ಅಮರಾವತಿ: ಆಟೊ ರಿಕ್ಷಾಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟು 7 ಜನ ಗಂಭೀರ ಗಾಯಗೊಂಡ ಘಟನೆ ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ದಾಚೆಪಲ್ಲಿ ಮಂಡಲದಲ್ಲಿ ನಡೆದಿದೆ. ಆಟೊ ರಿಕ್ಷಾದಲ್ಲಿ 12 ಜನ ಕಾರ್ಮಿಕರು ಪ್ರಯಾಣಿಸುತ್ತಿದ್ದು ಇವರಲ್ಲಿ 5 ಜನ ಸ್ಥಳದಲ್ಲಿ ಅಸು ನೀಗಿದರು. ಗಾಯಗೊಂಡವರನ್ನು ಗುರ್ಜಾಲ, ಮಿರ್ಯಾಲಗೂಡ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇವರೆಲ್ಲ ರಾಮಾಲಯದತ್ತ ಸಾಗುತ್ತಿದ್ದರು ಎನ್ನಲಾಗಿದೆ. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಲಾರಿ ನೇರವಾಗಿ ಆಟೊ ರಿಕ್ಷಾಕ್ಕೆ ಡಿಕ್ಕಿ …
Read More »ಸಾರ್ವಜನಿಕರ ಮೂಲಭೂತ ಸಮಸ್ಯೆಗಳಿಗೆ ತತ್‍ಕ್ಷಣವೇ ಸ್ಪಂದಿಸಬೇಕು, :ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಸಾರ್ವಜನಿಕರ ಮೂಲಭೂತ ಸಮಸ್ಯೆಗಳಿಗೆ ತತ್‍ಕ್ಷಣವೇ ಸ್ಪಂದಿಸಬೇಕು, ಸಾರ್ವಜನಿಕರಿಗೆ ಶೌಚಾಲಯ, ಒಳಚರಂಡಿ ಹಾಗೂ ಕುಡಿಯುವ ನೀರು ಸೇರಿದಂತೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಅರಭಾವಿ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬುಧವಾರದಂದು ಇಲ್ಲಿನ ತಹಶೀಲದಾರರ ಕಛೇರಿಯಲ್ಲಿ ಜರುಗಿದ ಗೋಕಾಕ-ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅರಭಾವಿ ಕ್ಷೇತ್ರದ ಪ್ರತಿ ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ …
Read More »ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದ ಅಡಿಕೆ ತೋಟ ಹಾಗೂ ಬೆಟ್ಟದ ಮರಗಿಡ ಸಂಪೂರ್ಣ ಸುಟ್ಟು ಹೋಗಿದೆ.
ಶಿರಸಿ: ಉ.ಕ ಜಿಲ್ಲೆಯ ಶಿರಸಿ ತಾಲೂಕಿನ ಹುಲೇಕಲ್ ಪಂಚಾಯತ ವ್ಯಾಪ್ತಿಯ ಅಮಚಿಮನೆ ಗ್ರಾಮದಲ್ಲಿ ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದ ಅಡಿಕೆ ತೋಟ ಹಾಗೂ ಬೆಟ್ಟದ ಮರಗಿಡ ಸಂಪೂರ್ಣ ಸುಟ್ಟು ಹೋಗಿದೆ. ಭವಾನಿ ಹೆಗಡೆ ಮತ್ತು ಎಮ್.ವಿ.ಹೆಗಡೆಯವರಿಗೆ ಸೇರಿದ ೨ ಎಕರೆ ಮಾಲ್ಕಿ ಬೆಟ್ಟ ಮತ್ತು ಅರ್ಧ ಎಕರೆ ಅಡಿಕೆ ತೋಟಕ್ಕೆ ಬುಧವಾರ ಮಧ್ಯಾಹ್ನ ಬೆಂಕಿ ತಗುಲಿದ್ದು ಕೊಟ್ಯಾಂತರ ರೂ. ಹಾನಿಯಾಗಿದೆ. ಹಾನಿಯಿಂದ ರೈತ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ. ಹೊಗೆ ಕಾಣಿಸಿಕೊಂಡ …
Read More »ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಮತ್ತೆ ಜೀವ ಬೆದರಿಕೆ ಕರೆ
ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮತ್ತೊಮ್ಮೆ ಜೀವ ಬೆದರಿಕೆ ಕರೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಇದರೊಂದಿಗೆ ಕಳೆದ ನಾಲ್ಕು ತಿಂಗಳಲ್ಲಿ ಬಂದಿರುವ ಎರಡನೇ ಬೆದರಿಕೆ ಕರೆ ಇದಾಗಿದೆ ಎನ್ನಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ ದೆಹಲಿಯ ಮೋತಿಲಾಲ್ ನೆಹರು ರಸ್ತೆಯಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಿವಾಸಕ್ಕೆ ಸೋಮವಾರ ರಾತ್ರಿ ಅಪರಿಚಿತ ವ್ಯಕ್ತಿ ದೂರವಾಣಿ ಕರೆ ಮಾಡಿ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ, ಕರೆ ಸ್ವೀಕರಿಸಿದ ಸಿಬ್ಬಂದಿ …
Read More »ಯಾವ ಜಿಲ್ಲೆಯಲ್ಲಿ ಯಾರ ಮೇಲುಗೈ?
