Breaking News

Uncategorized

ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಬಂಡೀಪುರದಲ್ಲಿ ಖಾಕಿ ಹೈ ಅಲರ್ಟ್

ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ – ಬಂಡೀಪುರದಲ್ಲಿ ಹೈ ಅಲರ್ಟ್ – ವಾಹನ ಸಂಚಾರ ನಿರ್ಬಂಧ- ಡ್ರೋನ್ ಹಾರಾಟವೂ ಬಂದ್. ಬಂಡೀಪುರದಲ್ಲಿ ಖಾಕಿ ಹೈ ಅಲರ್ಟ್ಚಾಮರಾಜನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರರಕ್ಕೆ ಭೇಟಿ ನೀಡಲಿರುವ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ಬಂಡೀಪುರ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 181 ಮತ್ತು 766ರ ರಸ್ತೆಯಲ್ಲಿ ತಮಿಳುನಾಡು ಕಡೆಗೆ ಹೋಗುವ ಮತ್ತು ಬರುವ ಎಲ್ಲ ವಾಹನಗಳನ್ನು …

Read More »

ಅಮೆರಿಕಾದ ಪ್ಲೋರಿಡಾದಲ್ಲಿ ಲಘು ವಿಮಾನ ಪತನ, ದಂಪತಿ ಸಾವು ಸುಮಾರು 23 ಅಡಿ ನೀರಿನ ಅಡಿಯಲ್ಲಿ ಕಂಡುಬಂದ ವಿಮಾನ

ಅಮೆರಿಕಾದ ಪ್ಲೋರಿಡಾದಲ್ಲಿ ಲಘು ವಿಮಾನವೊಂದು ಪತನವಾಗಿದ್ದು, ನಾಲ್ವರು ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗಲ್ಫ್​, ಅಮೆರಿಕ: ಫ್ಲೋರಿಡಾದ ಗಲ್ಫ್ ಕೋಸ್ಟ್ ಬಳಿ ಗುರುವಾರ ಸಣ್ಣ ವಿಮಾನವೊಂದು ಪತನಗೊಂಡಿದ್ದು, ಈ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ವಿಮಾನ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಮಾನವು ವೆನಿಸ್ ವಿಮಾನ ನಿಲ್ದಾಣದಿಂದ ಹೊರಟು ಬುಧವಾರ ರಾತ್ರಿ 9:30 ರ ನಂತರ ಪಶ್ಚಿಮಕ್ಕೆ …

Read More »

ಮದ್ಯದ ಅಮಲಿನಲ್ಲಿ ಸಮವಸ್ತ್ರದಲ್ಲೇ ದೇವಸ್ಥಾನದ ಮುಂದೆ ಕುಣಿದು ಕುಪ್ಪಳಿಸಿದ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​

 ಮದ್ಯದ ಅಮಲಿನಲ್ಲಿ ಸಮವಸ್ತ್ರದಲ್ಲೇ ದೇವಸ್ಥಾನದ ಮುಂದೆ ಕುಣಿದು ಕುಪ್ಪಳಿಸಿದ ಸಹಾಯಕ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ (ಎಎಸ್​ಐ) ಅನ್ನು ಅಮಾನತು ಮಾಡಲಾಗಿದೆ. ಈ ಘಟನೆ ಕೇರಳದಲ್ಲಿ ನಡೆದಿದೆ. ಸ್ಪೆಷಲ್​ ಬ್ರಾಂಚ್​ ವರದಿಯ ಪ್ರಕಾರ ಇಡುಕ್ಕಿ ಜಿಲ್ಲೆಯ ಸಾಂಥನಪರದ ಎಎಸ್​ಐ ಕೆ.ಪಿ. ಶಾಜಿ ಎಂಬುವರನ್ನು ಅಮಾನತು ಮಾಡಲಾಗಿದೆ. ಪೂಪ್ಪಾರ ಬಳಿ ದೇವಸ್ಥಾನದ ಉತ್ಸವದಲ್ಲಿ ಪೊಲೀಸ್​ ಅಧಿಕಾರಿಯೊಬ್ಬರು ಡಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಸ್ಪೆಷಲ್​ ಬ್ರಾಂಚ್​ ತನಿಖೆ ನಡೆಸಿ …

