ಉಡುಪಿ: ಯಕ್ಷಗಾನ ಸಮ್ಮೇಳನದ ಗೋಷ್ಠಿಗಳ ಉದ್ಘಾಟನೆ ಹಾಗೂ ದಿಕ್ಸೂಚಿ ಭಾಷಣ ಮಾಡಲು ಆಗಮಿಸಿದ ಲೇಖಕ ರೋಹಿತ್ ಚಕ್ರತೀರ್ಥ ವಿರುದ್ಧ ಬಿಲ್ಲವ ಸಂಘಟನೆಗಳ ಮುಖಂಡರು ಶನಿವಾರ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ನಾರಾಯಣ ಗುರುಗಳ ಪಠ್ಯವನ್ನು ಕೈಬಿಟ್ಟು ಗುರುಗಳಿಗೆ ಹಾಗೂ ಬಿಲ್ಲವ ಸಮಾಜಕ್ಕೆ ರೋಹಿತ್ ಚಕ್ರತೀರ್ಥ ಅವಮಾನ ಮಾಡಿದ್ದು ಸಮ್ಮೇಳನದಲ್ಲಿ ಭಾಷಣ ಮಾಡಲು ಅವಕಾಶ ನೀಡಬಾರದು ಎಂದು ಘೋಷಣೆ ಕೂಗಿದರು. ಸಮ್ಮೇಳನ ನಡೆಯುವ ಸ್ಥಳದ ಕಡೆಗೆ ಹೊರಟ ಪ್ರತಿಭಟನಾಕಾರರನ್ನು ರಾಷ್ಟ್ರೀಯ …
Read More »ಮೈತ್ರಿ ಸುಳಿವು ನೀಡಿದ ಗಾಲಿ ಜನಾರ್ದನ ರೆಡ್ಡಿ
ರಾಮದುರ್ಗ (ಬೆಳಗಾವಿ ಜಿಲ್ಲೆ): ‘ಚುನಾವಣೆ ಬಳಿಕ ರಾಜ್ಯದಲ್ಲಿ ಅಧಿಕಾರಕ್ಕೇರುತ್ತೇನೆ. ಇಲ್ಲದಿದ್ದರೆ ಅಧಿಕಾರಕ್ಕೆ ಬರುವವರ ಕೈ ಹಿಡಿದಾದರೂ ಅಧಿಕಾರ ಮಾಡುತ್ತೇನೆ’ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಶನಿವಾರ ಹೇಳಿದರು. ಇಲ್ಲಿ ರೆಡ್ಡಿ ಸಮಾಜ ಹಮ್ಮಿಕೊಂಡಿದ್ದ ವೇಮನರ 611ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿದ ಅವರು, ‘ನನ್ನ ಕೈ ಯಾರು ಹಿಡಿಯುತ್ತಾರೆ, ನಾನು ಯಾರ ಕೈಹಿಡಿಯುತ್ತೇನೆ ಎನ್ನುವುದು ಚುನಾವಣೆ ಬಳಿಕ ಗೊತ್ತಾಗಲಿದೆ’ ಎನ್ನುವ ಮೂಲಕ ಮೈತ್ರಿಯ ಸುಳಿವು …
Read More »ಕಾಣೆಯಾಗಿದ ಗೋಕಾಕ ಪ್ರತಿಷ್ಠಿತ ಉದ್ಯಮಿ ಶವವಾಗಿ ಪತ್ತೆ
ಗೋಕಾಕ : ಗೋಕಾಕ್ ನಗರದ ಶುಕ್ರವಾರ ಸಂಜೆ ಅಪಹರಣಕ್ಕೆ ಒಳಗಾದ ಉದ್ಯಮಿಯ ಶವ ಕೊಲೆಯಲ್ಲಿ ಪರ್ಯವಸನಗೊಂಡಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ. ರಾಜು/ಮುನ್ನಾ ಝಂವರ ಎಂಬ ಗೋಕಾಕ ನಗರದ ಉದ್ಯಮಿ ಶುಕ್ರವಾರ ಸಂಜೆ 6:00 ರ ಸುಮಾರಿಗೆ ನಗರದ ಸಿಟಿ ಹೆಲ್ತ್ ಕೇರ್ ವೈದ್ಯ ಸಚಿನ್ ಶಿರಗಾಂವಿ ಜೊತೆ ಸೇರಿ ಮಾತುಕತೆ ನಡೆಸಿದ ನಂತರ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಸಹಾ ಅಷ್ಟೇ ಹೊತ್ತಿಗೆ ಬಂದ್ ಆಗಿತ್ತು. ಈ ಬಗ್ಗೆ ರಾಜು …
Read More »ನಮ್ಮ ಮೈತ್ರಿ ಸರಕಾರ ನ್ಯಾಯಸಮ್ಮತವಾಗಿದ್ದು, ಅವಧಿ ಪೂರೈಸುತ್ತದೆ: ಫಡ್ನವೀಸ್
ನಾಸಿಕ್: ಏಕನಾಥ್ ಶಿಂಧೆ-ಬಿಜೆಪಿ ಸರಕಾರವು ನ್ಯಾಯಸಮ್ಮತವಾಗಿದೆ ಮತ್ತು ಅಧಿಕಾರದಲ್ಲಿ ಮುಂದುವರಿಯುತ್ತದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶನಿವಾರ ಹೇಳಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣವು ಅದರ ಪತನದ ಬಗ್ಗೆ ಭವಿಷ್ಯ ನುಡಿದ ಬೆನ್ನಲ್ಲೇ, ಜೂನ್ 2022 ರಲ್ಲಿ ಅಧಿಕಾರಕ್ಕೆ ಬಂದ ಸರಕಾರವು ಸಂವಿಧಾನದ ನಿಯಮಗಳ ಪ್ರಕಾರ ರಚನೆಯಾಗಿದೆ ಎಂದು ಫಡ್ನವೀಸ್ ಹೇಳಿದ್ದಾರೆ. ನಾಸಿಕ್ ನಗರದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿಯನ್ನುದ್ದೇಶಿಸಿ ಮಾತನಾಡಿದ ಫಡ್ನವೀಸ್, ಏಕನಾಥ್ಅ ಶಿಂಧೆ ಅವರ ಬಣದ …