1.ನಿಪ್ಪಾಣಿ: ಶಶಿಕಲಾ ಜೊಲ್ಲೆ- ಬಿಜೆಪಿ 2. ಚಿಕ್ಕೋಡಿ ಸದಲಗ: ಗಣೇಶ್ ಹುಕ್ಕೇರಿ- ಕಾಂಗ್ರೆಸ್ 3. ಅಥಣಿ: ಲಕ್ಷ್ಮಣ ಸವದಿ- ಕಾಂಗ್ರೆಸ್ 4. ಕಾಗವಾಡ: ಭರಮಗೌಡ ಆಲಗೌಡ ಕಾಗೆ- ಕಾಂಗ್ರೆಸ್ 5. ಕುಡಚಿ: ಮಹೇಂದ್ರ ಕೆ. ತಮ್ಮಣ್ಣನವರ್- ಕಾಂಗ್ರೆಸ್ 6. ರಾಯಭಾಗ: ದುರ್ಯೋಧನ ಐಹೊಳೆ-ಬಿಜೆಪಿ 7. ಹುಕ್ಕೇರಿ: ನಿಖಿಲ್ ಕತ್ತಿ-ಬಿಜೆಪಿ 8. ಅರಭಾವಿ: ಬಾಲಚಂದ್ರ ಜಾರಕಿಹೊಳಿ-ಬಿಜೆಪಿ 9. ಗೋಕಾಕ: ರಮೇಶ್ ಜಾರಕಿಹೊಳಿ- ಬಿಜೆಪಿ 10. ಯಮಕನಮರಡಿ: ಸತೀಶ್ ಜಾರಕಿಹೊಳಿ- ಕಾಂಗ್ರೆಸ್ 11. …
Read More »50 ಸಾವಿರ ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ ಸತೀಶ್ ಜಾರಕಿಹೊಳಿ,ಏಳನೇ ಬಾರಿ ಗೆದ್ದು ಬೀಗಿದ ಸಾಹುಕಾರ
ಬೆಳಗಾವಿ : ಗೋಕಾಕ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕಡಾಡಿ ವಿರುದ್ಧ ಸುಮಾರು 25,000 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ರಮೇಶ್ ಜಾರಕಿಹೊಳಿ 1,05,313 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕಡಾಡಿ ಅವರು 79,901 ಮತಗಳನ್ನು ಪಡೆದಿದ್ದಾರೆ. ಒಂದು ಸರ್ಕಾರ ಪತನಗೊಳಿಸಿ ಮತ್ತೊಂದು ಸರ್ಕಾರ ರಚಿಸುವಷ್ಟು ಸಾಮರ್ಥ್ಯ ಹೊಂದಿರುವ ರಮೇಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಪ್ರಭಾವಿ ರಾಜಕಾರಣಿಯಾಗಿದ್ದಾರೆ. …
Read More »ನಾಳೆ ಕೌಂಟಿಂಗ್ಗೆ ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ಧತೆ: ಆರ್ಪಿಡಿ ಕಾಲೇಜು ಸುತ್ತ ಪೊಲೀಸ್ ಸರ್ಪಗಾವಲು..