Read More »

ಬದುಕಿದ್ದಾಗಲೇ ಡೆತ್ ಸರ್ಟಿಫಿಕೆಟ್

ಕುಟುಂಬದಲ್ಲಿ ಯಾರಾದರೂ ಸಾವಿಗೀಡಾದಾಗ ಜನನ- ಮರಣ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ. ಆದರೆ ತಾಯಿ ನಿಧನರಾದ ಸಂಬಂಧ ಅವರ ಡೆತ್ ಸರ್ಟಿಫಿಕೇಟ್ ಕೊಡಿ ಎಂದು ಜನನ-ಮರಣ ನೋಂದಣಿ ಕಚೇರಿಗೆ ಮಗಳು ಅರ್ಜಿ ಸಲ್ಲಿಸಿದರೆ ಅಲ್ಲಿ ಕಾರ್ಯನಿರ್ವಹಿಸುವ ಮಹಾನುಭಾವ ಸತ್ತವರದ್ದು ಬಿಟ್ಟು, ಅರ್ಜಿ ಕೊಟ್ಟವರ ಮರಣ ಪ್ರಮಾಣ ಪತ್ರ ನೀಡಿ ಬೇಜವಾಬ್ದಾರಿತನ ಮೆರೆದಿದ್ದಾರೆ.   ಈ ಘಟನೆ ನಡೆದಿರುವುದು ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ದೇವರ ನಿಂಬರಗಿ ವೃತ್ತದ ಜನನ-ಮರಣ ನೋಂದಣಿ …

Read More »

ಶವವಾಗಿ ಪತ್ತೆಯಾದ ಜನಪ್ರಿಯ ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ

ವಾರಣಾಸಿಯ ಸಾರಾನಾಥ್‌ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾದ ಜನಪ್ರಿಯ ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆಗೆ ಸಂಬಂಧಿಸಿದಂತೆ ಗಾಯಕ ಸಮರ್ ಸಿಂಗ್ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಇಬ್ಬರು ಆರೋಪಿಗಳಾದ ಸಮರ್ ಸಿಂಗ್ ಮತ್ತು ಸಂಜಯ್ ಸಿಂಗ್ ಅವರು ದೇಶ ಬಿಟ್ಟು ಹೋಗದಂತೆ ಅವರ ವಿವರಗಳನ್ನು ಎಲ್ಲಾ ವಿಮಾನ ನಿಲ್ದಾಣಗಳಿಗೆ ಕಳುಹಿಸಲಾಗಿದೆ.   ನಟಿಯ ತಾಯಿ ಮಧು ದುಬೆ ಪರ ಪ್ರಕರಣವನ್ನು ಕೈಗೆತ್ತಿಕೊಂಡಿರುವ ವಕೀಲ …

Read More »

