಚಿದ್ದಾನೆ. ಪ್ರಿಯಕರನನ್ನೂ ಅಲ್ಲೇ ಕೊಂದಿದ್ದಾರೆ. ಇಬ್ಬರ ಶವಗಳು ಪಕ್ಕದಲ್ಲೇ ಬಿದ್ದಿದ್ದವು. ಸುದ್ದಿ …
Read More »ಮೋದ್ ಮತಾಲಿಕ್ ಗೆ ಜೀವ ಬೆದರಿಕೆ
ಧಾರವಾಡ: ರಾಜ್ಯ ಸರ್ಕಾರ 10 ಮುಸ್ಲಿಂ ಕಾಲೇಜುಗಳಿಗೆ ಅನುಮತಿ ಕೊಡಲು ಮುಂದಾಗಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಜೀವ ಬೆದರಿಕೆ ಸಂದೇಶವೊಂದು ಬಂದಿದೆ. ಮೊಬೈಲ್ ನಂಬರ್‌ನಿಂದ ವಾಟ್ಸಪ್ ವಾಯ್ಸ್ ಮೆಸೇಜ್ ಒಂದು ಬಂದಿದ್ದು, ಇದರಲ್ಲಿ ಆ ವ್ಯಕ್ತಿ ಪ್ರಮೋದ್ ಮುತಾಲಿಕ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಜೀವ ಬೆದರಿಕೆ ಕೂಡ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿಯ ಮೇಲೆ ಧಾರವಾಡದ ಉಪನಗರ ಠಾಣೆಯಲ್ಲಿ ಮುತಾಲಿಕ್ …
Read More »ಆಸ್ಪತ್ರೆಗೆ ದಾಖಲಾದ ಸಿದ್ದರಾಮಯ್ಯ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕ್ಕ ಶಸ್ತ್ರಕ್ರಿಯೆಗೆ ಒಳಗಾಗಲಿದ್ದಾರೆ. ಹಿಂದೆ ಮೂಲವ್ಯಾಧಿಗೆ ಚಿಕಿತ್ಸೆ ಪಡೆದಿದ್ದ ಜಾಗದಲ್ಲಿ ಸಣ್ಣ ಗುಳ್ಳೆಯಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಆಪರೇಷನ್ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ಕಚೇರಿ ಮೂಲಗಳು ತಿಳಿಸಿವೆ. ಮೈನರ್ ಆಪರೇಷನ್ ಬಳಿಕ ನಾಲ್ಕು ದಿನ ವಿಶ್ರಾಂತಿ ಪಡೆಯಲಿರುವ ಸಿದ್ದರಾಮಯ್ಯ, ಇಂದು ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.
Read More »Delete BJP Not Voter ID ಅಭಿಯಾನ ಆರಂಭಿಸಿದ ಕಾಂಗ್ರೆಸ್
ಬೆಂಗಳೂರು: ಕಾಂಗ್ರೆಸ್ ನಿಂದ DeleteBJPNotVoterID ಅಭಿಯಾನ ಪ್ರಾರಂಭಿಸಲಾಗಿದೆ. ಬೆಂಗಳೂರು ಮತದಾರರ ದತ್ತಾಂಶ ಕಳ್ಳತನ ಪ್ರಕರಣ ಬಹಿರಂಗಗೊಂಡ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಡಿಜಿಟಲ್ ಅಭಿಯಾನ ಆರಂಭಿಸಿದೆ. ರಾಷ್ಟ್ರೀಯ ಚುನಾವಣಾ ಸಂಸ್ಥೆಯು ಸಮಗ್ರ ತನಿಖೆ ನಡೆಸುವಂತೆ ಮಾಡಿದೆ. ಬೆಂಗಳೂರಿನಲ್ಲಿ 6.6 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಅಂದಾಜಿಸಲಾಗಿದ್ದರೂ, ಮತದಾರರ ಪಟ್ಟಿಯಲ್ಲಿ ತಮ್ಮ ನೋಂದಣಿಯನ್ನು ಟೋಲ್ ಫ್ರೀ ಸಂಖ್ಯೆ ಮತ್ತು ವೆಬ್ ಸೈಟ್ ನೊಂದಿಗೆ ಪರಿಶೀಲಿಸಲು ಇಸಿಐ ಮತದಾರರಿಗೆ ವಿನಂತಿಸಿದೆ. …
Read More »ಮತದಾರರ ಪಟ್ಟಿ ಅಕ್ರಮ ನಡೆದಿಲ್ಲವಾದರೆ ಅಧಿಕಾರಿಗಳ ಸಸ್ಪೆಂಡ್ ಮಾಡಿದ್ದೇಕೆ: ಎಂ.ಬಿ.ಪಾಟೀಲ ಪ್ರಶ್ನೆ
ವಿಜಯಪುರ: ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನು ಗುರಿ ಮಾಡಿಲ್ಲ, ಅನಧಿಕೃತ ಮತದಾರರನ್ನು ಪಟ್ಟಿಯಿಂದ ರದ್ದು ಮಾಡಿದ್ದಾಗಿ ಹೇಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ, ಚಿಲುಮೆ ಸಂಸ್ಥೆ ಬೆಂಗಳೂರಿನಲ್ಲಿ ಏನು ಮಾಡಿದೆ ಎಂದು ಗೊತ್ತಿಲ್ಲವೆ? ಮತದಾರರ ಪರಿಷ್ಕರಣೆ ಹೆಸರಲ್ಲಿ ಅಕ್ರಮ ನಡೆದಿಲ್ಲ ಎಂದಾದರೆ ಐಎಎಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇಕೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಶುಕ್ರವಾರ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಅಕ್ರಮವಾಗಿ ಮತದಾರರ ರದ್ದತಿ, ಸೇರ್ಪಡೆ …
Read More »