ಬೆಳಗಾವಿ: ವಿಧಾನಸಭೆ ಚುನಾವಣೆಗೆ ಮತದಾನ ಮುಗಿದಿದ್ದು, ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದೆ. ರಾಜ್ಯದಲ್ಲೇ ಎರಡನೇ ಅತೀ ಹೆಚ್ಚು ಮತಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಮತ ಎಣಿಕೆಗೆ ಎಲ್ಲ ರೀತಿಯ ಸಿದ್ಧತೆ ನಡೆದಿದ್ದು, ಮತ ಎಣಿಕೆ ನಡೆಯಲಿರುವ ನಗರದ ರಾಣಿ ಪಾರ್ವತಿದೇವಿ ಕಾಲೇಜಿನ ಸ್ಟ್ರಾಂಗ್ ರೂಮ್ಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪೊಲೀಸ್ ಅಧಿಕಾರಿಗಳ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅತಿ ದೊಡ್ಡ …
Read More »ಬಿಜೆಪಿ ಆಪರೇಷನ್ ಕಮಲ ಮಾಡುವುದು ಹಗಲು ಕನಸು: ಸತೀಶ್ ಜಾರಕಿಹೊಳಿ
ಬೆಳಗಾವಿ: ಈ ಬಾರಿ ಬಿಜೆಪಿ ಆಪರೇಷನ್ ಕಮಲ ಮಾಡುವುದು ಹಗಲು ಕನಸು. ಪ್ರತಿಬಾರಿ ಆಪರೆಶನ್ ಕಮಲ ಸಕ್ಸಸ್ ಆಗಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ನಮ್ಮ ಲೆಕ್ಕದ ಪ್ರಕಾರ ನಮಗೆ ಬಹುಮತದ ಕೊರತೆಯಾಗಲ್ಲ. ಯಾರು ಏನೆ ಮಾಡಿದ್ರೂ ರಾಜ್ಯದ ಜನ ಕಾಂಗ್ರೆಸ್ ಪರ ಇದ್ದಾರೆ ಎಂದರು. ಮೈತ್ರಿಗೆ ಸಿದ್ಧವಿರುವುದಾಗಿ …
Read More »ಬೆಳಗಾವಿಯ 18 ವಿಧಾನಸಭಾ ಮತಕ್ಷೇತ್ರದ ಮತ ಎಣಿಕೆಗೆ ಬೆಳಗಾವಿಯ ಆರ್ ಪಿಡಿ ಕಾಲೇಜಿನಲ್ಲಿ ಸಕಲ ಸಿದ್ಧತೆ
ಬೆಳಗಾವಿ: ಬೆಳಗಾವಿಯ ೧೮ ವಿಧಾನಸಭಾ ಮತಕ್ಷೇತ್ರದ ಮತ ಎಣಿಕೆಗೆ ಬೆಳಗಾವಿಯ ಆರ್ ಪಿಡಿ ಕಾಲೇಜಿನಲ್ಲಿ ಸಕಲ ಸಿದ್ಧತೆ ಮಾಡಲಾಗಿದ್ದು, ಮಧ್ಯಾಹ್ನದ ವೇಳೆಗೆ ಎಲ್ಲ ಫಲಿತಾಂಶ ಬರುವ ಸಾಧ್ಯತೆ ಇದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು. ಶುಕ್ರವಾರ ನಗರದ ಆರ್ ಪಿಡಿ ಕಾಲೇಜನಲ್ಲಿ ಸ್ಥಾಪನೆ ಮಾಡಲಾದ ಸ್ಟ್ರಾಂಗ್ ರೂಂ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅತಿ ದೊಡ್ಡ ಮತ ಏಣಿಕೆ ಕೇಂದ್ರ ಆರ್ ಪಿಡಿ ಕಾಲೇಜಿನಲ್ಲಿ …
Read More »ದಿ ಕೇರಳ ಸ್ಟೋರಿ’ ಚಿತ್ರ ತಂಡದ ಸದಸ್ಯನಿಗೆ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಭದ್ರತೆ ಒದಗಿಸಿದ್ದಾರೆ.
ಮುಂಬೈ (ಮಹಾರಾಷ್ಟ್ರ): ‘ದಿ ಕೇರಳ ಸ್ಟೋರಿ’ ಚಿತ್ರ ತಂಡದ ಸಿಬ್ಬಂದಿಯೊಬ್ಬರಿಗೆ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಸಂದೇಶ ಬಂದಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ‘ದಿ ಕೇರಳ ಸ್ಟೋರಿ’ ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ ಸಿಬ್ಬಂದಿಯೊಬ್ಬರು ಅಪರಿಚಿತ ಸಂಖ್ಯೆಯಿಂದ ಸಂದೇಶ ಸ್ವೀಕರಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಹಾಗಾಗಿ, ಸಿಬ್ಬಂದಿಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಲಿಖಿತ ದೂರು ಸ್ವೀಕರಿಸದ ಕಾರಣ ಎಫ್‌ಐಆರ್ ದಾಖಲಿಸಿಲ್ಲ. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರ ಮೇ …
Read More »