ಗೆಳತಿಗಾಗಿ 21 ಗಂಟೆ ಮಂಡಿಯೂರಿ ಮನವೊಲಿಸಲು ಪ್ರಯತ್ನಿಸಿದ ಯುವಕ

ಪ್ರೀತಿಯು ಸುಂದರವಾಗಿದ್ದರೂ, ವಿಘಟನೆಯು ಅಷ್ಟೇ ನೋವಿನಿಂದ ಕೂಡಿದೆ ಮತ್ತು ಅದರ ಪರಿಣಾಮವು ದೀರ್ಘಕಾಲದವರೆಗೆ ಇರುತ್ತದೆ. ನಿಮ್ಮ ಪ್ರೀತಿಗೆ ಅಂಟಿಕೊಂಡಿರುವ ನೆನಪುಗಳನ್ನು ಬಿಡುವುದು ಕಷ್ಟ ಮತ್ತು ಒಂಟಿತನವು ಸಂಕಟದಂತೆ ಭಾಸವಾಗುತ್ತದೆ. ಇತ್ತೀಚಿಗೆ, ಚೀನಾದಲ್ಲಿ ಒಬ್ಬ ವ್ಯಕ್ತಿ ತನ್ನ ಗೆಳತಿ ಬಿಟ್ಟು ಹೋದರೂ ಆತ ತನ್ನ ಪ್ರೀತಿಯನ್ನು ಬಿಡಲು ಸಿದ್ಧವಿರರಲಿಲ್ಲ. ಆದ್ದರಿಂದ ಅವನು ತನ್ನ ಪ್ರೀತಿಯನ್ನು ಅವಳಿಗೆ ತೋರಿಸಲು ಮತ್ತು ಅವಳನ್ನು ಮರಳಿ ಗೆಲ್ಲುವ ಪ್ರಯತ್ನದಲ್ಲಿ ತೀವ್ರ ಹಂತಕ್ಕೆ ಹೋಗಿದ್ದು, ಅದರ ವಿಡಿಯೋ …

Read More »

ಮನೋಸಂಕಲ್ಪ ಈಡೇರಿಸುವ ಮಾರುತಿ: ಇಂದು ಹನುಮ ಜಯಂತಿ

ವಾಯುವಿಗೆ ಎಲ್ಲವನ್ನೂ ಮೀರಿಹೋಗುವ ಶಕ್ತಿಯಿದೆ. ಇದನ್ನು ಮೀರಿಹೋಗುವ ಶಕ್ತಿ ಮನಸ್ಸಿಗಿದೆ. ಇದನ್ನೇ ಮನೋವೇಗ ಎನ್ನುವರು. ಮನೋವೇಗ ವುಳ್ಳವನೇ ಆಂಜನೇಯ. ಆದ್ದರಿಂದ ಇವನನ್ನು ಋಷಿಮುನಿ ಗಳು ‘ಮನೋವೇಗರ ಗಮನ’ ಎಂದಿರುವರು. ನಮ್ಮ ಮನಸ್ಸಿನಲ್ಲಿರುವ ಸಂಕಲ್ಪವನ್ನು ತಿಳಿದು ಅದಕ್ಕೆ ಸ್ಪಂದಿಸುವ ಹಾಗೂ ಭವಸಾಗರವನ್ನು ದಾಟಿಸುವ ಶಕ್ತಿಯೂ ಆಂಜನೇಯನಿಗಿದೆ. ಕೇಸರಿ ಎಂಬ ಕಪಿಶ್ರೇಷ್ಠನ ಪತ್ನಿಗೆ ಬಹುಕಾಲ ಮಕ್ಕಳಿರಲಿಲ್ಲ. ಕೇಸರಿಯು ಮತಂಗ ಮುನಿಗಳ ಬಳಿ ತನ್ನ ನೋವನ್ನು ಹೇಳಿಕೊಂಡನು. ಅದಕ್ಕೆ ಅವರು ‘ಪಂಪಾ ಸರೋವರಕ್ಕೆ ಪೂರ್ವದಲ್ಲಿರುವ …

Read More »