Read More »ಹಿರಿಯ I,A,S,ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ.: ರಾಜ್ಯ ಸರ್ಕಾರ
ಬೆಂಗಳೂರು: ಚುನಾವಣ ಹೊಸ್ತಿಲಲ್ಲಿ ರಾಜ್ಯ ಸರಕಾರ ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಡಾ| ರಮಣ್ ರೆಡ್ಡಿ-ಅಭಿವೃದ್ಧಿ ಆಯುಕ್ತರು, ಬೆಂಗಳೂರು. ಕಪಿಲ್ ಮೋಹನ್- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ. ಜಿ.ಕುಮಾರ್ ನಾಯಕ್ – ಬಿಡಿಎ ಆಯುಕ್ತ. ಎಸ್.ಆರ್.ಉಮಾಶಂಕರ್-ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ. ರಶ್ಮಿ ವಿ.ಮಹೇಶ್ – ಪ್ರಧಾನ ಕಾರ್ಯದರ್ಶಿ ಕಂದಾಯ ಇಲಾಖೆ ( ವಿಕೋಪ ನಿರ್ವಹಣೆ, ಭೂಮಿ). ಡಾ| ಸೆಲ್ವಕುಮಾರ್ – ಪ್ರಧಾನ ಕಾರ್ಯದರ್ಶಿ, ವಾಣಿಜ್ಯ …
Read More »ಕುಂದರಗಿ ಮಹಾಲಕ್ಷ್ಮಿ ಜಾತ್ರೆಗೆ ಭೇಟಿ ನೀಡಿ ಆಶೀರ್ವಾದ ಪಡೆದ ವಿಧಾನ ಪರಿಷತ್ ಸದಸ್ಯರಾದಲಖನ ಜಾರಕಿಹೊಳಿ
ಗೋಕಾಕ: ಗೋಕಾಕ ತಾಲೂಕಿನ ಕುಂದರಗಿ ಗ್ರಾಮದ ಮಹಾಲಕ್ಷ್ಮಿ ದೇವಿ ಜಾತ್ರೆಗೆ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಭೇಟಿ ನೀಡಿದ್ದಾರೆ. ಜಾತ್ರೆಯ ಸಂಭ್ರಮ ಜಿಲ್ಲೆ ಯಾದ್ಯಂತ ಸುಮಾರ ಕಡೆ ಗ್ರಾಮ ದೇವಿಯ ಜಾತ್ರೆಗಳು ನಡಿತಿವೆ. ಲಖನ ಜಾರಕಿಹೊಳಿ ಅವರು ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದು ದೇವರ ಕೃಪೆಗೆ ಪಾತ್ರ ರಾಗಿದ್ದಾರೆ. ಗ್ರಾಮದ ವಿಶೇಷ ಕುಂದು ಕೊರತೆಗಳ ಹಾಗೂ ದೇವಿಯ ಜಾತ್ರೆಗೆ ಬೇಕಾಗುವು ವ್ಯವಸ್ಥೆ ಬಗ್ಗೆ ಗಮನ ಹರಿಸಿ …
Read More »ಜಾರಕಿಹೊಳಿ ಸಾಮ್ರಾಜ್ಯ ನಿರ್ಮಿಸುವಲ್ಲಿ ಕಲಾಲ ಸಮಾಜದ ಕೊಡುಗೆ ಅಪಾರ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಕಳೆದ ಐದು ದಶಕಗಳ ಹಿಂದೆ ನಮ್ಮ ಕುಟುಂಬ ಸ್ಥಾಪಿಸಿರುವ ಸಾಮ್ರಾಜ್ಯದಲ್ಲಿ ಕಲಾಲ ಸಮಾಜದವರ ಪರಿಶ್ರಮ ಅಪಾರವಾಗಿದೆ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಶನಿವಾರದಂದು ತಾಲೂಕಿನ ಕಲ್ಲೋಳಿ ಪಟ್ಟಣದ ನಿಯೋಜಿತ ಬಲಭೀಮ ದೇವರ ಕಲ್ಯಾಣ ಮಂಟಪದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕುಗಳ ಸೂರ್ಯವಂಶ ಕ್ಷತ್ರೀಯ ಕಲಾಲ ಸಮಾಜದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಾಲ ಸಮಾಜದವರು ತಮ್ಮ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ …
Read More »ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಹೈಕೋರ್ಟ್ ಮಧ್ಯಾಂತರ ತಡೆ
ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದಿಸಿದ ಆರೋಪಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತವರ ಕುಟುಂಬದ ಸದಸ್ಯರ ವಿರುದ್ಧದ ಸಿಬಿಐ ತನಿಖೆಗೆ ಹೈಕೋರ್ಟ್ ಮಧ್ಯಾಂತರ ತಡೆ ನೀಡಿದೆ. ಸಿಬಿಐ ತನಿಖೆಯನ್ನು ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯು ನ್ಯಾ| ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿದ್ದು, ಪ್ರಕರಣದ ತನಿಖೆಗೆ ಫೆ.24ರವರೆಗೆ ತಡೆ ನೀಡಿತು. ಅಲ್ಲದೆ, ಈವರೆಗಿನ ತನಿಖಾ ಪ್ರಗತಿ ವರದಿ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶಿಸಿ …
Read More »ನೇಮಕಾತಿ ಅಕ್ರಮ: ಮತ್ತೆ 8 ಸಹಶಿಕ್ಷಕರ ಬಂಧನ
ಬೆಂಗಳೂರು: 2012-13 ಹಾಗೂ 2014-15ನೇ ಸಾಲಿನ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕರ ನೇಮಕಾತಿ ಅಕ್ರಮ ಸಂಬಂಧ ಮತ್ತೆ 8 ಸಹಶಿಕ್ಷಕರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ವಿಧಾನಸೌಧ ಠಾಣೆಯಲ್ಲಿ ದಾಖಲಾಗಿದ್ದ ಪ್ರತ್ಯೇಕ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಇಬ್ಬರು ನಿರ್ದೇಶಕರು, ಮೂವರು ನಿವೃತ್ತ ಸಹ ನಿರ್ದೇಶಕರು, ಪ್ರಥಮ ದರ್ಜೆ ಸಹಾಯಕ, ಎಂಜಿನಿ ಯರ್ ಹಾಗೂ 61 ಸಹಶಿಕ್ಷಕರನ್ನು ಈಗಾಗಲೇ ಬಂಧಿಸಿದ್ದಾರೆ. ಅವರೆಲ್ಲರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದ್ದಾರೆ. …
Read More »ಅಂಬೇಡ್ಕರ್ ಜೀವಂತವಾಗಿ ಇದ್ದಿದ್ದರೆ ಅವರನ್ನು ಕೊಲ್ಲುತ್ತಿದ್ದೆ: ಅವಹೇಳನಕಾರಿ ವಿಡಿಯೋ ವೈರಲ್
ಹೈದರಾಬಾದ್: ಸಂವಿಧಾನ ಶಿಲ್ಫಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹಮಾರಾ ಪ್ರಸಾದ್ ಬಂಧಿತ ವ್ಯಕ್ತಿ. ಹಮಾರಾ ಪ್ರಸಾದ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಿಡಿಯೋದಲ್ಲಿ ಏನಿದೆ? : ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಪುಸ್ತಕವೊಂದನ್ನು ಹಿಡಿದುಕೊಂಡು ಹಮಾರಾ ಪ್ರಸಾದ್ ಗಾಂಧೀಜಿಯನ್ನು ಗೋಡ್ಸೆ ಕೊಂದಂತೆ, ಒಂದು ವೇಳೆ ಅಂಬೇಡ್ಕರ್ ಈಗ ಜೀವಂತವಾಗಿ ಇದ್ದಿದ್ದರೆ …
Read More »
Laxmi News 24×7