10 ವರ್ಷಗಳ ಅನೈತಿಕ ಸಂಬಂಧ ದುರಂತದಲ್ಲಿ ಅಂತ್ಯ

ಆನೇಕಲ್: ಆಕೆ ಮದುವೆಯಾಗಿದ್ದರೂ ಗಂಡನಿಂದ ದೂರವಾಗಿ ಇನ್ನೊಬ್ಬನ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಸಂಬಂಧ ಅದೆಷ್ಟೇ ಗಟ್ಟಿಯಾಗಿದ್ರೂ ಅನೈತಿಕವಾಗಿದ್ರೆ,‌ ಅಂತ್ಯವಾಗೋದು ದುರಂತದಲ್ಲೇ ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ. ಆನೇಕಲ್ ತಾಲೂಕಿನ ಹೆಬ್ಬಗೋಡಿ ವ್ಯಾಪ್ತಿಯ ಸಿಂಗೇನ ಅಗ್ರಹಾರ ನಿರ್ಜನ ಪ್ರದೇಶದಲ್ಲಿ ಮಹಿಳೆಯ ಸುಟ್ಟ ದೇಹವೊಂದು ಕೆಲ ದಿನಗಳ ಹಿಂದೆ ಪತ್ತೆಯಾಗಿತ್ತು.‌ ಮಹಿಳೆಯೊಬ್ಬಳ ಹುಡುಕಾಟದಲ್ಲಿದ್ದ ಹೆಬ್ಬಗೋಡಿ ಪೊಲೀಸರು ಈ ದೇಹ ಅವಳದ್ದೇನಾ ಅಂತ ಅವಳ ಸಂಬಂಧಿಕರಿಗೆ ಕರೆದುಕೊಂಡು ಬಂದಾಗ ಪೊಲೀಸರಿಗೆ ಇದ್ದ ಶಂಕೆ …

Read More »

5,8 ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ : ಯಾವುದೇ ವಿದ್ಯಾರ್ಥಿಯನ್ನು ಫೇಲ್ ಮಾಡುವಂತಿಲ್ಲ!

ಬೆಂಗಳೂರು : ಶಾಲಾ ಶಿಕ್ಷಣ ಇಲಾಖೆಯು ರಾಜ್ಯ ಪಠ್ಯಕ್ರಮದ 5 ಮತ್ತು 8 ನೇ ತರಗತಿ ಮಕ್ಕಳಿಗೆ ನಡೆಸಿರುವ ಮೌಲ್ಯಾಂಕನ ಪರೀಕ್ಷೆಗೆ ಗ್ರೇಡ್ ನಿಗಿದ ಮಾಡಿದ್ದು, ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವಂತಿಲ್ಲ ಎಂಬ ಸೂಚನೆ ನೀಡಿದೆ.   ಮೌಲ್ಯಾಂಕನ ಪರೀಕ್ಷೆಗಳನ್ನು 40 ಅಂಕಗಳ ಲಿಖಿತ ಮೌಲ್ಯಂಕನ ಮತ್ತು ಶಾಲಾ ಹಂತದಲ್ಲಿ 10 ಅಂಕಗಳ ಮೌಖಿಕ ಮೌಲ್ಯಾಂಕನದಲ್ಲಿ ನಡೆಸಲಾಗಿದೆ. ಒಟ್ಟಾರೆ 50 ಅಂಕಗಳಲ್ಲಿ ವಿದ್ಯಾರ್ಥಿ ಗಳಿಸಿ ಅಂಕಗಳನ್ನು 20 ಅಂಕಗಳಿಗೆ ಪರಿವರ್ತಿಸಿ …

Read More »

ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಬಂಧನ

ರಾಮನಗರ: ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಸೇರಿದಂತೆ ಒಟ್ಟು ಐವರನ್ನು ಸಾತನೂರು ಪೊಲೀಸರು ರಾಜಸ್ತಾನದಲ್ಲಿ ಬಂಧಿಸಿದ್ದಾರೆ. ಕನಕಪುರದ ಸಾತನೂರು ಬಳಿ ಜಾನುವಾರು ರಕ್ಷಣೆ ವೇಳೆ ವ್ಯಕ್ತಿಯೊಬ್ಬರು ಅನುಮಾನಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಬಂಧನವಾಗಿದೆ.   ಜಾನುವಾರು ವ್ಯಾಪಾರಿ ಇದ್ರೀಷ್ ಪಾಷ ಎಂಬುವವರು ಅನುಮಾನಸ್ಪದವಾಗಿ ಮೃತಪಟ್ಟಿದ್ದರು. ಘಟನೆ ಬಳಿಕ ಪುನೀತ್ ಕೆರೆಹಳ್ಳಿ ಹಾಗೂ ಸಹಚರರು ತಲೆಮರೆಸಿಕೊಂಡಿದ್ದರು. ಆರೋಪಿಗಳ ಬಂಧನಕ್ಕೆ …

Read More »